ಸೇಫ್ ಸೆಕ್ಸ್ ಎಂದು ಒಂದೇ ಸಲಕ್ಕೆ ಹೆಚ್ಚು ಕಾಂಡೋಮ್ ಬಳಸಬಹುದಾ? ಲೈಂಗಿಕ ಶಿಕ್ಷಣದ ಮಹತ್ವ ಹೇಳಿದ ಬಹುಭಾಷಾ ತಾರೆ ರಾಕುಲ್ ಪ್ರೀತ್ ಸಿಂಗ್ ಕಾಂಡೋಮ್ ಬಗ್ಗೆ ಹೇಳಿದ್ದೇನು?
ಸೆಕ್ಸ್ ಎಜುಕೇಷನ್ ಕುರಿತು ಇದಾಗಲೇ ಸಾಕಷ್ಟು ಮಂದಿ ಮಾತನಾಡಿದ್ದಾರೆ. ಶಾಲಾ ಮಟ್ಟದಲ್ಲಿಯೇ ಲೈಂಗಿಕತೆಯ ಅರಿವು ಮೂಡಿಸುವ ಶಿಕ್ಷಣ ಮಕ್ಕಳಿಗೆ ಬೇಕು ಎನ್ನುವುದು ಕೆಲವರ ವಾದವಾಗಿದ್ದರೆ, ಇನ್ನು ಕೆಲವರು ಇದನ್ನು ವಿರೋಧಿಸುವವರೂ ಇದ್ದಾರೆ. ಕೆಲವು ದೇಶಗಳಲ್ಲಿ ಸೆಕ್ಸ್ ಎಜುಕೇಷನ್ ಶಾಲಾ ಹಂತದಲ್ಲಿಯೇ ಕಲಿಸಲಾಗುತ್ತದೆ. ಆದರೆ ಭಾರತದಲ್ಲಿ ಇದರ ಬಗ್ಗೆ ಮಾತನಾಡುವುದಕ್ಕೂ ಮುಜುಗರ ಪಡುವ ಸ್ಥಿತಿ ಇದೆ. ಇದೇ ಕಾರಣಕ್ಕೆ ಹದಿಹರೆಯದವರಲ್ಲಿ ಸೆಕ್ಸ್ ಕುರಿತು ತಪ್ಪು ತಿಳಿವಳಿಕೆಗಳಿಂದ ಎಡವಟ್ಟು ಆಗುತ್ತಿದೆ ಎನ್ನುವ ದೊಡ್ಡ ವರ್ಗವೇ ಇದೆ. ಇದೇ ಕಾರಣಕ್ಕೆ ಲೈಂಗಿಕತೆಯ (Sexual Intercource) ಬಗ್ಗೆ ಮುಕ್ತವಾಗಿ ಮಾತನಾಡಬೇಕು ಎನ್ನುವುದು ಅವರ ಆಶಯ.
ಈ ಕುರಿತು ಬಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್ ಮಾತನಾಡಿದ್ದಾರೆ. ತಮ್ಮ ಚಿತ್ರದ ಪ್ರಮೋಷನ್ ಸಂದರ್ಭದಲ್ಲಿ ಅವರು ಈ ವಿಷಯವನ್ನು ಕೆಲ ತಿಂಗಳ ಹಿಂದೆ ಹೇಳಿದ್ದು, ಅದರ ವಿಡಿಯೋ ಮತ್ತೆ ವೈರಲ್ ಆಗುತ್ತಿದೆ. ರಾಕುಲ್ ಪ್ರೀತಿ ಸಿಂಗ್ ಅವರ ಜೊತೆಗಿನ ಸಂದರ್ಶನದ ಸಮಯದಲ್ಲಿ ಲೈಂಗಿಕತೆಯ ಕುರಿತು ಮುಕ್ತವಾಗಿ ಮಾತನಾಡಿದ್ದ ನಟಿ ತಮ್ಮ 'ಛತ್ರಿವಾಲಿ' ಸಿನಿಮಾದಲ್ಲಿ ಇದರ ಬಗ್ಗೆ ತೋರಿಸಿರುವುದಾಗಿ ಹೇಳಿದದ್ದಾರೆ. ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿರುವ ನಾಯಕಿಗೆ ಎಲ್ಲಿಯೂ ಕೆಲಸ ಸಿಗುವುದಿಲ್ಲ. ಬಳಿಕ ಕಾಂಡೋಮ್ ಫ್ಯಾಕ್ಟರಿಯ ಕ್ವಾಲಿಟಿ ಹೆಡ್ ಆಗಿ ಕೆಲಸಕ್ಕೆ ಸೇರುತ್ತಾರೆ. ಅಲ್ಲಿ ಹೇಗೆಲ್ಲ ಕೆಲಸ ಮಾಡುತ್ತಾರೆ ಎನ್ನುವುದೇ ಛತ್ರಿವಾಲಿಯ ಕಥೆ. ಸೋಷಿಯಲ್ ಕಾಮಿಡಿ ಎಂಟರ್ಟೇನ್ಮೆಂಟ್ ಚಿತ್ರ ಇದಾಗಿದ್ದು, ಈ ಚಿತ್ರದಲ್ಲಿ ಲೈಂಗಿಕ ಶಿಕ್ಷಣದ ಕುರಿತು ಆಗಿದೆ. ಇಂಥ ಶಿಕ್ಷಣ ನಮಗೆ ಬೇಕಿದೆ ಎಂದು ನಟಿ ಹೇಳಿದ್ದಾರೆ. ನಟಿ ಹೇಳಿರೋ ಪ್ರಕಾರ, ಲೈಂಗಿಕ ಕ್ರಿಯೆಗೆ ಸಂಬಂಧಿಸಿದಂತೆ ಹಲವಾರು ರೀತಿಯ ಅನುಮಾನ, ವಿಭಿನ್ನ ನಿಲುವು, ಇದಕ್ಕೆ ಸಂಬಂಧಿಸಿದಂತೆ ವಿವಿಧ ರೀತಿಯ ಕಲ್ಪನೆಗಳು ಇರುತ್ತವೆ. ಆದರೆ ಅದನ್ನು ಮುಕ್ತವಾಗಿ ಮಾತನಾಡುವ ವಾತಾವರಣ ನಮ್ಮಲ್ಲಿ ಇಲ್ಲ. ಇದೇ ಕಾರಣಕ್ಕೆ ಈ ಚಿತ್ರದಲ್ಲಿ ಈ ವಿಷಯದ ಕುರಿತು ಮಾತನಾಡಲಾಗಿದೆ ಎಂದಿದ್ದಾರೆ ನಟಿ.
ಕಾಜೋಲ್ ಹುಟ್ಟುಹಬ್ಬ: ನಟಿಯ ಜೊತೆ ಮಂಚ ಏರುವ ಆಸೆ ಇತ್ತಾ ಶಾರುಖ್ಗೆ? ಹಳೆಯ ವಿಡಿಯೋ ವೈರಲ್
'ನಾವು ಯಾರಿಗೂ ಉಪದೇಶ ನೀಡುತ್ತಿಲ್ಲ. ಇದು ಜೀವನದ ಒಂದು ಭಾಗವಾದ ಕೌಟುಂಬಿಕ ಸಿನಿಮಾವಾಗಿದೆ. ಇದರಲ್ಲಿ ಮುಜುಗರ ಆಗುವಂತ ಯಾವುದೇ ದೃಶ್ಯವಿಲ್ಲ. ನಾವು ಸೂಕ್ಷ್ಮವಾಗಿ ಮನರಂಜನೆ ರೀತಿಯಲ್ಲಿ ಹೇಳಿದ್ದೀವಿ. ನಾವು ಇಲ್ಲಿ ಯಾವುದೇ ಪಾಠದ ಹಾಗೆ ಹೇಳುತ್ತಿಲ್ಲ ಎಂದಿರುವ ನಟಿ, ಸೇಫ್ ಸೆಕ್ಸ್ಗೆ ಒಂದಕ್ಕಿಂತ ಹೆಚ್ಚು ಕಾಂಡೋಮ್ (Condom) ಒಂದೇ ಸಲಕ್ಕೆ ಬಳಸಬಹುದಾಗ ಎಂದು ಎದುರಾದ ಪ್ರಶ್ನೆಗೆ ಉತ್ತರಿಸಿದ್ದಾರೆ. 