Ravina Tandon: ರವಿನಾ ಟಂಡನ್​ ಪತಿಗಾಗಿ ಹಾಲಿ-ಮಾಜಿಗಳ ಫೈಟ್​!

By Suvarna News  |  First Published Feb 9, 2023, 4:41 PM IST

80-90ರ ದಶಕದಲ್ಲಿ ಬಾಲಿವುಡ್​ ಆಳಿದ ನಟಿ ರವೀನಾ ಟಂಡನ್​ ಬದುಕು ಹಲವು ವಿಚಿತ್ರಗಳ ಆಗರ. ಪತಿಯ ಮಾಜಿ ಪತ್ನಿ ಮೇಲೆ ಅವರು ಗ್ಲಾಸ್ ಎಸೆದ ಆರೋಪ ಎದುರಿಸುತ್ತಿದ್ದಾರೆ. ಏನಿದು ಘಟನೆ? 
 


ರವೀನಾ ಟಂಡನ್ (Ravina Tandon) ಅವರ ಪತಿ ಅನಿಲ್ ಥಡಾನಿ (Anil Thadani)ಬಾಲಿವುಡ್‌ನಲ್ಲಿ ಪ್ರಸಿದ್ಧ ಚಲನಚಿತ್ರ ವಿತರಕರಾಗಿದ್ದಾರೆ. ಅನಿಲ್ ಥಡಾನಿ ಮತ್ತು ರವೀನಾ ಟಂಡನ್ 2004 ರಲ್ಲಿ ವಿವಾಹವಾದರು. ಅನಿಲ್ ಥಡಾನಿ ಈ ಹಿಂದೆ ಮದುವೆಯಾಗಿದ್ದರೂ, ನಂತರ ಅವರು ತಮ್ಮ ಮೊದಲ ಪತ್ನಿ ನತಾಶಾ ಸಿಪ್ಪಿಯನ್ನು ವಿಚ್ಛೇದನ ಮಾಡಿದರು. ರವೀನಾ ಮತ್ತು ಅನಿಲ್​ ಥಡಾನಿಯವರ ಕುತೂಹಲದ ಪ್ರೇಮ್​ ಕಹಾನಿ ಕುರಿತು ಈಗ ಭಾರಿ ಸುದ್ದಿಯಾಗುತ್ತಿದೆ. ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ ರವೀನಾ ತಮ್ಮ ಜೀವನದ ಸಾಕಷ್ಟು ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ.  ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಜೊತೆಗಿನ ಸಂಬಂಧದ ಬಗ್ಗೆಯೂ ಅವರು ಮಾತನಾಡಿದ್ದಾರೆ. ಇವರಿಬ್ಬರೂ  ಡೇಟಿಂಗ್ ಮಾಡುತ್ತಿರುವ ವಿಷಯ ಇಡೀ ಇಂಡಸ್ಟ್ರಿಗೆ (Industry) ತಿಳಿದಿತ್ತು.  ಇಬ್ಬರೂ ಮದುವೆ ಆಗ್ತಾರೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಗುಲ್ಲಾಗಿತ್ತು. ಮೊಹ್ರಾ ಸಿನಿಮಾದಲ್ಲಿ 'ಟಿಪ್ ಟಿಪ್ ಬರ್ಸಾ ಪಾನಿ..' ಹಾಡಿನಲ್ಲಿ ಅಕ್ಷಯ್ ಮತ್ತು ರವೀನಾ ಕೆಮಿಸ್ಟ್ರಿ ಇಂದಿಗೂ ಅಭಿಮಾನಿಗಳ ಹಾಟ್ ಫೇವರಿಟ್ ಜೋಡಿಗಳಲ್ಲಿ ಒಂದಾಗಿದೆ. ಈ ಹಾಡಿನ ಬಳಿಕ ಇಬ್ಬರ ಪ್ರೀತಿ, ಪ್ರೇಮದ ವಿಚಾರ ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಆದರೆ ತಮ್ಮಿಬ್ಬರ ಈ ಜೋಡಿ ಹೆಚ್ಚು ಕಾಲ ಉಳಿಯಲಿಲ್ಲ ಎಂದು ನೋವು ತೋಡಿಕೊಂಡಿದ್ದರು. ಇದರ ಬೆನ್ನಲ್ಲೇ ಈಗ ರವೀನಾ ಪತಿ ಅನಿಲ್ ಥಡಾನಿ ಕುರಿತು ಒಂದಿಷ್ಟು ಮಾಹಿತಿ ಹೊರಬರುತ್ತಿದೆ.

