ನಾನು ಯಾರ ಕೈಗೆ ಉಗುಳ್ತೇನೋ ಅವರೆಲ್ಲಾ ನಂಬರ್​ 1 ನಟಿ ಆಗ್ತಾರೆ! ಆಮೀರ್​ ಖಾನ್​ ಹೇಳಿದ್ದೇನು ಕೇಳಿ

By Suchethana D  |  First Published Oct 12, 2024, 9:58 PM IST

ನಾನು ಯಾರ ಕೈಗೆ ಉಗುಳ್ತೇನೋ ಅವರೆಲ್ಲಾ ನಂಬರ್​ 1 ನಟಿ ಆಗ್ತಾರೆ ಎಂದಿದ್ದಾರೆ ಆಮೀರ್​ ಖಾನ್. ಆರು ವರ್ಷ ಮಾತು ಬಿಟ್ಟಿದ್ರಂತೆ ಜೂಹಿ ಚಾವ್ಲಾ, ನಟನ ಬಾಯಲ್ಲೇ ವಿಷಯ ಕೇಳಿ...
 


ಸದ್ಯ ನಟ ಆಮೀರ್​ ಖಾನ್​,  ಲಾ ಪತಾ ಲೇಡೀಸ್​  ದಾಖಲೆಯ ಖುಷಿಯಲ್ಲಿದ್ದಾರೆ.  ಇವರು ಬಂಡವಾಳ ಹೂಡಿರೋ, ಇವರ ಮಾಜಿ ಪತ್ನಿ ಕಿರಣ್​ ರಾವ್​ ನಿರ್ದೇಶಿಸಿರುವ ಈ ಚಿತ್ರ  ಅಧಿಕೃತವಾಗಿ ಆಸ್ಕರ್​ ಪ್ರಶಸ್ತಿಗೆ ಕಳುಹಿಸಲಾಗಿದೆ. ಕಳೆದು ಹೋಗುವ ಇಬ್ಬರು ವಧುಗಳ ಬಗೆಗಿನ ಕಥಾ ಹಂದರವನ್ನು ಈ ಚಿತ್ರ ಹೊಂದಿದೆ. ವಧು ಕಳೆದುಹೋಗಿರುವ ಕತೆಯಲ್ಲಿ ಸ್ತ್ರೀ ಸ್ವಾತಂತ್ರ್ಯ ಸೇರಿದಂತೆ ಹಲವು ಸೂಕ್ಷ್ಮ ವಿಷಯಗಳನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಇದಕ್ಕೂ ಮುನ್ನವೇ ಈ ಚಿತ್ರ ಭರ್ಜರಿ ದಾಖಲೆಗಳನ್ನೂ ಬರೆದಿದೆ. ಇದರ ನಡುವೆಯೇ, ಆಮೀರ್​ ಖಾನ್​ ಅವರ ಹಳೆಯ ವಿಡಿಯೋ ಒಂದು ವೈರಲ್​ ಆಗಿದ್ದು, ಇದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಿವಾದಿತ ಟಾಕ್​ ಷೋ ಎಂದೇ ಪ್ರಸಿದ್ಧಿ ಪಡೆದಿರುವ ಕರಣ್​ ಜೋಹರ್ ಅವರ ಷೋನಲ್ಲಿ ಈ ವಿಷಯವನ್ನು ಆಮೀರ್​ ಖಾನ್​ ಹೇಳಿದ್ದಾರೆ. ಇದರ ಬಗ್ಗೆ ಸಾಕಷ್ಟು ಮಂದಿ ವಿಭಿನ್ನ ರೀತಿಯಲ್ಲಿ ಕಮೆಂಟ್​ ಮಾಡಿದ್ದಾರೆ.

