Kim Kardashian: ಮೈ ತುಂಬಾ ಟೇಪ್ ಸುತ್ತಿ ಫೋಸ್, ಏನಮ್ಮಾ ನಿನ್‌ ಅವತಾರ ಅಂತಿದ್ದಾರೆ ನೆಟ್ಟಿಗರು !

By Suvarna News  |  First Published Mar 9, 2022, 8:17 PM IST

ಈಗೆಲ್ಲಾ ಯಾವ ಥರ ಡ್ರೆಸ್ ಮಾಡಿದ್ರೂ ಫ್ಯಾಷನ್ (Fashion). ಬೆನ್ನು ತೋರಿಸೋ ಬಟ್ಟೆ, ಎದೆ ತೋರಿಸೋ ಬಟ್ಟೆ (Dress), ಹರಿದ ಬಟ್ಟೆ, ಹಳೆ ಬಟ್ಟೆ ಏನು ಹಾಕ್ಕೊಂಡು ಬಂದ್ರೂ ಒಟ್ಟಾರೆ ಲೇಟೆಸ್ಟ್ ಫ್ಯಾಷನ್ ಅಂತಾರೆ. ಈಗ ಹಾಲಿವುಡ್ ತಾರೆ ಕಿಮ್ ಕರ್ದಾಶಿಯನ್ (Kim Kardashian) ವಿಚಿತ್ರವಾಗಿ ಕಾಣಿಸ್ಕೊಂಡು ಏನಪ್ಪಾ ಇವ್ರ ಅವತಾರ ಅಂತ ನೆಟ್ಟಿಗರು ಹುಬ್ಬೇರಿಸುವಂತೆ ಮಾಡಿದ್ದಾರೆ.


ಫ್ಯಾಷನ್‌ ಇಲ್ದೆ ಜಗತ್ತೇ ನಡೆಯೋಲ್ಲ ಅನ್ನೋ ಜಮಾನ ಇದು. ಫ್ಯಾಷನಲ್ ಲೋಕ ಆಗಿಂದಾಗೆ ಅಪ್‌ಡೇಟ್‌ ಆಗ್ತಾನೆ ಇರುತ್ತೆ. ಫ್ಯಾಷನ್ ಹೆಸರಿನಲ್ಲಿ ವಿಚಿತ್ರವಾಗಿರೋ ಡ್ರೆಸ್ ಧರಿಸೋದಂತೂ ಯಾವತ್ತೋ ಟ್ರೆಂಡ್ ಆಗಿದೆ. ಈಗೆಲ್ಲಾ ಯಾವ ಥರ ಡ್ರೆಸ್ ಮಾಡಿದ್ರೂ ಫ್ಯಾಷನ್ (Fashion). ಬೆನ್ನು ತೋರಿಸೋ ಬಟ್ಟೆ, ಎದೆ ತೋರಿಸೋ ಬಟ್ಟೆ, ಹರಿದ ಬಟ್ಟೆ, ಹಳೆ ಬಟ್ಟೆ ಏನು ಹಾಕ್ಕೊಂಡು ಬಂದ್ರೂ ಒಟ್ಟಾರೆ ಲೇಟೆಸ್ಟ್ ಫ್ಯಾಷನ್ ಅಂತಾರೆ. ಪೇಪರ್ ಡ್ರೆಸ್, ಲೇಸ್ ಪ್ಯಾಕೆಟ್ ಡ್ರೆಸ್ ಧರಿಸಿ ರೂಪದರ್ಶಿ (Model)ಯರು ಫೋಸ್  ಕೊಟ್ಟಿದ್ದು ಹಳೆದಾಯ್ತು. ಈಗ ಹಾಲಿವುಡ್ ತಾರೆ ಕಿಮ್ ಕರ್ದಾಶಿಯನ್ ವಿಚಿತ್ರವಾಗಿ ಕಾಣಿಸ್ಕೊಂಡು ಏನಪ್ಪಾ ಇವ್ರ ಅವತಾರ ಅಂತ ನೆಟ್ಟಿಗರು ಹುಬ್ಬೇರಿಸುವಂತೆ ಮಾಡಿದ್ದಾರೆ.

