ಪದ್ಮಾವತ್ ಚಿತ್ರದ ಘೂಮರು ಒಂದೇ ಹಾಡಿಗೆ 12 ಕೋಟಿ ಖರ್ಚು ಮಾಡಲಾಗಿರುವ ಅಂಶ ಈಗ ಬಹಿರಂಗಗೊಂಡಿದೆ. ಈ ಹಾಡಿಗೆ ನಟಿ ದೀಪಿಕಾ ಪಡುಕೋಣೆ ಧರಿಸಿದ್ದ ಲೆಹಂಗಾದ ವಿಶೇಷಗಳೇನು ಗೊತ್ತಾ?
2018 ರಲ್ಲಿ ಬಿಡುಗಡೆಯಾದ ಸಂಜಯ್ ಲೀಲಾ ಬನ್ಸಾಲಿ ಅವರ ಚಿತ್ರ 'ಪದ್ಮಾವತ್' (Padmavath) ಚಿತ್ರ ಸೃಷ್ಟಿಸಿದ್ದ ವಿವಾದಗಳ ಬಗ್ಗೆ ನೆನಪಿರಬಹುದು. ರಾಜಪೂತ ರಾಣಿ ಪದ್ಮಿನಿಯ ಸುತ್ತ ಸುತ್ತುವ ಕಥೆಯನ್ನು ಹೊಂದಿರುವ ಇದರ ವಿರುದ್ಧ ಕಾರ್ಣಿ ಸೇನಾ ಪ್ರತಿಭಟನೆ ನಡೆಸಿತ್ತು. ರಜಪೂತರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಈ ಪ್ರತಿಭಟನೆ ನಡೆದಿತ್ತು. ಪದ್ಮಾವತಿ ಪಾತ್ರಧಾರಿ ದೀಪಿಕಾ ಅವರ ಮೂಗು ಕತ್ತರಿಸುವ, ಆ್ಯಸಿಡ್ ದಾಳಿ ನಡೆಸುವ ಬೆದರಿಕೆಗಳೂ ಬಂದಿದ್ದವು. ಇದರಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಮತ್ತು ರಾಣಿ ಪದ್ಮಾವತಿಯನ್ನು ಕೆಟ್ಟದ್ದಾಗಿ ಬಿಂಬಿಸಲಾಗಿದೆ ಎನ್ನಲಾಗಿತ್ತು. ಬಳಿಕ ಇಡೀ ಸಿನಿಮಾದಲ್ಲಿ ಅಲ್ಲಾವುದ್ದೀನ್ ಖಿಲ್ಜಿ (ರಣವೀರ್ ಸಿಂಗ್) ಮತ್ತು ಪದ್ಮಾವತಿ (ದೀಪಿಕಾ ಪಡುಕೋಣೆ) ಒಂದೇ ಒಂದು ಸಿಂಗಲ್ ಫ್ರೇಮ್‌ನಲ್ಲಿ ಒಟ್ಟಾಗಿ ಕಾಣಿಸಿಕೊಂಡಿಲ್ಲ ಎಂದು ಚಿತ್ರ ನೋಡಿದವರು ಹೇಳಿಕೆ ನೀಡಿದ್ದರು. ಜೊತೆಗೆ, ರತನ್ ಸಿಂಗ್ ಮತ್ತು ಪದ್ಮಾವತಿ ನಡುವಿನ ರೋಮಾನ್ಸ್‌ನ್ನು ಅತ್ಯಂತ ಪರಿಶುದ್ಧವಾಗಿ ಚಿತ್ರಿಸಲಾಗಿದೆ ಎಂದೂ ಹೇಳಲಾಗಿತ್ತು. ನಂತರ ಎಲ್ಲಾ ವಿವಾದಗಳು ತಣ್ಣಗಾದ ಬಳಿಕ ಚಿತ್ರ ಭರ್ಜರಿ ಕಲೆಕ್ಷನ್ ಮಾಡಿತ್ತು.
