ಮೋದಿ ಚಿತ್ರ 30 ಕೋಟಿ ಗಳಿಸಿಲ್ಲ, ಬೊಗಳ್ತಾರೆ ಕಚ್ಚಲ್ಲ; ಪಠಾಣ್ ಬಹಿಷ್ಕರಿಸಿದವರ ವಿರುದ್ಧ ಪ್ರಕಾಶ್ ರಾಜ್ ಕಿಡಿ

By Shruthi Krishna  |  First Published Feb 7, 2023, 10:42 AM IST

ಮೋದಿ ಚಿತ್ರ 30 ಕೋಟಿ ಗಳಿಸಿಲ್ಲ, ಅವರು ಕೇವಲ ಬೊಗಳ್ತಾರೆ ಕಚ್ಚಲ್ಲ ಎಂದು ನಟ ಪ್ರಕಾಶ್ ರಾಜ್ ಪಠಾಣ್ ಬಹಿಷ್ಕರಿಸಿದವರ ವಿರುದ್ಧ ಕಿಡಿ ಕಾರಿದ್ದಾರೆ. 


ಶಾರುಖ್ ಖಾನ್ ನಟನೆಯ ಪಠಾಣ್ ಭಾರಿ ವಿರೋಧ, ಬಹಿಷ್ಕಾರದ ನಡುವೆಯೂ ರಿಲೀಸ್ ಆಗಿ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ. ಈಗ ಪಠಾಣ್ ಸಿನಿಮಾದೆ ಹವಾ. ಬಾಕ್ಸ್ ಆಫೀಸ್ ನಲ್ಲಿ ಪಠಾಣ್ ಸಿನಿಮಾ ಮೋಡಿ ಮಾಡಿದೆ. ಕೋಟಿ ಕೋಟಿ ಬಾಚಿಕೊಂಡಿರುವ ಪಠಾಣ್ ಹಿಂದಿ ಸಿನಿಮಾರಂಗದ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾವಾಗಿದೆ. ಗೆದ್ದು ಬೀಗುತ್ತಿರುವ ಪಠಾಣ್ ಸಿನಿಮಾದ ಬಗ್ಗೆ ಬಹುಭಾಷ ನಟ ಪ್ರಕಾಶ್ ರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ಪಠಾಣ್ ಸಿನಿಮಾ ಬಹಿಷ್ಕರಿಸಿ ಎಂದವರಿಗೆ ಕೇವಲ ಬೊಗಳುತ್ತಾರೆ ಕಚ್ಚಲ್ಲ ಎನ್ನುವ ಮೂಲಕ ಪ್ರಕಾಶ್ ರಾಜ್ ಸರಿಯಾಗಿ ತಿರುಗೇಟು ನೀಡಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಬಯೋಪಿಕ್ ಬಗ್ಗೆಯೂ ಟೀಕೆ ಮಾಡಿದ್ದಾರೆ.

ಕೇರಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಕಾಶ್ ರಾಜ್,  'ಅವರು ಪಠಾನ್ ಸಿನಿಮಾವನ್ನು ನಿಷೇಧಿಸಲು ಬಯಸಿದ್ದರು. ಆದರೆ, ಈ ಚಿತ್ರ 700 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮೂರ್ಖರು, ಮತಾಂಧರು ಪಠಾಣ್​ನ ಬ್ಯಾನ್ ಮಾಡಲು ಬಯಿಸಿದ್ದರು. ಮೋದಿ ಸಿನಿಮಾಗೆ 30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿಸಲು ಸಾಧ್ಯವಾಗಿಲ್ಲ. ಅವರು ಬೊಗಳುತ್ತಾರೆ, ಕಚ್ಚುವುದಿಲ್ಲ. ವಾಯು ಮಾಲಿನ್ಯ ಇದು’ ಎಂದಿದ್ದಾರೆ.

Pathan; ಬೇಷರಂ ರಂಗ್ ವಿವಾದ; ದೀಪಿಕಾ ಪರ ಬ್ಯಾಟ್ ಬೀಸಿದ ನಟ ಪ್ರಕಾಶ್ ರಾಜ್

Tap to resize

Latest Videos

ಇದೇ ವೇಳೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನೂ ಪ್ರಕಾಶ್ ರಾಜ್ ಟೀಕೆ ಮಾಡಿದ್ದಾರೆ. ‘ಕಾಶ್ಮೀರ್ ಫೈಲ್ಸ್​ ನಾನ್ಸೆನ್ಸ್ ಸಿನಿಮಾ. ಅದನ್ನು ನಿರ್ಮಾಣ ಮಾಡಿದ್ದು ಯಾರು ಅನ್ನೋದು ನಿಮಗೆ ಗೊತ್ತಿದೆ. ಅಂತಾರಾಷ್ಟ್ರಿಯ ಜ್ಯೂರಿಗಳು ಚಿತ್ರವನ್ನು ತೆಗಳಿದರು. ಈ ಚಿತ್ರದ ನಿರ್ದೇಶಕ ನಮ್ಮ ಚಿತ್ರಕ್ಕೆ ಏಕೆ ಆಸ್ಕರ್ ಸಿಗುತ್ತಿಲ್ಲ ಎಂದು ಕೇಳುತ್ತಿದ್ದಾರೆ, ಇವರಿಗೆ ಭಾಸ್ಕರ್ ಕೂಡ ಸಿಗಲ್ಲ. ಈ ರೀತಿಯ ಸಿನಿಮಾಗಳನ್ನು ನಿರ್ಮಾಣ ಮಾಡಲು ಅವರು 2000 ಸಾವಿರ ಕೋಟಿ ಹೂಡಿಕೆ ಮಾಡಿದ್ದಾರೆ. ಆದರೆ, ಎಲ್ಲಾ ಬಾರಿಯೂ ಜನರನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ’ ಪ್ರಕಾಶ್ ರಾಜ್ ಹೇಳಿದ್ದಾರೆ. 

ಪ್ರಧಾನಿ ಮೋದಿ-ಅಕ್ಷಯ್ ಕುಮಾರ್ ಮೀಮ್ ಶೇರ್ ಮಾಡಿದ ಪ್ರಕಾಶ್ ರಾಜ್ ಸಖತ್ ಟ್ರೋಲ್

ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾಗೆ ಪ್ರಕಾಶ್ ರಾಜ್ ಬೆಂಬಲ ನೀಡುತ್ತಿರುವುದು ಇದೇ ಮೊದಲ್ಲ.  ಬೇಷರಮ್ ರಂಗ್ ಹಾಡಿನ ವಿವಾದದ ಸಮಯದಲ್ಲೂ ದೀಪಿಕಾ ಪಡುಕೋಣೆಯನ್ನು ಬೆಂಬಲಿಸಿದರು. ಪಠಾಣ್ ರಿಲೀಸ್ ಆದಾಗಲು ಪ್ರಕಾಶ್ ರಾಜ್ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದರು. ಇದೀಗ ಮತ್ತೆ ಪಠಾಣ್ ಪರ ಬ್ಯಾಟ್ ಬೀಸಿದ್ದಾರೆ. ಸಿನಿಮಾ ವಿಚಾರಕ್ಕೆ ಬರುವುದಾದರೆ ಪ್ರಕಾಶ್ ರಾಜ್ ಕೊನೆಯದಾಗಿ ದಳಪತಿ ವಿಜಯ್ ನಟನೆಯ ವಾರಿಸು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.  

click me!