ಒಂದ್ರೂಪಾಯಿ ಖರ್ಚ್‌ ಮಾಡಲ್ಲ, ತಿಂಗಳ ಬಿಲ್ ಕಟ್ಟಿದರೆ ಲವ್ ಫ್ರೀ: ಹಣದ ಹಿಂದೆ ಬಿದ್ದ ನೋರಾ ಫತೇಹಿ ಎಂದು ಕಾಲೆಳೆದ ನೆಟ್ಟಿಗರು

By Vaishnavi ChandrashekarFirst Published Mar 1, 2023, 9:17 AM IST
Highlights

ನಟಿ ನೋರಾ ಫತೇಹಿನ ಡೇಟ್ ಮಾಡಬೇಕು ಅಂದ್ರೆ ಹುಡುಗರು ಈ ಸಿಂಪಲ್ ಕೆಲಸ ಮಾಡಬೇಕಂತೆ. ಕಪಿಲ್ ಶರ್ಮಾ ಶೋನಲ್ಲಿ ಶಾಕಿಂಗ್ ಹೇಳಿಕೆ...

ಹಾಟ್‌ ಲುಕ್‌ ಹಾಟ್‌ ಡಾನ್ಸ್‌ ಹಾಟ್‌ ಗರ್ಲ್‌...ಒಟ್ಟಾರೆ ಬಾಲಿವುಡ್‌ ಹಾಟ್‌ ಎಂದು ಹೆಸರು ಪಡೆದಿರುವ ನೋರಾ ಫತೇಹಿ ಹಿಂದಿ ಜನಪ್ರಿಯ ಕಿರುತೆರೆ ಕಾಮಿಡಿ ಕಾರ್ಯಕ್ರಮ ದಿ ಕಪಿಲ್ ಶರ್ಮಾ ಶೋನಲ್ಲಿ ಅಕ್ಷಯ್ ಕುಮಾರ್, ದಿಶಾ ಪಟಾಣಿ, ಮೌನಿ ರಾಯ್‌ ಮತ್ತು ಸೋನಂ ಬಜ್ವಾ ಜೊತೆ ಭಾಗಿಯಾಗಿದ್ದಾರೆ. ಈ ವೇಳೆ ಹುಡುಗರು ನನ್ನ ಬಿಲ್ ಕಟ್ಟಬೇಕು ಎಂದು ನೋರಾ ನೀಡಿರುವ ಹೇಳಿಕೆ ಸಖತ್ ವೈರಲ್ ಆಗುತ್ತಿದೆ. ಈ ಹಿಂದೆ ಉದ್ಯಮಿ ಸುಕೇಶ್ ಚಂದ್ರಶೇಖರ್‌ ಜೊತೆ ಹೆಸರು ಕೇಳಿ ಬರುತ್ತಿದ್ದು ಬಾಯ್‌ಫ್ರೆಂಡ್‌ ಆದರೆ ದೊಡ್ಡ ಮನೆ ಮತ್ತು ಐಷಾರಾಮಿ ಜೀವನದ ಪ್ರತಿಯೊಂದು ಖರ್ಚನ್ನು ನೋಡಿಕೊಳ್ಳುವುದಾಗಿ ಮಾತು ಕೊಟ್ಟಿದ್ದರಂತೆ. ನೋರಾ ಬಾಯ್‌ಫ್ರೆಂಡ್‌ನಿಂದ ಹಣ ಪಡೆದು ಮೊರಾಕೊದಲ್ಲಿ ಫ್ಯಾಮಿಲಿ ಮನೆ ಗಿಫ್ಟ್‌ ಮಾಡಿದ್ದಾರೆ ಎಂದು ತನಿಖೆಯಲ್ಲಿ ಸುಕೇಶ್ ಆರೋಪ ಮಾಡಿದ್ದರು. 

