Titanic: ಟೈಟಾನಿಕ್​ ಚಿತ್ರ ಬಿಡುಗಡೆಯಾದಾಗ ಹುಟ್ಟೇ ಇರದವಳ ಜೊತೆ ಹೀರೋ ಡೇಟಿಂಗ್​!

Published : Feb 09, 2023, 05:36 PM IST
Titanic: ಟೈಟಾನಿಕ್​ ಚಿತ್ರ ಬಿಡುಗಡೆಯಾದಾಗ ಹುಟ್ಟೇ ಇರದವಳ ಜೊತೆ ಹೀರೋ ಡೇಟಿಂಗ್​!

ಸಾರಾಂಶ

ಟೈಟಾನಿಕ ಚಿತ್ರದ ಹೀರೋ ಲಿಯೊನಾರ್ಡೊ ಡಿಕಾಪ್ರಿಯೊ ಡೇಟಿಂಗ್​ ವಿಷಯದಲ್ಲಿ ಸದಾ ಸುದ್ದಿಯಲ್ಲಿ ಇರುತ್ತಾರೆ. ಈಗ 19 ವರ್ಷ ವಯಸ್ಸಿನವಳ ಜೊತೆ ಡೇಟಿಂಗ್​ ಮಾಡುತ್ತಿದ್ದಾರೆ. ಯಾರವಳು?   

ಟೈಟಾನಿಕ್, 1997ರಲ್ಲಿ ಬಿಡುಗಡೆಯಾದ ಚಿತ್ರ ಯಾರಿಗೆ ತಾನೇ ನೆನಪಿಲ್ಲ? ಜೇಮ್ಸ್ ಕ್ಯಾಮರೂನ್ ಅವರ ಈ ಸಿನಿಮಾ   ಪ್ರಣಯ ಮತ್ತು ದುರಂತ ಕಥೆ. ಇದು ಆ ಸಮಯದಲ್ಲಿ ತಯಾರಾದ ಅತ್ಯಂತ ದುಬಾರಿ ಚಿತ್ರವೆಂದೇ ಪರಿಗಣಿಸಲಾಗಿದೆ.  ಟಾಪ್ 3 ದುಬಾರಿ ಚಿತ್ರಗಳಲ್ಲಿ ಇಂದಿಗೂ ಯಾವುದೇ ಸಿನಿಮಾ ಇದನ್ನು ಬೀಟ್ ಮಾಡಲು ಸಾಧ್ಯವಾಗಿಲ್ಲ. ಈ ಚಿತ್ರವು RMS ಟೈಟಾನಿಕ್ (Titanic) ಮುಳುಗುವ ಘಟನೆಯನ್ನು ಆಧರಿಸಿದೆ. ಕ್ಯಾಮೆರೂನ್ ತಮ್ಮ ಚಿತ್ರದಲ್ಲಿ ಎಲ್ಲವೂ ನೈಜ್ಯವಾಗಿರಬೇಕೆಂದು ಬಯಸಿದ್ದರು. ಈ ಕಾರಣಕ್ಕಾಗಿ, ಚಿತ್ರದಲ್ಲಿ ಬಳಸಲಾದ 'ಟೈಟಾನಿಕ್' ಹಡಗಿನ ಅನೇಕ ವಸ್ತುಗಳನ್ನು ಮೂಲ ಟೈಟಾನಿಕ್‌ಗಾಗಿ ತಯಾರಿಸಿದ ಅದೇ ಕುಶಲಕರ್ಮಿಗಳು ತಯಾರಿಸಿದ್ದರು. ದುರಂತದ ಜೊತೆ ಪ್ರೀತಿಯ ಆ್ಯಂಗಲ್ (love Angle) ಇರುವ ಈ ಸಿನಿಮಾ,  11 ಆಸ್ಕರ್ ಪ್ರಶಸ್ತಿಗಳೊಂದಿಗೆ ಇತರ ಅನೇಕ ಪ್ರಶಸ್ತಿಗಳನ್ನು ಪಡೆದಿದೆ. ಆದರೆ ಕುತೂಹಲದ ಸಂಗತಿ ಎಂದರೆ ಈ ಸಿನಿಮಾ ನಟನೆಗಾಗಿ ಒಂದೇ ಒಂದು ಆಸ್ಕರ್ ಅನ್ನು ಕೂಡ ಪಡೆದಿಲ್ಲ.

