Udita Goswami: ಮೈಚಳಿ ಬಿಟ್ಟು ಹೆಚ್ಚು ರೊಮಾನ್ಸ್‌ ಮಾಡಿದ ಬಾಲಿವುಡ್‌ ನಟಿಯೇ ಈಗ ಇಮ್ರಾನ್‌ ಹಶ್ಮಿ ಅತ್ತಿಗೆ!

Published : May 21, 2023, 12:28 PM ISTUpdated : May 21, 2023, 12:29 PM IST
Udita Goswami: ಮೈಚಳಿ ಬಿಟ್ಟು ಹೆಚ್ಚು ರೊಮಾನ್ಸ್‌ ಮಾಡಿದ ಬಾಲಿವುಡ್‌ ನಟಿಯೇ ಈಗ ಇಮ್ರಾನ್‌ ಹಶ್ಮಿ ಅತ್ತಿಗೆ!

ಸಾರಾಂಶ

ಪರದೆಯ ಮೇಲೆ ಅತಿ ಹೆಚ್ಚು ರೊಮಾಂಟಿಕ್‌ ಜೋಡಿ ಎಂದು ಕರೆಸಿಕೊಂಡ ಇಮ್ರಾನ್‌ ಹಶ್ಮಿ ಮತ್ತು ಉದಿತಾ ಗೋಸ್ವಾಮಿ ಇದೀಗ ಅತ್ತಿಗೆ-ಬಾಮೈದ. ಏನಿದು ಸ್ಟೋರಿ?

ಸಿನಿಮಾಗಳು ಅಂದರೆ ಹಾಗೆಯೇ. ಯಾರು ಯಾರ ಜೊತೆ ಹೆಚ್ಚು ರೊಮಾನ್ಸ್‌ ಮಾಡಬೇಕೋ ಹೇಳಲಾಗುವುದಿಲ್ಲ. ಕೆಲವೊಂದು ಜೋಡಿಯ ಕೆಮೆಸ್ಟ್ರಿ ಅಭಿಮಾನಿಗಳಿಗೆ ಇಷ್ಟವಾಗಿಬಿಟ್ಟರೆ ಅದೇ ಜೋಡಿಯನ್ನು ಹಾಕಿಕೊಂಡು ಚಿತ್ರ ತಯಾರು ಮಾಡುವುದು ಉಂಟು. ಇದೇ ಕಾರಣಕ್ಕೆ ಹೆಚ್ಚಿನ ಚಿತ್ರಗಳಲ್ಲಿ ಒಂದೇ ಜೋಡಿ ಕಾಣಿಸಿಕೊಂಡು ಹಿಟ್‌ ಚಿತ್ರಗಳನ್ನು ನೀಡುವುದು ಇದೆ. ಅದರಲ್ಲಿ ಒಂದು ಜೋಡಿಯೆಂದರೆ ಬಾಲಿವುಡ್‌ ನಟ ಇಮ್ರಾನ್‌ ಹಶ್ಮಿ (Emraan Hashmi) ಹಾಗೂ ಉದಿತಾ ಗೋಸ್ವಾಮಿ. ಇಮ್ರಾನ್‌ ಹಶ್ಮಿ 2003ರಲ್ಲಿ ಕ್ರೈಮ್ ಥ್ರಿಲ್ಲರ್ ಚಲನಚಿತ್ರ ಫುಟ್‌ಪಾತ್‌ನೊಂದಿಗೆ ಪದಾರ್ಪಣೆ ಮಾಡಿದರು. ಬಳಿಕ ಅವರು  ಮರ್ಡರ್ (2004), ಕಲಿಯುಗ್ (2005), ಗ್ಯಾಂಗ್‌ಸ್ಟರ್ (2006) ಸೇರಿದಂತೆ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು ಮತ್ತು ಅವರ ಪಾನ್ (2007) ಎಂಬ ಆಕ್ಷನ್ ಚಲನಚಿತ್ರ ಮೂಲಕ ಭಾರಿ ಪ್ರಸಿದ್ಧಿ ಗಳಿಸಿದರು. ಇಮ್ರಾನ್‌ ಹಶ್ಮಿ ಹಲವಾರು ಫಿಲ್ಮ್‌ಫೇರ್ ಪ್ರಶಸ್ತಿ ನಾಮನಿರ್ದೇಶನ ಕೂಡ ಪಡೆದಿದ್ದಾರೆ. ಇವರು ಹೆಚ್ಚಾಗಿ ಕಿಸ್ಸಿಂಗ್‌ ಸೀನ್‌ಗಳಲ್ಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಇವರನ್ನು ಸೀರಿಯಲ್ ಕಿಸ್ಸರ್' ಎಂದೇ ಹೇಳಲಾಗುತ್ತದೆ.

