
ಬಹುಭಾಷಾ ನಟಿ ಭಾವನಾ ಮೆನನ್ (Bhavana Menon) ಮೇಲೆ ಐದು ವರ್ಷಗಳ ಹಿಂದೆ ದೌರ್ಜನ್ಯ ನಡೆದಿತ್ತು ಅನ್ನೋದು ಯಾರಿಗೂ ಗೊತ್ತಿರದ ವಿಚಾರವೇನಲ್ಲ. ಮಲಯಾಳಂ ಚಿತ್ರನಟ ದಿಲೀಪ್ ನಟಿ ಭಾವನಾ ಮೇಲೆ ದೌರ್ಜನ್ಯ ಎಸಗಿರುವ ಆರೋಪ ಕೇಳಿ ಬಂದಿತ್ತು. ಕಳೆದ ವರ್ಷ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ನಟಿ ಭಾವನಾ ಮೆನನ್ ಆರೋಪಿ ವಿರುದ್ಧ ಹೋರಾಡಲು ಸಜ್ಜಾಗಿದ್ದರು. ನಟಿಗೆ ಹಲವು ಭಾಷೆಯ ಚಿತ್ರರಂಗದ ಹಲವು ನಟ-ನಟಿಯರು ಸ್ಟಾಂಡ್ ವಿತ್ ಯು ಎಂದು ಹೇಳುವ ಮೂಲಕ ಆಕೆಗೆ ಬೆಂಬಲ ಸೂಚಿಸಿದ್ದರು. ಸದ್ಯ ತಮಿಳು ನಟ ಸೂರ್ಯ (Surya) ಸಹ ನಟಿ ಭಾವನಾ ಮೆನನ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಮಾಲಿವುಡ್ (Mollywood) ನಟ ದಿಲೀಪ್(Dileep) ವಿರುದ್ಧ ದೌರ್ಜನ್ಯ ಆರೋಪ ಕೇಳಿ ಬಂದು ಈ ಘಟನೆ ಕಳೆದ ಕೆಲವು ವರ್ಷಗಳಲ್ಲಿ ಭಾರೀ ಸುದ್ದಿಯಾಗಿತ್ತು. ಮಾಲಿವುಡ್‌ನ ಸ್ಟಾರ್ ನಟರಲ್ಲಿ ಒಬ್ಬರಾಗಿರುವ ದಿಲೀಪ್ ಬೇರೆ ಭಾಷೆಯ ಸಿನಿಮಾಗಳಲ್ಲಿ ಕಾಣಸಿಗುವುದು ಭಾರೀ ಕಡಿಮೆ. ಮಾಲಿವುಡ್‌ನಲ್ಲೇ ಹಿಂದಿನಿಂದಲೂ ನಟಿಸುತ್ತಿರುವ ದಿಲೀಪ್ ಸಹನಟಿ ಮಂಜು ವಾರಿಯರ್ ಅವರನ್ನು ವರಿಸಿದ್ದರು. ನಂತರದಲ್ಲಿ ಅವರೊಂದಿಗೆ ವಿಚ್ಚೇದನೆ ಪಡೆದು ನಟಿ ಕಾವ್ಯ ಮಾಧವನ್ ಅವರನ್ನು ವಿವಾಹವಾಗಿದ್ದಾರೆ.
Assault Case: ನಟ ದಿಲೀಪ್ ಸೇರಿ 6 ಜನರ ಮೊಬೈಲು ಕೋರ್ಟಿಗೆ ಒಪ್ಪಿಸಿ
ದಿಲೀಪ್ ಮೇಲೆ ಸಹೋದ್ಯೋಗಿ ಮೇಲೆ ದೌರ್ಜನ್ಯ ಎಸಗಿದ ಹಾಗೂ ಕಿಡ್ನಾಪ್ ಮಾಡಲು ಸೂಚಿಸಿದ ಆರೋಪವಿತ್ತು. ಜನವರಿ 13ರಂದು ಆಲುವಾದಲ್ಲಿರುವ ನಟ ದಿಲೀಪ್ ಅವರ ಮನೆಯ ಮೇಲೆ ಕೇರಳ ಕ್ರೈಂ ಬ್ರಾಂಚ್(Crime Branch) ಅಧಿಕಾರಿಗಳ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿ ಎಫ್ಐಆರ್ ದಾಖಲಿಸಿದ್ದರು. ಹಲ್ಲೆ ಪ್ರಕರಣದ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳ ಮೇಲೂ ದಿಲೀಪ್ ಹಲ್ಲೆ ನಡೆಸಲು ಸಂಚು ರೂಪಿಸಿದ್ದ ಆರೋಪ ಕೇಳಿ ಬಂದಿತ್ತು. ನಟಿ ಮೇಲಿನ ಹಲ್ಲೆ ಪ್ರಕರಣದ ತನಿಖೆಯನ್ನು ರದ್ದುಗೊಳಿಸುವಂತೆ ದಿಲೀಪ್ ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಸದ್ಯ ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.
