ಮದುವೆಗೆ ಮುನ್ನ ದೈಹಿಕ ಸಂಬಂಧ ಸರೀನಾ? ಐಶ್ವರ್ಯಾ ರೈ ಹೇಳುವುದೇನು?

Published : Mar 04, 2025, 06:29 PM ISTUpdated : Mar 04, 2025, 07:10 PM IST
ಮದುವೆಗೆ ಮುನ್ನ ದೈಹಿಕ ಸಂಬಂಧ ಸರೀನಾ? ಐಶ್ವರ್ಯಾ ರೈ ಹೇಳುವುದೇನು?

ಸಾರಾಂಶ

ಮದುವೆಗೆ ಮುನ್ನ ದೈಹಿಕ ಸಂಬಂಧದ ಬಗ್ಗೆ ಐಶ್ವರ್ಯಾ ರೈ ಅವರ ಅಭಿಪ್ರಾಯವೇನು? ಭಾರತೀಯ ಸಂಸ್ಕೃತಿಯಲ್ಲಿ ಕುಟುಂಬದ ಮಹತ್ವ ಮತ್ತು ಮದುವೆಗೆ ಮುನ್ನ ದೈಹಿಕ ಸಂಬಂಧದ ಬಗ್ಗೆ ಅವರು ಆಡಿದ ಮಾತುಗಳು ಇಲ್ಲಿವೆ.

ಮದುವೆಗೆ ಮುನ್ನ ಯುವಕ- ಯುವತಿ ದೈಹಿಕ ಸಂಬಂಧ ಹೊಂದುವುದು ಎಷ್ಟು ಸರಿ? ಬಾಲಿವುಡ್‌ನ ಅತ್ಯಂತ ಸುಂದರ ನಟಿ, ತನ್ನ ಕಣ್ಣುಗಳಿಂದಲೇ ಚಿತ್ರರಸಿಕರನ್ನು  ಮೋಡಿ ಮಾಡಿದ ಚೆಲುವೆ, ನಟನೆಯಿಂದ ಮಾತ್ರವಲ್ಲದೆ ವಿನಮ್ರ ಸ್ವಭಾವದಿಂದಲೂ ಜನರ ಹೃದಯಗಳನ್ನು ಗೆದ್ದ ಐಶ್ವರ್ಯಾ ರೈ ಬಚ್ಚನ್‌ ಈ ಬಗ್ಗೆ ಏನು ಹೇಳುತ್ತಾರೆ? ಬಾಲಿವುಡ್ ಉದ್ಯಮದಲ್ಲಿ ಬುದ್ಧಿವಂತ ಸುಂದರಿ ಎಂದು ಕರೆಯಲ್ಪಡುವ ನಟಿ ಐಶ್ವರ್ಯಾ ರೈ, ಬಾಲಿವುಡ್‌ನಲ್ಲಿ ಮಾತ್ರವಲ್ಲದೆ ವಿಶ್ವದಲ್ಲೂ ತಮ್ಮ ವಿಶೇಷ ಗುರುತನ್ನು ಮೂಡಿಸಿದ್ದಾರೆ. ಐಶ್ವರ್ಯಾ ರೈ ಅವರ ಹೆಸರು ವಿಶ್ವದ ಅಗ್ರ ನಟಿಯರಲ್ಲಿ ಸೇರಿದೆ. 1997ರ 'ಪ್ಯಾರ್ ಹೋ ಗಯಾ' ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಐಶ್ವರ್ಯಾ ರೈ, 27 ವರ್ಷಗಳಿಗೂ ಹೆಚ್ಚು ಕಾಲ ಚಲನಚಿತ್ರ ಕೆರಿಯರ್‌ನಲ್ಲಿ ಇದ್ದಾರೆ. ಈಗ ಚಲನಚಿತ್ರಗಳಲ್ಲಿ ನಟಿಸುವುದು ವಿರಳವಾಗಿದ್ದರೂ, ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಜಾಹಿರಾತು ಮತ್ತಿತರೆಡೆಗಳಿಂದ ಗಳಿಸುತ್ತಾರೆ. ಐಶ್ವರ್ಯಾ ಅವರ ಬುದ್ಧಿವಂತಿಕೆ, ಸ್ಮಾರ್ಟ್‌ನೆಸ್‌ ಬಗ್ಗೆ ಹಲವು ಕತೆಗಳಿವೆ. ಸಂಕೀರ್ಣವಾದ ಪ್ರಶ್ನೆಗಳಿಗೆ ಸಹ ಅವರು ತುಂಬಾ ಸುಂದರವಾಗಿ ಉತ್ತರಿಸುತ್ತಾರೆ. ದಿ ಓಪ್ರಾ ವಿನ್‌ಫ್ರೇ ಶೋನಲ್ಲಿ ಅವರನ್ನು ಕೇಳಿದ ಅಂತಹ ಒಂದು ವಿವಾದಾತ್ಮಕ ಪ್ರಶ್ನೆಗೆ ಬಹಳ ಆಕರ್ಷಕವಾಗಿ ಐಶ್‌ ಉತ್ತರಿಸಿದರು.

