ಹೀರೊಗಳು ಕರೆದಕೂಡ್ಲೇ ಕೋಣೆಗೆ ಹೋಗ್ಬೇಕು- ಬಾಲಿವುಡ್​ ಕರಾಳ ಮುಖ ಬಿಚ್ಚಿಟ್ಟ Kangana Ranaut

By Suvarna News  |  First Published Mar 1, 2023, 10:08 AM IST

ಕಳೆದ ಕೆಲ ದಿನಗಳಿಂದ ಬಾಲಿವುಡ್​ನ ಒಂದೊಂದೇ ಕರಾಳ ಮುಖಗಳನ್ನು ಬಿಚ್ಚಿಡುತ್ತಿರುವ ನಟಿ ಕಂಗನಾ ರಣಾವತ್​, ತಮ್ಮನ್ನು ಹುಚ್ಚಿ ಎಂದು ಏಕೆ ಕರೆಯುತ್ತಾರೆ ಎನ್ನುವ ಭಯಾನಕ ಸತ್ಯ ಬಿಚ್ಚಿಟ್ಟಿದ್ದಾರೆ. ಏನದು?​ 


ಕಾಂಟ್ರವರ್ಸಿ ಕ್ವೀನ್​ (Contraversay Queen) ಎಂದೇ ಹೆಸರು ಮಾಡಿರುವ ನಟಿ ಕಂಗನಾ ರಣಾವತ್​ (Kangana Ranaut) ಸದಾ ಒಂದಿಲ್ಲೊಂದು ವಿಷಯಗಳ ಕುರಿತು ಚರ್ಚೆಯಲ್ಲಿ ಇರುತ್ತಾರೆ. ಇದ್ದದ್ದನ್ನು ನೇರಾನೇರ ಹೇಳುವ ಈಕೆ ಹಲವರಿಗೆ ಫೆವರೆಟ್​ ತಾರೆ. ಯಾವುದೇ ಅಳುಕೂ ಇಲ್ಲದೇ, ಕಂಡದ್ದನ್ನು ಹೇಳುವ ಮೂಲಕ ಇವರು ಅನೇಕ ಬಾರಿ ಟ್ರೋಲ್​ ಆಗಿದ್ದೂ ಇದೆ.  ಈ ಹಿಂದೆ ಕೂಡ ಬಾಲಿವುಡ್​ನ ಕರಾಳ ಕಹಿ ಸತ್ಯಗಳನ್ನು ನಟಿ ಶೇರ್​ ಮಾಡಿಕೊಂಡಿದ್ದರು. ಇದೀಗ  ತಮ್ಮನ್ನು ಹುಚ್ಚಿ (Mad) ಎಂದು ಕರೆದು, ಜೈಲಿಗೆ ಕಳುಹಿಸುವ ಹುನ್ನಾರ ನಡೆಸಿರುವ ಬಗ್ಗೆ ಅವರು ಮಾತನಾಡಿದ್ದು, ಬಾಲಿವುಡ್​ನ ಇನ್ನಷ್ಟು ಭಯಾನಕ ಮುಖವಾಡವನ್ನು ಕಳಚಿದ್ದಾರೆ.  

ಈ ಹಿಂದೆ ಬಾಲಿವುಡ್ (Bollywood) ಅನ್ನು ಮಾಫಿಯಾ ಗ್ಯಾಂಗ್ ಎಂದು ಟೀಕಿಸಿದ್ದ ನಟಿ ಈಗ ಬಾಲಿವುಡ್​ನಲ್ಲಿ ಅವಕಾಶಕ್ಕೆ ನಟಿಯರನ್ನು ಹೇಗೆಲ್ಲಾ ಬಳಸಿಕೊಳ್ಳಲಾಗುತ್ತಿದೆ ಎಂಬ ಬಗ್ಗೆ ಸೂಚ್ಯವಾಗಿ ತಿಳಿಸಿದ್ದಾರೆ. ಇದಾಗಲೇ ಹಲವು ನಟಿಯರು ಕಾಸ್ಟ್​ ಕೌಚಿಂಗ್​ ಕುರಿತು ತಮಗಾಗಿರುವ ಕರಾಳ ಅನುಭವಗಳನ್ನು ಬಿಚ್ಚಿಡುತ್ತಿರುವ ನಡುವೆಯೇ ನಟಿ ಕಂಗನಾ ಅವರ ಮಾತು ಈಗ ಬಹಳ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ನಟಿ ಟ್ವೀಟ್​ (Tweet) ಮೂಲಕ ಗಂಭೀರ ಆರೋಪಗಳನ್ನು ಮಾಡಿದ್ದಾರೆ. 'ಬಾಲಿವುಡ್‌ನ ಹೀರೊಗಳ ರೂಮಿಗೆ ಹೋಗುವಂತೆ ಹಲವು ಬಾರಿ ನನ್ನನ್ನು ಒತ್ತಾಯ ಮಾಡುತ್ತಿದ್ದರು. ಅದನ್ನು ಒಪ್ಪದೆ ಇದ್ದಾಗ, ನನ್ನನ್ನು ಹುಚ್ಚಿ ಎಂದು ಕರೆದರು' ಎಂದಿದ್ದಾರೆ. 'ಬಾಲಿವುಡ್ ಗ್ಯಾಂಗ್ ನನ್ನ ವರ್ತನೆಯನ್ನು ಅಹಂಕಾರವೆಂದು ಕರೆಯಿತು. ಯಾಕೆಂದರೆ  ನಾನು ಬೇರೆ ಹುಡುಗಿಯರ ಹಾಗೆ ಮುಗುಳುನಗೆ ಬೀರಲಿಲ್ಲ, ಐಟಂ ಸಾಂಗ್ (Item Song) ಮಾಡಲಿಲ್ಲ, ಮದುವೆಯಲ್ಲಿ ಕುಣಿಯಲಿಲ್ಲ, ರಾತ್ರಿ ಹೊತ್ತಲ್ಲಿ ಹೀರೊಗಳು ಕರೆದ ಕೂಡಲೇ ಅವರ ಕೋಣೆಗೆ ಹೋಗುವುದನ್ನು ಸರಾಸಗಟಾಗಿ ತಿರಸ್ಕರಿಸಿದ್ದೆ. ಇದಕ್ಕೆ ನಾನು ಅವರ ಬಾಯಲ್ಲಿ ಹುಚ್ಚಿಯಾದೆ' ಎಂದಿದ್ದಾರೆ.