ಈ ಚಿತ್ರದ ನಾಯಕ ಲಿಯೊನಾರ್ಡೊ ಡಿಕಾಪ್ರಿಯೊ (Leonardo DiCaprio) ಮತ್ತು ನಾಯಕಿ ಕೇಟ್ ವಿನ್ಸ್ಲೆಟ್ (Kate Winslet)ಅವರ ಜೋಡಿಯನ್ನು ಮರೆಯಲು ಸಾಧ್ಯವೇ ಇಲ್ಲ. ಆದರೆ ವಿಚಿತ್ರ ಏನೆಂದರೆ,  ನಟ ಲಿಯೊನಾರ್ಡೊ ಡಿಕಾಪ್ರಿಯೊ ಅವರು ಚಲನಚಿತ್ರಗಳಿಗಿಂತ ಹೆಚ್ಚಾಗಿ ತಮ್ಮ ವೈಯಕ್ತಿಕ ಜೀವನದಿಂದಾಗಿ ಸದಾ ಸುದ್ದಿಯಲ್ಲಿ ಇರುತ್ತಾರೆ. ಈ ಚಿತ್ರ ಬಿಡುಗಡೆಯಾದಾಗ ಲಿಯೊನಾರ್ಡೊ ಡಿಕಾಪ್ರಿಯೊಗೆ 22 ವರ್ಷ ವಯಸ್ಸಾಗಿತ್ತು. ಅರ್ಥಾತ್​ ಈಗ ಅವರಿಗೆ 48 ವರ್ಷ ವಯಸ್ಸು. ಈಗ ಈ ನಟ ಭಾರಿ ಸುದ್ದಿಯಾಗಿರುವ ಕಾರಣ, 19 ವರ್ಷದ ಯುವತಿಯ ಜೊತೆ ಡೇಟಿಂಗ್​ (Dating) ಮಾಡುತ್ತಿರುವ ಕಾರಣಕ್ಕೆ!

Rakhi Sawant ಪತಿ ಜೊತೆ ಅಕ್ರಮ ಸಂಬಂಧ ಹೊಂದಿರೋ '99%' ಸುಂದರಿ ಯಾರು?

ಹೌದು. ಟೈಟಾನಿಕ್​ ನಟನ ಜೊತೆ ಇದಾಗಲೇ ಹಲವಾರು ನಟಿಯರ, ಯುವತಿಯರ ಹೆಸರು ಸುತ್ತಿಕೊಂಡಿದೆ. ಆದರೆ ಹೊಸ ಸುದ್ದಿ ಏನು ಎಂದರೆ ಇವರು ಈಗ 19 ವರ್ಷದ ಯುವತಿ ಈಡನ್​ ಪೋಲಾನಿ (Idan Polani) ಎಂಬಾಕೆ ಜೊತೆ ಡೇಟಿಂಗ್​ ಮಾಡುತ್ತಿದ್ದಾರೆ. ಯುವತಿಯ ಜೊತೆಗಿರುವ ಚಿತ್ರಗಳನ್ನೂ ಸಾಮಾಜಿಕ ಜಾಲತಾಣದಲ್ಲಿ ಅವರು ಶೇರ್​ ಮಾಡಿಕೊಳ್ಳುತ್ತಾರೆ. ಕುತೂಹಲದ ಸಂಗತಿ ಸಂಗತಿ ಏನೆಂದರೆ, ಟೈಟಾನಿಕ ಚಿತ್ರ ಬಿಡುಗಡೆಯಾಗಿ 25 ವರ್ಷದ ಮೇಲಾಗಿದೆ. ಯುವತಿಗೆ ಈಗ 19 ವರ್ಷ ವಯಸ್ಸು ಎಂದರೆ ಟೈಟಾನಿಕ್​ ಚಿತ್ರ ಬಿಡುಗಡೆಯಾದಾಗ ಈಕೆ ಇನ್ನೂ ಹುಟ್ಟೇ ಇರಲಿಲ್ಲ. ಚಿತ್ರ ಬಿಡುಗಡೆಯಾಗಿ ಆರು ವರ್ಷಗಳ ಬಳಿಕ ಹುಟ್ಟಿದ್ದಾಳೆ!