ಇನ್ನು ಉದಿತಾ ಗೋಸ್ವಾಮಿ (Udita Goswami) ಅವರ ಕುರಿತು ಹೇಳುವುದಾದರೆ, ಇವರು ಚಿತ್ರರಂಗದಲ್ಲಿ ಹೆಚ್ಚು ನೆಲೆಸದಿದ್ದರೂ ಮಾಡಿರುವ ಕೆಲವು ಚಿತ್ರಗಳಲ್ಲಿ ಇಂಟಿಮೇಟ್‌ ಸೀನ್‌ಗಳಲ್ಲಿಯೇ ಕಾಣಿಸಿಕೊಂಡದ್ದು ಹೆಚ್ಚು. ಎಂಥದ್ದೇ ಬೋಲ್ಡ್‌ ಪಾತ್ರಗಳು ಇದ್ದರೂ ಮಾಡಲು ಹಿಂಜರಿಯದೇ ದಿಟ್ಟತನದಿಂದ ಮಾಡುತ್ತಿದ್ದುದರಲ್ಲಿ ಈಕೆ ನಿಸ್ಸೀಮರು. ಇದೇ ಕಾರಣಕ್ಕೆ ಈಕೆಯನ್ನು ಸಿನಿಮಾ ಇಂಡಸ್ಟ್ರಿ ಮತ್ತು  ಪ್ರೇಕ್ಷಕರು ಲೈಂಗಿಕ ಸಂಕೇತವಾಗಿಯೂ ನೋಡುತ್ತಿದ್ದರು. ಉದಿತಾ ಗೋಸ್ವಾಮಿ ಅವರು 2004ರಲ್ಲಿ ಜಾನ್ ಅಬ್ರಹಾಂ ಜೊತೆಗಿನ ಪಾಪ ಚಿತ್ರದ ಮೂಲಕ ಪದಾರ್ಪಣೆ ಮಾಡಿದರು. ಈ ಚಿತ್ರವು ನಟಿ ಪೂಜಾ ಭಟ್ ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದ್ದು, ಮಿಶ್ರ ಪ್ರತಿಕ್ರಿಯೆಯನ್ನು ಪಡೆಯಿತು. ಇದಾದ ಬಳಿಕ ಕೆಲ ಚಿತ್ರಗಳನ್ನು ಮಾಡಿದರೂ ರೊಮಾನ್ಸ್‌, ಕಿಸ್ಸಿಂಗ್‌ನಂಥ ಇಂಟಿಮೇಟ್‌ ದೃಶ್ಯಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಂಡರು.

