ರಾಷ್ಟ್ರಪ್ರಶಸ್ತಿ ಪಡೆದಿರುವ ನಟ ಅಲ್ಲು ಅರ್ಜುನ್ ಅವರ ಮುಂದಿನ 10 ವರ್ಷಗಳ ಭವಿಷ್ಯ ನುಡಿದಿದ್ದಾರೆ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ. ಅವರು ಹೇಳಿದ್ದೇನು?
ಟಾಲಿವುಡ್ (Tollywood) ಮಂದಿ ಸಿನಿಮಾ ಮಾಡುವಾಗ ಕಥೆ, ನಿರ್ದೇಶಕ, ನಿರ್ಮಾಪಕ ಅಥವಾ ವೀಕ್ಷಕರನ್ನು ನಂಬುತ್ತಾರೋ ಇಲ್ವೋ ಆದರೆ ವೇಣು ಸ್ವಾಮಿ ನುಡಿಯುವ ಭವಿಷ್ಯದ ಮೇಲೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅಷ್ಟರ ಮಟ್ಟಕ್ಕೆ ವೇಣು ಸ್ವಾಮಿ ನುಡಿಗಳು ವೈರಲ್ ಆಗುತ್ತದೆ. ಇದೇ ಕಾರಣಕ್ಕೆ ಟಾಲಿವುಡ್‌ನಲ್ಲಿ ಜ್ಯೋತಿಷಿ ವೇಣು ಸ್ವಾಮಿ ಸಿಕ್ಕಾಪಟ್ಟೆ ಫೇಮಸ್. ಇವರು ಇನ್ನಷ್ಟು ಫೇಮಸ್ ಆಗಿದ್ದು, ನಾಗಚೈತನ್ಯ ಹಾಗೂ ಸಮಂತಾ ಜಾತಕ ಹೊಂದಾಣಿಕೆಯಾಗಿಲ್ಲ ಎಂದು ಹೇಳಿದ್ದಾಗ. ಇವರು ಈ ಭವಿಷ್ಯ ಹೇಳಿದ್ದ ಸಂದರ್ಭದಲ್ಲಿ ಇದನ್ನು ವಿರೋಧಿಸಿದವರೇ ಅನೇಕರು. ಆದರೆ ಈ ಜೊಡಿ ಹೆಚ್ಚು ದಿನ ಒಟ್ಟಿಗೆ ವಾಸ ಮಾಡುವುದಿಲ್ಲ ಎಂದು ದೃಢವಾಗಿ ಹೇಳಿದ್ದರು ವೇಣುಸ್ವಾಮಿ. ಕೊನೆಗೂ ಅದು ನಿಜವಾಯ್ತು. ನಾಗಚೈತನ್ಯ ಹಾಗೂ ಸಮಂತಾ ಇಬ್ಬರೂ ಡಿವೋರ್ಸ್ ನೀಡಿ ದಾಂಪತ್ಯ ಮುರಿದುಕೊಂಡರು. ಇದಾದ ಬಳಿಕ ವೇಣು ಸ್ವಾಮಿ ಭವಿಷ್ಯದ ಬಗ್ಗೆ ನಂಬಿಕೆ ಹೆಚ್ಚಾಗಿದೆ.
ಅದೇ ರೀತಿ, ವಿಜಯ್ ದೇವರಕೊಂಡ (Vijay Devarakonda) ಲೈಗರ್ ಸಿನಿಮಾ ಸೋಲುತ್ತದೆ ಎಂದು ವೇಣು ಹೇಳಿದ್ದರು. ಅಷ್ಟಮ ಶನಿ ಆರಂಭವಾಗುತ್ತಿರುವ ಕಾರಣ ವಿಜಯ್ ಏನೇ ಕೆಲಸ ಮಾಡಿದರೂ ಸೋಲುತ್ತಾರೆ ಹಾಗೂ ಮಾತನಾಡುವಾಗ ಯೋಚನೆ ಮಾಡಬೇಕು ಹೀಗಾಗಿ ಸದ್ಯಕ್ಕೆ ಸಿನಿಮಾ ಒಪ್ಪಿಕೊಳ್ಳಬಾರದು ಎಂದಿದ್ದರು. ನರೇಶ್- ಪವಿತ್ರಾ ಮದುವೆಗೂ ಮುನ್ನವೇ ನರೇಶ್ ಮತ್ತು ರಮ್ಯಾ ಮದುವೆ ಮುರಿದು ಬೀಳುತ್ತದೆ ಎಂದು ವೇಣು ಸ್ವಾಮಿ ಹೇಳಿದ್ದರು. ಇಬ್ಬರ ಜಾತಕ ಮ್ಯಾಜ್ ಆಗುತ್ತಿರಲಿಲ್ಲ ಬೇಡ ಬೇಡ ಎಂದು ವೇಣು ಹೇಳಿದ್ದರೂ ಕೇಳದೆ ಮದುವೆ ಮಾಡಿಕೊಂಡು ನರೇಶ್ ಡಿಪೋರ್ಸ್ ಪಡೆಯುವ ಹಂತ ತಲುಪಿದ್ದಾರೆ.