ಅಷ್ಟಕ್ಕೂ ಮಿಸ್ಟರ್​ ಪರ್ಫೆಕ್ಷನಿಸ್ಟ್​ ಎಂದೇ ಫೇಮಸ್​ ಆಗಿರೋ ಆಮೀರ್​ ಖಾನ್​ಗೆ ನಟಿಯರ ಕೈಗೆ ಉಗುಳುವ ಚಟ ಇತ್ತಂತೆ! ಇವರಿಂದ ಕೈ ಮೇಲೆ ಉಗುಳಿಸಿಕೊಂಡಿರುವ ನಟಿಯರ ಪೈಕಿ ಮಾಧುರಿ ದೀಕ್ಷಿತ್​, ಜೂಹಿ ಚಾವ್ಲಾದಂಥ ಖ್ಯಾತ ನಟಿಯರೂ ಸೇರಿದ್ದಾರೆ. ಇವರನ್ನು ತಮಾಷೆಗಾಗಿ ಮಾಡುತ್ತಿದ್ದುದಾಗಿ ಆಮೀರ್​ ಹೇಳಿಕೊಂಡಿದ್ದಾರೆ.  ಇದರ ವಿಡಿಯೋ ವೈರಲ್​ ಆಗಿದ್ದು, ಇದರಲ್ಲಿ ಮಾಧುರಿ ದೀಕ್ಷಿತ್​ ಅವರು ಆಮೀರ್​ ಖಾನ್​ ತಮ್ಮ ಕೈಮೇಲೆ ಉಗುಳಿದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ತಮಗೆ ಹಸ್ತ ನೋಡಿ ಜಾತಕ ಹೇಳುವುದು ಬರುತ್ತದೆ ಎಂದು ಹೇಳಿದ್ದ ಆಮೀರ್​ ಖಾನ್​, ಹಸ್ತ ತೋರಿಸುವಂತೆ ನಟಿಯರಿಗೆ ಹೇಳುತ್ತಾರಂತೆ. ಅದೇ ರೀತಿ ಮಾಧುರಿ ದೀಕ್ಷಿತ್​ಗೂ ಹೇಳಿದ್ದರು. ಇದನ್ನು ನಿಜ ಎಂದು ನಂಬಿದ್ದ ನಟಿ ಕೈ ತೋರಿಸಿದಾಗ, ಆಮೀರ್​ ಖಾನ್​ ಉಗುಳಿ ಹೋದಾಗ ಮಾಧುರಿ ಶಾಕ್​ ಆದರಂತೆ.  ಇದು 1990 ರ ದಿಲ್ ಚಿತ್ರದ ಸೆಟ್‌ನಲ್ಲಿ ಸಂಭವಿಸಿದ ಘಟನೆ. ಆಗ ನನಗೆ ತುಂಬಾ ಕೋಪ ಬಂದಿತ್ತು ಎಂದು ನಟಿ ಈ ಸಂದರ್ಶನದಲ್ಲಿ ನಗುತ್ತಲೇ ಹೇಳಿದ್ದಾರೆ.

Tap to resize

Latest Videos

ನಿನ್ನ ಜೊತೆ ಮಲಗಬೇಕು ಎಂದು ಆ ಹುಡುಗಿ ನೇರವಾಗೇ ಕೇಳಿದ್ಲು, ಆಮೇಲೆ... ಆಮೀರ್​ ಮಾತಿಗೆ ಪತ್ನಿ ಶಾಕ್​!
 
