Amitabh Bachchan: ಫಿಲ್ಮ್​ ಟಾಕೀಸ್​ನಲ್ಲಿ ಅಮಿತಾಭ್​ ಪ್ಯಾಂಟ್​ ಒಳಗೆ ಇಲಿ ಹೊಕ್ಕಾಗ....

By Suvarna News  |  First Published Feb 9, 2023, 3:19 PM IST

ಅಮಿತಾಭ್​ ಬಚ್ಚನ್​ ಅವರು 43 ವರ್ಷಗಳ ಹಿಂದೆ ಚಿತ್ರವೊಂದನ್ನು ನೋಡಲು ಹೋದಾಗ ಅವರ ಬೆಲ್​ ಬಾಟಮ್​ ಪ್ಯಾಂಟ್​ ಒಳಗೆ ಇಲಿ ಹೊಕ್ಕಿತಂತೆ. ಅವರು ಹೇಳಿದ್ದೇನು? 
 


ಅಮಿತಾಭ್  ಬಚ್ಚನ್ (Amitabh Bachchan) ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅನೇಕ ಬಾರಿ ಅವರು ಹಳೆಯ ದಿನಗಳಿಗೆ ಸಂಬಂಧಿಸಿದ ತಮಾಷೆಯ ವಿಷಯಗಳನ್ನು ಶೇರ್​ ಮಾಡಿಕೊಳ್ಳುತ್ತಾರೆ.  ಅವರು ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳ ಮೂಲಕ ಮಾತ್ರವಲ್ಲದೆ ತಮ್ಮ ಸಾಮಾಜಿಕ ಮಾಧ್ಯಮ (social media) ಪೋಸ್ಟ್‌ಗಳಿಂದಲೂ ಪ್ರೇಕ್ಷಕರನ್ನು ರಂಜಿಸುತ್ತಾರೆ. 43 ವರ್ಷಗಳ ಹಿಂದೆ ತೆರೆಕಂಡ ತಮ್ಮ ‘ದೋ ಔರ್ ದೋ ಪಾಂಚ್’ (Do aur do Panch) ಸಿನಿಮಾದ ದಿನಗಳನ್ನು ನೆನಪಿಸಿಕೊಂಡ ಅಮಿತಾಭ್​, ಇಂಥದ್ದೊಂದು ಸ್ವಾರಸ್ಯಕರ ಘಟನೆಯನ್ನು ಹೇಳಿ ಅಭಿಮಾನಿಗಳು ನಗಿಸುತ್ತಿದ್ದಾರೆ.
 
ಪ್ರತಿ ಯುಗವು ವಿಭಿನ್ನವಾದ ಫ್ಯಾಷನ್ (fashion) ಹೊಂದಿರುತ್ತದೆ, ಕೆಲವೊಮ್ಮೆ ಬಿಗಿಯಾದ ಪ್ಯಾಂಟ್, ಕೆಲವೊಮ್ಮೆ ಹರಿದ ಜೀನ್ಸ್ ಮತ್ತು ಕೆಲವೊಮ್ಮೆ ಬೆಲ್ ಬಾಟಮ್. ಫ್ಯಾಷನ್​ ಮುಗಿತೇ ಹೋಯ್ತು ಅಂತೇನೂ ಇಲ್ಲ. ಹಳೆ ಹಳೆ ಫ್ಯಾಷನ್​ಗಳೇ ಮತ್ತೆ ಮೇಲಕ್ಕೆ ಬರುತ್ತವೆ. ಹೊಸಹೊಸ ಫ್ಯಾಷನ್​ಗಳು ಹಳತಾಗುತ್ತಿದ್ದಂತೆಯೇ ಹಳತು ಫ್ಯಾಷನ್​ಗಳು ಸೃಷ್ಟಿಯಾಗುತ್ತವೆ. ಬ್ಲ್ಯಾಕ್​ ಆ್ಯಂಡ್​ ವೈಟ್​ ಸಿನಿಮಾ ಕಾಲದಲ್ಲಿದ್ದ ಅದೆಷ್ಟು ಫ್ಯಾಷನ್​ಗಳು ಮತ್ತೆ ಈಗೀಗ ಬರುತ್ತಿಲ್ಲ ಹೇಳಿ. 80 ರ ದಶಕದಲ್ಲಿ,  ಆ್ಯಂಗ್ರಿ ಯಂಗ್ ಮ್ಯಾನ್ ಅಮಿತಾಭ್​ ಬಚ್ಚನ್ ಅವರ ಕೇಶವಿನ್ಯಾಸವು ಯುವಜನರ ಮೊದಲ ಆಯ್ಕೆಯಾಗಿತ್ತು. ಆಗ ಬಾಲಿವುಡ್​ ನಾಯಕರು ಧರಿಸುತ್ತಿದ್ದ  ಬೆಲ್ ಬಾಟಮ್ (Bell Bottom) ಪ್ಯಾಂಟ್​ ಫ್ಯಾಷನ್​ ಆಗಿತ್ತು. ಅದು ಬೆಲ್​ ಬಾಟಮ್​ ಯುಗವಾಗಿತ್ತು. ಆ ದಿನಗಳಲ್ಲಿ ಅಮಿತಾಭ್ ಅಭಿನಯದ 'ದೋ ಔರ್ ದೋ ಪಾಂಚ್' ಸಿನಿಮಾ ಬಂದಿತ್ತು. ಈ ಚಿತ್ರವು 10 ಫೆಬ್ರವರಿ 1980 ರಂದು ಬಿಡುಗಡೆಯಾಯಿತು.

