ನಟಿ ಬಿಪಾಶಾ ಬಸು-ಕರಣ್ ಪುತ್ರಿಯ ಕ್ಯೂಟ್​ ವಿಡಿಯೋ ವೈರಲ್​: ಮುದ್ದು ನಗುವಿನ ಹಿಂದಿದೆ ಹೃದಯದ ಕರಾಳ ಕಥೆ!

By Suchethana DFirst Published Oct 12, 2024, 5:33 PM IST
Highlights

ಬಾಲಿವುಡ್ ಖ್ಯಾತ ನಟಿ ಬಿಪಾಶಾ ಬಸು ಅವರ ಎರಡು ವರ್ಷದ ಮಗಳ ಕ್ಯೂಟ್​ ವಿಡಿಯೋ ವೈರಲ್​ ಆಗಿದೆ. ಆದರೆ ಎಲ್ಲರನ್ನೂ ಮೋಡಿ ಮಾಡ್ತಿರೋ ಈ ಮುದ್ದು ನಗುವಿನ ಹಿಂದಿರೋ ಕರಾಳ ಕಥೆ ಗೊತ್ತಾ?
 

ಬಾಲಿವುಡ್ ಖ್ಯಾತ ನಟರಾದ ಬಿಪಾಶಾ ಬಸು ಮತ್ತು ಕರಣ್​ ಸಿಂಗ್​ ಅವರು ಮುದ್ದು ಕಂದ ದೇವಿ ಬಸು ಸಿಂಗ್​ ಗ್ರೋವರ್​ ಈಕೆ. ವೇದಿಕೆಯ ಮೇಲೆ ಕ್ಯೂಟ್​ ನಗುವಿನಿಂದ ಎಲ್ಲರ ಮೋಡಿ ಮಾಡುತ್ತಿದ್ದಾಳೆ ಈಕೆ. 2022ರ ನವೆಂಬರ್​ 12ರಂದು ಹುಟ್ಟಿರೋ ದೇವಿಗೆ ಈಗ ಎರಡು ವರ್ಷವಷ್ಟೇ. ವೇದಿಕೆಯ ಮೇಲೆ ಈಕೆ ನಗು ಚೆಲ್ಲಿದಾಗ ಕಂದನ ನಗುವಿಗೆ ಮನಸೋಲದವರೇ ಇಲ್ಲ. ಎಷ್ಟೆಂದರೂ ನಟಿಯ ಪುತ್ರಿ ಅಲ್ವಾ? ವೇದಿಕೆಯ ಮೇಲೆ ಕ್ಯಾಮೆರಾಗೆ ಪೋಸ್​ ಹೇಗೆ ಕೊಡಬೇಕು ಎನ್ನುವುದು ರಕ್ತಗತವಾಗಿಯೇ ಬಂದಿರುತ್ತದೆ ಎಂದುಕೊಳ್ಳುವುದು ಸಹಜವೆ? ಆದರೆ ಈ ಮುದ್ದು ನಗುವಿನ ಹಿಂದಿರುವ ಕರಾಳ ಕಥೆ ಗೊತ್ತಾ? ಈಕೆಯ ಹೃದಯದಲ್ಲಿ ಎರಡು ರಂಧ್ರಗಳಿದ್ದು, ಮೂರು ತಿಂಗಳ ಶಿಶುವಾಗಿರುವಾಗಲೇ ಹಲವು ಆಪರೇಷನ್​ಗೆ ಒಳಗಾಗಿದ್ದಾಳೆ ಈಕೆ!

