ವಿದ್ಯಾ ಬಾಲನ್‌ ಸಹೋದರಿ ದಕ್ಷಿಣದ ಖ್ಯಾತ ನಟಿ! ಮುಸ್ಲಿಂ ಉದ್ಯಮಿಯ ಎರಡನೇ ಹೆಂಡತಿ- ನಿಮಗಿದು ಗೊತ್ತಿತ್ತಾ?

By Bhavani Bhat  |  First Published Oct 12, 2024, 9:31 PM IST

ವಿದ್ಯಾ ಬಾಲನ್ ಅವರ ಸಹೋದರಿ ಚಲನಚಿತ್ರೋದ್ಯಮದಲ್ಲಿಯೇ ಇದ್ದಾರೆ, ದಶಕಗಳ ನಟನೆಯ ಅನುಭವವನ್ನು ಹೊಂದಿದ್ದಾರೆ ಎಂಬುದು ನಿಮಗೆ ಗೊತ್ತಾ? ಹೌದು. ಜೊತೆಗೆ, ಆಕೆ ಪ್ರಸಿದ್ಧ ಬಾಲಿವುಡ್ ನಟರೊಂದಿಗೂ ನಟಿಸಿದ್ದಾರೆ. ಪ್ರಸ್ತುತ ಆಕೆ ದಕ್ಷಿಣ ಭಾರತದ ಚಿತ್ರೋದ್ಯಮದಲ್ಲಿ ಚಿರಪರಿಚಿತ ಫಿಗರ್.‌ 


ವಿದ್ಯಾ ಬಾಲನ್ ನಿಮಗೆ ಚಿರಪರಿಚಿತ. 20 ವರ್ಷಗಳ ಹಿಂದೆ ತೆಲುಗು ಚಿತ್ರಗಳೊಂದಿಗೆ ಪ್ರಾರಂಭಿಸಿ, ತಮಿಳು ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದ ನಟಿ, ನಂತರ ಮಲಯಾಳಂ ಚಿತ್ರಗಳಲ್ಲಿ ನಟಿಸಿ ಈಗ ಬಾಲಿವುಡ್‌ನಲ್ಲೂ ಬ್ಲಾಕ್‌ಬಸ್ಟರ್‌ಗಳನ್ನು ನೀಡುತ್ತಿದ್ದಾರೆ. ಚಿತ್ರವಿಮರ್ಶಕರಿಂದಲೂ ಮೆಚ್ಚುಗೆ ಪಡೆದ ನಟಿ. 

ಆದರೆ ವಿದ್ಯಾ ಬಾಲನ್ ಅವರ ಸಹೋದರಿ ಚಲನಚಿತ್ರೋದ್ಯಮದಲ್ಲಿಯೇ ಇದ್ದಾರೆ, ದಶಕಗಳ ನಟನೆಯ ಅನುಭವವನ್ನು ಹೊಂದಿದ್ದಾರೆ ಎಂಬುದು ನಿಮಗೆ ಗೊತ್ತಾ? ಹೌದು. ಜೊತೆಗೆ, ಆಕೆ ಪ್ರಸಿದ್ಧ ಬಾಲಿವುಡ್ ನಟರೊಂದಿಗೂ ನಟಿಸಿದ್ದಾರೆ. ಪ್ರಸ್ತುತ ಆಕೆ ದಕ್ಷಿಣ ಭಾರತದ ಚಿತ್ರೋದ್ಯಮದಲ್ಲಿ ಚಿರಪರಿಚಿತ ಫಿಗರ್.‌ ನಲವತ್ತು ವರ್ಷದ ಈ ಸುಂದರಿ ಬಾಲಿವುಡ್‌ನ ಕನಿಷ್ಠ ಮೂರು ಚಿತ್ರಗಳಲ್ಲಿ ನಟಿಸಿದ್ದಾರೆ. ಅದೂ ಹೆವಿವೇಟ್‌ಗಳ ಜೊತೆಗೆ - ಶಾರುಖ್ ಖಾನ್ ಅವರ ಜವಾನ್, ಅಜಯ್ ದೇವಗನ್ ಅವರ ಶೈತಾನ್ ಮತ್ತು ಮನೋಜ್ ಬಾಜಪೇಯಿ ಅವರ ವೆಬ್‌ ಸೀರೀಸ್‌ 'ದಿ ಫ್ಯಾಮಿಲಿ ಮ್ಯಾನ್'ಗಳಲ್ಲಿ. ಈ ನಟಿ ಬೇರೆ ಯಾರೂ ಅಲ್ಲ, ಪ್ರಿಯಾಮಣಿ.