ಅದು ಬಿಡಿ, ಈಗ ನೋರಾ ಫತೇಹಿ ಕಪಿಲ್ ಶರ್ಮಾ ಕಾರ್ಯಕ್ರಮದಲ್ಲಿ ನೀಡಿರುವ ಹೇಳಿಕೆ ಸಖತ್ ವೈರಲ್ ಅಗುತ್ತಿದೆ. ಕಪಿಲ್ ಶರ್ಮಾ ಶೋ ಸೇಮ್‌ ನಮ್ಮ ಕನ್ನಡದ ಮಜಾ ಟಾಕೀಸ್‌ ರೀತಿ ಇರುತ್ತದೆ. ಸೃಜನ್ ಲೋಕೇಶ್ ಜಾಗದಲ್ಲಿ ಕಪಿಲ್‌ ಶರ್ಮಾ ಇರುತ್ತಾರೆ, ಇಂದ್ರಜಿತ್ ಲಂಕೇಶ್ ಜಾಗದಲ್ಲಿ ಅರ್ಚನಾ ಪುರಾನ್ ಸಿಂಗ್ ಇರುತ್ತಾರೆ ಅಷ್ಟೆ. ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಕಿಪಿಲ್ ಶರ್ಮಾ ಹೇಳುತ್ತಾರೆ 'ನೋರಾನ ಇಂಪ್ರೆಸ್‌ ಮಾಡಿ ಲವ್ ಮಾಡುವುದು ಸುಲಭ ಏಕೆಂದರೆ ಆಕೆಯನ್ನು ಡೇಟ್‌ಗೆ ಕರೆದುಕೊಂಡು ಹೋಗಿ ನೀವು ಬಿಲ್ ಪೇ ಮಾಡಿದರೆ ಸಾಕು ಅವರನ್ನು ಇಷ್ಟ ಪಡುತ್ತಾರೆಂದು'. ತಕ್ಷಣವೇ ಅರ್ಚನಾ 'ಯಾಕೆ ನೋರಾ ಈ ರೀತಿ ಮಾಡುವುದು? ಪ್ರಪಂಚ ಬದಲಾಗಿದೆ ಹೆಣ್ಣುಮಕ್ಕಳು ಬಿಲ್ ಪೇ ಮಾಡಲು ಶುರು ಮಾಡಿದ್ದಾರೆ ನೀನು ಈ ರೀತಿ ಹೇಳಬಾರದು' ಎನ್ನುತ್ತಾರೆ. ಅಲ್ಲಿಗೆ ಸುಮ್ಮನಾಗದ ನೋರಾ 'ಅರ್ಚನಾ ನೀನು ಬೇಕಿದ್ದರೆ ಬಿಲ್ ಕಟ್ಟು ನಾನು ಮಾತ್ರ ಕಟ್ಟುವುದಿಲ್ಲ ನನಗೆ ಹುಡುಗರೇ ಬಿಲ್‌ ಕಟ್ಟಬೇಕು' ಎಂದು ಹೇಳಿಕೆ ನೀಡಿದ್ದಾರೆ. ಕಾರ್ಯಕ್ರಮ ನೋಡಲು ಭಾಗಿಯಾಗಿದ್ದ ಸಾರ್ವಜನಿಕರು ನಗುವುದಕ್ಕೆ ಶುರು ಮಾಡುತ್ತಾರೆ.

Latest Videos

ನೋರಾ ಜೊತೆ ಅಕ್ಷಯ್ ಕುಮಾರ್ ರೊಮ್ಯಾಂಟಿಕ್ ಡಾನ್ಸ್; ಟ್ವಿಂಕಲ್‌ ಖನ್ನಾಗೆ ಟ್ಯಾಗ್ ಮಾಡಿ ಕಾಲೆಳೆದ ಫ್ಯಾನ್ಸ್

ನೋರಾ ಯಾರು?