ಹೌದು.  ಬಿಪಾಶಾ ಬಸು (Bipasha Basu) 2016ರಲ್ಲಿ ಕರಣ್ ಸಿಂಗ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.  ಮದುವೆಯಾಗಿ ಆರು ವರ್ಷಗಳ ಬಳಿಕ ಬಿಪಾಶಾ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ.  ಬಿಪಾಷಾ ಅವರು  ನಟಿ ನೇಹಾ ಧೂಪಿಯಾ ಅವರೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್ ಚಾಟ್​ನಲ್ಲಿ ಪುತ್ರಿಯ ಆಘಾತಕಾರಿ ವಿಷಯವೊಂದನ್ನು ಬಹಿರಂಗಗೊಳಿಸಿದ್ದರು.  ತಮ್ಮ ಪುತ್ರಿ ದೇವಿ  ಜನಿಸಿದಾಗ ವೆಂಟ್ರಿಕ್ಯುಲರ್ ಸೆಪ್ಟಲ್ ಡಿಫೆಕ್ಟ್ (ವಿಎಸ್‌ಡಿ) ನಿಂದ ಬಳಲುತ್ತಿದ್ದಳು ಎಂದು ಬಿಪಾಷಾ ಬಹಿರಂಗಪಡಿಸಿದ್ದರು. ಇದರ ಅರ್ಥ ಪಾಪು ದೇವಿಯ  ಹೃದಯದಲ್ಲಿ ಎರಡು ರಂಧ್ರಗಳಿದ್ದವಂತೆ. ತಮ್ಮ ಮಗಳು  ಕೇವಲ ಮೂರು ತಿಂಗಳ ಮಗುವಾಗಿದ್ದಾಗ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿ ಬಂತು ಎಂದು ಕಣ್ಣೀರು ಹಾಕಿದ್ದರು.  

Latest Videos

ರತನ್​ ಟಾಟಾ ಅಂತಿಮ ದರ್ಶನಕ್ಕೆ ಮಲತಾಯಿ ಸಿಮೋನ್: 94 ವಯಸ್ಸಿನ 70 ಸಾವಿರ ಕೋಟಿ ಉದ್ಯಮದ ಒಡತಿ!


ತಾಯ್ತನದ ಬಗ್ಗೆ ಮಾತನಾಡಿದ ಬಿಪಾಶಾ ಬಸು ಅವರು, 'ನಮ್ಮ ಪ್ರಯಾಣವು ಯಾವುದೇ ಸಾಮಾನ್ಯ ತಾಯಿ-ತಂದೆಗಿಂತ ತುಂಬಾ ಭಿನ್ನವಾಗಿದೆ. ಇದೀಗ ನಾನು  ನಗುತ್ತಿದ್ದೇನೆ. ಆದರೆ ಪರಿಸ್ಥಿತಿ ನಿಜಕ್ಕೂ ಈ ನಗುವಿನಂತೆ ಇಲ್ಲ. ಜೀವನ  ತುಂಬಾ ಕಠಿಣವಾಗಿದೆ. ಯಾವ ತಾಯಿಗೂ ಹೀಗಾಗಬೇಕೆಂದು ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ.  ಮಗುವಾದ (Devi) ಮೂರನೇ ದಿನದಲ್ಲಿಯೇ  ಮಗುವಿನ ಹೃದಯದಲ್ಲಿ ಎರಡು ರಂಧ್ರಗಳಿವೆ ಎಂದರೆ ಅಮ್ಮನಿಗೆ ಹೇಗಾಗಬೇಡ? ಅಂಥ ಸ್ಥಿತಿ ನನಗೆ ಬಂದಿತ್ತು. ಈ ವಿಷಯವನ್ನು ಇಲ್ಲಿಯವರೆಗೆ ನಾನು ಯಾರ ಮುಂದೆಯೂ ಹಂಚಿಕೊಂಡಿರಲಿಲ್ಲ.  ಆದರೆ ನಾನು ಇದನ್ನು ಹಂಚಿಕೊಳ್ಳುತ್ತಿದ್ದೇನೆ ಎಂದಿದ್ದರು ನಟಿ ಬಿಪಾಷಾ.

