Jr.NTR ಮದುವೆಗೆ ಖರ್ಚು ಮಾಡಿದ ಹಣ ಎಷ್ಟು? ಪತ್ನಿ ಪ್ರಣತಿ ಧರಿಸಿದ್ದ ಸೀರೆ ಬೆಲೆ ಕೇಳಿದ್ರೆ ನಿಜಕ್ಕೂ ಹೌಹಾರ್ತೀರಾ!

Published : May 20, 2023, 05:45 PM IST
Jr.NTR ಮದುವೆಗೆ ಖರ್ಚು ಮಾಡಿದ ಹಣ ಎಷ್ಟು? ಪತ್ನಿ ಪ್ರಣತಿ ಧರಿಸಿದ್ದ ಸೀರೆ ಬೆಲೆ ಕೇಳಿದ್ರೆ ನಿಜಕ್ಕೂ ಹೌಹಾರ್ತೀರಾ!

ಸಾರಾಂಶ

Jr.NTR ಮದುವೆಗೆ ಖರ್ಚು ಮಾಡಿದ ಹಣ ಎಷ್ಟು? ಪತ್ನಿ ಪ್ರಣತಿ ಧರಿಸಿದ್ದ ಸೀರೆ ಬೆಲೆ ಕೇಳಿದ್ರೆ ನಿಜಕ್ಕೂ ಹೌಹಾರ್ತೀರಾ! ಅತ್ಯಂತ ದುಬಾರಿ ಮದ್ವೆಯಲ್ಲಿ ಜೂ.ಎನ್ ಟಿ ಆರ್ ಮದುವೆ ಕೂಡ ಒಂದಾಗಿದೆ. 

ತೆಲುಗು ಸ್ಟಾರ್ ಜೂ.ಎನ್ ಟಿ ಆರ್ ಸದ್ಯ ಆರ್ ಆರ್ ಆರ್ ಸಿನಿಮಾದ ಸಕ್ಸಸ್ ಎಂಜಾಯ್ ಮಾಡುತ್ತಿದ್ದಾರೆ. RRR ಸಕ್ಸಸ್‌ನ ಖುಷಿಯಲ್ಲೇ ಜೂ.ಎನ್ ಟಿ ಆರ್ ಇಂದು (ಮೇ 20) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಜೂ.ಎನ್ ಟಿ ಆರ್ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಸಿನಿಮಾ ಗಣ್ಯರು ಮತ್ತು ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಆರ್ ಆರ್ ಆರ್ ಸಿನಿಮಾ ಮೂಲಕ ಜೂ ಎನ್ ಟಿ ಆರ್ ಪ್ಯಾನ್ ವರ್ಲ್ಡ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಸಿನಿಮಾ ಬ್ರ್ಯಾಗ್ರೌಂಡ್ ಕುಟುಂಬದಿಂದ ಬಂದಿರುವ ಜೂ.ಎನ್ ಟಿ ಆರ್ ಅವರಿಗೆ ನಟನೆ ರಕ್ತಗತವಾಗಿಯೇ ಬಂದಿದೆ. ಅದ್ಭುತ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ, ರಂಜಿಸುತ್ತಿದ್ದಾರೆ. ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಜೂ.ಎನ್ ಟಿ ಆರ್ ಅವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ಮದುವೆ ವಿಚಾರವಾಗಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿದ್ದರು. 

2011ರಲ್ಲಿ ಮದುವೆ

ಜೂ.ಎನ್ ಟಿ ಆರ್ ಅವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ತುಂಬಾ ಸುಂದರವಾದ ಕುಟುಂಬ ಅವರದ್ದು. ಪತ್ನಿ ಲಕ್ಷ್ಮೀ ಪ್ರಣತಿ. 2011ರಲ್ಲಿ ಲಕ್ಷ್ಮೀ ಪ್ರಣತಿ ಜೊತೆ ಜೂ.ಎನ್ ಟಿ ಆರ್ ದಾಂಪತ್ಯಕ್ಕೆ ಕಾಲಿಟ್ಟರು. ಮೇ 5ರಂದು ನಡೆದ ಅದ್ದೂರಿ ವಿವಾಹ ಸಮಾರಂಭದಲ್ಲಿ ಜೂ.ಎನ್ ಟಿ ಆರ್ ಹಾಗೂ ಪ್ರಣತಿ ಪತಿ-ಪತ್ನಿಯರಾದರು. 

ಶ್ರೀವಂತ ಕಟುಂಬದ ಮಗಳು ಪ್ರಣತಿ

ಲಕ್ಷ್ಮಿ ಪ್ರಣತಿ ಶ್ರೀಮಂತ ಕುಟುಂಬದಿಂದ ಬಂದವರು. ಅವರ ತಂದೆ ನಾರ್ನೆ ಶ್ರೀನಿವಾಸ ರಾವ್. ಟಾಲಿವುಡ್‌ನಲ್ಲಿ ದೊಡ್ಡ ಉದ್ಯಮಿ. ಲಕ್ಷ್ಮಿ ಪ್ರಣತಿ ಅವರ ತಾಯಿ ಪ್ರಸ್ತುತ ಟಿಡಿಪಿ ಪಕ್ಷದ ಮುಖ್ಯಸ್ಥ ನಾರಾ ಚಂದ್ರ ಬಾಬು ನಾಯ್ಡು ಅವರ ಸೊಸೆ. 

