ಸರಳ ಹಾಗೂ ಸುಂದರ ನಟಿ ಸಾಯಿ ಪಲ್ಲವಿ. ನಟನೆ, ಡಾನ್ಸ್ ಮೂಲಕವೇ ಅಭಿಮಾನಿಗಳನ್ನು ಗೆದ್ದಿರುವ ಅವರಿಗೆ ಮೇಕಪ್ ಅವಶ್ಯಕತೆ ಇಲ್ಲ. ಮೇಕಪ್ ಅಂತ ಅವರ ಬಳಿ ಇರೋದು ಬರೀ ಎರಡೇ ಐಟಂ.
ನ್ಯಾಚ್ಯುರಲ್ ಬ್ಯೂಟಿ ಅಂದಾಗ ಮೊದಲು ಕೇಳಿ ಬರೋದು ಸೌತ್ ನಟಿ ಸಾಯಿ ಪಲ್ಲವಿ (Natural Beauty South Indian Actress Sai Pallavi) ಹೆಸರು. ಮುಖಕ್ಕೆ ಒಂದು ಹಾಸು ಬಣ್ಣ ಬಳಿದುಕೊಂಡು, ತುಟಿಗೆ ಲಿಪ್ಸ್ಟಿಗ್ ಹಚ್ಚಿಕೊಂಡು ಓಡಾಡುವ ನಟಿಯರ ಮಧ್ಯೆ ಸಾಯಿ ಪಲ್ಲವಿ ತುಂಬಾ ಸರಳವಾಗಿ ಕಾಣ್ತಾರೆ. ಅದಕ್ಕೆ ಸಾಯಿ ಪಲ್ಲವಿ ಮೇಕಪ್ ಇಲ್ಲದ ಲುಕ್ ಕಾರಣ. ನಾರ್ಮಲ್ ಆಗಿ ಏನೂ ಮೇಕಪ್ ಮಾಡದ ಸಾಯಿ ಪಲ್ಲವಿ, ಸಿನಿಮಾದಲ್ಲೂ ಅತೀ ಕಡಿಮೆ ಎನ್ನುವಷ್ಟು ಮೇಕಪ್ ಮಾಡ್ತಾರೆ.
ಸೌತ್ (South) ಚಿತ್ರಗಳಲ್ಲದೆ ಈಗ ಬಾಲಿವುಡ್ ಗೆ ಹಾರಿರುವ ಸಾಯಿ ಪಲ್ಲವಿ ಸದ್ಯ ರಾಮಾಯಣ (Ramayana) ದಲ್ಲಿ ಬ್ಯುಸಿಯಿದ್ದಾರೆ. ಸಾಯಿ ಪಲ್ಲವಿ (Sai Pallavi) ಅನೇಕ ಬಾರಿ ತಮ್ಮ ಮೇಕಪ್ ಬಗ್ಗೆ ಮಾತನಾಡಿದ್ದಾರೆ. ನಿರೂಪಕಿ ಅನುಶ್ರೀ ಜೊತೆ ಹಿಂದೆ ಮಾತನಾಡಿದ್ದ ಸಾಯಿ ಪಲ್ಲವಿಯ ಮೇಕಪ್ ಬಗೆಗಿನ ವಿಡಿಯೋ ಈಗ ಮತ್ತೆ ವೈರಲ್ ಆಗ್ತಿದೆ. ಸಾಯಿ ಪಲ್ಲವಿ ಆ ವಿಡಿಯೋದಲ್ಲಿ ತಾವು ಮೇಕಪ್ ರೂಪದಲ್ಲಿ ಏನೆಲ್ಲ ಬಳಸ್ತೇನೆ ಎಂಬುದನ್ನು ಹೇಳಿದ್ದರು.
ಚಿಕ್ಕಪೇಟೆಯಲ್ಲಿ ಮದುವೆ ಸೀರೆ ಖರೀದಿಸಿದ ನಟಿ ಸೋನಲ್; ಸರಳತೆಯ ಸುಂದರಿ ಎಂದ ನೆಟ್ಟಿಗರು!
ಮೇಕಪ್ ಗೆ ನಟಿ ಸಾಯಿ ಪಲ್ಲವಿ ಬಳಿ ಇರೋದು ಈ ಎರಡೇ ವಸ್ತು : ಸಾಯಿ ಪಲ್ಲವಿ ವಿಶೇಷವಾಗಿ ಮುಖಕ್ಕೆ ಏನೂ ಹಚ್ಚೋದಿಲ್ಲ. ಅವರ ಬಳಿ ಐಲೈನರ್ ಇದೆ. ಹಾಗೆ ಮಾಯ್ಸ್ಚರೈಸರ್ ಕ್ರೀಂ ಇದೆ. ಹೇರ್ ಸ್ಟೈಲರ್ ಇಟ್ಟುಕೊಂಡಿರುವ ಸಾಯಿ ಪಲ್ಲವಿ, ಹೇರ್ ಸ್ಟೈಲ್ ಮಾತ್ರ ಬದಲಿಸ್ತಿರ್ತಾರೆ. ಚಿತ್ರಕ್ಕೆ ತಕ್ಕಂತೆ, ಪಾತ್ರಕ್ಕೆ ತಕ್ಕಂತೆ ಅವರ ಹೇರ್ ಸ್ಟೈಲ್ ಬದಲಾಗುತ್ತೆ.