 ಮಗುವಿಗೆ ಮೂರು ದಿನವಿರುವಾಗಲೇ ನಿಮ್ಮ ಮಗುವಿಗೆ  ವಿಎಸ್‌ಡಿಯಿದೆ (VSD) ಎಂದು ವೈದ್ಯರು ಹೇಳಿದರು. ಇದೇನೆಂದು ನನಗೆ ಅರ್ಥವಾಗಲಿಲ್ಲ. ನಂತರ ತಿಳಿದದ್ದು,  ವೆಂಟ್ರಿಕ್ಯುಲರ್ ಸೆಪ್ಟಲ್ ಡಿಫೆಕ್ಟ್ ಎಂದು. ನಾವು ಇದನ್ನು  ನಮ್ಮ ಮನೆಯವರೊಂದಿಗೆ  ಚರ್ಚಿಸಲಿಲ್ಲ, ಜೀವನದಲ್ಲಿ ಕತ್ತಲು ಕವಿದ ಅನುಭವವಾಗಿತ್ತು. ಅದರೆ ಈಗ ಪರಿಸ್ಥಿತಿ ಸುಧಾರಿಸುತ್ತಿದೆ.  ಮೊದಲು ಐದು ತಿಂಗಳು ತುಂಬಾ ಕಷ್ಟವಾಗಿತ್ತು. ಆದರೆ ಈಗ ಮಗಳು ಸುಧಾರಿಸಿಕೊಳ್ಳುತ್ತಿದ್ದಾಳೆ ಎಂದು ಬಿಪಾಷಾ ಹೇಳಿದ್ದಾರೆ. ಇದೊಂದು ರೀತಿಯಲ್ಲಿ ಸಂಘರ್ಷದ ಜೀವನವಾಗಿದೆ. ಮಗುವಿಗೆ  ತೆರೆದ ಹೃದಯ ಶಸ್ತ್ರಚಿಕಿತ್ಸೆ (Heart Operation) ಮಾಡುವಾಗ ಅಮ್ಮ-ಅಪ್ಪನಿಗೆ ಆಗುವ ನೋವನ್ನು ಬರಿ ಬಾಯಿ ಮಾತಿನಿಂದ ಹೇಳುವುದು ಸಾಧ್ಯವಿಲ್ಲ ಎಂದಿದ್ದಾರೆ. ಮಗುವಿಗೆ ಮೂರನೆಯ ತಿಂಗಳಿನಲ್ಲಿ ಸ್ಕ್ಯಾನ್​ ಮಾಡಲು ಹೋದಾಗ ವಿಷಯ ತಿಳಿಯಿತು. ಈ ಬಗ್ಗೆ ನಾನು ಸಾಕಷ್ಟು ಅಧ್ಯಯನ ಮಾಡಿದೆ.  ಶಸ್ತ್ರಚಿಕಿತ್ಸಕರನ್ನು ಭೇಟಿ ಮಾಡಿದೆ. ಶಸ್ತ್ರಚಿಕಿತ್ಸೆಗೆ ನಾನು ಒಂದು ರೀತಿಯಲ್ಲಿ ಸಿದ್ಧಳಾದೆ, ಆದರೆ ಕರಣ್ ಸಿದ್ಧನಾಗಿರಲಿಲ್ಲ. ಆದರೆ ಮಗಳು ಸರಿಯಾಗಬೇಕಾದರೆ ಇದು ಆಗಲೇಬೇಕು ಎಂದು ನಾನು ದೃಢವಾಗಿ ನಿಶ್ಚಯಿಸಿದ್ದೆ. ಈಗ ಮಗಳು ಸುಧಾರಿಸುತ್ತಿದ್ದಾಳೆ ಎಂದಿದ್ದರು ಬಿಪಾಷಾ.

ಪುನೀತ್ ರಾಜ್​​ರನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ನಮ್ರತಾ ಗೌಡ ನೋವಿನ ನುಡಿ... ಕೈ ಮೇಲೆ ಅಪ್ಪು ಹಚ್ಚೆ...

 

click me!