Rakhi Sawant ಪತಿ ಜೊತೆ ಅಕ್ರಮ ಸಂಬಂಧ ಹೊಂದಿರೋ '99%' ಸುಂದರಿ ಯಾರು?

Tap to resize

Latest Videos

ಇದೀಗ ಚಿತ್ರ ಬಿಡುಗಡೆಯಾಗಿ 43 ವರ್ಷ ಆಗುತ್ತಲಿದೆ. ಇದೇ 10ರಂದು ಚಿತ್ರ 43 ವರ್ಷಗಳನ್ನು ಪೂರೈಸಲಿದೆ.  ಈ ಸಂದರ್ಭದಲ್ಲಿ ಬಿಗ್​ ಬಿ  ತಮ್ಮ ಥ್ರೋಬ್ಯಾಕ್ ಕಪ್ಪು ಮತ್ತು ಬಿಳಿ ಫೋಟೋವನ್ನು ಇನ್​ಸ್ಟಾಗ್ರಾಮ್​ನಲ್ಲಿ (Instagram) ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ (Photo) ಅಮಿತಾಭ್​ ಅವರನ್ನು  ಆಕ್ಷನ್ ಸ್ಟೈಲ್​ನಲ್ಲಿ ನೋಡಬಹುದು.  ಈ ಚಿತ್ರವನ್ನು ಹಂಚಿಕೊಂಡಿರುವ ಬಿಗ್ ಬಿ, '43 ವರ್ಷಗಳ 2+2=5' (ಅಂದರೆ ಚಿತ್ರದ ಹೆಸರು ದೋ ಔರ್​ ದೋ ಪಾಂಚ್​ ಅರ್ಥಾತ್​ ಎರಡು ಮತ್ತು ಎರಡು ಐದು) ಎಂಬ ಶೀರ್ಷಿಕೆಯನ್ನು ತುಂಬಾ ಸ್ಟೈಲ್​ನಲ್ಲಿ ಬರೆದಿದ್ದಾರೆ. ಕ್ಯಾ ಮಜೆ ಥಾ ಇಸ್ ಫಿಲ್ಮ್ ಮೇ... ಬೆಲ್ ಬಾಟಮ್ಸ್ ಔರ್ ಸಾಬ್...(ಆಹಾ! ಈ ಚಿತ್ರ ಎಷ್ಟು ಮಜವಾಗಿತ್ತು. ಬೆಲ್​ ಬಾಟಮ್ಸ್​ ಮತ್ತು ಸಾಹೇಬ್) ಎಂದು ಬರೆದುಕೊಂಡಿದ್ದಾರೆ. 
 