ಅದಕ್ಕೆ ಆಮೀರ್​ ಖಾನ್​ ನಾನು ಯಾವ ಯಾವ ನಟಿಯರ ಕೈಮೇಲೆ ಉಗುಳುತ್ತೇನೋ ಅವರೆಲ್ಲರೂ ನಂಬರ್ 1 ನಟಿಯರಾಗುತ್ತಾರೆ ಎಂದಿದ್ದಾರೆ. ಈ ಹಿಂದೆ ಜೂಹಿ ಚಾವ್ಲಾ ಅವರಿಗೂ ಹೀಗೆ ಉಗುಳಿದ್ದರಂತೆ. ಇದೇ ಕಾರಣಕ್ಕೆ ನಟಿ ಆರು ವರ್ಷ ಆಮೀರ್​ ಖಾನ್​ ಜೊತೆ ಮಾತು ಬಿಟ್ಟಿದ್ದರು! ಮಾತ್ರವಲ್ಲದೇ,  2016 ರಲ್ಲಿ, Jio MAMI ಮುಂಬೈ ಫಿಲ್ಮ್ ಫೆಸ್ಟಿವಲ್‌ನಲ್ಲಿ 1992 ರ ಚಲನಚಿತ್ರ ಜೋ ಜೀತಾ ವೋಹಿ ಸಿಕಂದರ್‌ಗಾಗಿ ಪುನರ್ಮಿಲನದ ಪ್ಯಾನೆಲ್‌ನಲ್ಲಿ, ನಿರ್ದೇಶಕಿ ಫರಾ ಖಾನ್ ಕೈಗೂ ಉಗುಳಿ ವಿವಾದ ಸೃಷ್ಟಿಸಿದ್ದರು ಎಂದು ಫರಾ ಅವರೇ ಹೇಳಿದ್ದರು. 
 
ಆದರೆ ಆಮೀರ್​ ಕೈಗೆ ಉಗುಳಿದರೆ ಅವರು ನಂಬರ್​ 1 ನಟಿಯರಾಗುತ್ತಾರೆ ಎಂದು ಹೇಳಿದ್ದರಿಂದ  ನಟಿ ಪೂಜಾ ಬೇಡಿ, ನಾನು ನನ್ನ ಮಗಳು ಆಲಿಯಾಳನ್ನು ನಿಮ್ಮ ಬಳಿ ಕಳಿಸುತ್ತೇನೆ. ಅವಳ ಕೈಗೂ ಉಗುಳಿ ಎಂದಿದ್ದರಂತೆ. ಇದನ್ನು ತಾವು ತಮಾಷೆಯಾಗಿ ಮಾಡುತ್ತಿರುವುದಾಗಿ ಹೇಳಿದ ಆಮೀರ್​ ಖಾನ್​, ಕರಣ್​ ಜೋಹರ್​ ಷೋನಲ್ಲಿಯೂ ಅದನ್ನು ತಮಾಷೆಯ ರೀತಿಯಲ್ಲಿಯೇ ಹೇಳಿದ್ದಾರೆ. ಹಲವು ನಟಿಯರು ಇದರಿಂದ ತುಂಬಾ ಕೋಪಗೊಂಡಿದ್ದರು ಎಂಬ ವಿಷಯವನ್ನೂ ಹೇಳಿದ್ದಾರೆ.  1997 ರ ಚಲನಚಿತ್ರ ಇಷ್ಕ್‌ನ ಸೆಟ್‌ಗಳಲ್ಲಿ, ಅಮೀರ್ ಖಾನ್ ಅನೇಕ ಸಿಬ್ಬಂದಿ  ಮುಂದೆ ಜೂಹಿ ಚಾವ್ಲಾ  ಕೈಗೆ ಉಗುಳಿ ಓಡಿಹೋದಾಗ,  ಜೂಹಿ ಚಾವ್ಲಾ  ಆ ಚಿತ್ರದ ಶೂಟಿಂಗ್​ಗೇ ಹಾಜರು ಆಗದೇ ಆರು ವರ್ಷ ಆಮೀರ್​ ಜೊತೆ ಮಾತನ್ನೇ ಬಿಟ್ಟ ಬಗ್ಗೆಯೂ ನಟ ಹೇಳಿದ್ದಾರೆ. 

28 ಸಿನಿಮಾ ಹಿಂದಿಕ್ಕಿ ಆಸ್ಕರ್​ ಅಂಗಳಕ್ಕೆ 'ಲಾಪತಾ ಲೇಡೀಸ್': ಚೊಚ್ಚಲ ಚಿತ್ರದಲ್ಲಿ ಮೂವರು ತಾರೆಯರಿಗೆ ಧಮಾಕಾ! ​

click me!