ತ್ರಿವಳಿ ಖಾನ್‌ಗಳ ಟ್ಯಾಲೆಂಟ್ ಪ್ರದರ್ಶನಕ್ಕೆ ಹೊಸ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ ಕಂಗನಾ!

By Mahmad Rafik  |  First Published Aug 15, 2024, 1:22 PM IST

ಈ ಹಿಂದೆ ಮೂವರು ಖಾನ್‌ಗಳ ವಿರುದ್ಧ ಮಾತನಾಡಿದ್ದ ಬಾಲಿವುಡ್ ಕ್ವೀನ್ ಕಂಗನಾ ತಮ್ಮ ಹೊಸ ಹೇಳಿಕೆ ಮೂಲಕ ಅಚ್ಚರಿಗೆ ಕಾರಣವಾಗಿದ್ದಾರೆ. ಖಾನ್‌ಗಳಿಗಾಗಿ ನಿರ್ದೇಶನ ಮಾಡುವೆ ಎಂಬ ಹೇಳಿಕೆಯನ್ನು ಕಂಗನಾ ರಣಾವತ್ ನೀಡಿದ್ದಾರೆ.


ಮುಂಬೈ: ನಟಿ ಕಂಗನಾ ರಣಾವತ್ ತಮ್ಮ ವಿವಾದಾತ್ಮಕ ಮಾತುಗಳಿಂದಲೇ ಬಾಲಿವುಡ್ ಅಂಗಳದಲ್ಲಿ ಗುರುತಿಸಿಕೊಂಡ ಕಲಾವಿದೆ. ರಾಷ್ಟ್ರಪ್ರಶಸ್ತಿ ವಿಜೇತೆಯಾಗಿರುವ ನಟಿ ಕಂಗನಾ ರಣಾವತ್ ಸದ್ಯ ಮಂಡಿ ಕ್ಷೇತ್ರದ ಸಂಸದೆಯಾಗಿದ್ದಾರೆ. ಬುಧವಾರ ಕಂಗನಾ ರಣಾವತ್ ಅಭಿನಯದ 'ಎಮರ್ಜೆನ್ಸಿ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿರುವ ಕಂಗನಾ ರಣಾವತ್ ತಮ್ಮ ಮನದಾಳದ ಮಾತುಗಳನ್ನು ಹೊರ ಹಾಕಿದ್ದಾರೆ. ಇದೀಗ ಕಂಗನಾ ಆಡಿದ ಮಾತುಗಳು ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿವೆ. ಬಾಲಿವುಡ್ ಖಾನ್‌ ಗಳಾದ ಶಾರೂಖ್ ಖಾನ್, ಆಮೀರ್ ಖಾನ್ ಮತ್ತು ಸಲ್ಮಾನ್ ಖಾನ್ ಅವರ ಪ್ರತಿಭೆಯನ್ನು ಗುರುತಿಸುವ ಕೆಲಸ ಇದುವರೆಗೂ ಆಗಿಲ್ಲ. ಹಾಗಾಗಿ ಮೂವರು ಖಾನ್‌ಗಳಿಗಾಗಿ ನಾನು ನಿರ್ದೇಶನ ಮಾಡಲು ಬಯಸುತ್ತೇನೆ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಕಂಗನಾ ರಣಾವತ್ ಈ ಹೇಳಿಕೆಗೆ ಖಾನ್ ಅಭಿಮಾನಗಳು ಆಕ್ರೋಶ ಹೊರ ಹಾಕಿದ್ದಾರೆ. 

