ಗರ್ಭಿಣಿ ದೀಪಿಕಾಗೆ ಇದೆಂಥ ಅಗ್ನಿಪರೀಕ್ಷೆನಪ್ಪಾ? ಯಾವ ಹೆಣ್ಣಿಗೂ ಇಂಥ ಸ್ಥಿತಿ ಬರಬಾರದು ಅಂತಿರೋ ಫ್ಯಾನ್ಸ್. ಅಷ್ಟಕ್ಕೂ ಆಗಿದ್ದೇನು?
ಕನ್ನಡತಿ, ಪಠಾಣ್- ಜವಾನ್ ಮೂಲಕ ಹಲ್ಚಲ್ ಸೃಷ್ಟಿಸೋ ನಟಿ ದೀಪಿಕಾ ಪಡುಕೋಣೆ ಬರುವ ಸೆಪ್ಟೆಂಬರ್ನಲ್ಲಿ ಅಂದರೆ ಮುಂದಿನ ತಿಂಗಳ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಈ ಕುರಿತು ಅವರೇ ಖುದ್ದು ಹಿಂದೆ ತಿಳಿಸಿದ್ದರು. ಇವರಿಗೆ ಗಂಡು ಮಗು ಆಗಲಿದೆ ಎಂದು ಜ್ಯೋತಿಷಿಗಳು ಇದಾಗಲೇ ಹೇಳಿಯಾಗಿದೆ. ಗರ್ಭಿಣಿಯಾಗಿರುವ ವಿಷಯ ತಿಳಿದ ಬಳಿಕವೂ ತಾವು ನಟಿಸುತ್ತಿದ್ದ ಎಲ್ಲಾ ಚಿತ್ರಗಳ ಶೂಟಿಂಗ್ಗಳನ್ನೂ ಮುಗಿಸಿ ಭೇಷ್ ಅನ್ನಿಸಿಕೊಂಡಿದ್ದಾರೆ ನಟಿ. ಆದರೆ ಇದಾಗಲೇ ನಟಿಗೆ ಸೀಮಂತ ಮಾಡಲಾಗಿದೆ ಎನ್ನುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಅದಾದ ಬಳಿಕ ಅವಧಿಗೆ ಮುನ್ನವೇ ಈಕೆಗೆ ಮಗು ಜನಿಸಿದೆ ಎಂದು ದೀಪಿಕಾ ಮತ್ತು ಪತಿ ರಣವೀರ್ ಜೊತೆಗೆ ಮಗುವಿರುವ ಫೋಟೋ ವೈರಲ್ ಆಗುತ್ತಿವೆ. ದೀಪಿಕಾ ಅವರು ಆಸ್ಪತ್ರೆಯಲ್ಲಿ ಇರುವುದನ್ನು ಈ ಫೋಟೋದಲ್ಲಿ ನೋಡಬಹುದು. ಇವೆಲ್ಲಾ ಫೇಕ್ ಫೋಟೋಗಳು ಎಂದು ಫ್ಯಾಕ್ಟ್ ಚೆಕ್ನಿಂದ ಗೊತ್ತಾಗಿದ್ದು, ಸದ್ಯ ಗರ್ಭಿಣಿ ದೀಪಿಕಾ ಮಗುವಿನ ನಿರೀಕ್ಷೆಯಲ್ಲಿಯೇ ಇದ್ದಾರೆ.