'ಬೇಡ. ಇದು ಸರಿಯಲ್ಲ, ಎರಡು ಕಾಂಡೋಮ್ ಬಳಕೆ ಒಳ್ಳೆಯ ಆಲೋಚನೆಯಲ್ಲ. ಏಕೆಂದರೆ ಹೀಗೆ ಮಾಡಿದರೆ ಎರಡರ ನಡುವೆ ತಿಕ್ಕಾಟ ಉಂಟಾಗಿ ಹರಿದು ಹೋಗಬಹುದು. ಒಂದು ವೇಳೆ ತುಂಬಾ ಸುರಕ್ಷತೆ ಅಗತ್ಯ ಎನಿಸಿದರೆ ಮಹಿಳೆಯರು ಫೀಮೇಲ್ ಕಾಂಡೋಮ್ ಬಳಸಬಹುದು. ಗರ್ಭ ನಿರೋಧಕ ಮಾತ್ರೆ ಸೇವಿಸಬಹುದು, ಐಯುಡಿ (IUD) ರೀತಿಯ ಗರ್ಭನಿರೋಧಕ ಪರಿಕರಗಳನ್ನು ಬಳಸಬಹುದು. ಆದರೆ ಹಾಗೆಂದು ಪುರುಷರು ಎರಡು ಕಾಂಡೋಮ್ ಬಳಸುವುದು ಒಳ್ಳೆಯದಲ್ಲ ಎನ್ನುವ ಸಲಹೆ ನೀಡಿದ್ದಾರೆ ನಟಿ.
ಇನ್ನು ರಾಕುಲ್ ಕುರಿತು ಹೇಳುವುದಾದರೆ, ಇವರು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಬಾಲಿವುಡ್ನ `ಯಾರಿಯಾಂ' ಚಿತ್ರದಿಂದ ಫೇಮಸ್ ಆದ ರಾಕುಲ್, ಕನ್ನಡದ ಗಿಲ್ಲಿ (Gilli) ಚಿತ್ರದಲ್ಲಿ ನಟಿಸಿದ್ದಾರೆ. ಕಳೆದ ವರ್ಷ ಸದ್ದು ಮಾಡಿದ್ದ ಡ್ರಗ್ಸ್ ಕೇಸ್ನಲ್ಲಿಯೂ ಈಕೆಯ ಹೆಸರು ಥಳಕು ಹಾಕಿಕೊಂಡಿತ್ತು. ನೋಟಿಸ್ ಕೂಡ ಜಾರಿಯಾಗಿತ್ತು. ನಟಿ ರಾಕುಲ್ ಪ್ರೀತ್ ಸಿಂಗ್ ಕೊನೆಯದಾಗಿ ಅಜಯ್ ದೇವಗನ್ (Ajay Devagan) ಜೊತೆ ರನ್ ವೇ 34 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಹೇಳಿಕೊಳ್ಳುವಷ್ಟು ಯಶಸ್ಸು ಕಾಣಲಿಲ್ಲ. ಛತ್ರಿವಾಲಿ ಜೊತೆಗೆ ಆಯುಷ್ಮಾನ್ ಖುರಾನ ನಟನೆಯ ಡಾಕ್ಟರ್ ಜಿ, ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಥ್ಯಾಂಕ್ ಗಾಡ್, ಅಕ್ಷಯ್ ಕುಮಾರ್ ಜೊತೆ ಮಿಷನ್ ಸಿಂಡ್ರೆಲಾ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಮಧ್ಯರಾತ್ರಿಯ ಸ್ನೇಹಿತ ಯಾರು? ಯಾವ ಆಸನ ಇಷ್ಟ.... ಅಂತೆಲ್ಲಾ ಕೇಳಿದ ಪ್ರಶ್ನೆಗೆ ಶಿಲ್ಪಾ ಕೊಟ್ಟ ಉತ್ತರ ವೈರಲ್