ಈ ಸಂದರ್ಭದಲ್ಲಿ ನಡೆದ ಘಟನೆಯೊಂದನ್ನು ಅವರು ಶೇರ್​ ಮಾಡಿಕೊಂಡಿದ್ದಾರೆ. ಅದೇನೆಂದರೆ ಎಲ್ಲರಿಗೂ ತಿಳಿದಿರುವಂತೆ ಬೆಲ್​ ಬಾಟಮ್​ ಎಂದರೆ ಪ್ಯಾಂಟ್​ನ ಕಾಲು ಸಿಕ್ಕಾಪಟ್ಟೆ ಅಗಲವಾಗಿರುತ್ತದೆ. ಬೆಲ್​ ರೀತಿಯಲ್ಲಿ ಇರುತ್ತದೆ. ಇಂಥದ್ದೇ ಬೆಲ್​ ಬಾಟಮ್​ ಪ್ಯಾಂಟ್​ ಧರಿಸಿ ಅಮಿತಾಭ್​ ಬಚ್ಚನ್​ ಅವರು ದೋ ಔರ್​ ದೋ ಪಾಂಚ್​ ಸಿನಿಮಾ ನೋಡಲು ಹೋಗಿದ್ದರಂತೆ. ಆ ಸಂದರ್ಭದಲ್ಲಿ ಅವರ ಪ್ಯಾಂಟ್​ ಒಳಗೆ ಇಲಿ (rat) ಹೋಯಿತಂತೆ. ಈ ತಮಾಷೆಯನ್ನು ಅವರು ಉಲ್ಲೇಖ ಮಾಡಿದ್ದಾರೆ.  ಇದು  ನಿಜವೇ ಸರ್ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಇಲಿ ಹೊಕ್ಕು ತಾವು ಪಟ್ಟ ವ್ಯಥೆಯನ್ನು ಅಮಿತಾಭ್​ ಹೇಳಿಕೊಂಡಿದ್ದು, ಇದು ನಿಜ ಎಂದಿದ್ದಾರೆ.

Pawan Kalyan: ಮೂರು ಮದ್ವೆಯಾದೆ, ಆತ್ಮಹತ್ಯೆಗೆ ಟ್ರೈ ಮಾಡಿದ್ದೆ... ಗುಟ್ಟು ಬಿಚ್ಚಿಟ್ಟ ನಟ ಪವನ್​ ಕಲ್ಯಾಣ್

ಈ ಪೋಸ್ಟ್​ಗೆ ಸಿಕ್ಕಾಪಟ್ಟೆ ಮಂದಿ ಕಮೆಂಟ್ಸ್​ ಮಾಡುತ್ತಿದ್ದಾರೆ.  ಕೆಲವರು ಬೆಲ್ ಬಾಟಮ್ ಬಗ್ಗೆ ಥಹರೇವಾರಿ ಕಮೆಂಟ್ಸ್​ ಹಾಕುತ್ತಿದ್ದರೆ, ಇನ್ನು ಕೆಲವರು 'ಓಲ್ಡ್ ಈಸ್ ಗೋಲ್ಡ್, 90 ರ ದಶಕದಲ್ಲಿ ಅಮಿತಾಭ್​ ಅವರ ಅದ್ಭುತ ನೋಟ' ಎಂದು ಬರೆದಿದ್ದಾರೆ, ಇನ್ನೊಬ್ಬರು 'ನಿಮ್ಮ ಚಿತ್ರ ದೋ ಔರ್ ದೋ ಪಾಂಚ್ ಅಷ್ಟೇ ತಮಾಷೆಯಾಗಿದೆ' ಎಂದು ಬರೆದಿದ್ದಾರೆ. 

ಅಂದಹಾಗೆ 43 ವರ್ಷಗಳ ಹಿಂದೆ ಬಿಡುಗಡೆಯಾದ 'ದೋ ಔರ್ ದೋ ಪಾಂಚ್' ಅತ್ಯುತ್ತಮ ಆಕ್ಷನ್ (action), ಹಾಸ್ಯ ನಾಟಕ ಚಿತ್ರ. ಈ ಚಿತ್ರವನ್ನು ರಾಕೇಶ್ ಕುಮಾರ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಅಮಿತಾಭ್ ಜೊತೆಗೆ ಶಶಿ ಕಪೂರ್, ಹೇಮಾ ಮಾಲಿನಿ, ಪರ್ವೀನ್ ಬಾಬಿ ಮುಂತಾದ ನಟಸಿದ್ದರು.  ಈ ಚಿತ್ರ ಹಿಂದಿಯಲ್ಲಿ ಭರ್ಜರಿ ಹಿಟ್ ಆಗಿತ್ತು. ನಂತರ ಅದರ ರೀಮೇಕ್ ತಮಿಳಿನಲ್ಲಿ ಮಾಡಲ್ಪಟ್ಟಿತು, ಇದರಲ್ಲಿ ರಜನಿಕಾಂತ್ ಮುಖ್ಯ ಪಾತ್ರದಲ್ಲಿದ್ದರು.

click me!