ಇದೆಲ್ಲವೂ ಸರಿ. ಆದರೆ ಇದೀಗ ದೀಪಿಕಾ ಪಡುಕೋಣೆಗೆ ಇನ್ನೊಂದು ಸಂಕಷ್ಟ ಎದುರಾಗಿದೆ. ಸೀಮಂತದ ಫೋಟೋಗಳು, ಮಗು ಜನಿಸಿದಂತೆ ತೋರುವ ಫೋಟೋಗಳು ಎಲ್ಲವೂ ದೀಪಿಕಾ ಮನಸ್ಸಿಗೆ ಅಷ್ಟೆಲ್ಲಾ ಘಾಸಿಗೊಳಿಸಿರಲಿಕ್ಕಿಲ್ಲ. ಆದರೆ ಗರ್ಭಿಣಿಯಾಗಿರುವ ದೀಪಿಕಾ ಗರ್ಭಿಣಿಯೇ ಅಲ್ಲ ಎನ್ನುವಂತೆ ಸೋಷಿಯಲ್ ಮೀಡಿಯಾಗಳಲ್ಲಿ ದಿನಕ್ಕೊಂದರಂತೆ ಮಾತುಗಳು ಕೇಳಿಬರುತ್ತಿವೆ. ಈ ಮಾತು ಮೊದಲಿನಿಂದಲೂ ಕೇಳಿ ಬರುತ್ತಲೇ ಇದೆ. ಈ ಮಾತು ಹುಟ್ಟುಹಾಕಿದ್ದೇ IVF ಎಕ್ಸ್‌ಪರ್ಟ್ ಡಾ. ಗೌರಿ ಅಗರ್ವಾಲ್. ಇನ್‌ಸ್ಪೈಯರ್ ಅಪ್‌ಲಿಫ್ಟ್ ಎಂಬ ಪಾಡ್‌ಕಾಸ್ಟ್ ನಲ್ಲಿ ಇವರು ದೀಪಿಕಾ ಗರ್ಭಿಣಿ ಎನ್ನುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಐವಿಎಫ್ ಮತ್ತು ಐಯುಐ ಬಗ್ಗೆ ಇದರಲ್ಲಿ ಮಾತನಾಡಿದ್ದು, ದೀಪಿಕಾ ಗರ್ಭಿಣಿಯಾಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಬಾಲಿವುಡ್‌ನಲ್ಲಿ ಅನೇಕ ನಟಿಯರಿಗೆ ಲೇಟಾಗಿ ಮಕ್ಕಳು ಆಗುವುದು ಯಾಕೆ ಎಂಬ ಬಗ್ಗೆ ಮಾತನಾಡಿದ್ದರು. ಬಾಲಿವುಡ್ ನಲ್ಲಿ ಅನೇಕ ನಟಿಯರು ತುಂಬಾ ಯಂಗ್ ಆಗಿದ್ದರೆ ನಾರ್ಮಲ್ ಮಗು ಹೆರುತ್ತಾರೆ. ಆದರೆ ಕೆಲವು ನಟಿಯರು ವಯಸ್ಸಾಗಿದೆ ಎಂದರೆ ಅವರು ಐವಿಎಫ್ ಮೊರೆ ಹೋಗುತ್ತಾರೆ. ದೀಪಿಕಾ ಪಡುಕೋಣೆ ಈಗ ಗರ್ಭಿಣಿ ಎಂಬುದು ವಿವಾದದಲ್ಲಿದೆ. ಬಾಲಿವುಡ್ ಅಂಗಳದಲ್ಲಿ ದೀಪಿಕಾ ಪ್ರಗ್ನೆಂಟ್ ಅಥವಾ ಸರೋಗಸಿ ಮೂಲಕ ಮಗು ಹೆಡೆಯುತ್ತಾರೆ ಎಂಬುದು ಒಂದು ಚರ್ಚಿತ ವಿಷಯವಾಗಿದೆ ಎಂದಿದ್ದರು.
ದೀಪಿಕಾ-ರಣವೀರ್ಗೆ ಗಂಡು ಮಗು, ಅಲ್ಲಲ್ಲಾ ಅದು ಹೆಣ್ಣು... ಮಗುವಿನ ಅಸಲಿಯತ್ತು ತಿಳಿದು ಫ್ಯಾನ್ಸ್ ಶಾಕ್!