ಇಬ್ಬರು ಸ್ಟಾರ್ ನಟರು ಸಾವಿನ ಬಗ್ಗೆ ಸುಳಿವು ಕೊಟ್ಟ ಜ್ಯೋತಿಷಿ ವೇಣು ಸ್ವಾಮಿ; ಹೇಳಿಕೆ ವೈರಲ್!
ಕಳೆದ ತಿಂಗಳು ಭಯಾನಕ ಭವಿಷ್ಯವನ್ನೂ ಸ್ವಾಮೀಜಿ ನುಡಿದಿದ್ದರು. ತೆಲುಗು ಚಿತ್ರರಂಗದ ಸ್ಟಾರ್ ನಟರು ಖಂಡಿತಾ 2026ರೊಳಗೆ ಅನಾರೋಗ್ಯದಿಂದ ಬಳಲುತ್ತಾರೆ ಇಲ್ಲವಾದರೆ ಅಗಲುತ್ತಾರೆ. ಸಾವಾಗುವುದು ಕನ್ಫರ್ಮ್ ಎಂದಿದ್ದರು. ಆದರೆ ಯಾರು ಆ ಇಬ್ಬರು ಎಂದು ಮಾತ್ರ ರಿವೀಲ್ ಮಾಡಿಲ್ಲ. ಹೀಗಾಗಿ ಚಿತ್ರರಂಗದಲ್ಲಿ ಗೊಂದಲ ಸೃಷ್ಟಿ ಮಾಡಿದೆ. ಇದರ ನಡುವೆಯೇ, ಎರಡು ತಿಂಗಳ ಹಿಂದೆ ಜನಿಸಿರುವ ರಾಮ್ ಚರಣ್ (Ramcharan) ಪುತ್ರಿ ಬಗ್ಗೆನೂ ಕಾಮೆಂಟ್ ಮಾಡಿದ್ದಾರೆ. ಮಗುವಿನ ಪಿನ್ ಟು ಪಿನ್ ಭವಿಷ್ಯ ಹೇಳಿರುವ ವೇಣು ಸ್ವಾಮಿ ಸಣ್ಣಪುಟ್ಟ ದೋಷಗಳಿದೆ ಎಂದು ಹೇಳಿದ್ದಾರೆ. ಹಲ್ಲು ಹಾಗೂ ಕಿವಿಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳು ಹೆಚ್ಚಿದೆ ಎಂದಿದ್ದಾರೆ. ಅಲ್ಲದೆ ಮಗುವಿನ ಜನನದಿಂದ ತಾಯಿ, ತಂದೆ, ತಾತ ಹಾಗೂ ಎಲ್ಲರೂ ಒಂದಾಗುತ್ತಾರೆ ಎಂದಿದ್ದಾರೆ. ಎಲ್ಲಾ ಹೇಳಿಕೆಗೂ ಸ್ಪಷ್ಟನೆ ಕೊಡುವ ವೇಣು ಸ್ವಾಮಿ ಈ ಮಾತಿನ ಅರ್ಥ ಏನೆಂದು ಬಿಡಿಸಿ ಹೇಳಲಿಲ್ಲ.