ಸದಾ ತಮ್ಮ ಹಾಟ್ ಪೋಟೋ ಶೂಟ್‌ಗಳಿಂದಲೇ ಸುದ್ದಿ ಮಾಡುವ ಹಾಲಿವುಡ್ ತಾರೆ ಕಿಮ್ ಕರ್ದಾಶಿಯನ್ ಬೇಡದ ಕಾರಣಕ್ಕೆ ಮತ್ತೆ ಸುದ್ದಿ ಮಾಡಿದ್ದಾರೆ. ಕಿಮ್ ಕರ್ದಾಶಿಯನ್ (Kim Kardashian) ಬಗ್ಗೆ ನೀವು ಕೇಳಿರಬಹುದು. ಈಕೆ ಆಗಾಗ ತನ್ನ ಸ್ವಂತ ಶೈಲಿ ಫ್ಯಾಷನ್ ಪ್ರಯೋಗಿಸಲು ಹೋಗಿ ಯಡವಟ್ಟು ಮಾಡಿಕೊಳ್ಳುತ್ತಲೇ ಇರುತ್ತಾರೆ. ಈ ಬಾರಿ ಅವ್ರು ಟೇಪ್‌ನ್ನು ತಮ್ಮ ಮೈ ತುಂಬಾ ಸುತ್ತಿಕೊಂಡು, ಅದನ್ನೇ ಡ್ರೆಸ್ ಆಗಿ ಮಾಡಿಕೊಂಡು ಕ್ಯಾಮರಾಗಳಿಗೆ ಫೋಸ್ ನೀಡಿದ್ದಾರೆ.

Tap to resize

Latest Videos

Kimye ಜೊತೆ ಡಿವೋರ್ಸ್‌ ನಂತರ Kim Kardashian 4ನೇ ಮದುವೆ ಆಗ್ತಾರಾ?

ಕಿಮ್ ಕರ್ದಾಶಿಯನ್ ಇತ್ತೀಚೆಗೆ ಪ್ಯಾರಿಸ್ ಫ್ಯಾಶನ್ ವೀಕ್‌ (Fashion Week)ನಲ್ಲಿ ಉಪಸ್ಥಿತರಿದ್ದರು. ಅಲ್ಲಿ ಅವರು ಸಂಪೂರ್ಣವಾಗೊ ಟೇಪ್‌ನಲ್ಲಿ ಸುತ್ತುವರಿದಂಥಾ ಡ್ರೆಸ್‌ನಲ್ಲಿ ಕಂಡುಬಂದರು. ಮುಂಭಾಗದಿಂದ, ಹಿಂಭಾಗದಿಂದ, ಭುಜದ ಮೇಲೆ, ಕಾಲುಗಳಲ್ಲಿ ಎಲ್ಲೆಡೆ, ಒಂದೇ ಟೇಪ್ ಅನ್ನು ಸುತ್ತಲಾಗಿತ್ತು. ಕಿಮ್ ಕರ್ದಾಶಿಯನ್ ವಿಚಿತ್ರ ಅವತಾರವನ್ನು ಜನರು ಕಣ್ಣು ಮಿಟುಕಿಸದೆ ನೋಡಿದ್ದಂತೂ ಸುಳ್ಳಲ್ಲ. 

ಕಿಮ್ ಕರ್ದಾಶಿಯನ್ ತಾವು ಡ್ರೆಸ್ (Dress) ಮಾಡುತ್ತಿರುವ ವೀಡಿಯೋವನ್ನು ಸಹ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ದೇಹವನ್ನು ಅಳವಡಿಸಲಾಗಿರುವ ಕಪ್ಪು ಉಡುಪನ್ನು ಧರಿಸುತ್ತಿದ್ದರು. ಈ ಹಳದಿ ಮತ್ತು ಕಪ್ಪು ಟೇಪ್‌ನ್ನು ಕುತ್ತಿಗೆಯಿಂದ ಕಾಲಿನ ವರೆಗೆ ಧರಿಸಿ ಸ್ಟೈಲಿಶ್ ಆಗಿ ವಾಕ್ ಮಾಡಿದರು. ಇವೆಂಟ್‌ನಲ್ಲಿ ಕಿಮ್ ಕರ್ದಾಶಿಯನ್ ಲುಕ್ ಎಲ್ಲರ ಗಮನ ಸೆಳೆಯಿತು. ಕೆಲವರು ಕಿಮ್ ಕರ್ದಾಶಿಯನ್ ಕ್ರಿಯೇಟಿವಿಟಿಗೆ ವಾವ್ ಎಂದರೆ, ಇನ್ನೂ ಹೆಚ್ಚಿನವರು ಇದೆಂಥಾ ವಿಚಿತ್ರ ಎಂದು ಟೀಕಿಸಿದ್ದಾರೆ. ಸದ್ಯ ಕಿಮ್ ಕರ್ದಾಶಿಯನ್ ವಿಚಿತ್ರ ಡ್ರೆಸ್‌ನ ಫೋಟೋ, ವೀಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿವೆ.