ಭಾರತದಲ್ಲಿ ಪ್ರೀತಿ ಮತ್ತು ವಾತ್ಸಲ್ಯವನ್ನು ಏಕೆ ಸಾರ್ವಜನಿಕವಾಗಿ ತೋರಿಸುವುದಿಲ್ಲ ಎಂಬ ಪ್ರಶ್ನೆಯನ್ನು ಐಶ್ವರ್ಯಾ ಅವರಿಗೆ ಕೇಳಲಾಯಿತು. ಹೌದು, ಇದು ಭಾರತದಲ್ಲಿ ಸಾಮಾನ್ಯವಾಗಿ ಸಾರ್ವಜನಿಕವಾಗಿ ನೋಡಲಾಗದ ಅಥವಾ ಮಾಡಲಾಗದ ವಿಷಯ. ಆದರೆ ಇದು ತೀರ ಖಾಸಗಿ ಭಾವನೆ. ಜನರು ಬೀದಿಗಳಲ್ಲಿ ಚುಂಬಿಸುವುದನ್ನು ನೀವು ನಮ್ಮಲ್ಲಿ ನೋಡುವುದಿಲ್ಲ. ಕಲೆ ಜೀವನವನ್ನು ಪ್ರತಿಬಿಂಬಿಸುತ್ತದೆ ಮತ್ತು ಹೀಗಾಗಿ ಹಿಂದಿ ಸಿನಿಮಾ ಕೂಡ ಅದನ್ನು ಅದೇ ರೀತಿಯಲ್ಲಿ ತೋರಿಸುತ್ತದೆ ಎಂದರು ಐಶ್.

ಅದೇ ಸಂದರ್ಶನದಲ್ಲಿ, ಐಶ್ವರ್ಯಾ ಅವರನ್ನು‌, ಭಾರತದಲ್ಲಿ ಮದುವೆಗೆ ಮುನ್ನ ದೈಹಿಕ ಸಂಬಂಧ ಹೊಂದುವುದನ್ನು ನಿಷಿದ್ಧವೆಂದು ತೋರಿಸಲಾಗುತ್ತದಲ್ಲಾ ಯಾಕೆ ಎಂದು ಕೇಳಲಾಯಿತು. ಇದರ ಬಗ್ಗೆಯೂ ಐಶ್‌  ಪ್ರಬುದ್ಧವಾಗಿ ಉತ್ತರಿಸಿದಳು. ಭಾರತೀಯ ಸಂಸ್ಕೃತಿಯನ್ನು ವಿವರಿಸಿದಳು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅದು ವೈವಾಹಿಕ ಜೀವನಕ್ಕೆ ಒಳ್ಳೆಯದಲ್ಲ ಎಂದಳು. ಭಾರತೀಯ ಸಮಾಜದಲ್ಲಿ ಜನ ಕುಟುಂಬಕ್ಕೆ ಪ್ರಾಮುಖ್ಯತೆ ನೀಡುತ್ತಾರೆ. ಇದು ಈ ದೇಶದ ವಿಶೇಷತೆ. ಕುಟುಂಬದೊಂದಿಗೆ ವಾಸಿಸುವುದು ಮತ್ತು ಪರಸ್ಪರ ಸಂಪರ್ಕದಲ್ಲಿರುವುದು ತುಂಬಾ ಒಳ್ಳೆಯದು ಎಂದು ಜನ ಭಾವಿಸುತ್ತಾರೆ ಎಂದರು.