Tap to resize

Latest Videos

ದಾದಾಸಾಹೇಬ್​ ಫಾಲ್ಕೆ ಪ್ರಶಸ್ತಿಯಲ್ಲಿ ನೆಪೋಟಿಸಂ ಮಾಫಿಯಾ: ಕಂಗನಾ ಗರಂ!

ಈ ವರ್ತನೆಯ ವಿರುದ್ಧ ನನ್ನನ್ನು ಜೈಲಿಗೆ ಕಳಿಸುತ್ತಾರೆಯೇ? ತಮ್ಮನ್ನು ತಾವು ಸುಧಾರಣೆ ಮಾಡಿಕೊಳ್ಳುವುದನ್ನು ಬಿಟ್ಟು, ನನ್ನನ್ನು ಸುಧಾರಣೆ ಮಾಡುವುದಕ್ಕೆ ಬರುತ್ತಿದ್ದಾರೆ.  ನನಗೋಸ್ಕರ ಏನೂ ಬೇಡ. ನಾನು ನನ್ನದೆಲ್ಲ ಆಸ್ತಿಯನ್ನು ಅಡವಿಟ್ಟು ಒಂದು ಸಿನಿಮಾ ಮಾಡಿದ್ದೇನೆ. ರಕ್ಷಸರ ನಿರ್ನಾಮ ಆಗುತ್ತೆ. ತಲೆಗಳು ಉರುಳುತ್ತವೆ. ಯಾರೂ ನನ್ನನ್ನು ದೂಷಿಸಬೇಡಿ ಎಂದು ಕಂಗನಾ ಟ್ವೀಟ್ ಮೂಲಕ ಕಿಡಿ (Angry) ಕಾರಿದ್ದಾರೆ. ಬಾಲಿವುಡ್ (Bollywood) ಮಾಫಿಯಾ ಬಗ್ಗೆ ನಾನು ಹೆಚ್ಚೆಚ್ಚು ಮಾತನಾಡಲು ಶುರು ಮಾಡಿದೆ. ಇದೊಂದು ದೊಡ್ಡ ಮಾಫಿಯಾ. ಅವರು ಹೇಳಿದಂತೆ ಕೇಳಿದರೆ ಮಾತ್ರ ಬದುಕಲು ಸಾಧ್ಯ. ಅವರ ವಿರುದ್ಧ ಈಜುತ್ತೇನೆ ಎಂದರೆ ತೊಂದರೆಗಳು ಶುರುವಾಗುತ್ತವೆ. ನಾನು ತೊಂದರೆಗಳನ್ನು ಅನುಭವಿಸಿದ್ದೇ ಅವರ ವಿರುದ್ಧ ಮಾತನಾಡಿದೆ ಎನ್ನುವ ಕಾರಣಕ್ಕಾಗಿ. ನಾನು ಬೇರೆಯ ಹುಡುಗಿಯರ ತರಹ ಅಲ್ಲ. ಹಾಗಾಗಿ ನನ್ನನ್ನು ದುರಂಹಕಾರಿ ಅಂತಾನೂ ಕರೆದರು ಎನ್ನುತ್ತಾರೆ ಕಂಗನಾ. 

ಈ ಟ್ವೀಟ್​ಗೂ ಆಕೆಯನ್ನು ಟ್ರೋಲ್​ (Troll) ಮಾಡುತ್ತಿದ್ದಾರೆ. ಚಿತ್ರಗಳು ಒಂದರ ಹಿಂದೆ ಒಂದು ಸೋಲುತ್ತಿರುವ ಹಿನ್ನೆಲೆಯಲ್ಲಿ ಹೀಗೆ ಮಾತನಾಡುತ್ತಿರುವಿರಿ. ಇಂಥ ಹಳೆಯ ಸ್ಟೈಲ್​ ಬಿಟ್ಟು ಹೊಸತು ಏನಾದರೂ ಇದ್ದರೆ ಮಾಡಿ ಎಂದು ನಟಿಯ ಕಾಲೆಳೆದಿದ್ದಾರೆ.  

ಪ್ರತಿದಿನ ನನ್ನ ತಾಯಿ ಹೊಲದಲ್ಲಿ ಕೆಲಸ ಮಾಡ್ತಾಳೆ; ಸಿನಿಮಾ ಮಾಫಿಯಾ ಗ್ಯಾಂಗ್ ವಿರುದ್ಧ ಕಂಗನಾ ಕಿಡಿ
 

Bhikhari film mafia ne mere attitude to mera arrogance kaha, kyunki main dusari ladkiyon ki tarah giggle karna, item number karna, shaadiyon pe nachna, raat ko bulaaye jaane pe heros ke kamron mein jana yeh sab keliye saaf mana kiya, they declared me mad and tried to jail me1/2

— Kangana Ranaut (@KanganaTeam)
click me!