ಕಿಮ್ ಕರ್ದಾಶಿಯನ್ ಮೆಟ್ ಗಾಲಾ 2021ರಲ್ಲಿ ಆಗಮಿಸಿದಾಗ ಧರಿಸಿದ್ದ ಡ್ರೆಸ್ ಸಹ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಬಟ್ಟೆಯ ವಿಚಾರದಲ್ಲಿ ಕಿಮ್ ಕರ್ದಾಶಿಯನ್ ವೈರಲ್ ಆಗುತ್ತಿರುವುದು ಇದು ಮೊದಲ ಬಾರಿಯಲ್ಲ. ಈ ಹಿಂದೆಯೂ ವಿಚಿತ್ರವಾಗಿ ಡ್ರೆಸ್ ಮಾಡಿದ್ದ ಕಿಮ್ ಕರ್ದಾಶಿಯನ್ ನೆಟ್ಟಿಗರಿಂದ ಟ್ರೋಲ್ ಆಗಿದ್ದರು.

ಫ್ಯಾಷನ್‌ ಶೋಗೆ ಬಂದಿದ್ದ ನಟಿಯ ಡ್ರೆಸ್ ಹರಿದು ಬಿತ್ತು!

ಗಂಡನ ಜತೆ ಫ್ಯಾಷನ್ ಶೋ ಒಂದಕ್ಕೆ ಬಂದಿದ್ದ ಕಿಮ್ ಕರ್ದಾಶಿಯನ್ ತೀವ್ರ ಇರಿಸು ಮುರಿಸಿಗೆ ಗುರಿಯಾದ ಪ್ರಕರಣವೊಂದು ನಡೆದಿತ್ತು.ಪಾರದರ್ಶಕ ಉಡುಗೆ ತೊಟ್ಟು ಬಂದಿದ್ದ ಕಿಮ್ ಡ್ರೆಸ್ ಆಕಸ್ಮಿಕವಾಗಿ ಹರಿದು ಹೋಗಿತ್ತು. ಪರಿಣಾಮ ಕಿಮ್ ಮೇಲ್ಭಾಗ ಎಲ್ಲರಿಗೂ ದರ್ಶನವಾಗಿತ್ತು. ತಕ್ಷಣ ಬಟ್ಟೆ ಸರಿಮಾಡಿಕೊಳ್ಳಲು ಕಿಮ್ ಮುಂದಾಗಿದ್ದರು. ಆದ್ರೆ ಅಷ್ಟರಲ್ಲೇ ಕ್ಯಾಮರಾಗಳು ಇದನ್ನು ಸೆರೆಹಿಡಿದಿದ್ದು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಇಷ್ಟೇ ಅಲ್ಲದೆ ಕಿಮ್ ಕರ್ದಾಶಿಯನ್‌ನ ಭೇಟಿ ಮಾಡಲೇಬೇಕು ಎಂದು ನಿವಾಸದ ಬಳಿ ಬಂದ ಅಭಿಮಾನಿಯೊಬ್ಬ ಗಿಫ್ಟ್‌ ಬಾಕ್ಸ್‌ನಲ್ಲಿ ಡೈಮೆಂಡ್ ಉಂಗುರ ನೀಡಿದ್ದ. ಈ ವ್ಯಕ್ತಿ ಅಸಭ್ಯವಾಗಿ ವರ್ತಿಸುತ್ತಿದ್ದ ಕಾರಣ ತಕ್ಷಣವೇ ಪೊಲೀಸರನ್ನು ಕರೆಯಲಾಗಿತ್ತು. San Fernando Valleyನಲ್ಲಿ ವಾಸಿಸುತ್ತಿರುವ ಕಿಮ್ ಮನೆಯ ಮುಖ್ಯ ದ್ವಾರಕ್ಕೆ ಹೆಚ್ಚಿನ ಭದ್ರತೆ ನೀಡಲಾಗಿತ್ತು. ಒಟ್ನಲ್ಲಿ ಇಂಗ್ಲಿಷ್ ರಿಯಾಲಿಟಿ ಟಿವಿ ಸ್ಟಾರ್ ಕಿಮ್ ಕರ್ದಾಶಿಯನ್‌ ವಿಚಿತ್ರ ಸುದ್ದಿಗಳಿಂದಾನೇ ಸುದ್ದಿಯಾಗ್ತಿರೋದಂತೂ ನಿಜ.

click me!