ಕೇರಳದ ವಯಾನಾಡ್ ದುರಂತಕ್ಕೆ ನಟಿ ರಶ್ಮಿಕಾ ಮಂದಣ್ಣ ಕಣ್ಣೀರಾಗಿದ್ದಾರೆ. ದುರಂತದ ಚಿತ್ರಣ, ಸಾವು ನೋವು, ಆಪ್ತರನ್ನು ಕಳೆದುಕೊಂಡವರ ಅಳಲು ಎಂತವರ ಕಣ್ಣಲ್ಲೂ ಕಣ್ಣೀರು ಜಿನಗಿಸುತ್ತದೆ. ಈ ದುರಂತ ಮಿಡಿದ ರಶ್ಮಿಕಾ ಮಂದಣ್ಣ ಸಿಎಂ ಪರಿಹಾರ ನಿಧಿಗೆ 10 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.
ಬೆಂಗಳೂರು(ಆ.01) ಕೇರಳ ವಯಾನಾಡಿನಲ್ಲಿ ಸಂಭವಿಸಿದ ಭೂಕುಸಿತ ಹಾಗೂ ಪ್ರವಾಹ ಭಾರತ ಕಂಡ ಅತ್ಯಂತ ಭೀಕರ ದುರಂತಗಳಲ್ಲೊಂದು. ಸಾವಿನ ಸಂಖ್ಯೆ 200 ದಾಟಿದೆ. 200ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಭೀಕರ ದುರಂತದ ಚಿತ್ರಣಗಳು ದೇಶವನ್ನೇ ಬೆಚ್ಚಿ ಬೀಳಿಸಿದೆ. ಹಲವು ನಟ ನಟಿಯರು ವಯನಾಡು ದುರಂತದ ಪರಿಹಾರಕ್ಕೆ ದೇಣಿಗೆ ನೀಡಿದ್ದಾರೆ. ಇದೀಗ ನಟಿ ರಶ್ಮಿಕಾ ಮಂದಣ್ಣ , ವಯನಾಡಿನಲ್ಲಿ ಬದುಕು ಕಟ್ಟಿಕೊಳ್ಳಲು ನೆರವಾಗಿದ್ದಾರೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ 10 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.
ವಯಾನಡಿನ ಪರಿಸ್ಥಿತಿ ನಟಿ ರಶ್ಮಿಕಾ ಮಂದಣ್ಣಗೆ ತೀವ್ರ ನೋವುಂಟು ಮಾಡಿದೆ. ಘಟನೆಗೆ ಮಿಡಿದ ರಶ್ಮಿಕಾ ಮಂದಣ್ಣ ಸದ್ದಿಲ್ಲದೆ 10 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ತಾವು ದೇಣಿಗೆ ನೀಡಿರುವ ಮಾಹಿತಿಯನ್ನು ರಶ್ಮಿಕಾ ಸೋಶಿಯಲ್ ಮೀಡಿಯಾಗಳಲ್ಲಿ ಎಲ್ಲೂ ಬಹಿರಂಗಪಡಿಸಿಲ್ಲ.
ಹಸಿರು ಸೀರೆ, ಗುಲಾಬಿ ಮುಡಿದು ಕಾಯ್ತಿರೋ ರಶ್ಮಿಕಾ ಮಂದಣ್ಣ ಕಣ್ಣು ಹೊಡೆದದ್ದು ಯಾರಿಗೆ?
ಇತ್ತೀಚೆಗಷ್ಟೆ ರಶ್ಮಿಕಾ ಮಂದಣ್ಣ ಖಾಸಗಿ ಕಾರ್ಯಕ್ರಮ ನಿಮಿತ್ತ ಕೇರಳದ ಕುರಂಗಪಲ್ಲಿಗೆ ಭೇಟಿ ನೀಡಿದ್ದರು. ಈ ವೇಳೆ ಕಿಕ್ಕಿರಿದು ಅಭಿಮಾನಿಳು ತುಂಬಿದ್ದರು. ಅಭಿಮಾನಿಗಳ ಪ್ರೀತಿ ವಿಶ್ವಾಸಕ್ಕೆ ರಶ್ಮಿಕಾ ಮಂದಣ್ಣ ಬೆರಗಾಗಿದ್ದರು. ಕೇರಳ ಜನತೆಯ ಪ್ರೀತಿ, ಆತಿಥ್ಯವನ್ನು ರಶ್ಮಿಕಾ ಮಂದಣ್ಣ ಕೊಂಡಾಡಿದ್ದರು. ಜುಲೈ 25ರಂದು ರಶ್ಮಿಕಾ ಮಂದಣ್ಣ ಕೇರಳಕ್ಕೆ ಬೇಟಿ ನೀಡಿದ್ದರು. ಇದಾದ ಕೆಲವೇ ದಿನಗಳಲ್ಲಿ ವಯಾನಡು ದುರಂತ ಸಂಭವಿಸಿದೆ. ಇದೀಗ ಪರಿಹಾರಕ್ಕೆ ಸಹಾಯಹಸ್ತ ಚಾಚುವ ಮೂಲಕ ಕೇರಳ ಮಾತ್ರವಲ್ಲ ಎಲ್ಲರ ಮನಗೆದ್ದಿದ್ದಾರೆ.
ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ಸೆಲೆಬ್ರೆಟಿಗಳು ವಯಾನಾಡ್ ದುರಂತಕ್ಕೆ ದೇಣಿಕೆ ನೀಡಿ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ತಮಿಳು ನಟ ವಿಕ್ರಮ್ ಈಗಾಗಲೇ 20 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ತಮಿಳು ನಟ ಸೂರ್ಯ, ಪತ್ನಿ ಜ್ಯೋತಿಕಾ ಹಾಗೂ ಸಹೋದರ ಕಾರ್ತಿ ಜೊತೆಯಾಗಿ 50 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.
ಭಾರತೀಯ ಸೇನೆ, ವಾಯುಸೇನೆ, ಎನ್‌ಡಿಆರ್‌ಎಫ್, ರಾಜ್ಯ ರಕ್ಷಣಾ ತಂಡಗಳು, ಸ್ವಯಂ ಸೇವಕರು ವಯನಾಡಿನ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಸದ್ಯ ಸಾವಿನ ಸಂಖ್ಯೆ 288ಕ್ಕೆ ಏರಿಕೆಯಾಗಿದೆ. ಇದೀಗ ಹವಾಮಾನ ಇಲಾಖೆ ಮತ್ತೊಂದು ಅಲರ್ಟ್ ನೀಡಿದೆ. ಕೇರಳದ ಕೆಲ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದಿದೆ.
Wayanad landslide ಮಣ್ಣಿನಡಿ ಸಿಲುಕಿದವರ ರಕ್ಷಣೆಗೆ ಶ್ವಾನದಳ, ಹೇಗೆ ಕೆಲಸ ಮಾಡುತ್ತೆ ಶ್ವಾನಗಳು?