32 ಸಿನಿಮಾ, 48 ಸೀರಿಯಲ್‌ನಲ್ಲಿ ನಟಿಸಿ ಚಿತ್ರರಂಗಕ್ಕೆ ಗುಡ್‌ಬೈ ಹೇಳಿ IAS ಅಧಿಕಾರಿಯಾದ ನಟಿ

Sandalwood Child Artist: ಬಾಲನಟಿಯಾಗಿ ಗುರುತಿಸಿಕೊಂಡಿದ್ದ ಇವರು ಈಗ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 32 ಸಿನಿಮಾಗಳು ಮತ್ತು 48 ಧಾರಾವಾಹಿಗಳಲ್ಲಿ ನಟಿಸಿ, ನಂತರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ.

This girl HS Keerthana with Malashree and Shivarajkumar is now an IAS officer mrq

ಬೆಂಗಳೂರು: ಎಂಟರ್‌ಟೈನ್ಮೆಂಟ್ ಇಂಡಸ್ಟ್ರಿಯಲ್ಲಿ ಹಲವು ಕಲಾವಿದರು ವೃತ್ತಿಜೀವನದ ಉತ್ತುಂಗದಲ್ಲಿರುವಾಗಲೇ ಬಣ್ಣದ ಲೋಕಕ್ಕೆ ವಿದಾಯ ಹೇಳುತ್ತಾರೆ. ಸ್ಟಾರ್ ಆಗಿ ಗುರುತಿಸಿಕೊಂಡಿದ್ದ ಎಷ್ಟೋ ಕಲಾವಿದರು ಸಾಮಾನ್ಯರಂತೆ ಜೀವನ ನಡೆಸುತ್ತಾರೆ ಅಥವಾ ತಮ್ಮ ವೃತ್ತಿಯನ್ನೇ ಬದಲಿಸಿಕೊಂಡಿರುತ್ತಾರೆ. ಈ ಮೇಲಿನ ಫೋಟೋದಲ್ಲಿ ಕನಸಿನ ರಾಣಿ ಮಾಲಾಶ್ರೀ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಜೊತೆಯಲ್ಲಿರೋ ಪುಟ್ಟ ಹುಡುಗಿ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ ಕಲಾವಿದೆಯಾಗಿ ಬಂದ ಈ ಪೋರಿ ಸ್ಡಾರ್ ನಟರ ಜೊತೆಯಲ್ಲಿ ತೆರೆ ಹಂಚಿಕೊಂಡಿದ್ದಾರೆ. ತಮ್ಮದೇ ಛಾಪು ಮೂಡಿಸಿದ್ದ ಕಲಾವಿದೆ, ಬಣ್ಣದ ಲೋಕಕ್ಕೆ ವಿದಾಯ ಹೇಳಿ ಐಎಎಸ್ ಅಧಿಕಾರಿಯಾಗುವ ಕಠಿಣ ಮಾರ್ಗವನ್ನು ಆಯ್ಕೆ ಮಾಡಿಕೊಂಡರು. 

90ರ ದಶಕದಲ್ಲಿ ಈ ಫೋಟೋದಲ್ಲಿರುವ ಬಾಲಕಿ ಸೌಥ್ ಸಿನಿ ಅಂಗಳದ ಜನಪ್ರಿಯ ಬಾಲಕಲಾವಿದೆ ಹೆಚ್‌ಎಸ್‌ ಕೀರ್ತನಾ. ತುಮಕೂರು ಜಿಲ್ಲೆಯ  ಹೊಸಕೆರೆಯಲ್ಲಿ ಜನಿಸಿದ ಕೀರ್ತನಾ ತಮ್ಮ 4ನೇ ವಯಸ್ಸಿನಲ್ಲಿಯೇ ಕ್ಯಾಮೆರಾ ಮುಂದೆ ನಟನೆ ಮಾಡಲು ಶುರು ಮಾಡಿದ್ದರು. ಲೇಡಿ ಕಮಿಷನರ್, ಹಬ್ಬ, ಡೋರ್, ಕರ್ಪೂರದ ಗೊಂಬೆ, ಗಂಗಾ ಯಮುನಾ, ಲಕ್ಷ್ಮೀ ಮಹಾಲಕ್ಷ್ಮೀ, ಉಪೇಂದ್ರ, ಎ, ಕಾನೂರು ಹೆಗ್ಗಡತಿ, ಮುದ್ದಿನ ಅಳಿಯ, ಸರ್ಕಲ್ ಇನ್‌ಸ್ಪೆಕ್ಟರ್, ಓ ಮಲ್ಲಿಗೆ, ಸಿಂಹಾದ್ರಿ, ಜನನಿ, ಪುಟಾಣಿ ಏಜೆಂಟ್ ಮತ್ತು ಚಿಗುರು ಸೇರಿದಂತೆ ಹಲವು ಸಿನಿಮಾ ಮತ್ತು ಧಾರಾವಾಹಿಗಳಲ್ಲಿಯೀ ಕೀರ್ತನಾ ನಟಿಸಿದ್ದಾರೆ.