ಅದೇನೆಂದರೆ, ರವೀನಾ ಟಂಡನ್ ಅನಿಲ್​ ಥಡಾನಿ ಅವರನ್ನು ಭೇಟಿಯಾಗುವುದಕ್ಕೂ ಮುನ್ನ  ಅನಿಲ್ ಅವರಿಗೆ ಇದಾಗಲೇ ಮದುವೆಯಾಗಿತ್ತು.  ಅವರು ರೊಮಿಯು ಸಿಪ್ಪಿಯ ಮಗಳು ನತಾಶಾ ಸಿಪ್ಪಿಯನ್ನು (Natasha Sippi) ವಿವಾಹವಾಗಿದ್ದರು. ಆದರೆ ಅವರ ದಾಂಪತ್ಯ ಜೀವನ ಅಷ್ಟು ಸರಿಯಿರಲಿಲ್ಲ ಎನ್ನಲಾಗಿದೆ. ಇಂಥ ಪರಿಸ್ಥಿತಿಯಲ್ಲಿ, ಅನಿಲ್ ಥಡಾನಿ ರವೀನಾ ಟಂಡನ್ ಅವರನ್ನು ಭೇಟಿಯಾದಾಗ, ಇಬ್ಬರ ನಡುವೆ ಪ್ರೀತಿ ಮೊಳಗಿತು. ಇಬ್ಬರೂ ಮದುವೆಯಾಗುವ ನಿರ್ಧಾರಕ್ಕೆ ಬಂದರು.  2003 ರಲ್ಲಿ ರವೀನಾ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ಅನಿಲ್ ಥಡಾನಿ ಈ ಬಗ್ಗೆ ವಿಷಯ ಪ್ರಸ್ತಾಪಿಸಿದರು, ಪ್ರೇಮ ನಿವೇದನೆ ಮಾಡಿದರು.  ಇದನ್ನೇ ಬಯಸಿದ್ದ ರವೀನಾ ಕೂಡ ಇದನ್ನು ಒಪ್ಪಿಕೊಂಡರು.

Tap to resize

Latest Videos

undefined

ನನ್ನ ತಲೆಯಲ್ಲಿ ಇನ್ನೂ ಉಳಿದಿದೆ; ಅಕ್ಷಯ್ ಕುಮಾರ್ ಜೊತೆಗಿನ ನಿಶ್ಚಿತಾರ್ಥ ಮುರಿದ ಬಗ್ಗೆ ಮೌನ ಮುರಿದ ರವೀನಾ ಟಂಡನ್

ರವೀನಾ ಟಂಡನ್ ಮತ್ತು ಅನಿಲ್ ಥಡಾನಿ 22 ಫೆಬ್ರವರಿ 2004 ರಂದು ವಿವಾಹವಾದರು. ಆದರೆ, ಮದುವೆಗೆ ಕೆಲ ವರ್ಷಗಳ ಹಿಂದೆ ಅನಿಲ್ ಥಡಾನಿಯ ಮಾಜಿ ಪತ್ನಿ ನತಾಶಾ ಸಿಪ್ಪಿಯನ್ನು ರವೀನಾ ಟಂಡನ್ ಗ್ಲಾಸ್ ಎಸೆದು ಹಲ್ಲೆ ಮಾಡಿರುವ  ಆರೋಪವೂ ಕೇಳಿಬಂತು. ವರದಿಗಳ ಪ್ರಕಾರ, ಒಮ್ಮೆ ರವೀನಾ ಟಂಡನ್ ಹೊಸ ವರ್ಷದ ಪಾರ್ಟಿಗಾಗಿ ರಿತೇಶ್ ಸಿಧ್ವಾನಿ (Ritesh Sidhwani) ಅವರ ಮನೆಗೆ ಬಂದರು. ಈ ಪಾರ್ಟಿಯಲ್ಲಿ ಅನಿಲ್ ಥಡಾನಿ ಅವರ ಮಾಜಿ ಪತ್ನಿ ನತಾಶಾ ಸಿಪ್ಪಿ ಕೂಡ ಉಪಸ್ಥಿತರಿದ್ದರು. ಅಷ್ಟರಲ್ಲಿ ರವೀನಾ ಟಂಡನ್ ಮತ್ತು ನತಾಶಾ ನಡುವೆ ವಾಗ್ವಾದ ನಡೆದಿದ್ದು, ರವೀನಾ ಗ್ಲಾಸ್ ಎತ್ತಿಕೊಂಡು ನತಾಶಾ ಮೇಲೆ ಎಸೆದಿದ್ದಾರೆ ಎನ್ನಲಾಗಿದೆ. ಈ ಸುದ್ದಿ ಸಿನಿ ಜಗತ್ತಿನಲ್ಲಿ ಭಾರಿ ಕೋಲಾಹಲವನ್ನೇ ಸೃಷ್ಟಿಸಿತ್ತು. 