ಅಲ್ಲಿಂದ ಶುರುವಾದ ಈ ಗರ್ಭಿಣಿ ಗಲಾಟೆ ಇನ್ನೂ ನಿಂತಿಲ್ಲ. ಮೊನ್ನೆಯಷ್ಟೇ ದೀಪಿಕಾ ಅವರು ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದರು. ಅವರ ಹೊಟ್ಟೆಯ ಸೈಜ್ ದಿನಕ್ಕೆ ಒಂದರಂತೆ ಕಾಣಿಸುತ್ತಿದೆ. ಆದ್ದರಿಂದ ಈಕೆ ಗರ್ಭಿಣಿಯೇ ಅಲ್ಲ, ಬಾಡಿಗೆ ತಾಯ್ತನದ ಮೂಲಕ ಈಕೆ ಮಗುವನ್ನು ಪಡೆದುಕೊಳ್ಳಲಿದ್ದಾರೆ ಎಂದು ಚರ್ಚಿಸಲಾಗುತ್ತಿವೆ. ಹಲವು ಮಹಿಳೆಯರು ಸೇರಿದಂತೆ ಅನೇಕ ಮಂದಿ ದೀಪಿಕಾ ಗರ್ಭಿಣಿ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಅಷ್ಟಕ್ಕೂ ದೀಪಿಕಾ ಅವರು, ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ. ದೀಪಿಕಾ ಇತ್ತೀಚೆಗಷ್ಟೇ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯ ಸಂಭ್ರಮದಲ್ಲಿ ಗರ್ಭಿಣಿ ಕಾಣಿಸಿಕೊಂಡಿದ್ದರು. ಝಗಮಗ ಡ್ರೆಸ್ ಹಾಕಿಕೊಂಡಿದ್ದ ನಟಿಯ ಹೊಟ್ಟೆ ಒಂದು ದೊಡ್ಡದಾಗಿರುವುದು ಬಿಟ್ಟರೆ, ಅದೇ ಫಿಗರ್ ಮೆಂಟೇನ್ ಮಾಡಿರುವುದಕ್ಕೆ ಶ್ಲಾಘನೆಗಳ ಮಹಾಪೂರವೇ ಹರಿದು ಬಂದಿತ್ತು. ಸಾಮಾನ್ಯವಾಗಿ ಗರ್ಭಧರಿಸಿದ ಮೇಲೆ ಹೆಣ್ಣುಮಕ್ಕಳು ತೂಕ ಹೆಚ್ಚಿಸಿಕೊಳ್ಳುವುದು ಮಾಮೂಲು. ಆದರೆ ದೀಪಿಕಾ ಹೊಟ್ಟೆ ಮಾತ್ರ ಬಂದಿರುವುದು ಬಿಟ್ಟರೆ, ಮೊದಲಿನ ರೀತಿಯಲ್ಲಿಯೇ ಕಾಣಿಸಿಕೊಂಡಿದ್ದರು. ಇದರ ಸೀಕ್ರೇಟ್ ಏನು ಎಂದು ಫ್ಯಾನ್ಸ್ ಪ್ರಶ್ನಿಸಿದ್ದರು. ಅಂದಹಾಗೆ, ರಣವೀರ್ ಸಿಂಗ್ ಮತ್ತು ದೀಪಿಕಾ, 25 ಜುಲೈ 2019 ರಂದು ಇಟಲಿಯ ಲೇಕ್ ಕೊಮೊದಲ್ಲಿ ವಿವಾಹವಾಗಿದ್ದದಾರೆ. ಮದುವೆಯಾಗಿ ಸುಮಾರು 5 ವರ್ಷಗಳ ಬಳಿಕ ಈಗ ಗರ್ಭ ಧರಿಸಿದ್ದಾರೆ. ಇವರು ಗರ್ಭಿಣಿಯೇ ಅಲ್ಲ ಎಂದು ಬರುತ್ತಿರುವ ಕಮೆಂಟ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇಂಥ ಸ್ಥಿತಿ ಯಾವ ಹೆಣ್ಣಿಗೂ ಬರಬಾರದು ಎನ್ನುತ್ತಿದ್ದಾರೆ.
ಅಮ್ಮನಾಗಲು ಎರಡೇ ತಿಂಗಳು ಬಾಕಿ: ನಟಿ ದೀಪಿಕಾ ಪಡುಕೋಣೆ ಸೀಮಂತದ ಫೋಟೋಗಳು ವೈರಲ್ ?