 48 ವರ್ಷದ ಲಿಯೊನಾರ್ಡೊ ಡಿಕಾಪ್ರಿಯೊ ಈಡನ್ ಪೊಲಾನಿಯೊಂದಿಗೆ ಮೊದಲು ಕಾಣಿಸಿಕೊಂಡಾಗ  ಇಬ್ಬರೂ ಪಾರ್ಟಿಯಲ್ಲಿ ತುಂಬಾ ಹತ್ತಿರವಾಗಿ ಕುಳಿತಿದ್ದರು. ನಂತರ ಇವರಿಬ್ಬರೂ ಡೇಟಿಂಗ್​ ಮಾಡುತ್ತಿರುವ ಸುದ್ದಿ ಬಯಲಾಗಿದೆ. ಇದಕ್ಕೂ ಮೊದಲು, ಲಿಯೊನಾರ್ಡೊ ಹಾಲಿವುಡ್ ಮಾಡೆಲ್ ಮತ್ತು ನಟಿ ಕ್ಯಾಮಿಲ್ಲಾ ಮೊರೊನ್ ಜೊತೆ ಡೇಟಿಂಗ್ ಮಾಡಿದ್ದಾರೆ. ಆದಾಗ್ಯೂ, ಅವರ ಸಂಬಂಧ ಕಳೆದ ವರ್ಷವಷ್ಟೇ ಮುರಿದುಬಿತ್ತು. ಇಷ್ಟೇ ಅಲ್ಲದೇ, ಲಿಯೊನಾರ್ಡ್ ಡಿಕಾಪ್ರಿಯೊ ಅವರ ಹೆಸರು ಇಲ್ಲಿಯವರೆಗೆ ಅನೇಕ ನಟಿಯರು ಮತ್ತು ಮಾಡೆಲ್‌ಗಳೊಂದಿಗೆ ಸಂಬಂಧ ಹೊಂದಿದೆ. ಅವರ ಹೆಸರು ಬ್ರೆಜಿಲಿಯನ್ ಮಾಡೆಲ್ ಗಿಸೆಲ್ ಬುಂಡ್ಚೆನ್, ಇಸ್ರೇಲಿ (isrel) ಮಾಡೆಲ್ ಬಾರ್ ರಾಫೆಲಿ ಮತ್ತು ಜರ್ಮನ್  ಮಾಡೆಲ್ (German Model) ಟೋನಿ ಗಾರ್ನ್ ಅವರೊಂದಿಗೆ ಸಹ ಸೇರಿಕೊಂಡಿದೆ.  ಈಗ ಅವರು 19 ವರ್ಷದ ಈಡನ್ ಪೊಲಾನಿಯೊಂದಿಗೆ ಸಂಬಂಧ ಹೊಂದಿದ್ದಾರೆ. 

ಈಗ ಈ ಜೋಡಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ (Social Media) ಭಾರಿ ಚರ್ಚೆ ಶುರುವಾಗಿದೆ. ಮಗಳ ವಯಸ್ಸಿನ ಯುವತಿ ಜೊತೆ ಇವೆಲ್ಲಾ ಬೇಕಾ ಎಂದು ಹಲವರು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ನಟನ ಪರವಾಗಿಯೂ ಕಮೆಂಟ್​ ಮಾಡಿದ್ದಾರೆ. ಯುವತಿಗೇ ಇಷ್ಟ ಇದ್ದ ಮೇಲೆ ನಿಮದೆಂಥ ಸಮಸ್ಯೆ ಎಂದು ಪ್ರಶ್ನಿಸಿದರೆ, ಇನ್ನು ಕೆಲವರು ಬಾಲಿವುಡ್​ ನಟರ ಹೆಸರನ್ನೂ ಮುನ್ನೆಲೆಗೆ ತಂದಿದ್ದಾರೆ. ಎಷ್ಟು ಮಂದಿ ನಟರು ಈಗಲೂ ಮಗಳ ವಯಸ್ಸಿನವಳ ಜೊತೆ ಮದುವೆಯಾಗಿಲ್ಲ ಹೇಳಿ ಎನ್ನುತ್ತಿದ್ದರೆ, ಇನ್ನು ಕೆಲವರು ಮಗಳ ವಯಸ್ಸಿನವರ ಜೊತೆ ಹೀರೋ ಆಗಿ ಕಾಣಿಸಿಕೊಂಡು ಬೇಷರಂ ಆಗಿ ನರ್ತಿಸುತ್ತಿಲ್ಲವೆ ಎಂದೂ ಪ್ರಶ್ನಿಸಿದ್ದಾರೆ. ಅಂದಹಾಗೆ,  ಲಿಯೊನಾರ್ಡೊ ಡಿಕಾಪ್ರಿಯೊ ಶೀಘ್ರದಲ್ಲೇ 'ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

Joyland: ಪಾಕ್​ನಲ್ಲಿ ಬ್ಯಾನ್​ ಆದ ಈ ಸಿನಿಮಾ ಭಾರತದಲ್ಲಿ ರಿಲೀಸ್​!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?
'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!