ಮಿಸ್‌ ಇಂಡಿಯಾ ಸ್ಪರ್ಧಿಯಾಗಿದ್ದ ಈ ನಟಿ ಯಾರದೋ ತಪ್ಪಿಗೆ ಜೈಲಿಗೆ ಹೋದಳು!

Published : Mar 04, 2025, 08:48 PM ISTUpdated : Mar 05, 2025, 10:17 AM IST
ಮಿಸ್‌ ಇಂಡಿಯಾ ಸ್ಪರ್ಧಿಯಾಗಿದ್ದ ಈ ನಟಿ ಯಾರದೋ ತಪ್ಪಿಗೆ ಜೈಲಿಗೆ ಹೋದಳು!

ಸಾರಾಂಶ

90ರ ದಶಕದಲ್ಲಿ ಮಿಂಚಿದ, ಒಮ್ಮೆ ಮಿಸ್‌ ಇಂಡಿಯಾ ಸ್ಪರ್ಧಿಯೂ ಆಗಿದ್ದ  ನಟಿಯ ಯಶಸ್ಸು, ವಿವಾದಾತ್ಮಕ ಪ್ರಕರಣ, ಬಂಧನ, ಜೈಲುವಾಸ ಮತ್ತು ನಂತರದ ಕಣ್ಮರೆಯ ಕತೆ ಇಲ್ಲಿದೆ. ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಛಾಪು ಮೂಡಿಸಿದ ಈಕೆಯ ಜೀವನದ ಏಳು-ಬೀಳುಗಳು ಹೀಗಿವೆ.


ಈಕೆ ಮಿಸ್‌ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದಳು. ಸಾಕಷ್ಟು ಚಲನಚಿತ್ರಗಳಲ್ಲಿ ಅವಕಾಶ ಪಡೆದಳು. ಈ ನಟಿ ಒಂದು ಹಂತದಲ್ಲಿ ತನ್ನ ಕೆರಿಯರ್‌ನ ಉನ್ನತ ಮಟ್ಟದವನ್ನು ಮುಟ್ಟಿದ್ದಳು. 90ರ ದಶಕದಲ್ಲಿ ಪ್ರಸಿದ್ಧ ನಟರೊಂದಿಗೆ ನಟಿಸಿದಳು. ತನ್ನ ಪ್ರತಿಭೆಯಿಂದ, ಸಂದರ್ಯದಿಂದ, ವೈಶಿಷ್ಟ್ಯಗಳಿಂದ ಗಮನ ಸೆಳೆದಳು. ಆದರೆ ಯಾರೂ ನಿರೀಕ್ಷಿಸದ ರೀತಿಯಲ್ಲಿ ಕುಸಿತ ಕಂಡಳು. ತಾನು ಮಾಡದ ತಪ್ಪಿಗಾಗಿಜೈಲಿಗೆ ಹೋದಳು. ಅಲ್ಲಿಂದಾಚೆಗೆ ಚಲನಚಿತ್ರ ರಂಗದಿಂದಲೇ  ಕಣ್ಮರೆಯಾದಳು. 

ಈಕೆ 90ರ ದಶಕದ ದಕ್ಷಿಣ ಭಾರತದ ನಾಯಕ ನಟಿ. ತಮಿಳು ಮತ್ತು ತೆಲುಗು ಚಲನಚಿತ್ರಗಳಲ್ಲಿ ಮೋಹನ್ ಲಾಲ್, ಶರತ್‌ಕುಮಾರ್, ರಾಮ್‌ಕಿ, ವಿಜಯಕಾಂತ್, ಕಾರ್ತಿಕ್, ಜಯರಾಮ್ ಮತ್ತು ಇತರ ಹಲವಾರು ಹೀರೋಗಳೊಂದಿಗೆ ಕೆಲಸ ಮಾಡಿದವಳು. ಅವಳ ಹೆಸರು ವಿನೀತಾ. ಹಲವಾರು ನಟರು ಮತ್ತು ನಟಿಯರು ಸಿನಿಮಾದ ವೃತ್ತಿಜೀವನಕ್ಕೆ ಪ್ರವೇಶಿಸುವ ಮೊದಲು ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುತ್ತಾರೆ. ಅದೇ ರೀತಿ ಈಕೆಯ ಹುಟ್ಟು ಹೆಸರು ವಿನೀತಾ ಲಕ್ಷ್ಮಿ ಎಂದಿತ್ತು. ಆದರೆ ಸಿನಿಮಾಗಾಗಿ ವಿನೀತಾ ಎಂಬ ಹೆಸರನ್ನು ಮಾತ್ರ ಉಳಿಸಿಕೊಂಡಳು. 

