Toby viral video: ಪ್ರೇಕ್ಷಕರೇ ನಮಗೆ ಅನ್ನದಾತರು; ಮಹಿಳೆಗೆ ನಿಂದಿಸಿದ ವ್ಯಕ್ತಿ ವಿರುದ್ಧ ರಾಜ್ ಬಿ ಶೆಟ್ಟಿ ಗರಂ!

Published : Aug 26, 2023, 06:28 PM ISTUpdated : Aug 28, 2023, 09:49 AM IST
Toby viral video: ಪ್ರೇಕ್ಷಕರೇ ನಮಗೆ ಅನ್ನದಾತರು; ಮಹಿಳೆಗೆ ನಿಂದಿಸಿದ ವ್ಯಕ್ತಿ ವಿರುದ್ಧ ರಾಜ್ ಬಿ ಶೆಟ್ಟಿ ಗರಂ!

ಸಾರಾಂಶ

ಟೋಬಿ ಸಿನಿಮಾ ಚೆನ್ನಾಗಿಲ್ಲ' ಎಂದ ಮಹಿಳೆಗೆ ವ್ಯಕ್ತಿಯೊಬ್ಬ ಥಿಯೇಟರ್ ಮುಂದೆಯೇ ಅವಾಚ್ಯವಾಗಿ ನಿಂದಿಸಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.

ಬೆಂಗಳೂರು (ಆ.26): ಟೋಬಿ ಸಿನಿಮಾ ಚೆನ್ನಾಗಿಲ್ಲ' ಎಂದ ಮಹಿಳೆಗೆ ವ್ಯಕ್ತಿಯೊಬ್ಬ ಥಿಯೇಟರ್ ಮುಂದೆಯೇ ಅವಾಚ್ಯವಾಗಿ ನಿಂದಿಸಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.

ಕಾಂತಾರ ಸಿನಿಮಾದ ಬಳಿಕ ಭಾರೀ ಕುತೂಹಲ ಕೆರಳಿಸಿದ್ದ ಟೋಬಿ(Toby)  ವರಮಹಾಲಕ್ಷ್ಮೀ(Varamahalakshmi festival) ಹಬ್ಬದ ದಿನವೇ ಬಿಡುಗಡೆಗೊಳಿಸಿ ಸಿನಿಪ್ರೇಕ್ಷಕರಿಗೆ ಸರ್‌ಪ್ರೈಸ್ ಕೊಟ್ಟಿದ್ದ ರಾಜ್‌ ಬಿ ಶೆಟ್ಟಿ(Raj B Shetty). ನೆರೆರಾಜ್ಯಗಳಲ್ಲೂ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಸಿನಿಮಾ ನೋಡಿದ ಹಲವರು ಹಲವು ರೀತಿಯ ಅಭಿಪ್ರಾಯ ತಿಳಿಸುತ್ತಿದ್ದಾರೆ ಆದರೆ ಈ ನಡುವೆ ಮಹಿಳೆಗೆ ನಿಂದಿಸಿರುವ ಘಟನೆ ನಡೆದಿರುವುದು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಸಿನಿಮಾ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಇಲ್ಲವೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Raj B Shetty: ಇವಿ ಎಕ್ಸ್‌ಫೋನಲ್ಲಿ ಎಲೆಕ್ಟ್ರಿಕ್ ಆಟೋ ಓಡಿಸಿ ಖುಷಿಪಟ್ಟ ಟೋಬಿ!

ಘಟನೆ ಭಾರೀ ವೈರಲ್(Toby viral video) ಆಗ್ತಿದ್ದಂತೆ ಎಚ್ಚೆತ್ತುಕೊಂಡ ಚಿತ್ರಕತೆ ಬರೆದ ಟಿಕೆ ದಯಾನಂದ್(TK dayanand) ಮಾಧ್ಯಮಗಳ ಮೂಲಕ ಕ್ಷಮೆಯಾಚಿಸಿದ ಬೆನ್ನಲ್ಲೇ ರಾಜ್ ಬಿ ಶೆಟ್ಟಿ ಕೂಡ ಫೇಸ್‌ಬುಕ್ ಮೂಲಕ ಘಟನೆ ಬಗ್ಗೆ ಕ್ಷಮೆಯಾಚಿಸಿದ್ದಾರೆ. ಮಹಿಳೆಗೆ ನಿಂದಿಸಿದ ಈ ವ್ಯಕ್ತಿ ನಮ್ಮ ಚಿತ್ರತಂಡಕ್ಕೆ ಸಂಬಂಧಿಸಿದವನಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರೇಕ್ಷಕರೇ ನಮಗೆ ಅನ್ನದಾತರು:

ಸಿನಿಮಾ ಎಂದರೆನೇ ಟೀಕೆಯ ಮಾಧ್ಯಮ. ಸಿನಿಮಾ ನೋಡಿದ ಬಳಿಕ ಪ್ರೇಕ್ಷಕರು ಅದನ್ನು ಒಪ್ಪಲು, ಒಪ್ಪದಿರಲು ಅನಿಸಿದ ಅಭಿಪ್ರಾಯ ವ್ಯಕ್ತಪಡಿಸಲು ಅವರಿಗೆ ಹಕ್ಕಿದೆ. ಅಷ್ಟಕ್ಕೂ ಪ್ರೇಕ್ಷಕರೇ ನಮಗೆ ಅನ್ನದಾತರು. ನಮಗೆ ಸಂಭಾವನೆ ಕೊಡುವವರು ಅವರೇ ಅವರು ಅನಿಸಿದ್ದನ್ನು ಹೇಳುತ್ತಾರೆ. ಅದನ್ನು ಒಪ್ಪಲು ಅಥವಾ ಒಪ್ಪದಿರಲು ನಾವು ಸ್ವತಂತ್ರರು. ಆದರೆ ಒಂದು ಸಿನಿಮಾ ಚೆನ್ನಾಗಿಲ್ಲ ಎಂದಾಗ ಜನರಿಗೆ ಕಿರುಕುಳ, ನಿಂದಿಸುವುದು ಸರಿಯಲ್ಲ ಎಂದಿದ್ದಾರೆ 

ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ

ಸಿನಿಮಾ ಚೆನ್ನಾಗಿಲ್ಲ ಎಂದ ಮಹಿಳೆಗೆ ವಾಚಮಗೋಚರ ನಿಂದಿಸಿರುವ ವ್ಯಕ್ತಿ ಥಿಯೇಟರ್‌ನಿಂದ ಆಚೆ ಹೋಗುವಂತೆ ವಾರ್ನಿಂಗ್ ಮಾಡಿದ್ದಾನೆ. ಹೀಗೆ ಅವಾಚ್ಯವಾಗಿ ನಿಂದಿಸಿರುವ ವಿಡಿಯೋ ಹಂಚಿಕೊಂಡಿರುವ ನೆಟ್ಟಿಗರು. ವ್ಯಕ್ತಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ರಾಜ್‌ ಬಿ ಶೆಟ್ಟಿಗೆ ಟ್ಯಾಗ್ ಮಾಡಿ ಪ್ರಶ್ನಿಸಿದ್ದಾರೆ. ಇದರ ನಡುವೆ ಆ ಮಹಿಳೆ ಟೋಬಿ ಸಿನಿಮಾಕ್ಕೆ ಮಾತ್ರ ವಿಮರ್ಶೆ ಮಾಡ್ತಿದ್ದಾಳ? ಈ ಹಿಂದೆ ಯಾವ ಸಿನಿಮಾದ ಬಗ್ಗೆ ಮಾತನಾಡಿದ್ದಾಳೆ. ಮಾಸ್ಕ್ ಹಾಕಿದ್ದು ಯಾಕೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪತ್ರಕರ್ತ ಜೀತೇಂದ್ರ ಕುಂದೇಶ್ವರ್, ಸಿನಿಮಾ ವಿಮರ್ಶಕ, ಪತ್ರಕರ್ತ ನವೀನ್ ಸಾಗರ್ ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಅಭಿಪ್ರಾಯ ಬರೆದುಕೊಂಡಿದ್ದಾರೆ.

ನಮ್ಮ ನಡುವೆ ಯಾವ ಸ್ಪರ್ಧೆನೂ ಇಲ್ಲ: ರಕ್ಷಿತ್ ಶೆಟ್ಟಿ- ರಾಜ್‌ ಬಿ ಶೆಟ್ಟಿ ಕ್ಲಾರಿಟಿ

 

  

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಮಿತಾಭ್ 14 ಚಿತ್ರಗಳ ರೀಮೇಕ್ ಮಾಡಿ, 33 ವರ್ಷಗಳ ಬಳಿಕ ಅಮಿತಾಭ್ ಜೊತೆ ನಟಿಸಿದ ನಟ ರಜನಿಕಾಂತ್!
Sonali Bendre: 'ಅಡುಗೆಮನೆಗೆ ಹೋಗ್ಬೇಡ ನೀನು'.. ಅಂತ ಖಡಕ್ ಆಗಿ ಹೇಳಿದ್ರು ನನ್ ಅತ್ತೆ!