ಹಿಂದೊಂದು, ಮುಂದೊಂದು; ಸೋನಂ ಕಪೂರ್ ಫ್ಯಾಶನ್‌ಗೆ ಇನ್ನು ಈ ಕಣ್ಣಲ್ಲಿ ಏನೇನು ನೋಡಬೇಕಪ್ಪಾ ಎಂದ ನೆಟ್ಟಿಗರು!

Published : Mar 08, 2025, 10:15 AM ISTUpdated : Mar 08, 2025, 10:20 AM IST
ಹಿಂದೊಂದು, ಮುಂದೊಂದು; ಸೋನಂ ಕಪೂರ್ ಫ್ಯಾಶನ್‌ಗೆ ಇನ್ನು ಈ ಕಣ್ಣಲ್ಲಿ ಏನೇನು ನೋಡಬೇಕಪ್ಪಾ ಎಂದ ನೆಟ್ಟಿಗರು!

ಸಾರಾಂಶ

ಸೋನಂ ಕಪೂರ್ ಅವರ ವಿಚಿತ್ರ ಫ್ಯಾಷನ್ ಆಯ್ಕೆಗಳು ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗುತ್ತವೆ. ಇತ್ತೀಚೆಗೆ ಅವರು ಧರಿಸಿದ್ದ ವಿನ್ಯಾಸ ಮತ್ತು ಆಭರಣಗಳು ನೆಟ್ಟಿಗರ ಗಮನ ಸೆಳೆದಿದ್ದು, ಅವರ ವಿಭಿನ್ನ ಶೈಲಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮುಂಬೈ: ಬಾಲಿವುಡ್ ಬ್ಯುಟಿ ಮತ್ತು ಫ್ಯಾಶನ್ ಐಕಾನ್ ಎಂದೇ ಗುರುತಿಸಿಕೊಳ್ಳುವ ನಟಿ ಅಂದ್ರೆ ಅದು ಸೋನಂ ಕಪೂರ್. ಮದುವೆ ಬಳಿಕ ಸಿನಿಮಾದಿಂದ ದೂರವಾದ್ರೂ ತಮ್ಮ ಸಪೂರ ಮತ್ತು ಆಕರ್ಷಕ ಮೈಮಾಟವನ್ನು ಕಾಪಾಡಿಕೊಂಡಿದ್ದು, ಆಗಾಗ್ಗೆ ಫ್ಯಾಶನ್ ಇವೆಂಟ್‌ಗಳಲ್ಲಿ ವಿಚಿತ್ರವಾದ ವಿಶೇಷ ಡಿಸೈನರ್ ಬಟ್ಟೆ ಧರಿಸಿ ಬೆಕ್ಕಿನಡಿಗೆ ಹಾಕುತ್ತಾರೆ. ಇತ್ತೀಚೆಗಷ್ಟೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸೋನಂ ಕಪೂರ್ ಧರಿಸಿದ್ದ ಆಭರಣ ಸಖತ್ ವೈರಲ್ ಆಗಿದೆ.  ಇಂದು ಬ್ಯಾಕ್‌ಲೆಸ್ ಎಂದು ಇಡೀ ಬೆನ್ನಿನ ಭಾಗವನ್ನು ತೋರಿಸಲು ಮಾಡೆಲ್‌ಗಳು ಮತ್ತು ನಟಿಯರು ಇಷ್ಟಪಡುತ್ತಾರೆ. ಬ್ಲಾಕ್‌ ಆಂಡ್ ಸ್ಲೀವ್‌ಲೆಸ್ ಅನ್ನೋದು ಇಂದು ಟ್ರೆಂಡ್ ಆಗಿ ಬದಲಾಗಿದೆ. 

ಬೂದುಬಣ್ಣದ ಸ್ಲೀವ್‌ಲೆಸ್ ಆಂಡ್ ಬ್ಯಾಕ್‌ಲೆಸ್ ಗೌನ್ ಧರಿಸಿದ್ದ ಸೋನಂ ಕಪೂರ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾಪಾರಜಿಗಳು ಫೋಟೋ ಕ್ಲಿಕ್ಕಿಸಲು ಆರಂಭಿಸುತ್ತಿದ್ದಂತೆ ಹೆಗಲ್ಮೇಲೆ ಹಾಕಿಕೊಂಡಿದ್ದ ದೊಡ್ಡ ದುಪ್ಪಟ್ಟ ಕೆಳಗಿಳಿಸಿ ಬ್ಯಾಕ್‌ಸೈಡ್‌ನಿಂದಲೇ ಫೋಟೋಗೆ ಪೋಸ್ ನೀಡಿದ್ದರು. ಸಾಮಾನ್ಯವಾಗಿ ಎಲ್ಲರೂ ಸರ ಅಥವಾ ನೆಕ್ಲೇಸ್‌ಗಳನ್ನು ಮುಂಭಾಗ ಹಾಕಿಕೊಳ್ಳುತ್ತಾರೆ. ಆದ್ರೆ ಫ್ಯಾಶನ್ ಐಕಾನ್ ಆಗಿರೋ ಸೋನಂ, ಬೆನ್ನಿನ ಭಾಗವೂ ಸುಂದರವಾಗಿ ಕಾಣಲೆಂದು ನೆಕ್ಲೇಸ್ ಉಲ್ಟಾ ಹಾಕಿಕೊಂಡಿದ್ದರು. 