ಇವುಗಳ ನಡುವೆಯೇ ಈಗ ಇವೆಲ್ಲಾ ಸುದ್ದಿ ಮುನ್ನೆಲೆಗೆ ಬರಲು ಕಾರಣ, ಅಲ್ಲು ಅರ್ಜುನ್. ಹೌದು. ನಿನ್ನೆಯಷ್ಟೇ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿರುವ ಅಲ್ಲು ಅರ್ಜುನ್ ಬಗ್ಗೆ ಎಲ್ಲೆಡೆ ಸಂಭ್ರಮದ ವಾತಾವರಣ ನಿಮಾರ್ಣವಾದಂತೆ ಸ್ವಾಮೀಜಿ ಕೆಲ ತಿಂಗಳ ಹಿಂದಷ್ಟೇ ನುಡಿದಿರೋ ಭವಿಷ್ಯವೂ ಮುನ್ನೆಲೆಗೆ ಬಂದಿದೆ. ತೆಲುಗಿನಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ನಟ ಎಂಬ ಹೆಗ್ಗಳಿಕೆ ಪಡೆದಿರುವ ಅಲ್ಲು ಅರ್ಜುನ್ ಬಗ್ಗೆ ವೇಣು ಸ್ವಾಮಿ ಅದೇ ರೀತಿಯ ಭವಿಷ್ಯ ನುಡಿದಿದ್ದು, ಅದರ ವಿಡಿಯೋ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲದೇ, 10 ವರ್ಷ ಅಲ್ಲು ಅರ್ಜುನ್ ಭವಿಷ್ಯ ಹೇಗಿರುತ್ತೆ ಎಂದೂ ಸ್ವಾಮೀಜಿ ಹೇಳಿದ್ದಾರೆ.
ಅಷ್ಟಕ್ಕೂ ಅಲ್ಲು ಅರ್ಜುನ್ ಕುರಿತು ಸ್ವಾಮೀಜಿ ಹೇಳಿದ್ದೇನೆಂದರೆ, "ಅಲ್ಲು ಅರ್ಜುನ್ ಮಾತ್ರ ಪ್ಯಾನ್ ಇಂಡಿಯಾ ಸ್ಟಾರ್ ಆಗುತ್ತಾರೆ. ಪ್ರತಿ ಸಿನಿಮಾಗೆ 100 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ನಿರ್ಮಾಪಕ ಟೆನ್ಷನ್ ಅನ್ನು ಕಡಿಮೆ ಮಾಡುತ್ತಾರೆ ಎಂದಿದ್ದರು. ಅದರಂತೆಯೇ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಇನ್ನು ಅಲ್ಲು ಅವರ 10 ವರ್ಷ ಭವಿಷ್ಯ ಕುರಿತೂ ಅವರು ಹೇಳಿದ್ದಾರೆ. ಅಲ್ಲು ಅರ್ಜುನ್ ಜಾತಕ ಅದ್ಭುತವಾಗಿದೆ. ಇನ್ನು 10 ವರ್ಷ ಇವರ ಭವಿಷ್ಯ ಚೆನ್ನಾಗಿರುತ್ತೆ. ಯಾವುದೇ ಸಿನಿಮಾದಲ್ಲಿ ನಟಿಸಿದರೂ, 200 ಕೋಟಿ ರೂಪಾಯಿಗೂ ಹೆಚ್ಚು ಬ್ಯುಸಿನೆಸ್ ಮಾಡುತ್ತದೆ ಎಂದಿದ್ದಾರೆ. ಬಾಕ್ಸ್ ಆಫೀಸ್ ನಲ್ಲಿ ಪುಷ್ಪ 2 ಚಿತ್ರದ ಫಲಿತಾಂಶದ ಬಗ್ಗೆ ಮಾತನಾಡಿದ ವೇಣು ಸ್ವಾಮಿ, "ಸಿನಿಮಾವು ಅದರ ಮೊದಲ ಭಾಗದಂತೆ ದೊಡ್ಡ ಯಶಸ್ಸನ್ನು ಪಡೆಯಲಿದೆ. ಇನ್ನೂ ಹತ್ತು ವರ್ಷಗಳ ಕಾಲ ಅಲ್ಲು ಅರ್ಜುನ್ ಆಳ್ವಿಕೆ ನಡೆಸಲಿದ್ದಾರೆ ಮತ್ತು ಅದರ ಬಗ್ಗೆ ಚರ್ಚೆ ಮಾಡಲು ಏನೂ ಇಲ್ಲ" ಎಂದಿದ್ದು, ಅದನ್ನು ಕಾಲವೇ ನಿರ್ಧರಿಸಬೇಕಿದೆ.
GADAR-2: ಜಾತಕದಲ್ಲಿ ಗುರು ಸ್ಥಿರ, ಮುಂದೇನು? ಸನ್ನಿ ಡಿಯೋಲ್ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ!