ಪಬ್ಲಿಕ್‌ನಲ್ಲಿ ಅಶ್ಲೀಲ ವರ್ತನೆ ಮಾಡೋ ಸ್ಟಾರ್‌, ಬಟ್ಟೆ ಬಿಚ್ಚೋಕೆ ಪತ್ನಿಯ ಫುಲ್‌ ಸಪೋರ್ಟ್‌ !

Published : Mar 08, 2025, 12:55 PM ISTUpdated : Mar 08, 2025, 02:28 PM IST
ಪಬ್ಲಿಕ್‌ನಲ್ಲಿ ಅಶ್ಲೀಲ ವರ್ತನೆ ಮಾಡೋ ಸ್ಟಾರ್‌, ಬಟ್ಟೆ ಬಿಚ್ಚೋಕೆ ಪತ್ನಿಯ ಫುಲ್‌ ಸಪೋರ್ಟ್‌ !

ಸಾರಾಂಶ

ಗ್ರ್ಯಾಮಿ ಪ್ರಶಸ್ತಿ ವಿಜೇತ ರಾಪರ್ ಕಾನ್ಯೆ ವೆಸ್ಟ್ ವಿವಾದಗಳಿಂದ ಸದಾ ಸುದ್ದಿಯಲ್ಲಿದ್ದಾರೆ. ಯೆಹೂದಿ ವಿರೋಧಿ ಹೇಳಿಕೆಗಳಿಂದ ಎಕ್ಸ್ ಖಾತೆ ಡಿಲೀಟ್ ಆಗಿದೆ. ಪತ್ನಿ ಬಿಯಾಂಕಾ ಸೆನ್ಸೋರಿಯವರ ಉಡುಗೆಗಳ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ. ಬಿಯಾಂಕಾಳ ಉಡುಗೆಗೆ ಕಾನ್ಯೆಯೇ ಕಾರಣ ಎಂದು ಮಾಜಿ ಗೆಳತಿ ಆರೋಪಿಸಿದ್ದಾರೆ. ಸಾರ್ವಜನಿಕವಾಗಿ ಅಶ್ಲೀಲವಾಗಿ ವರ್ತಿಸಿದ ಆರೋಪವೂ ಇದೆ.

ಗ್ರ್ಯಾಮಿ ಪ್ರಶಸ್ತಿ ವಿಜೇತ ರ‍್ಯಾಪರ್, ಕಾನ್ಯೆ ವೆಸ್ಟ್ (Grammy award winning rapper, Kanye West) ವಿವಾದಿತ ಸ್ಟಾರ್. ಸದಾ ಒಂದಲ್ಲ ಒಂದು ವಿಷ್ಯಕ್ಕೆ ಕಾನ್ಯೆ ಚರ್ಚೆಯಲ್ಲಿರ್ತಾರೆ. ಯೆಹೂದಿ ವಿರೋಧಿ, ಸ್ತ್ರೀದ್ವೇಷಿ ಮತ್ತು ಜನಾಂಗೀಯ ಟೀಕೆಗಳ ನಂತ್ರ ಕಾನ್ಯೆ ವೆಸ್ಟ್ ಎಕ್ಸ್ ಖಾತೆ ಡಿಲಿಟ್ ಆದ ಸುದ್ದಿ ಸದ್ಯ ಹರಿದಾಡ್ತಿದೆ. ಕಾನ್ಯೆ ವೆಸ್ಟ್ ಹಾಗೂ ಪತ್ನಿ ಬಿಯಾಂಕಾ ಸೆನ್ಸೋರಿ (Bianca Sensori) ಡಿವೋರ್ಸ್ ತೆಗೆದುಕೊಳ್ತಾರೆ ಎನ್ನುವ ಸುದ್ದಿ ಕೂಡ ಕೆಲ ದಿನಗಳ ಹಿಂದೆ ಚರ್ಚೆಯಾಗಿತ್ತು. ಆದ್ರೆ ಅನೇಕ ಕಾರ್ಯಕ್ರಮಕ್ಕೆ ಒಟ್ಟಿಗೆ ಬಂದಿದ್ದ ಕಾನ್ಯೆ ಮತ್ತು ಬಿಯಾಂಕಾ, ಈ ಅನುಮಾನಕ್ಕೆ ತೆರೆ ಎಳೆದಿದ್ದಾರೆಯಾದ್ರೂ ಬಿಯಾಂಕಾ ಡ್ರೆಸ್ ವಿಷ್ಯಕ್ಕೆ ಕಾನ್ಯೆ ಟ್ರೋಲ್ ಆಗ್ತಿದ್ದಾರೆ. 