ಅದ್ದೂರಿ ಮದುವೆ

ಜೂ.ಎನ್ ಟಿ ಆರ್ ಹಾಗೂ ಪ್ರಣತಿ ಮದುವೆಗೆ ಕೋಟಿ ಕೋಟಿ ಖರ್ಚು ಮಾಡಲಾಗಿದೆ. ಇದು ಭಾರತದ ಅತ್ಯಂತ ದುಬಾರಿ ಮದುವೆಗಳಲ್ಲಿ ಒಂದಾಗಿದೆ. ಮದುವೆ ಮಂಟಪಕ್ಕೆ 18 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎನ್ನಲಾಗಿದೆ. ಹೈದರಾಬಾದ್‌ನ ಅತ್ಯಂತ ಪ್ರಸಿದ್ಧ ಯೋಜಕರಾಗಿರುವ ದಿನಾಜ್ ನೋರಿಯಾ ಎಲ್ಲಾ ಡಿಸೈನ್ ನೋಡಿಕೊಂಡಿದ್ದರು. 

100 ಕೋಟಿ ಖರ್ಚು, 1 ಕೋಟಿ ಸೀರೆ 

ಜೂ.ಎನ್ ಟಿ ಆರ್ ಮದುವೆಗೆ ಬರೋಬ್ಬರಿ 1 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎನ್ನುವ ಸುದ್ದಿ ಇದೆ. ಅಷ್ಟೆಯಲ್ಲ ಜೂ.ಎನ್ ಟಿ ಆರ್ ಪತ್ನಿ ಲಕ್ಷ್ಮೀ ಪ್ರಣತಿ ಸೀರೆ ಬೆಲೆ ಕೇಳಿದ್ರೆ ಅಚ್ಚರಿ ಪಡುತ್ತೀರಿ. ಬರೋಬ್ಬರಿ 1 ಕೋಟಿ ರೂಪಾಯಿ ಸೀರೆ ಧರಿಸಿದ್ದರು. ಶುದ್ಧ ಚಿನ್ನ ಮತ್ತು ಬೆಳ್ಳಿಯಿಂದ ನೇಯ್ದ ಸೀರೆಯನ್ನು ಧರಿಸಿದ್ದರು. 

ಹಾಲಿವುಡ್‌ನಿಂದ Jr.NTRಗೆ ಬಂತು ದೊಡ್ಡ ಆಫರ್: RRR ಸ್ಟಾರ್ ಜೊತೆ ಕೆಲಸ ಮಾಡಬೇಕೆಂದ ಖ್ಯಾತ ನಿರ್ದೇಶಕ

ಸಿನಿಮಾ, ರಾಜಕೀಯ ಗಣ್ಯರು ಭಾಗಿ 

ತೆಲುಗು ಸ್ಟಾರ್ ಮದುವೆಗೆ ಸಿನಿಮಾ ಮತ್ತು ರಾಜಕೀಯ ವಲಯದ ಬಹುತೇಕ ಗಣ್ಯರು ಭಾಗಿಯಾಗಿದ್ದರು. ಒಟ್ಟು ಅತಿಥಿಗಳ ಸಂಖ್ಯೆ 30,000 ಎಂದು ಹೇಳಲಾಗುತ್ತಿದೆ. 

ಕೇಸ್ ದಾಖಲು 

ಜೂ.ಎನ್ ಟಿ ಆರ್ ವಿರುದ್ಧ ಬಾಲ್ಯ ವಿವಾಹ ಕಾಯ್ದೆಯಡಿ ದೂರು ದಾಖಲಾಗಿತ್ತು. ಪ್ರಣತಿಯನ್ನು 2010ರಲ್ಲೇ ಮದುವೆಯಾಗಲು ನಿರ್ಧರಿಸಿದ್ದರು ಜೂ.ಎನ್ ಟಿ ಆರ್. ಪ್ರಣತಿಗೆ ಆಗಿನ್ನೂ 18 ವರ್ಷ ಆಗಿರಲಿಲ್ಲ 17 ವರ್ಷ ಆಗಿತ್ತು. ಬಳಿಕ ಒಂದು ವರ್ಷ ಕಾದು ನಂತರ 2011ರಲ್ಲಿ ಮದುವೆಯಾದರು.

 80 ಕೋಟಿ ರೂ ಪ್ರೈವೇಟ್ ಜೆಟ್ ಸೇರಿ ಜೂ.ಎನ್‌ಟಿಆರ್ ಬಳಿ ಇದೆ ಐಷಾರಾಮಿ 6 ಕಾರು!

ಇಬ್ಬರು ಮಕ್ಕಳು 

ಜೂ.ಎನ್ ಟಿ ಆರ್ ಮತ್ತು ಪ್ರಣತಿ ದಂಪತಿಗೆ ಇಬ್ಬರು ಮಕ್ಕಳು. ಅಭಯ್ ರಾಮ್ ಮತ್ತು ಭಾರ್ಗವ ರಾಮ್ ಇಬ್ಬರೂ ಗಂಡು ಮಕ್ಕಳು. ಜೂ.ಎನ್ ಟಿ ಆರ್ ಸಿನಿಮಾಗಳಲ್ಲಿ ಬ್ಯುಸಿಯಾದರೇ ಪ್ರಣತಿ ಸಂಸಾರ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?