1993ರಲ್ಲಿ ಬಿಡುಗಡೆಯಾದ ತೆಲುಗಿನ 'ಕಟ್ಟಬೊಮ್ಮನ್' ಚಿತ್ರದ ಮೂಲಕ ವಿನೀತಾ ಸಿನಿಮಾದಲ್ಲಿ ನಟನೆ ಶುರು ಮಾಡಿದಳು. ಈ ಚಿತ್ರದಲ್ಲಿ ಶರತ್‌ಕುಮಾರ್ ಜೊತೆ ನಟಿಸಿದ್ದಳು. ಇದು ಅವಳನ್ನು ಜನಪ್ರಿಯತೆಯತ್ತ ಕರೆದೊಯ್ದಿತು. ನಂತರ ಅರುಣ್ ಪಾಂಡಿಯನ್ ನಟಿಸಿದ 'ಊಝಿಯಾನ್' ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದಳು.

ಅವಳ ಇತರ ಗಮನಾರ್ಹ ಸಿನಿಮಾಗಳೆಂದರೆ ಪೆರಿಯಾ ಕುಟ್ಟಂ, ವಿಯೆಟ್ನಾಂ ಕಾಲೋನಿ, ಚಿನ್ನ ಜಮೀನ್ ಮತ್ತು ಮಿಸ್ಟರ್ ಮದ್ರಾಸ್. ಒಂದು ಕಾಲದಲ್ಲಿ ವಿನೀತಾ ತಮಿಳು ಮತ್ತು ತೆಲುಗು ಚಿತ್ರರಂಗದ ಅಗ್ರ ನಟಿಯಾಗಿದ್ದಳು. ತಮಿಳು ಮತ್ತು ತೆಲುಗು ಎರಡರಲ್ಲೂ ಸುಮಾರು 70 ಚಿತ್ರಗಳಲ್ಲಿ ಕೆಲಸ ಮಾಡಿರುವ ಬಹುಮುಖ ನಟಿ ಎಂದು ಪರಿಗಣಿಸಲ್ಪಟ್ಟಳು. ಸಣ್ಣ ಪಾತ್ರಗಳನ್ನೂ ಮಾಡಿದಳು, ಜೊತೆಗೆ ಗ್ಲಾಮರ್‌ನಿಂದಲೂ ಪ್ರೇಕ್ಷಕರನ್ನು ಮೆಚ್ಚಿಸಿದಳು. ಆದರೆ ಅವಳ ವೈಯಕ್ತಿಕ ಜೀವನದ ಒಂದು ಸಣ್ಣ ತಪ್ಪು ದೊಡ್ಡದಾಗಿ ಬೆಳೆದು ಅವಳ ವೃತ್ತಿಜೀವನವನ್ನು ನಾಶಮಾಡಿತು.