Latest Videos

ಇದನ್ನೂ ಓದಿ: ಸೀರಿಯಲ್ ಮುಗಿಯುತ್ತಿದ್ದಂತೆ ದುಬಾರಿ ಕಾರು ಖರೀದಿಸಿದ ಲಕ್ಷ್ಮೀ ಬಾರಮ್ಮ ನಟಿ … ಬೆಲೆ ಎಷ್ಟು ಗೊತ್ತ?

ಹೆಚ್‌ಎಸ್ ಕೀರ್ತನಾ ತಮ್ಮ ಸಿನಿ ಕೆರಿಯರ್‌ನಲ್ಲಿ 32 ಸಿನಿಮಾ ಮತ್ತು 48 ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕೀರ್ತನಾ ನಟಿಸಿದ ಬಹುತೇಕ ಚಿತ್ರಗಳು ಸೂಪರ್ ಹಿಟ್ ಸಾಲಿಗೆ ಸೇರ್ಪಡೆಯಾಗಿವೆ. ಸಿನಿಮಾದಿಂದ ದೂರಯುಳಿಯುತ್ತೇನೆ ಎಂದು ಕೀರ್ತನಾ ಹೇಳಿದಾಗ ಎಲ್ಲರೂ ಆಶ್ಚರ್ಯಚಕಿತರಾಗಿದ್ದರು. ಆಕ್ಟಿಂಗ್ ಬಿಟ್ಟು ಕೀರ್ತನಾ ಆಯ್ಕೆ ಮಾಡಿಕೊಂಡು ಮಾರ್ಗ ತುಂಬಾ ಕಠಿಣವಾಗಿತ್ತು. 2011ರಲ್ಲಿ ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ನಂತರ ಎರಡು ವರ್ಷ ಕೆಎಎಸ್ ಅಧಿಕಾರಿಯಾಗಿ ಸೇವೆಯೂ ಸಲ್ಲಿಸಿದ್ದಾರೆ. 

ಕೆಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಲೇ ಯುಪಿಎಸ್‌ಸಿ ಪರೀಕ್ಷೆಯ ಸಿದ್ಧತೆ ನಡೆಸುತ್ತಿದ್ದರು. ಆರನೇ ಪ್ರಯತ್ನದಲ್ಲಿ 167ನೇ Rank ಪಡೆದು
 ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕೀರ್ತನಾ ಉತ್ತೀರ್ಣರಾದರು.  ಐಎಎಸ್ ಅಧಿಕಾರಿಯಾದ ಕೀರ್ತನಾ ಅವರ ಮೊದಲ ಪೋಸ್ಟಿಂಗ್‌ ಮಂಡ್ಯ ಜಿಲ್ಲೆಯಲ್ಲಾಗಿತ್ತು. ಮಂಡ್ಯ ಜಿಲ್ಲೆಯಲ್ಲಿ ಸಹಾಯಕ ಆಯಕ್ತರಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಯ ಚಿಕ್ಕಮಗಳೂರಿನ ಪಂಚಾಯತ್ ಮುಖ್ಯ ಕಾರ್ಯಕಾರಿ ಅಧಿಕಾರಿಯಾಗಿ ಹೆಚ್‌ಎಸ್ ಕೀರ್ತನಾ ಸೇವೆ ಸಲ್ಲಿಸುತ್ತಿದ್ದಾರೆ. 

ಇದನ್ನೂ ಓದಿ: 

vuukle one pixel image
click me!