ಐಶ್ವರ್ಯಾ ರೈ ಐರನ್ ಲೆಗ್... ಆಕೆ ನಮ್ಮ ಸಿನ್ಮಾಗೆ ಬೇಡ ಅಂತ ಗುಳಿ ಕೆನ್ನೆ ಚೆಲುವೆಯನ್ನು ಕರೆ ತಂದಿದ್ರು!

By Mahmad Rafik  |  First Published Aug 1, 2024, 7:18 PM IST

ಐಶ್ವರ್ಯಾ ರೈ ಅವರನ್ನು ಐರನ್ ಲೆಗ್ ಅಂತ ಕರೆದಿದ್ಯಾರು? ಅದು ಯಾವ ನಟನ ಸಿನಿಮಾ? ಐಶ್ ಬದಲಿಗೆ ಬಂದ ಆ ಗುಳಿಕೆನ್ನೆ ಚೆಲುವೆ ಯಾರು ಎಂಬುದರ ಮಾಹಿತಿ ಇಲ್ಲಿದೆ. 


ಬೆಂಗಳೂರು: ಕಳೆದ ಕೆಲವು ದಿನಗಳಿಂದ ಮಾಜಿ ವಿಶ್ಚ ಸುಂದರಿ ಐಶ್ವರ್ಯಾ ರೈ ಬಚ್ಚನ್ (Actress Aishwarya Rai Bachchan) ತಮ್ಮ ವೈಯಕ್ತಿಕ ವಿಷಯಗಳಿಂದ ಸುದ್ದಿಯಲ್ಲಿದ್ದಾರೆ. ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಡಿವೋರ್ಸ್ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಐಶ್ವರ್ಯ ರೈ ತಮ್ಮ ಸಿನಿ ಜೀವನದ ಆರಂಭದಲ್ಲಿಯೇ ತಮಿಳು ಸಿನಿಮಾಗಳಲ್ಲಿ (Tamil Cinema) ನಟಿಸಿದ್ದರು. ವಿಶ್ವ ಸುಂದರಿಯ ಕಿರೀಟ ಮುಡಿಗೇರಿಸಿಕೊಂಡ ನಂತರ ಬಾಲಿವುಡ್ (Bollywood) ಖ್ಯಾತ ನಿರ್ದೇಶಕರೆಲ್ಲಾ ಡೇಟ್‌ಗಾಗಿ ಐಶ್ ಮನೆ ಮುಂದೆ ಕ್ಯೂ ನಿಂತಿದ್ದರು. ಆದ್ರೆ ಆರಂಭದಲ್ಲಿ ಸಿನಿಮಾದ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಎಡವಿದ್ದ ಐಶ್ ಅವರ ನಟನೆಯ ಸಾಲು ಸಾಲು ಸಿನಿಮಾಗಳು ಸೋತಿದ್ದವು. ಆ ಸಂದರ್ಭದಲ್ಲಿ ಟಾಲಿವುಡ್‌ನ ಖ್ಯಾತ ನಟನ (Tollywood Actor) ಸಿನಿಮಾಗೆ ಐಶ್ವರ್ಯಾ ರೈ ಅವರನ್ನು ಕರೆತರುವ ಪ್ರಯತ್ನಗಳು ನಡೆದಿದ್ದವು. ಆದ್ರೆ ಸಿನಿಮಾದ ನಿರ್ದೇಶಕ, ಆಕೆಯದ್ದು ಐರನ್ ಲೆಗ್ (Iron leg) ಅಂತೇಳಿ ಗುಳಿ ಕೆನ್ನೆ  ಚೆಲುವೆಯನ್ನು ತೆಲುಗು ಸಿನಿಮಾ ಅಂಗಳಕ್ಕೆ ಕರೆತಂದಿದ್ದರಂತೆ. ಈ ಮೂಲಕ ಟಾಲಿವುಡ್ ಇಂಡಸ್ಟ್ರಿ (Tollywood Cinema Industry) ಐಶ್ವರ್ಯಾ ರೈ ಅವರನ್ನು ಅವಮಾನಿಸಿತ್ತು ಎಂಬ ಮಾತುಗಳು ಕೇಳಿ ಬಂದಿವೆ.

ಐಶ್ವರ್ಯ ರೈ ಅಂದ್ರೆ ಸೌಂದರ್ಯ ಎಂಬ ಸಮಾನಾರ್ಥಕ ಪದವಿದೆ. ಆರಂಭದ ಸಿನಿ ಜೀವನದಲ್ಲಿ ಸೋತಿದ್ದ ಐಶ್ವರ್ಯಾ ರೈ ನಂತರ ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇಂದಿಗೂ ಸಿನಿಮಾಗಳಲ್ಲಿ ನಟಿಸುತ್ತಿರುವ ಐಶ್ವರ್ಯಾ ರೈ, ಜಾಣತನದಿಂದ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇಷ್ಟು ಮಾತ್ರವಲ್ಲದೇ ಫ್ಯಾಶನ್ ಶೋಗಳಲ್ಲಿಯೂ ಐಶ್ವರ್ಯಾ ರೈ ಮಿಂಚುತ್ತಿರುತ್ತಾರೆ. ಆದ್ರೆ ಒಂದಾನೊಂದು ಕಾಲದಲ್ಲಿ ಐಶ್ವರ್ಯಾ ರೈ ಸಹ ಐರನ್ ಲೆಗ್‌ ಎಂಬ ಅಪವಾದಕ್ಕೆ ತುತ್ತಾಗಿದ್ದರು ಎಂಬ ವಿಷಯ ಇದೀಗ ಸದ್ದು ಮಾಡುತ್ತಿದೆ. ಐಶ್ವರ್ಯಾ ರೈ ಅವರನ್ನು ಐರನ್ ಲೆಗ್ ಅಂತ ಕರೆದಿದ್ಯಾರು? ಅದು ಯಾವ ನಟನ ಸಿನಿಮಾ? ಐಶ್ ಬದಲಿಗೆ ಬಂದ ಆ ಗುಳಿಕೆನ್ನೆ ಚೆಲುವೆ ಯಾರು ಎಂಬುದರ ಮಾಹಿತಿ ಇಲ್ಲಿದೆ.  