67ನೇ ಗ್ರ್ಯಾಮಿ ಪ್ರಶಸ್ತಿ ಕಾರ್ಯಕ್ರಮದಲ್ಲಿ ಕಾನ್ಯೆ ವೆಸ್ಟ್ ಪತ್ನಿ ಬಿಯಾಂಕಾ ಸೆನೋರಿ ನಗ್ನವಾಗಿ ಕಾಣಿಸ್ಕೊಂಡು ವಿವಾದ ಸೃಷ್ಟಿಸಿದ್ದರು. ಅದಾದ್ಮೇಲೆ ಈಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ಹಾಟ್ ಫೋಟೋ ಹಂಚಿಕೊಂಡಿದ್ದಾರೆ. ಕಾನ್ಯೆ ಜೊತೆ ಆಗಾಗ ಹೊರಗೆ ಸುತ್ತಾಡುವ ಬಿಯಾಂಕಾ, ಅರೆ ಬಟ್ಟೆಯಲ್ಲಿ ಕಾಣಿಸಿಕೊಳ್ಳೋದು ಹೊಸತಲ್ಲ. ಕಾನ್ಯೆ ಏನೇ ಮಾಡಿದ್ರೂ ಬಿಯಾಂಕಾ ಅದಕ್ಕೆ ಸಪೋರ್ಟ್ ಮಾಡ್ತಾರೆ. ಕಾನ್ಯೆ ಹಾಗೂ ಬಿಯಾಂಕಾ ಹಳೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗಿದೆ.  ಸಾರ್ವಜನಿಕ ಸ್ಥಳದಲ್ಲಿ ಪತಿ – ಪತ್ನಿ ಅಶ್ಲೀಲ ಕೃತ್ಯದಲ್ಲಿ ಪಾಲ್ಗೊಂಡಿರೋದನ್ನ ಫೋಟೋದಲ್ಲಿ ಕಾಣ್ಬಹುದು.  ಸೋಶಿಯಲ್ ಮೀಡಿಯಾದಲ್ಲಿ  ಸುಮಾರು ಒಂದು ವರ್ಷದ ಹಿಂದಿನ ಫೋಟೋ ವೈರಲ್ ಆಗಿದೆ. ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಂಡಿದ್ದ ಕಾನ್ಯೆ, ಕ್ಯಾಮರಾ ಮುಂದೆಯೇ ಎಲ್ಲೆ ಮೀರಿದ್ದರು. ತಮ್ಮನ್ನು ತಾವು ನಿಯಂತ್ರಿಸಿಕೊಳ್ಳದೆ, ಪತ್ನಿ ಜೊತೆ ಅಶ್ಲೀಲ ಕೃತ್ಯಕ್ಕೆ ಪ್ರಯತ್ನ ಮಾಡಿದ್ರು. ಈ ಫೋಟೋಕ್ಕೆ ಬಳಕೆದಾರರು ನಿರಂತರ ಕಮೆಂಟ್ ಮಾಡ್ತಾನೆ ಇದ್ದಾರೆ.

ʼಶಾಪದಿಂದ ಕಲ್ಲು ಒಡೆಯತ್ತೆ, ನನ್ನ ಮಗನಿಗೆ ಬೈದಿದ್ದಕ್ಕೆ ಈಗ ಕಾಯಿಲೆ ಬಂದಿದೆʼ: ಕಣ್ಣೀರು ಹಾಕಿ

ಒಂದ್ಕಡೆ ಸಾರ್ವಜನಿಕ ಪ್ರದೇಶದಲ್ಲಿ ಪತ್ನಿ ಜೊತೆ ಅಶ್ಲೀಲವಾಗಿ ನಡೆದುಕೊಳ್ಳುವ ಕಾನ್ಯೆ, ಇನ್ನೊಂದು ಕಡೆ ಪತ್ನಿಯನ್ನು ಬೆತ್ತಲುಗೊಳಿಸುವ ಅವಕಾಶ ಸಿಕ್ರೆ ಬಿಡೋದಿಲ್ಲ. ಕಾನ್ಯೆ ಯಾಕೆ ತಮ್ಮ ಪತ್ನಿಯನ್ನು ವಿವಾದಿತ ಬಟ್ಟೆಯಲ್ಲಿ ಇಲ್ಲ ಬೆತ್ತಲಾಗಿ ಕಾಣಿಸ್ತಾರೆ ಎಂಬುದನ್ನು ಕಾನ್ಯೆ ಮಾಜಿ ಗರ್ಲ್ ಫ್ರೆಂಡ್ ಹೇಳಿದ್ದಾರೆ. 

