ಶಬಾನಾ ಅಜ್ಮಿ ಹಲವು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿರುವ ಬಾಲಿವುಡ್‌ನ ಯಶಸ್ವಿ ನಟಿ. ಆದರೆ ಅವರು ಕೂಡ ತಮ್ಮ ಕೆರಿಯರ್‌ನ ಆರಂಭದಲ್ಲಿ ಒಂದು ಪಾತ್ರ ಸಿಗುವುದಕ್ಕಾಗಿ ಸಾಕಷ್ಟು ಪಟ್ಟಿರುವುದನ್ನು ಅವರು ಹಲವು ಬಾರಿ ಹೇಳಿಕೊಂಡಿದ್ದಾರೆ.
ಪ್ರತಿಯೊಬ್ಬರ ಜೀವನದಲ್ಲೂ ಕಷ್ಟಗಳಿರುತ್ತವೆ. ಶಬಾನಾ ಅಜ್ಮಿ ಹಲವು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿರುವ ಬಾಲಿವುಡ್‌ನ ಯಶಸ್ವಿ ನಟಿ. ಆದರೆ ಅವರು ಕೂಡ ತಮ್ಮ ಕೆರಿಯರ್‌ನ ಆರಂಭದಲ್ಲಿ ಒಂದು ಪಾತ್ರ ಸಿಗುವುದಕ್ಕಾಗಿ ಸಾಕಷ್ಟು ಪಟ್ಟಿರುವುದನ್ನು ಅವರು ಹಲವು ಬಾರಿ ಹೇಳಿಕೊಂಡಿದ್ದಾರೆ. ಹೀಗಿರುವಾಗ 2012ರಲ್ಲಿ ತೆರೆಕಂಡ 'ರೆಲ್ಯುಕ್ಟೆಂಟ್ ಫಂಡಮೆಂಟಲಿಸ್ಟ್' ಎಂಬ ಸಿನಿಮಾದಲ್ಲಿ ಶಬಾನಾ ಜೊತೆ ಕೆಲಸ ಮಾಡಿದ ಬಾಲಿವುಡ್ ನಿರ್ಮಾಪಕಿ ಮೀರಾ ನಾಯರ್ ಅವರು ಶಬಾನಾ ಬಗ್ಗೆ ಕೆಲ ವಿಚಾರಗಳನ್ನು ಹೇಳಿಕೊಂಡಿದ್ದು, ಅದೀಗ ಸಂಚಲನ ಸೃಷ್ಟಿಸಿದೆ.
ಬಾಲಿವುಡ್ ನಟಿ ರೇಖಾ ಕೂಡ ಶಬಾನಾ ಅಜ್ಮಿ ಅವರ ಸಮಾಕಾಲೀನರು, ಆದರೆ ರೇಖಾಗೆ ಸಿಕ್ಕಿದಷ್ಟು ಅವಕಾಶಗಳು ಆರಂಭದಲ್ಲಿ ಶಬಾನಾಗೆ ಸಿಗುತ್ತಿರಲಿಲ್ಲ, ಹೀಗಿರುವಾಗ ಬಾಲಿವುಡ್ ನಿರ್ದೇಶಕಿ ಮೀರಾ ನಾಯರ್ ಅವರನ್ನು ಹೊಟೇಲೊಂದರ ರೆಸ್ಟ್‌ರೂಮ್‌ನಲ್ಲಿ ತಡೆ ಶಬಾನಾ ಅಜ್ಮಿ ಅವರು, ನನ್ನ ಬಳಿ ಇಲ್ಲದೇ ಇರುವಂತದ್ದು ರೇಖಾ ಬಳಿ ಏನಿದೆ ಎಂದು ಕೇಳಿದ್ದರಂತೆ ಇದನ್ನು ಸ್ವತಃ ಮೀರಾ ಅವರೇ ಹೇಳಿಕೊಂಡಿದ್ದಾರೆ.
ಭಾರತದಲ್ಲಿ ಅತೀ ಹೆಚ್ಚು ನ್ಯಾಷನಲ್ ಅವಾರ್ಡ್ ಪಡೆದ ನಟಿ; ವಿದ್ಯಾ ಬಾಲನ್, ಕಂಗನಾ ರಣಾವತ್ ಅಲ್ಲ, ಮತ್ಯಾರು?