ಚಿತ್ರದಲ್ಲಿ ರಣವೀರ್ ಸಿಂಗ್ (Ranveer Singh) ಅವರ ಅಲ್ಲಾವುದ್ದೀನ್ ಖಿಲ್ಜಿ ಪಾತ್ರ ಇತಿಹಾಸ ಸೃಷ್ಟಿಸಿತ್ತು. ಚಿತ್ರ ಬಿಡುಗಡೆಯಾಗಿ ಐದು ವರ್ಷಗಳ ಬಳಿಕ ಈ ಚಿತ್ರದ ಹಾಡೊಂದರ ಕುರಿತು ಕುತೂಹಲದ ವಿಷಯವೊಂದು ಬೆಳಕಿಗೆ ಬಂದಿದೆ. ಅದೇನೆಂದರೆ, ಚಿತ್ರದ ಸೂಪರ್ಹಿಟ್ ಹಾಡು ಘೂಮರ್ ಹಾಡೊಂದಕ್ಕೆ ಬರೋಬ್ಬರಿ 12 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂಬ ಅಂಶ ಈಗ ಬಹಿರಂಗಗೊಂಡಿದೆ. ಪ್ರತಿ ಚಿತ್ರದಂತೆ ಸಂಜಯ್ ಲೀಲಾ ಬನ್ಸಾಲಿಯವರ ಪದ್ಮಾವತ್ಗೂ ಅದ್ಧೂರಿ ಸೆಟ್ ನಿರ್ಮಿಸಲಾಗಿತ್ತು. ಘೂಮರ್ ಹಾಡೊಂದಕ್ಕೆ 12 ಕೋಟಿ ಖರ್ಚು ಮಾಡಲಾಗಿತ್ತಂತೆ.
ಶಾಲೆಗೂ ಹೋಗಿಲ್ಲ, ಹಿಂದಿಯೂ ಬರೋಲ್ಲ: ಹೃತಿಕ್ ರೋಷನ್ ಅಪ್ಪನ ಅಚ್ಚರಿ ಹೇಳಿಕೆ!
ಒಟ್ಟು 100 ಕೋಟಿ ಕ್ಲಬ್ ಸೇರಿಸಿಕೊಂಡಿದ್ದ ಪದ್ಮಾವತ್ ಅನ್ನು ಅನೇಕ ರಾಜ್ಯಗಳಲ್ಲಿ ಚಲನಚಿತ್ರವನ್ನು ನಿಷೇಧಿಸಲಾಗಿತ್ತು. ಆದರೆ ವಿವಾದಗಳ ನಂತರವೂ, ಈ ಮಲ್ಟಿಸ್ಟಾರರ್ ಚಿತ್ರವು ಗಳಿಕೆಯ ವಿಷಯದಲ್ಲಿ ಬಾಕ್ಸ್ ಆಫೀಸ್ ಅನ್ನು ಅಲುಗಾಡಿಸಿ ಇಷ್ಟು ಬೃಹತ್ ಮೊತ್ತ ಕಲೆ ಹಾಕಿತ್ತು. ದೀಪಿಕಾ (Deepika Padukone) ಅವರ ಏಳನೇ ಚಿತ್ರ ಇದಾಗಿದೆ. ಹ್ಯಾಪಿ ನ್ಯೂ ಇಯರ್, ಬಾಜಿರಾವ್ ಮಸ್ತಾನಿ, ಗೋಲಿಯೋನ್ ಕಿ ರಾಸ್ಲೀಲಾ - ರಾಮ್ ಲೀಲಾ, ರೇಸ್ -2, ಯೇ ಜವಾನಿ ಹೈ ದೀವಾನಿ ಮತ್ತು ಚೆನ್ನೈ ಎಕ್ಸ್ಪ್ರೆಸ್ ಚಿತ್ರಗಳಲ್ಲಿ ದೀಪಿಕಾ ನಟಿಸಿದ್ದು, ಇವೆಲ್ಲವೂ 100 ಕೋಟಿ ಗಳಿಸಿದ್ದು, ಪದ್ಮಾವತ್ ಕೂಡ ಅವರಿಗೆ ಅದೃಷ್ಟ ಒದಗಿಸಿತ್ತು. ಬಾಜಿರಾವ್ ಮಸ್ತಾನಿ ಮತ್ತು ಗೋಲಿಯೋನ್ ಕಿ ರಾಸ್ಲೀಲಾ ರಾಮ್-ಲೀಲಾ ನಂತರ ರಣವೀರ್-ದೀಪಿಕಾ ಒಟ್ಟಿಗೇ ನಟಿಸಿದ್ದರು. ನಂತರ ಪದ್ಮಾಪತ್ ಕೂಡ ರಣವೀರ್ ಸಿಂಗ್ ಅವರ ವೃತ್ತಿಜೀವನಕ್ಕೂ ಒಂದು ಮೈಲಿಗಲ್ಲು ಎಂದು ಸಾಬೀತಾಯಿತು.