ಸಂದರ್ಶನವೊಂದರಲ್ಲಿ, ರವೀನಾ ಟಂಡನ್, ದೇವರು ಮತ್ತು ನನ್ನ ತಂದೆಯ ನಂತರ ನನಗೆ ಎಲ್ಲವೂ ಅನಿಲ್ ಎಂದು ಹೇಳಿದ್ದರು. ಒಂದು ವೇಳೆ ಅನಿಲ್​ ಅವರ ಮೇಲೆ ಯಾರಾದರೂ ಅನಗತ್ಯ ಆರೋಪ ಮಾಡುವುದನ್ನು ನಾನು ಸಹಿಸಲಾರೆ. ಅವರಿಗೆ ಮಾಡಿದ ಅವಮಾನ  ನನಗೆ ಮಾಡಿದ ಅವಮಾನದಂತೆ ಎಂದು ಹೇಳಿದ್ದರು. ಇದೇ ಸಮಯದಲ್ಲಿ, ನತಾಶಾ ಸಿಪ್ಪಿ ರವೀನಾ ಮತ್ತು ಅನಿಲ್​ ಮೇಲೆ ದ್ವೇಷ ಸಾಧಿಸುತ್ತಿದ್ದರು ಎನ್ನಲಾಗಿದೆ. ಅದಕ್ಕಿಂತ ಹೆಚ್ಚಾಗಿ ತಮ್ಮ ಪತಿಯನ್ನು ಮದುವೆಯಾದ ರವೀನಾ ಮೇಲೆ ಅವರಿಗೆ  ಅಸೂಯೆ ಉಂಟಾಗಿತ್ತು ಎನ್ನಲಾಗಿದೆ. ಇದೇ ಸಮಯದಲ್ಲಿ ಪಾರ್ಟಿಯಲ್ಲಿ ಅನಿಲ್​ ಅವರ ಬಳಿ ನತಾಶಾ ಬಂದಾಗ ರವೀನಾ ಅವರಿಗೆ ಕೋಪ ಮಿತಿ ಮೀರಿದೆ. ಹಾಲಿ, ಮಾಜಿ ಪತ್ನಿಯರ ನಡುವೆ ಜಪಾಪಟಿಯಾಗಿದೆ. ಇದೇ ಸಿಟ್ಟಿನಲ್ಲಿ ರವೀನಾ ಗ್ಲಾಸ್​ನಲ್ಲಿ (Glass) ನತಾಶಾ ಅವರಿಗೆ ಹೊಡೆದಿದ್ದಾರೆ ಎನ್ನಲಾಗಿದೆ. 

ಕಿಸ್ಸಿಂಗ್, ರೇಪ್ ದೃಶ್ಯಗಳಲ್ಲಿ ನಟಿಸಿಲ್ಲ, ದುರಹಂಕಾರಿ ಎನ್ನುತ್ತಿದ್ದರು; KGF 2 ನಟಿ ರವೀನಾ ಟಂಡನ್

click me!