Tap to resize

Latest Videos

ಐಶ್​ ಪಾಲಿಗೆ ಅಮ್ಮನಂತಿದ್ದ ಜಯಾ ಸೀರಿಯಲ್​ ಅತ್ತೆ ಥರ ವಿಲನ್​ ಆಗಿದ್ದೇಕೆ? ವಿಡಿಯೋದಲ್ಲಿ ಏನಿದೆ?

ಸೂಪರ್ ಸ್ಟಾರ್ ಜೊತೆ ಐಶ್ವರ್ಯಾ ನಟನೆ

ದಕ್ಷಿಣ ಸಿನಿ ಇಂಡಸ್ಟ್ರಿಯ ಸೂಪರ್ ಸ್ಟಾರ್, ತಲೈವಾ ರಜನೀಕಾಂತ್, ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್, ಕಿಂಗ್ ಖಾನ್ ಶಾರೂಖ್ ಖಾನ್, ಸಲ್ಮಾನ್ ಖಾನ್, ಅನಿಲ್ ಕಪೂರ್, ಹೃತಿಕ್ ರೋಷನ್ ಸೇರಿದಂತೆ ಹಲವು ಸ್ಟಾರ್ ನಟರ ಜೊತೆಯಲ್ಲಿ ಐಶ್ವರ್ಯಾ ರೈ ತೆರೆ ಹಂಚಿಕೊಂಡಿದ್ದಾರೆ. ಆದ್ರೆ ಅಂದು ತೆಲುಗಿನ ಸ್ಟಾರ್ ನಟ ವಿಕ್ಟರಿ ವೆಂಕಟೇಶ್ ಸಿನಿಮಾಗೆ ಐಶ್ವರ್ಯಾ ರೈರನ್ನು ಕರೆತರುವ ಪ್ರಯತ್ನಗಳು ನಡೆದಿದ್ದವಂತೆ. ಆದ್ರೆ ನಿರ್ದೇಶಕರು ಒಪ್ಪಿಗೆ ನೀಡದ ಕಾರಣ ಐಶ್ ಎಂಟ್ರಿ ತಪ್ಪಿತ್ತು. 

ವಿಕ್ಟರಿ ವೆಂಕಟೇಶ್ ನಟನೆಯ, ಜಯಂತ್ ಸಿ ಪರಾಂಜಿ ನಿರ್ದೇಶನದ ಚಿತ್ರ 'ಪ್ರೇಮಂತೆ ಇದಿರಾ' 1998ರಲ್ಲಿ ಬಿಡುಗಡೆಯಾಗಿತ್ತು. ಮೊದಲು ಈ ಸಿನಿಮಾದಲ್ಲಿ ಐಶ್ವರ್ಯಾ ರೈ ನಟಿಸುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದ್ರೆ ಅಂದು ಸೋಲಿನ ಸುಳಿಯಲ್ಲಿ ಸಿಲುಕಿದ್ದ ಕಾರಣ ಐಶ್ವರ್ಯಾ ರೈ ನಮ್ಮ ಸಿನಿಮಾಗೆ ಬೇಡ ಅಂತ ನಿರ್ದೇಶಕ ಜಯಂತ್ ಹೇಳಿದ್ದರಂತೆ. ನಂತರ ತಮ್ಮ ಚಿತ್ರಕ್ಕೆ ಗುಳಿಕೆನ್ನೆ ಚೆಲುವೆ, ದಿಲ್‌ಸೇ ಬೆಡಗಿ ಪ್ರೀತಿ ಜಿಂಟಾರನ್ನು ಕರೆದುಕೊಂಡು ಬಂದಿದ್ದರು. ಮುಂದಿನ ಕೆಲವೇ ವರ್ಷಗಳಲ್ಲಿ ಪ್ರೀತಿ ಜಿಂಟಾ ಸ್ಟಾರ್ ನಟಿಯಾಗಲಿದ್ದಾರೆ ಎಂದು ನಿರ್ದೇಶಕ ಜಯಂತ್ ಭವಿಷ್ಯ ನುಡಿದಿದ್ದರು.

ಐಶ್​- ಅಭಿ ಡಿವೋರ್ಸ್ ಎಂಬ​ ಆಟ : ಇಷ್ಟು ದೊಡ್ಡ ಸ್ಟಾರ್​ ಆಗಿ ಇಂಥ ಚೀಪ್​ ಗಿಮಿಕ್ಕಾ? ಅಮಿತಾಭ್​ ಫ್ಯಾಮಿಲಿ ವಿರುದ್ಧ ಆಕ್ರೋಶ!

click me!