ಬಿಯಾಂಕ ಇಂಥ ಡ್ರೆಸ್ ಧರಿಸಲು ಕಾರಣ ಕಾನ್ಯೆ ಎಂದು ಕಾನ್ಯೆ ಮಾಜಿ ಆಂಬರ್ ರೋಜ್ ಹೇಳಿದ್ದಾರೆ. ಕಾನ್ಯೆ, ತನ್ನ ಪತ್ನಿಗೆ ಬೆತ್ತಲಾಗಲು ಒತ್ತಾಯ ಮಾಡುತ್ತಾರೆ. ನನ್ನ ಜೊತೆಯೂ ಇದೇ ನಡೆದಿತ್ತು ಎಂದು ಆಂಬರ್ ಹೇಳಿದ್ದಾರೆ. ನನ್ನ ಪತ್ನಿಯ ಬೆತ್ತಲೆ ಅವತಾರ ನೋಡಿ ಉಳಿದ ಪುರುಷರು, ಸ್ನೇಹಿತರು ಇಂಟಿಮೇಟ್ ಆಗಲು ಇಷ್ಟಪಡ್ಬೇಕು ಅನ್ನೋದೇ ಕಾನ್ಯೆ ಉದ್ದೇಶ ಎಂದು ಆಂಬರ್ ಆರೋಪ ಮಾಡಿದ್ದಾರೆ. ನನಗೆ ಇಷ್ಟವಿಲ್ಲದೆ ಹೋದ್ರೂ ನ್ಯೂಡ್ ಡ್ರೆಸ್ ಧರಿಸಬೇಕಾಗಿತ್ತು. ನಾನು ಎಷ್ಟೋ ಬಾರಿ ಅತ್ತಿದ್ದೆ ಎಂದು ಆಂಬರ್ ಹೇಳಿದ್ದಾರೆ.

ರಮ್ಯಾ ಸಪೋರ್ಟ್ ಮಧ್ಯೆ ಲೈಫ್ ಪಾಠ ಹೇಳಿದ ರಶ್ಮಿಕಾ ಮಂದಣ್ಣ !

ಕಾನ್ಯೆ ಎರಡನೇ ಪತ್ನಿ ಬಿಯಾಂಕಾ ಸೆನ್ಸೋರಿ ಆಸ್ಟ್ರೇಲಿಯಾದವರು. ಅಮೆರಿಕಾ ರ್ಯಾಪರ್ ಕಾನ್ಯೆ ಜೊತೆ 2022ರಲ್ಲಿ ಬಿಯಾಂಕಾ ಸೆನ್ಸೋರಿ ಮದುವೆಯಾಗಿದ್ದರು. ಇದಕ್ಕಿಂತ ಮೊದಲು ಕಾನ್ಯೆ,  ಕಿಮ್ ಕರ್ದಾಶಿಯಾನ್ ಜೊತೆ ಮದುವೆ ಆಗಿದ್ದರು. ಸುಮಾರು 8 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದ ಕಾನ್ಯೆ ಮತ್ತು ಕಿಮ್ ಕರ್ದಾಶಿಯಾನ್ ನಂತ್ರ ಬೇರೆಯಾದ್ರು. ಆ ನಂತ್ರ ಬಿಯಾಂಕಾ ಜೊತೆ ಸಂಬಂಧದಲ್ಲಿದ್ದ ಕಾನ್ಯೆ, ನಂತ್ರ ತಮ್ಮ ಸಂಬಂಧವನ್ನು ಬಹಿರಂಗಪಡಿಸಿದ್ದರು. ಮದುವೆ ಆದ್ಮೇಲೆ ಅನೇಕ ಬಾರಿ ಸಾರ್ವಜನಿಕ ಪ್ರದೇಶದಲ್ಲಿ ಬಿಯಾಂಕಾ ಅರೆ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಎಲ್ಲ ಡ್ರೆಸ್ ಕಾನ್ಯೆ ಆಯ್ಕೆ ಮಾಡ್ತಾರೆ ಅಂತ ಮಾಜಿ ಗರ್ಲ್ ಫ್ರೆಂಡ್ ಆರೋಪ ಮಾಡಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?