ನಿಮಗೆ ಗೊತ್ತಿರಬಹುದು, ಅಭಿಷೇಕ್‌ ಬಚ್ಚನ್‌ ಜೊತೆಗೆ ಮದುವೆಗೆ ಮೊದಲು ಐಶ್ವರ್ಯಾ ಅವರ ಹೆಸರು ಇತರ ಹಲವು ನಟರೊಂದಿಗೆ ಸಂಬಂಧ ಹೊಂದಿತ್ತು. ಐಶ್ವರ್ಯಾ ಸಲ್ಮಾನ್ ಖಾನ್ ಅವರೊಂದಿಗೆ ಹೆಚ್ಚು ಸುದ್ದಿಯಲ್ಲಿದ್ದಳು. ಆದರೆ ಈ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಸಲ್ಮಾನ್ ಜೊತೆಗಿನ ಬ್ರೇಕಪ್‌ ನಂತರ, ಐಶ್ ತುಸು ಕಾಲ ಖಿನ್ನರಾದರು. ಒಂಟಿತನ ಅನುಭವಿಸಿದರು. ಆ ಸಮಯದಲ್ಲಿ ವಿವೇಕ್ ಒಬೆರಾಯ್ ಅವಳಜೊತೆಗಿದ್ದ. ನಂತರ ಈ ಇಬ್ಬರೂ ಸಹ ಬೇರ್ಪಟ್ಟರು. 

ದೇಶದ ಮಹಾನ್ ಶ್ರೀಮಂತನ ಬುಟ್ಟಿಗೆ ಬಿದ್ದಿದ್ದ ಐಶ್ವರ್ಯಾ ರೈ! ಯಾರವನು ಜಗತ್ತು ಕಂಡ ಕುಬೇರ ಮುಂದೇನಾಯ್ತು?

ನಂತರ ಅಭಿಷೇಕ್ ಬಚ್ಚನ್ ಐಶುವಿನ ಜೀವನದಲ್ಲಿ ಬಂದರು. ಐಶ್ವರ್ಯ ಅಭಿಷೇಕ್‌ಗಿಂತ 3 ವರ್ಷ ದೊಡ್ಡವರು. ಆದರೆ ಅವರ ಪ್ರೀತಿಯಲ್ಲಿ ಅವರ ವಯಸ್ಸು ಎಂದಿಗೂ ಅಡ್ಡ ಬರಲಿಲ್ಲ. ಅಭಿಷೇಕ್ ಮತ್ತು ಆಶ್ ಮೊದಲ ಬಾರಿಗೆ 2000ನೇ ಇಸವಿಯಲ್ಲಿ 'ಧಾಯಿ ಅಕ್ಷರ್ ಪ್ರೇಮ್ ಕೆ' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಆರಂಭದಲ್ಲಿ ಇಬ್ಬರೂ ಸ್ನೇಹಿತರಾಗಿದ್ದರು. ನಿಧಾನವಾಗಿ ಅವರು ಹತ್ತಿರವಾದರು. ಅವರ ಪ್ರೇಮಕಥೆ ಸುದ್ದಿಗಳಲ್ಲಿ ಬರಲು ಪ್ರಾರಂಭಿಸಿತು. ಇಬ್ಬರೂ 2007ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು ಮತ್ತು ಅದೇ ವರ್ಷ ವಿವಾಹವಾದರು. ಇತ್ತೀಚೆಗೆ ಅವರ ಡೈವೋರ್ಸ್‌ ಹತ್ತಿರದಲ್ಲಿದೆ ಎಂಬ ಸುದ್ದಿ ಕೂಡ ಬರುತ್ತಿದೆ. ಇದು ನಿಜವಾಗದಿರಲಿ ಎಂದು ಕೂಡ ಜನ ಹಾರೈಸುತ್ತಿದ್ದಾರೆ. 

ಬಾಲಿವುಡ್‌ ನಲ್ಲಿ ಮತ್ತೊಂದು ಬ್ರೇಕ್ ಅಪ್, ಬೇರೆಯಾದ ತಮನ್ನಾ – ವಿಜಯ್ ವರ್ಮ?
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಯಾವುದೇ ಹಿನ್ನೆಲೆ ಇಲ್ಲದೆ ಸ್ಟಾರ್ ಆದ ನಟ.. ಮಗ ಹುಟ್ಟಿದಾಗ ಜಾತಕ ಹೇಳಿದ್ರು ಚಿರಂಜೀವಿ: ಅಷ್ಟಕ್ಕೂ ಯಾರು ಆ ಹೀರೋ?
ಮದುವೆ ಬಳಿಕ ಹನಿಮೂನ್ ಕ್ಯಾನ್ಸಲ್ ಮಾಡಿದ ಸಮಂತಾ? ಈ ಹೊಸ ನಿರ್ಧಾರ ತಗೊಂಡು ಶಾಕ್ ಕೊಟ್ಟಿದ್ಯಾಕೆ?