ಹಿಂದೆ ಮಾತ್ರವಲ್ಲ ಮುಂದೆಯೂ ಮುತ್ತುಗಳನ್ನು ಜೋಡಿಸಿರುವ ಹಾರ ಧರಿಸಿ ರಾಜಕುಮಾರಿ ಅಂತೆ ಸೋನಂ ಕಪೂರ್ ಕಾಣಿಸುತ್ತಿದ್ದರು. ಆದ್ರೆ ಬೆನ್ನಿಗೂ ನೆಕ್ಲಸ್ ಹಾಕುವ ಮೂಲಕ ನಾನು ಡಿಫರೆಂಟ್ ಅನ್ನೋದನ್ನು ಸೋನಂ ಕಪೂರ್ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. 

ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್ ಮುದ್ದಿನ ಮಗಳಾಗಿರುವ ಸೋನಂ ಕಪೂರ್, 2007ರ ಸಾವಾರಿಯಾ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಸಂಜಯ್ ಲೀಲಾ ಬನ್ಸಾಲಿ ಅವರು ಸೋನಂ ಕಪೂರ್ ಅವರನ್ನು ಆಯ್ಕೆ ಮಾಡಿದ್ದಾಗ 80 ಕೆಜಿ ತೂಕ ಹೊಂದಿದ್ದರು. ಚಿತ್ರೀಕರಣ ಆರಂಭದ ವೇಳೆಗೆ ಸೋನಂ ಬರೋಬ್ಬರಿ 37 ಕೆಜಿ ತೂಕ ಇಳಿಸಿ ಬಳಕುವ ಬಳ್ಳಿಯಂತಾಗಿದ್ದರು. ರಣ್‌ಬೀರ್ ಕಪೂರ್ ಮತ್ತು ಸೋನಂ ಕಪೂರ್ ಅವರನ್ನು ಸಂಜಯ್ ಲೀಲಾ ಬನ್ಸಾಲಿ ಅವರೇ ಚಿತ್ರರಂಗಕ್ಕೆ ಪರಿಚಯಿಸಿದ್ದರು. 

ಇದನ್ನೂ ಓದಿ: ಸೋನಂ ಕಪೂರ್ ಹಸಿಬಿಸಿ ಫೋಟೋ ವೈರಲ್; ಸಮಾಜಕ್ಕೆ ಒಳಗಿಂದೆಲ್ಲ ತೋರಿಸಲೇಬೇಕಾ ಎಂದು ಕಾಲೆಳೆದ ನೆಟ್ಟಿಗರು!

ಸಾವಾರಿಯಾ ಬಳಿಕ ಸೋನಂ ಕಪೂರ್, ದೆಹಲಿ -6,  ಮೌಸಮ್, ಪ್ಲೇಯರ್ಸ್, ಬಾಂಬೆ ಟಾಕೀಸ್, ರಾಂಜನಾ, ಭಾಗ್ ಮಿಲ್ಕಾ ಭಾಗ್, ನೀರಜಾ, ಪ್ಯಾಡ್‌ ಮ್ಯಾನ್, ವೀರೆ ದಿ ವೆಡ್ಡಿಂಗ್, ಸಂಜು, ದಿ ಜೋಯಾ ಫ್ಯಾಕ್ಟರ್, ಪ್ರೇಮ್ ರತನ್ ಧನ್ ಪಾಯೋ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗೆ ಹನಿ ಸಿಂಗ್ ಅವರ ಧೀರೆ ಧೀರೆ, ಕೋಲ್ಡ್‌ಪ್ಲೇ ಅಗರ ಹ್ಯಾಂ ಫಾರ್ ದಿ  ವೀಕೆಂಡ್ ಎಂಬ ಎರಡು ಮ್ಯೂಸಿಕ್ ಅಲ್ಬಂಗಳಲ್ಲಿಯೂ ಸೋನಂ ಕಪೂರ್ ಕಾಣಿಸಿಕೊಂಡಿದ್ದಾರೆ.

ಮೌಸನ್, ರಾಂಜನಾ ಮತ್ತು  ನೀರಜಾ ಸಿನಿಮಾಗಳು ಸೋನಂ ಕಪೂರ್‌ಗೆ ದೊಡ್ಡಮಟ್ಟದ ಹೆಸರು ತಂದುಕೊಟ್ಟ ಸಿನಿಮಾಗಳಾಗಿದೆ. ಇನ್ನು ತಮ್ಮ ಅಮೋಘ ನಟನೆಯಿಂದಾಗಿ ಫಿಲಂ ಫೇರ್ ಅವಾರ್ಡ್, ನ್ಯಾಷನಲ್ ಫಿಲಂ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. 2012-2016ರಲ್ಲಿ ಫೋರ್ಬ್ ಬಿಡುಗಡೆ ಮಾಡುವ ಟಾಪ್ 100 ಜನಪ್ರಿಯ ಸೆಲಿಬ್ರಿಟಿಗಳಲ್ಲಿ ಸೋನಂ ಕಪೂರ್ ಸ್ಥಾನ ಪಡೆದುಕೊಂಡಿದ್ದರು. 

ಇದನ್ನೂ ಓದಿ: ವಿಶೇಷ ಕಾರಣಕ್ಕಾಗಿ ಕರ್ನಾಟಕದ ಕೆಂಪು ಮಣ್ಣಿನಿಂದ ಮೈ ಮುಚ್ಚಿ ಪೋಸ್ ಕೊಟ್ಟ ಬಾಲಿವುಡ್ ನಟಿ ಸೋನಂ ಕಪೂರ್…

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!