ಡಬಲ್​ ವಯಸ್ಸಿನ ಸಲ್ಮಾನ್ ಖಾನ್ ಜೊತೆ ರೊಮ್ಯಾನ್ಸ್: ಅನುಭವ ಬಿಚ್ಚಿಟ್ಟ Pooja Hegde

ಇನ್ನು ‘ಮರ್ಡರ್’, ‘ಝೆಹರ್’, ‘ಅಕ್ಸರ್’ ಮುಂತಾದ ಚಿತ್ರಗಳಲ್ಲಿ ನಟ ಇಮ್ರಾನ್‌ ಹಶ್ಮಿ ಅವರದ್ದು ರೊಮಾನ್ಸ್‌ (Romance)ಪಾತ್ರವಾಗಿತ್ತು. ನಾಯಕಿಯರ ಜೊತೆ ನಟನ ಪ್ರಣಯ ದೃಶ್ಯಗಳು ಬಹಳ ಜನಪ್ರಿಯವಾದವು. ಜೊತೆಗೆ ಅವರಿಗೆ ಸೀರಿಯಲ್ ಕಿಸ್ಸರ್ ಎಂದು ಫ್ಯಾನ್ಸ್‌ ಪ್ರೀತಿಯಿಂದಲೂ ಕರೆದರು. ಅದರಲ್ಲಿಯೂ ಹೆಚ್ಚಾಗಿ ಇಮ್ರಾನ್ ಹಶ್ಮಿ ಮತ್ತು ಉದಿತಾ ಗೋಸ್ವಾಮಿ ಕೆಮೆಸ್ಟ್ರಿಯನ್ನು ಫ್ಯಾನ್ಸ್‌ ತುಂಬಾ ಮೆಚ್ಚಿಕೊಂಡರು. ಇವರಿಬ್ಬರ ರೊಮಾನ್ಸ್‌ಗೆ ಪ್ರೇಕ್ಷಕರು ಶಿಳ್ಳೆ ಹೊಡೆಯುತ್ತಿದ್ದರು. ಬೋಲ್ಡ್‌ ದೃಶ್ಯಗಳಲ್ಲಿ ಸೈ ಎನಿಸಿಕೊಂಡ ಮೇಲೆ ಕೇಳಬೇಕೆ? ನಟಿ ಉದಿತಾ ಕೂಡ ಇಮ್ರಾನ್‌ ಹಶ್ಮಿ ಜೊತೆ ಸ್ವಲ್ಪ ಹೆಚ್ಚಿಗೇನೇ ಬೋಲ್ಡ್‌ ಆಗಿ ರೊಮಾನ್ಸ್‌ ದೃಶ್ಯಗಳನ್ನು ಮಾಡಿದರು. ಅದರಲ್ಲಿಯೂ ಹೆಚ್ಚಾಗಿ  'ಜೆಹರ್' (Jehar) ಚಿತ್ರದಲ್ಲಿ ಇವರ ರೊಮಾನ್ಸ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದರು.  ಇವರ ಪ್ರಣಯ ದೃಶ್ಯಗಳು ಬಹಳ ಜನಪ್ರಿಯವಾಯಿತು. 

ಆದರೆ ಕುತೂಹಲದ ಸಂಗತಿ ಎಂದರೆ ಅತಿ ಹೆಚ್ಚು ಬೋಲ್ಡ್‌ ಆಗಿ ನಟಿಸಿರುವ ನಟಿ ಉದಿತಾ ಗೋಸ್ವಾಮಿ ಈಗ ಇಮ್ರಾನ್‌ ಹಶ್ಮಿ ಅವರ ಅತ್ತಿಗೆ! ಅಂದರೆ, ಇಮ್ರಾನ್‌ ಹಶ್ಮಿ ಅವರ  ಸೋದರಸಂಬಂಧಿ ಮೋಹಿತ್ ಸೂರಿ (Mohith Soori) ಅವರನ್ನು ಉದಿತಾ ಮದುವೆಯಾದರು. ಪರದೆಯ ಮೇಲೆ ಗಂಡನ ತಮ್ಮನ ಜೊತೆ ಉದಿತಾ ರೊಮಾನ್ಸ್‌ ಮಾಡುತ್ತಿದ್ದರೆ, ಪರದೆಯ ಹಿಂದೆ ನಿರ್ದೇಶಕ ಮೋಹಿತ್‌ ಬಲೆಗೆ ಉದಿತಾ ಬಿದ್ದಿದ್ದರು. ಇನ್ನೂ ಕುತೂಹಲದ ಸಂಗತಿ ಎಂದರೆ ಜೆಹರ್‌ನಲ್ಲಿ ಇಮ್ರಾನ್‌ ಹಶ್ಮಿ ಮತ್ತು ಉದಿತಾ ಕಾಣಿಸಿಕೊಂಡರೆ, ಇದೇ ಚಿತ್ರವನ್ನು ನಿರ್ದೇಶಿಸಿದ್ದ ಮೋಹಿತ್ ಸೂರಿಯವರನ್ನು ಪ್ರೇಮಿಸಿದ ಉದಿತಾ ಅವರ ಜೊತೆ ವಿವಾಹವಾದರು. ಸುಮಾರು  8 ವರ್ಷ ಡೇಟಿಂಗ್‌ ಬಳಿಕ  2013ರಲ್ಲಿ ಇವರ ವಿವಾಹವಾಗಿದ್ದು, ದಂಪತಿಗೆ ಈಗ ಇಬ್ಬರು ಮಕ್ಕಳಿದ್ದಾರೆ.

Shweta Changappa: ಬೀಚ್​ನಲ್ಲಿ ಪತಿಯೊಂದಿಗೆ ನಟಿ ಶ್ವೇತಾ ಚಂಗಪ್ಪ​- ವಿಡಿಯೋ ವೈರಲ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?
'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!