
ತೆಲುಗು ಚಿತ್ರರಂಗದಲ್ಲಿ ಎಲ್ಲರಿಗೂ ಮೆಚ್ಚುಗೆಯಾಗುವ ನಟರಲ್ಲಿ ನಾಗ ಶೌರ್ಯ ಒಬ್ಬರು. ಇಂದು ಸ್ವಲ್ಪ ವಿವಾದದಿಂದ ಸುದ್ದಿಯಲ್ಲಿದ್ದಾರೆ.
ಯುವ ನಟ ನಾಗಶೌರ್ಯ ರಿಯಲ್ ಹೀರೋ ಅನ್ನಿಸಿಕೊಂಡಿದ್ದಾರೆ. ರಸ್ತೆಯಲ್ಲಿ ಯುವತಿಯ ಮೇಲೆ ಯುವಕನೊಬ್ಬ ಹೊಡೆದಿದ್ದನ್ನು ಕಂಡ ನಾಗಶೌರ್ಯ(Naga Shourya) ಆಕೆಗೆ ಯಾಕೆ ಹೊಡೆಯುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೇಲಾಗಿ ಶೌರ್ಯ ಯುವತಿಗೆ ಹೊಡೆದಿದ್ದು ತಪ್ಪಾಗಿದ್ದು, ಕ್ಷಮೆ ಕೇಳಬೇಕು ಎಂದು ಯುವಕನೊಂದಿಗೆ ಜಗಳವಾಡಿದರು.
ಪ್ರೇಮಿಗಳಿಬ್ಬರು ರಸ್ತೆಯಲ್ಲಿ ಜಗಳ ಮಾಡಿಕೊಂಡಿದ್ದರು. ಈ ವೇಳೆ ಯುವಕ ಯುವತಿಯನ್ನು ಎಳೆದಾಡಿ ಕೆನ್ನೆಗೆ ಬಾರಿಸಿದ್ದಾನೆ. ಅದೇ ವೇಳೆಗೆ ಕಾರಿನಲ್ಲಿ ಹೋಗುತ್ತಿದ್ದ ನಾಗಶೌರ್ಯ ಇದನ್ನು ಗಮನಿಸಿ ಆ ಹುಡುಗಿಗೆ ಯಾಕೆ ಹೊಡೆದೆ? ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಯುವಕ ಆಕೆ ನನ್ನ ಲವರ್ ನನ್ನ ಇಷ್ಟ ಎಂದು ಹೇಳುವ ಮೂಲಕ ಅತಿಯಾಗಿ ವರ್ತಿಸಿದನು. ಇದಕ್ಕೆ ನಾಗಶೌರ್ಯ ಹುಡುಗಿಗೆ ಕ್ಷಮೆಯಾಚಿಸುವಂತೆ ವಾದಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಶೌರ್ಯ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ತೆಲುಗಿನಲ್ಲೂ ಹತ್ತಿಕೊಂಡಿದೆ ರಶ್ಮಿಕಾ ವಿರುದ್ಧ ಬೆಂಕಿ: ನಾಗಶೌರ್ಯನನ್ನೂ ಕಡೆಗಣಿಸಿದ ಕಿರಿಕ್ ಸುಂದರಿ
ನಾಗ ಶೌರ್ಯಅವರ ಇತ್ತೀಚಿನ ಚಿತ್ರ 'ಫಲನಾ ಅಬ್ಬಾಯಿ ಫಲನ ಅಮ್ಮಾಯಿ' ಮಾರ್ಚ್ 17 ರಂದು ಬಿಡುಗಡೆಯಾಗಲಿದೆ. ಈಗ ನಾಗ ಶೌರ್ಯ ತನ್ನ ಹೊಸ ಸಿನಿಮಾಗಿಂತ ವೈರಲ್ ವೀಡಿಯೊ(Viral video)ದಿಂದಾಗಿ ಹೆಚ್ಚು ಸುದ್ದಿಯಲ್ಲಿದ್ದಾರೆ. ವೀಡಿಯೊದಲ್ಲಿ, ಹೈದರಾಬಾದ್‌ನ ಜನನಿಬಿಡ ರಸ್ತೆಯಲ್ಲಿ ಹೊರಟಿದ್ದ ವೇಳೆ ಈ ಘಟನೆ ನಡೆದಿದೆ. ಕಾರಿನಿಂದಿಳಿದು ಯುವತಿಗೆ ಹೊಡೆದ ಯುವಕನನ್ನು ಪ್ರಶ್ನಿಸುತ್ತಿರುವುದು ವಿಡಿಯೋದಲ್ಲಿ ನೋಡಬಹುದಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.