ನಟ ಸಲ್ಮಾನ್ ಖಾನ್ ಅವರಿಗೆ ವೈ ಪ್ಲಸ್ ಭದ್ರತೆ ಹೆಚ್ಚಿಸಲಾಗಿದೆ. ಸಲ್ಲೂಗೆ ಜೀವ ಬೆದರಿಕೆ ಕರೆಗಳು ಬರುತ್ತಿದ್ದು, ಅಲರ್ಟ್ ಆಗಿರುವ ಮುಂಬೈ ಪೊಲೀಸ್ ವ್ಯವಸ್ಥೆ ಇದೀಗ ನಟ ಸಲ್ಮಾನ್ ಖಾನ್‌ಗೆ ಭದ್ರತೆ ಹೆಚ್ಚಿಸಿದೆ. ಗಾಯಕ ಗಿಪ್ಪಿ ಗ್ರೆವಾಲ್ ಜತೆ ನಟ ಸಲ್ಮಾನ್ ಖಾನ್ ಕ್ಲೋಸ್ ಆಗಿರುವ ಕಾರಣಕ್ಕೆ ಹೀಗೆ ಜೀವ ಬೆದರಿಕೆ ಕರೆಗಳು ಬರಲಾರಂಭಿಸಿವೆ ಎನ್ನಲಾಗಿದೆ.
ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಅವರಿಗೆ ವೈ ಪ್ಲಸ್ ಭದ್ರತೆ ಹೆಚ್ಚಿಸಲಾಗಿದೆ. ಸಲ್ಲೂಗೆ ಜೀವ ಬೆದರಿಕೆ ಕರೆಗಳು ಬರುತ್ತಿದ್ದು, ಅಲರ್ಟ್ ಆಗಿರುವ ಮುಂಬೈ ಪೊಲೀಸ್ ವ್ಯವಸ್ಥೆ ಇದೀಗ ನಟ ಸಲ್ಮಾನ್ ಖಾನ್‌ಗೆ ಭದ್ರತೆ ಹೆಚ್ಚಿಸಿದೆ. ಗಾಯಕ ಗಿಪ್ಪಿ ಗ್ರೆವಾಲ್ ಜತೆ ನಟ ಸಲ್ಮಾನ್ ಖಾನ್ ಕ್ಲೋಸ್ ಆಗಿರುವ ಕಾರಣಕ್ಕೆ ಹೀಗೆ ಜೀವ ಬೆದರಿಕೆ ಕರೆಗಳು ಬರಲಾರಂಭಿಸಿವೆ ಎನ್ನಲಾಗಿದೆ. ಕೆನಡಾದಲ್ಲಿರುವ ಗಾಯಕ ಗಿಪ್ಪಿ ಗ್ರೆವಾಲ್ ನಿವಾಸದ ಮೇಲೆ ದಾಳಿ ನಡೆಸಿರುವ ದುಷ್ಕರ್ಮಿಗಳು, ನಟ ಸಲ್ಮಾನ್ ಖಾನ್ ಮೇಲೂ ಕಣ್ಣಿಟ್ಟಿದ್ದಾರೆ ಎನ್ನಲಾಗುತ್ತಿದೆ.
ಆಸೆ ಶೂಟಿಂಗ್ ವೇಳೆ ಅವಘಡ, ಹಿರಿಯ ನಟ ಮಂಡ್ಯ ರಮೇಶ್‌ಗೆ ತೀವ್ರ ಗಾಯ
ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆ ಕರೆಗಳು ಬರುವುದು ಹೊಸ ವಿಷಯವೇನೂ ಅಲ್ಲ. ಹಲವು ವರ್ಷಗಳ ಹಿಂದೆ ನಟ ಸಲ್ಮಾನ್ ಖಾನ್ ಹಾಗು ಇನ್ನುಹಲವು ನಟನಟಿಯರು ಕೃಷ್ಣ ಮೃಗ ಭೇಟೆಯಾಡಿ ಕೊಂದಿದ್ದರು. ಈ ಬಗ್ಗೆ ನಟ ಸಲ್ಮಾನ್ ಖಾನ್ ಅವರಿಗೆ ಹಲವು ವರ್ಷ ಜೈಲು ಶಿಕ್ಷೆ ಕೂಡ ಆಗಿತ್ತು. ಈ ಘಟನೆಯಿಂದ ಮನನೊಂದಿರುವ ಕೃಷ್ಣ ಮೃಗವನ್ನು ಪೂಜಿಸುವ 'ಬಿಷ್ಣೋಯ್' ಜನಾಂಗದ ಲಾರೆನ್ಸ್ ಬಿಷ್ಣೋಯ್ ನಟ ಸಲ್ಮಾನ್ ಖಾನ್ ಅವರನ್ನು ಕಲೆ ಮಾಡಲಾಗುವುದೆಂದು ಹಲವು ವರ್ಷಗಳಿಂದ ಬೆದರಿಕೆ ಒಡ್ಡುತ್ತಲೇ ಬಂದಿವೆ. ಅಂದಿನಿಂದಲೇ ನಟ ಸಲ್ಲೂಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
ನಾನು ತುಂಬಾ ಕೆಟ್ಟ ಸ್ಟೂಡೆಂಟ್ ಆಗಿದ್ದೆ, ಲಾಸ್ಟ್ ಬೆಂಚ್‌ನಲ್ಲಿ ಕುಳಿತುಕೊಳ್ಳುತ್ತಿದ್ದೆ; ನಟ ಅಲ್ಲು ಅರ್ಜುನ್
ಆದರೆ, ಈಗ ಬಂದಿರುವ ಬೆದರಿಕೆ ಕರೆಯ ಹಿಂದಿನ ಕಾರಣ ಬದಲಾಗಿದೆ. ಗಾಯಕ ಗಿಪ್ಪಿ ಗ್ರೇವಾಲ್ ಜತೆ ನಟ ಸಲ್ಮಾನ್ ಖಾನ್ ಉತ್ತಮ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ. ಗೆಪ್ಪಿ ಗ್ರೆವಾಲ್ ಅವರ ಕೊಲೆಗೆ ಸಂಚು ರೂಪಿಸಿರುವ ಲಾರೆನ್ಸ್ ಬಿಷ್ಟೋಯ್ ಗುಂಪಿನ ಕಣ್ಣು ಈಗ ನಟ ಸಲ್ಮಾನ್ ಖಾನ್ ಮೇಲೂ ಬಿದ್ದಿದೆಯಂತೆ. ಈ ಕಾರಣಕ್ಕೆ ಹೈ ಅಲರ್ಟ್ ಆಗಿರುವ ಮುಂಬೈ ಪೊಲೀಸರು ನಟ ಸಲ್ಮಾನ್ ಖಾನ್ ಅವರಿಗೆ ತೀವ್ರ ಎಚ್ಚರಿಕೆಯಿಂದ ಇರುವಂತೆ ಹೇಳಿದ್ದಾರೆ ಎನ್ನಲಾಗಿದೆ.
ನಾನು ತುಂಬಾ ಕೆಟ್ಟ ಸ್ಟೂಡೆಂಟ್ ಆಗಿದ್ದೆ, ಲಾಸ್ಟ್ ಬೆಂಚ್‌ನಲ್ಲಿ ಕುಳಿತುಕೊಳ್ಳುತ್ತಿದ್ದೆ; ನಟ ಅಲ್ಲು ಅರ್ಜುನ್