ಇನ್ನು ಘೂಮರ್ ಹಾಡಿನ ಕುರಿತು ಹೇಳುವುದಾದರೆ ಈ ಹಾಡಿನಲ್ಲಿ ಭರ್ಜರಿ ಸೆಟ್ (Set) ಹಾಕಲಾಗಿದೆ. ನಟಿ ದೀಪಿಕಾ ಪಡುಕೋಣೆ 20 ಕೆಜಿ ತೂಕದ ಆಭರಣಗಳನ್ನು ಧರಿಸಿದ್ದರಂತೆ! ಇವರು ಲೆಹಂಗಾ ತೊಟ್ಟಿರುವುದನ್ನು ನೋಡಬಹುದು. ಈ ಲೆಹಂಗಾ 30 ಕೆ.ಜಿ. ಇತ್ತು ಎನ್ನಲಾಗಿದೆ. ಮಾತ್ರವಲ್ಲದೇ ಚಿನ್ನ ಮತ್ತು ಬೆಳ್ಳಿಯಿಂದ ಲೆಹಂಗಾ ತಯಾರಿಸಲಾಗಿದ್ದು, ನೃತ್ಯಗಾರರು ಧರಿಸಿದ್ದ ಆಭರಣಗಳಲ್ಲಿ 400 ಕೆ.ಜಿ ಚಿನ್ನವನ್ನು ಬಳಸಲಾಗಿತ್ತು ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಇಷ್ಟೆಲ್ಲಾ ಖರ್ಚು ಮಾಡುವ ಅವಶ್ಯಕತೆ ಏನಿತ್ತು ಎನ್ನಬಹುದು. ಇದು ತನಿಷ್ಕ್ ಆಭರಣ ಕಂಪೆನಿಯ ಪ್ರಚಾರದ ಕಾರ್ಯ ಎನ್ನಲಾಗುತ್ತಿದೆ. ಏಕೆಂದರೆ, ಚಿತ್ರಕ್ಕಾಗಿ ಆಭರಣಗಳನ್ನು ವಿನ್ಯಾಸಗೊಳಿಸಿದ ಕಂಪೆನಿಯಾದ ತನಿಷ್ಕ್ ಪ್ರಕಾರ, 200 ಕ್ಕೂ ಹೆಚ್ಚು ಕುಶಲಕರ್ಮಿಗಳು 600 ದಿನಗಳ ಕಾಲ ಇದಕದ್ಕೆ ಕೆಲಸ ಮಾಡಿದ್ದಾರೆ ಮತ್ತು ಪದ್ಮಾವತಿಯಲ್ಲಿ ಬಳಸಲಾದ ಆಭರಣಗಳಿಗಾಗಿ 400 ಕೆಜಿ ಚಿನ್ನವನ್ನು ಅಚ್ಚು ಮಾಡಿದ್ದಾರೆ.
ಆಸ್ಕರ್ ಅವಾರ್ಡ್ಗೆ ನಾಮನಿರ್ದೇಶನಗೊಂಡ 'ಚಂಪಾರಣ್ ಮಟನ್'! ಪತ್ನಿಗಾಗಿ ಸವಾಲು ಸ್ವೀಕರಿಸಿದವನ ಕಥೆ..