ಡ್ಯಾನ್ಸರ್‌ ಕಮ್‌ ಆ್ಯಕ್ಟರ್ ನೋರಾ ಫತೇಹಿ ತನ್ನ ಸೆಕ್ಸಿ ಡ್ಯಾನ್ಸ್‌ ಮೂವ್‌ಗಳಿಗೆ ಫೇಮಸ್‌. ನೋರಾ ತಮ್ಮ ಸೋಶಿಯಲ್‌ ಮೀಡಿಯಾ ಪೇಜ್‌ನಲ್ಲಿ ಆಗಾಗ ಶೇರ್‌ ಮಾಡುವ ಅದ್ಭುತ ಫೋಟೋಶೂಟ್‌ಗಳಿಗೆ ಹೆಸರುವಾಸಿಯಾಗಿದ್ದಾರೆ.ಬಿ ಟೌನ್‌ನಲ್ಲಿ ಈ ಸ್ಥಾನವನ್ನು ಸಾಧಿಸಲು ನೋರಾ ಜೀವನದಲ್ಲಿ ತುಂಬಾ ಶ್ರಮಿಸಿದ್ದಾರೆ. ಬಿಗ್ ಬಾಸ್ 9 ಮತ್ತು ಜಲಕ್ ದಿಖ್ಲಾ ಜಾ 9 ರ ಭಾಗವಾಗಿದ್ದರು. ಈಗ ಅವರು ಡ್ಯಾನ್ಸ್ ಪ್ಲಸ್ 4, ಇಂಡಿಯಾಸ್‌ ಬೆಸ್ಟ್‌ ಡ್ಯಾನ್ಸರ್ ಮತ್ತು ಡ್ಯಾನ್ಸ್ ದೀವಾನೆ (ಸೀಸನ್ 3) ನಂತಹ ಅನೇಕ ಡ್ಯಾನ್ಸ್ ರಿಯಾಲಿಟಿ ಶೋಗಳಿಗೆ ತೀರ್ಪುಗಾರರಾಗಿದ್ದಾರೆ.ಬಾಲಿವುಡ್‌ ಹೊರತು ಪಡಿಸಿ ನಟಿ ಟೆಂಪರ್, ಶೇರ್, ಲೋಫರ್, ಬಾಹುಬಲಿ: ದಿ ಬಿಗಿನಿಂಗ್ ಮೊದಲಾದ ಹಲವು ತೆಲುಗು ಚಿತ್ರಗಳಲ್ಲಿ ಕೂಡ ಕೆಲಸ ಮಾಡಿದ್ದಾರೆ. ಅಂತಹ ಕಡಿಮೆ ಅವಧಿಯಲ್ಲಿ, ಕೆರಿಯರ್‌ನಲ್ಲಿ ನೆಲೆಕಂಡು ಕೊಳ್ಳುವಲ್ಲಿ ನೋರಾ ಯಶಸ್ವಿಯಾಗಿದ್ದಾರೆ.

ಕ್ರಾಪ್ ಟಾಪ್- ಸ್ಕರ್ಟ್ ಧರಿಸಿ ಕುಣಿದು ಕುಪ್ಪಳಿಸಿದ ನೋರಾ; ಇಲ್ಲಿವೆ ಹಾಟ್ ಸುಂದರಿಯ ಹುಟ್ಟುಹಬ್ಬ ಆಚರಣೆ ಫೋಟೋಗಳು

ನನ್ನ ಮೊದಲ ಕೆಲಸವೆಂದರೆ ನನ್ನ ಹೈಸ್ಕೂಲ್‌ ಪಕ್ಕದಲ್ಲಿದ್ದ ಮಾಲ್‌ನಲ್ಲಿ ರಿಟೈಲ್‌ ಸೇಲ್ಸ್ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದೆ. ಹಾಗಾಗಿ ನಾನು ನನ್ನ ತರಗತಿಗಳನ್ನು ಮುಗಿಸಿ ಅಲ್ಲಿಗೆ ಹೋಗುತ್ತಿದ್ದೆ. ಆಗ ನನ್ನ ವಯಸ್ಸು 16. ನಾನು ಅನೇಕ ಕಾರಣಗಳಿಗಾಗಿ ಕೆಲಸ ಮಾಡಬೇಕಾಗಿತ್ತು. ನನ್ನ ಕುಟುಂಬದಲ್ಲಿ ಸಾಕಷ್ಟು ಹಣಕಾಸಿನ ಸಮಸ್ಯೆಗಳಿದ್ದವು. ಅದ್ದರಿಂದ ದುಡಿಯಲು ಪ್ರಾರಂಭಿಸಿದೆ,' ಎಂದು ನೋರಾ ಹೇಳಿದ್ದರು.


 

click me!