Latest Videos

undefined

ಪ್ರಿಯಾಮಣಿ ಇತ್ತೀಚೆಗೆ ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನವೊಂದರಲ್ಲಿ ತಮ್ಮ ಅಭಿಮಾನಿಗಳಿಗೆ ತಿಳಿದಿಲ್ಲದ ಜೀವನದ ರಹಸ್ಯವನ್ನು ಹಂಚಿಕೊಂಡಿದ್ದಾರೆ. ತಾನು ವಿದ್ಯಾ ಬಾಲನ್ ಅವರ ಸೋದರಸಂಬಂಧಿ ಎಂದು ನಟಿ ಬಹಿರಂಗಪಡಿಸಿದರು. ವಿದ್ಯಾ ಬಾಲನ್‌ ಅವರ ಮತ್ತು ತಮ್ಮ ಅಜ್ಜಂದಿರು ಸಹೋದರರು. ಅಂದರೆ ವಿದ್ಯಾ ಬಾಲನ್‌ ತಾತ, ಪ್ರಿಯಾಮಣಿಯ ಅಜ್ಜನ ಅಣ್ಣ. ಆದರೆ ಇಲ್ಲಿಯವರೆಗೆ ಪ್ರಿಯಾಮಣಿ, ವಿದ್ಯಾ ಅವರನ್ನು ಭೇಟಿಯಾಗಿದ್ದು ಎರಡು ಬಾರಿ ಮಾತ್ರ. ಒಮ್ಮೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಮತ್ತೊಮ್ಮೆ ಶಾರುಖ್ ಖಾನ್ ಆಯೋಜಿಸಿದ್ದ ಪಾರ್ಟಿಯಲ್ಲಿ.

2017ರಲ್ಲಿ ಪ್ರಿಯಾಮಣಿ, ಮುಸ್ತಫಾ ರಾಜ್‌ ಎಂಬ ಮುಸ್ಲಿಂ ಉದ್ಯಮಿಯನ್ನು ಮದುವೆಯಾಗಿದ್ದಾರೆ. ಆದರೆ ಇದೂ ವಿವಾದ ಆಗಿತ್ತು. ತಾನು ಮುಸ್ತಫಾನ ಮೊದಲ ಹೆಂಡತಿ ಎಂದು ಒಬ್ಬಾಕೆ ವಿವಾದ ಎಬ್ಬಿಸಿದ್ದರು. ಇದು ನಿಜ ಎಂದು ಗೊತ್ತಾಗಿತ್ತು. ಅಂದರೆ ಮುಸ್ತಫಾನಿಗೆ ಪ್ರಿಯಾಮಣಿ ಎರಡನೇ ಹೆಂಡತಿ. ಸಾಕಷ್ಟು ಮಂದಿ ಪ್ರಿಯಾಮಣಿಯನ್ನು "ಲವ್‌ ಜಿಹಾದ್‌ಗೆ ಒಳಗಾಗಿದ್ದೀ" ಎಂದು ಆನ್‌ಲೈನ್‌ನಲ್ಲಿ ಟ್ರೋಲ್‌ ಮಾಡಿದ್ದರು. ಈ ಕುರಿತು ಪ್ರಿಯಾಮಣಿ ಇತ್ತೀಚೆಗೆ ವ್ಯಥೆ ತೋಡಿಕೊಂಡಿದ್ದರು. 

ಮಲ್ಲಿಕಾ ಶೆರಾವತ್ ಹೊಟ್ಟೆ ಮೇಲೆ ರೊಟ್ಟಿ ಬೇಯಿಸಲು ಮುಂದಾಗಿದ್ದ ಟಾಲಿವುಡ್ ನಿರ್ದೇಶಕರು..!

ಪ್ರಿಯಾಮಣಿ ಅವರು ಕೇವಲ ಹದಿನೆಂಟು ವರ್ಷ ವಯಸ್ಸಿನವರಾಗಿದ್ದಾಗ ಚಲನಚಿತ್ರಗಳಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಕನ್ನಡ, ತೆಲುಗು, ಹಿಂದಿ, ಮಲಯಾಳಂ, ತಮಿಳು ಭಾಷೆಗಳ ಚಿತ್ರಗಳ ಜನಪ್ರಿಯ ನಾಯಕಿಯಾಗಿರುವ ನಟಿ  ಪ್ರಿಯಾಮಣಿ (Priyamani) 2003ರಲ್ಲಿ ತೆಲುಗು ಚಿತ್ರ ಇವರೇ ಆಟಗಾಡು ಮೂಲಕ ನಟನೆಗೆ ಪದಾರ್ಪಣೆ ಮಾಡಿದ ನಟಿ, ಕನ್ನಡದಲ್ಲಿ ಪುನೀತ್ ರಾಜಕುಮಾರ್ ಅವರ ರಾಮ್ ಚಿತ್ರದಿಂದ ಸ್ಯಾಂಡಲ್​ವುಡ್​ ಸಿನಿಪಯಣ ಆರಂಭಿಸಿದವರು.  ತಮಿಳು ಚಿತ್ರ ರಂಗದ ಹೆಸರಾಂತ ನಿರ್ದೇಶಕ ಭರತ್ ರಾಜ್ ಅವರು ಸಿನಿಮಾರಂಗಕ್ಕೆ ಕರೆ ತಂದವರು. 2007ರ ತಮಿಳು ರೋಮ್ಯಾಂಟಿಕ್ (Romantic) ಸಿನಿಮಾ ಪರುತಿವೀರನ್‌ನಲ್ಲಿ ಮುತ್ತಜಗು ಎಂಬ ಹಳ್ಳಿ ಹುಡುಗಿಯ ಪಾತ್ರಕ್ಕಾಗಿ ಅವರು ವ್ಯಾಪಕ ಮೆಚ್ಚುಗೆ ಪಡೆದರು. ಅತ್ಯುತ್ತಮ ನಟನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ವಿಭಿನ್ನ ಭಾಷೆಯ ಚಲನಚಿತ್ರಗಳಲ್ಲಿ ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. 2008ರಲ್ಲಿ  ಪ್ರಿಯಾಮಣಿ ಮಲಯಾಳಂ ಪ್ರಣಯ ತಿರಕ್ಕಾಥಾದಲ್ಲಿ ಮಾಳವಿಕಾ ಪಾತ್ರಕ್ಕಾಗಿ ಮತ್ತಷ್ಟು ಮೆಚ್ಚುಗೆಯನ್ನು ಪಡೆದರು ಮತ್ತು ಅತ್ಯುತ್ತಮ ನಟಿ ಮಲಯಾಳಂನಲ್ಲಿ ಫಿಲ್ಮ್‌ಫೇರ್ (Filmfare) ಪ್ರಶಸ್ತಿಯನ್ನು ಗೆದ್ದರು. 

ಮಣಿರತ್ನಂ ಅವರ ʼರಾವಣʼದಲ್ಲಿ ಪೋಷಕ ಪಾತ್ರದಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ನಂತರ ಚೆನ್ನೈ ಎಕ್ಸ್‌ಪ್ರೆಸ್‌ನಲ್ಲಿ ಶಾರುಖ್ ಖಾನ್ ಜೊತೆಗೆ ಐಟಂ ಸಾಂಗ್‌ಗೆ ಮನ್ನಣೆ ಗಳಿಸಿದರು. ಮನೋಜ್ ಬಾಜಪೇಯಿ ನಟಿಸಿದ ಜನಪ್ರಿಯ ಆನ್‌ಲೈನ್ ಸರಣಿ ದಿ ಫ್ಯಾಮಿಲಿ ಮ್ಯಾನ್‌ನಲ್ಲಿ ಸುಚಿಯ ಪಾತ್ರದೊಂದಿಗೆ, ಅವರು 2019 ರಲ್ಲಿ ಹಿಂದಿ ಚಿತ್ರರಂಗದಲ್ಲಿ ಪ್ರಸಿದ್ಧ ಹೆಸರಾದರು.

ಶಾರುಖ್ ಪುತ್ರ ಆರ್ಯನ್ ಅನುಸರಿಸುವ ಧರ್ಮ ಯಾವುದು? ಬಹಿರಂಗ ಪಡಿಸಿದ ಗೌರಿ ಖಾನ್!
 

click me!