ನಟಿ ಭಾವನಾ ಮೆನನ್ ಸೋಷಿಯಲ್ ಮೀಡಿಯಾದಲ್ಲಿ ದೌರ್ಜನ್ಯದ ಕುರಿತಾಗಿ ಪೋಸ್ಟ್ ಮೂಲಕ ತಮ್ಮ ಮನದ ಮಾತುಗಳನ್ನು ಹೊರ ಹಾಕಿದ್ದರು.
ದೌರ್ಜನ್ಯ, ಹಲ್ಲೆ ಬಗ್ಗೆ ಮೌನ ಮುರಿದ ಭಾವನಾ ಮೆನನ್, ನೋವು ತೋಡಿ ಕೊಂದದ್ಹೀಗೆ!
'ನನಗೆ ತುಂಬಾನೇ ನರ್ವಸ್ ಆಗುತ್ತಿದೆ. ಮಾತನಾಡುವುದಕ್ಕೆ ಎಮೋಷನಲ್ ಫೀಲ್ ಆಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ನನಗೆ ಬಗ್ಗೆ ಒಂದು ವಿಚಾರ ಪದೇ ಪದೇ ಹೈಲೈಟ್ ಅಗಿ, ಹರಿದಾಡುತ್ತಿದೆ, ಈಗ ಅದರ ಬಗ್ಗೆ ನಾನು ನೇರವಾಗಿ ಉತ್ತರ ಕೊಡಲೇಬೇಕು. ಕೋರ್ಟಲ್ಲಿ ಕೇಸ್ ನಡೆಯುತ್ತಿರುವ ಕಾರಣ ಈ ಕೇಸ್ ವಿಚಾರವಾಗಿ ಹೆಚ್ಚಿನ ಮಾಹಿತಿಯನ್ನು ನಾನು ಎಲ್ಲಿಯೂ ರಿವೀಲ್ ಮಾಡಬಾರದು. Victime to Surviver ಜರ್ನಿ ಬಗ್ಗೆ ನಾನು ಬರೆದುಕೊಂಡಿದ್ದೆ. 2017 ಫೆಬ್ರವರಿ 17ರಂದು ಈ ಘಟನೆ ನಡೆಯಿತು. ಆ ಒಂದು ಅನಿರೀಕ್ಷಿತ ಘಟನೆಯಿಂದ ನನ್ನ ಇಡೀ ಜೀವನ ಉಲ್ಟಂಪಲ್ಟ ಆಗಿದೆ,' ಎಂದು ಹೇಳಿಕೊಂಡಿದ್ದರು.
ಸದ್ಯ ಈ ಘಟನೆಯ ಬಗ್ಗೆ ತಮಿಳು ನಟ ಸೂರ್ಯ ಸಹ ಪ್ರತಿಕ್ರಿಯಿಸಿದ್ದಾರೆ. ಕೇರಳದಲ್ಲಿ ನಟಿಯ ಮೇಲಿನ ಹಲ್ಲೆ ಪ್ರಕರಣದ ಬಗ್ಗೆ ನಟ ಸೂರ್ಯ ಮಾತನಾಡಿದ್ದಾರೆ. ಇಂಥಾ ಘಟನೆ ಯಾವತ್ತೂ ಆಗಬಾರದಿತ್ತು ಎಂದಿದ್ದಾರೆ. ತಮ್ಮ ಹೊಸ ಚಿತ್ರ ‘ಎತುರ್ಕುಂ ತೂನಿಂದವನ್’ ಪ್ರಚಾರದ ಅಂಗವಾಗಿ ಕೊಚ್ಚಿಗೆ ಆಗಮಿಸಿದ್ದಾಗ ನಟ ಸೂರ್ಯ. ಸಮಾಜದಲ್ಲಿ ಇಂತಹ ಘಟನೆಗಳು ನಡೆಯಬಾರದು. ಈಗಲೂ ಇಂಥಾ ಘಟನೆ ನಡೆಯುತ್ತಿರುವುದಕ್ಕೆ ಆಘಾತವೆನಿಸುತ್ತಿದೆ. ಹಲ್ಲೆಗೊಳಗಾದ ನಟಿಯ ಬೆಂಬಲಕ್ಕೆ ನಿಲ್ಲುತ್ತೇನೆ’ ಎಂದಿದ್ದಾರೆ.
'ಘಟನೆಯ ಬಗ್ಗೆ ನನಗೆ ಸಂಪೂರ್ಣ ಮಾಹಿತಿಯಿಲ್ಲ. ಆದರೆ ಸಮಾಜದಲ್ಲಿ ಇಂಥಾ ಘಟನೆಯೆಲ್ಲಾ ನಡೆಯಲೇಬಾರದು. ಅದರಲ್ಲೂ ಆಧುನಿಕ ಜಗತ್ತಿನಲ್ಲಿ ಮಹಿಳೆಯ ಮೇಲೆ ಹೀಗೆಲ್ಲಾ ಆಗಲೇಬಾರದು' ಎಂದು ನಟ ಸೂರ್ಯ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.