ರಾತ್ರಿ ವೇಳೆ ಶೂಟಿಂಗ್ ಮಾಡುವ ಸಮಯದಲ್ಲಿ ಮಾತ್ರ ಐಲೈನರ್ ಬಳಸ್ತಾರೆ ಸಾಯಿ ಪಲ್ಲವಿ. ಕಣ್ಣು ನಿದ್ರೆ ಮಾಡಿದಂತೆ ಕಾಣ್ಬಾರದು ಎನ್ನುವ ಒಂದೇ ಕಾರಣಕ್ಕೆ ಐಲೈನರ್ ಬಳಸುವ ಸಾಯಿ ಪಲ್ಲವಿ, ಎರಡು ಸಿನಿಮಾಗಳಲ್ಲಿ ವಿತ್ ಔಟ್ ಮೇಕಪ್ ಕಾಣಿಸಿಕೊಂಡಿದ್ದಾರೆ. ಗಾರ್ಗಿ ಹಾಗೂ ವಿರಾಟಪರ್ವಂ ಚಿತ್ರದಲ್ಲಿ ಸಾಯಿ ಪಲ್ಲವಿ ಸ್ವಲ್ಪೇ ಸ್ವಲ್ಪವೂ ಮೇಕಪ್ ಬಳಸಿಲ್ಲ. ಮುಖ ತೊಳೆದು ಹಾಗೆ ಶೂಟಿಂಗ್ ಗೆ ಬರ್ತಾ ಇದ್ದೆ ಎಂದಿದ್ದರು ಸಾಯಿ ಪಲ್ಲವಿ. ಉಳಿದ ಚಿತ್ರದಲ್ಲೂ ಸಾಯಿ ಪಲ್ಲವಿ ಮೇಕಪ್ ಗೆ ಬಳಸಿದ್ದು ಐಲೈನರ್ ಮಾತ್ರ.
ಸಾಯಿ ಪಲ್ಲವಿ, ಪಾತ್ರಕ್ಕೆ, ನಟನೆಗೆ ಮಹತ್ವ ನೀಡ್ತಾರೆ. ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಾಗ ಅದಕ್ಕೆ ತಕ್ಕಂತೆ ಹೇರ್ ಸ್ಟೈಲ್ ಬದಲಿಸಿಕೊಳ್ತಾರೆ. ಅದು ಅವರ ಲುಕ್ ಬದಲಿಸುತ್ತದೆ. ಪಾತ್ರಕ್ಕೆ ತಕ್ಕಂತೆ ನಟನೆ ಮುಖ್ಯವೇ ಹೊರತು ಮೇಕಪ್ ಅಲ್ಲ ಎಂಬುದು ಸಾಯಿ ಪಲ್ಲವಿ ಅಭಿಪ್ರಾಯ.ಮಲಯಾಳಂ ಚಿತ್ರ ಪ್ರೇಮಂ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟ ಸಾಯಿ ಪಲ್ಲವಿಗೆ ಮೇಕಪ್ ಹಚ್ಚಿದ್ರೆ ಒತ್ತಡ ಹೆಚ್ಚಾಗುತ್ತಂತೆ. ನನಗೆ ಯಾವ ಮೇಕಪ್ ನಲ್ಲೂ ನಂಬಿಕೆ ಇಲ್ಲ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ರು.
ಸಾಯಿ ಪಲ್ಲವಿ 2016ರಲ್ಲಿ ಎಂಬಿಬಿಎಸ್ ಮುಗಿಸಿದ್ದು, ಇದಕ್ಕೂ ಮುನ್ನ 2014ರಲ್ಲಿಯೇ ಸಿನಿಮಾದಲ್ಲಿ ಕಾಣಿಸಿಕೊಂಡ್ರು. ಆ ನಂತ್ರ ಒಂದಾದ್ಮೇಲೆ ಒಂದರಂತೆ ಸಿನಿಮಾದಲ್ಲಿ ಬ್ಯುಸಿಯಾದ ಸಾಯಿ ಪಲ್ಲವಿ ಉತ್ತಮ ಡಾನ್ಸರ್ ಕೂಡ ಹೌದು. ಅವರ ಫಿಟ್ನೆಸ್ ಗೆ ಡಾನ್ಸ್ ಕಾರಣ.
ಪ್ಯಾರಿಸ್ನಲ್ಲಿ ಅನಂತ್ ಅಂಬಾನಿ- ರಾಧಿಕಾ ವಿಹಾರ ಮಾಡ್ತಿದ್ರೆ ನೆಟ್ಟಿಗರು ಹೀಗೆಲ್ಲಾ ಹೇಳೋದಾ?
ಸದ್ಯ ರಣಬೀರ್ ಕಪೂರ್ ಹಾಗೂ ಯಶ್ ಜೊತೆ ಸಾಯಿ ಪಲ್ಲವಿ ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಸಾಯಿ ಪಲ್ಲವಿ ಡೇಟಿಂಗ್ ವಿಷ್ಯದಲ್ಲಿ ಚರ್ಚೆಯಲ್ಲಿದ್ದಾರೆ. ಸಾಯಿ ಪಲ್ಲವಿ, ವಿವಾಹಿತ, ಇಬ್ಬರು ಮಕ್ಕಳಿರುವ ನಟನೊಂದಿಗೆ ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅದಕ್ಕೆ ಪುಷ್ಠಿ ನೀಡುವ ಪೋಸ್ಟ್ ಒಂದು ಇತ್ತೀಚಿಗೆ ವೈರಲ್ ಆಗಿತ್ತು. ಆದ್ರೆ ಸಾಯಿ ಪಲ್ಲವಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.