2003ರಲ್ಲಿ, ಆಕೆ ವೇಶ್ಯಾವಾಟಿಕೆಯಲ್ಲಿ ಪಾಲ್ಗೊಂಡಿದ್ದಾಳೆ ಎಂಬ ಅನುಮಾನದ ಮೇಲೆ ಆಕೆಯನ್ನು ಬಂಧಿಸಲಾಯಿತು, ಆಕೆಯ ಮನೆ ಮೇಲೆ ಪೊಲೀಸ್‌ ರೈಡ್‌ ಆಯಿತು.  ವಿನೀತಾ ಅವರ ಮೇಲೆ ವೇಶ್ಯಾವಾಟಿಕೆ ಆರೋಪ ಹೊರಿಸಲಾಗಿತ್ತು. ಸ್ವಲ್ಪ ಕಾಲ ಜೈಲಿನಲ್ಲಿರಬೇಕಾಯಿತು. ನಂತರ ಆಕೆಗೆ ಜಾಮೀನು ಏನೋ ದೊರೆಯಿತು. ತಾನು ಜೈಲಿನಿಂದ ಹೊರಬಂದ ನಂತರ, ಆಕೆ ಈ ಆರೋಪ ಸುಳ್ಳು ಎಂದು ವಾದಿಸಿದಳು. ಆಕೆಯ ಸಹೋದರನ ಕಾರಣದಿಂದಾಗಿ ಆಕೆ ಇದರಲ್ಲಿ ಸಿಕ್ಕಿಹಾಕಿಕೊಂಡಿದ್ದಳು. ಅವರ ಸಹೋದರ ಈ ಉದ್ಯಮದ ಭಾಗವಾಗಿದ್ದ. ಆದರೆ ಯಾರೂ ಆಕೆಯನ್ನು ನಂಬಲಿಲ್ಲ. ಆದರೆ ಈ ಒಂದು ಪ್ರಕರಣ ಆಕೆಯ ವೃತ್ತಿಜೀವನಕ್ಕೆ ಕಪ್ಪು ಮಸಿ ಬಳಿಯಿತು. ಜೈಲಿನಿಂದ ಬಿಡುಗಡೆಯಾದ ನಂತರ ಆಕೆ ಸುದೀರ್ಘ ವಿರಾಮ ಪಡೆದಳು.

ಮೊಮ್ಮಗನ ಸಾಲ, ಖ್ಯಾತ ನಟ ಶಿವಾಜಿ ಗಣೇಶನ್ ಮನೆ ಜಪ್ತಿಗೆ ಹೈಕೋರ್ಟ್ ಆದೇಶ!

ವಿಚಾರಣೆಯ ನಂತರ ಆಕೆ ನಿರಪರಾಧಿ ಎಂದು ಸಾಬೀತಾಯಿತು. ಆದರೆ ಅದೂ ಹಲವು ವರ್ಷಗಳ ನಂತರ. ಆಕೆ ವೇಶ್ಯಾವಾಟಿಕೆ ಎಂಬುದು ಸುದ್ದಿಯಾದಷ್ಟು, ಆಕೆ ನಿರಪರಾಧಿ ಎಂಬುದು ಸುದ್ದಿಯಾಗಲಿಲ್ಲ. ಈ ಪ್ರಕರಣ ಆಕೆಗೆ ಮಾನಸಿಕ ಯಾತನೆ ಉಂಟುಮಾಡಿತು.  ಆಕೆಯ ಐಡೆಂಟಿಟಿಯನ್ನು ಅದು ಶಾಶ್ವತವಾಗಿ ಕಳಂಕಿತಗೊಳಿಸಿತ್ತು. 8 ವರ್ಷಗಳ ಸುದೀರ್ಘ ವಿರಾಮದ ನಂತರ ಅವಳು 2008ರಲ್ಲಿ ಕಡಿಮೆ ಬಜೆಟ್ ಸಿನಿಮಾ 'ಎಂಗ ರಾಶಿ ನಲ್ಲ ರಾಶಿ'ಯಲ್ಲಿ ಪೋಷಕ ಪಾತ್ರದೊಂದಿಗೆ ಮತ್ತೆ ತೆರೆಗೆ ಬಂದಳು. ಆದರೆ ಜನ ಆಕೆಯನ್ನು ಅಷ್ಟರಲ್ಲಾಗಲೇ ಮರೆತುಬಿಟ್ಟಿದ್ದರು. 

ಮದುವೆಗೆ ಮುನ್ನ ದೈಹಿಕ ಸಂಬಂಧ ಸರೀನಾ? ಐಶ್ವರ್ಯಾ ರೈ ಹೇಳುವುದೇನು?
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?