ನ್ಯೂಯಾರ್ಕ್ ಇಂಡಿಯಾ ಫಿಲಂ ಫೆಸ್ಟಿವಲ್‌ನಲ್ಲಿ ಮುಖಾಮುಖಿಯಾದ ಶಬಾನಾ ಅವರಿಗೆ ಮೀರಾ ನಾಯರ್ ಅವರು ಪ್ರಶ್ನೆಗಳನ್ನು ಕೇಳಿದ್ದಾರೆ. ತಮ್ಮ ಕಳೆದೈದು ದಶಕದ ವೃತ್ತಿ ಜೀವನದಲ್ಲಿ ನೀವು ಜೊತೆಯಲ್ಲಿ ಕೆಲಸ ಮಾಡಿದ್ದ ಹಾಗೂ ನೀವು ಬಹಳ ನೆನಪಿಸಿಕೊಳ್ಳುವಂತಹ ನಿರ್ದೇಶಕರ ಹೆಸರು ಹೇಳಿ ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಶಬಾನಾ, ನಾನು ಹಲವಾರು ವರ್ಷಗಳಿಂದ ನಿರ್ದೇಶಕರೊಬ್ಬರೊಂದಿಗೆ ಸ್ವಲ್ಪ ಕೋಪ ಹೊಂದಿದ್ದೇನೆ, ನಾವು ಒಟ್ಟಿಗೆ ಕೆಲಸ ಮಾಡಬೇಕು ಎಂದು ಅವರೊಂದಿಗೆ ಹೇಳುತ್ತಿದ್ದೆ ಅದಕ್ಕಾಗಿ ಅವರು ಅಂತಿಮವಾಗಿ, ನನಗೆ ಒಂದು ಸಣ್ಣ ಪಾತ್ರವನ್ನು ನೀಡಿದರು. ಆದರೆ ಅದು ನಮ್ಮ ಸಂಬಂಧಕ್ಕೆ ಅಥವಾ ನನ್ನ ಮೇಲಿನ ನಂಬಿಕೆಗೆ ನ್ಯಾಯ ನೀಡುವುದಿಲ್ಲ, ಮತ್ತು ಆ ಮಹಿಳೆ ನನ್ನ ಪಕ್ಕದಲ್ಲಿ ಕುಳಿತಿದ್ದಾಳೆ ಎಂದು ಹೇಳುವ ಮೂಲಕ ಮೀರಾ ನಾಯರ್ ಅವರೇ ತಾವು ನೆನಪಿಸಿಕೊಳ್ಳುವ ನಿರ್ದೇಶಕಿ ಎಂದು ಹೇಳಿಕೊಂಡಿದ್ದಾರೆ.
ಇದೇ ವೇಳೆ ಶಬಾನಾ ಜೊತೆಗಿನ ಹಳೆಯ ನೆನಪು ಹಂಚಿಕೊಂಡ ಮೀರಾ ನಾಯರ್, ಜೂಹುವಿನ ಫೈವ್ ಸ್ಟಾರ್ ಹೊಟೇಲ್‌ನ ರೆಸ್ಟ್‌ರೂಮ್‌ಗೆ ಶಬಾನಾ ನನ್ನನ್ನು ಹಿಂಬಾಲಿಸಿಕೊಂಡು ಬಂದಿದ್ದರು. ಅದು ನಮ್ಮ ಮೊದಲ ಭೇಟಿಯಾಗಿತ್ತು. ಇದೇ ವೇಳೆ ಶಬಾನಾ ಅವರು, ರೇಖಾ ಬಳಿ ಇರುವುದು ನನ್ನ ಬಳಿ ಇಲ್ಲದೇ ಇರುವಂತದ್ದು ಏನಿದೆ ಎಂದು ನನ್ನ ಬಳಿ ಕೇಳಿದ್ದರು. ಆ ಲೇಡಿಸ್ ರೂಮ್‌ನಲ್ಲಿ ನಮ್ಮ ಪ್ರೀತಿಯ ಕಿತ್ತಾಟ ನಡೆದಿತ್ತು ಎಂದು ಹೇಳಿದ ಮೀರಾ ನಾಯರ್ ಮಾತು ಮುಂದುವರಿಸುತ್ತಾ, 'ದಿ ರಿಲಕ್ಟಂಟ್ ಫಂಡಮೆಂಟಲಿಸ್ಟ್'ನಲ್ಲಿ ನಿಮಗೆ ನೀಡಿದ ಪಾತ್ರವೂ ಬಹಳ ಚಿಕ್ಕದಾಗಿತ್ತು ಎಂಬುದು ನನಗೆ ತಿಳಿದಿದೆ ಎಂದ ಮೀರಾ, ಮತ್ತೆ ನಾವು ಜೊತೆಯಾಗಿ ಕೆಲಸ ಮಾಡುವ ಎಂದು ಶಬಾನಾ ಅಜ್ಮಿಗೆ ಭರವಸೆ ನೀಡಿದರು. ಇನ್ನೂ ಮೀರಾ ಅವರು ಬಾಲಿವುಡ್ ನಟಿ ರೇಖಾ ಜೊತೆ 'ಕಾಮ ಸೂತ್ರ: ಎ ಟೇಲ್ ಆಫ್ ಲವ್' ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ.
ಬಾಲಿವುಡ್ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕಾಫಿ ಮಾರ್ತಿದ್ರು; ಮನನೊಂದು ಎರಡು ಬಾರಿ ಆತ್ಮಹತ್ಯೆಗೂ ಯತ್ನಿಸಿದ್ರು!
ಈ ಹಿಂದೆ ಶಬಾನಾ ಅವರು ತಮ್ಮ ಕಾಲದ ನಟಿಯರ ಜೊತೆ ಸ್ಪರ್ಧೆಗೆ ಬಿದ್ದಿದ್ದರು ಹಾಗೂ ಅವರೊಂದಿಗೆ ಕೆಟ್ಟದಾಗಿಯೂ ನಡೆದುಕೊಂಡಿರಬಹುದು ಎಂಬುದನ್ನು ಒಪ್ಪಿಕೊಂಡಿದ್ದರು.