ಮೂವರು ಖಾನ್‌ಗಳಿಗಾಗಿ ಸಿನಿಮಾ ಮಾಡುವ ಆಸೆ ಹೊರಹಾಕಿರುವ ಕಂಗನಾ ರಣಾವತ್, ತಾವೇ ನಿರ್ದೇಶಿಸಿ ಬಂಡವಾಳ ಹೂಡಿಕೆ ಮಾಡೋದಾಗಿ ಹೇಳಿಕೆ ನೀಡಿದ್ದಾರೆ. ಈ ಸಿನಿಮಾ ಮೂಲಕ ಮೂವರ ಪ್ರತಿಭೆಯನ್ನು ಅನಾವರಣಗೊಳಿಸುವ ಕೆಲಸ ಮಾಡುತ್ತೇನೆ. ಈ ಸಿನಿಮಾದಲ್ಲಿ ಮೂವರು ಏನ್ ಬೇಕಾದ್ರೂ ಮಾಡಬಹುದು. ನಾನು ಮೂವರಿಗಾಗಿ ಸಿನಿಮಾ ಮಾಡಲು ಬಯಸುತ್ತೇನೆ ಎಂದು ಕಂಗನಾ ಹೇಳಿಕೆ ನೀಡಿದ್ದಾರೆ. 

Tap to resize

Latest Videos

ಡೇಟಿಂಗ್ ಸುದ್ದಿ ಬೆನ್ನೆಲ್ಲೇ ಮದ್ವೆಯಾಗಿ 10 ವರ್ಷ ಆಯ್ತೆಂದ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ!

ಕೆಲ ವರ್ಷಗಳ ಹಿಂದೆ ಶಾರೂಖ್ ಖಾನ್ ಮತ್ತು ಆಮೀರ್ ಖಾನ್ ವಿರುದ್ಧ ಕಂಗನಾ ರಣಾವತ್ ಹೇಳಿಕೆಗಳನ್ನು ನೀಡಿದ್ದರು. ಆದರೆ ಈಗ ಅವರಿಗೆ ನಿರ್ದೇಶನ ಮಾಡುವ ಮಹದಾಸೆಯನ್ನು ಹೊರ ಹಾಕಿರೋದನ್ನು ಕಂಡು ಬಾಲಿವುಡ್ ಶಾಕ್ ಆಗಿದೆ. ಮೂವರು ಪ್ರತಿಭಾನ್ವಿತ ಕಲಾವಿದರು ಎಂದು ಒಪ್ಪಿಕೊಂಡಿರುವ ಕಂಗನಾ ರಣಾವತ್, ಇಲ್ಲಿಯವರೆಗೂ ಅವರ ನಟನಾ ಕೌಶಲ್ಯ ಪ್ರದರ್ಶನ ಮಾಡುವ ಅವಕಾಶಗಳು ಸಿಕ್ಕಿಲ್ಲ ಎಂದಿದ್ದಾರೆ. ಆದ್ದರಿಂದ ಮೂವರು ಖಾನ್‌ಗಳ ಟ್ಯಾಲೆಂಟ್ ತೋರಿಸಲು ನಾನು ಈ ಮಹತ್ವದ ಹೆಜ್ಜೆಯನ್ನು ಇರಿಸಿದ್ದೇನೆ ಎಂದು ಕಂಗನಾ ರಣಾವತ್ ಹೇಳಿಕೊಂಡಿದ್ದಾರೆ. 

ಬಹುದಿನಗಳ ಬಳಿಕ ಕಂಗನಾ ಅಭಿನಯದ ಸಿನಿಮಾ ಹೊರಬರುವ ಸಿದ್ಧತೆಯಲ್ಲಿದೆ. ಎಮೆರ್ಜೆನ್ಸಿ ಸಿನಿಮಾದ ಟ್ರೈಲರ್ ಬುಧವಾರ ಅಂದ್ರೆ ಆಗಸ್ಟ್ 14ರಂದು ಬಿಡುಗಡೆಯಾಗಿದೆ. ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ರಣಾವತ್ ನಟಿಸಿದ್ದು, ತುರ್ತು ಪರಿಸ್ಥಿತಿಯ ಕಥೆಯನ್ನು ಸಿನಿಮಾ ಹೊಂದಿದೆ. ಚಿತ್ರಕ್ಕೆ ಕಂಗನಾ ರಣಾವತ್ ಬಂಡವಾಳ ಹೂಡಿಕೆ ಮಾಡಿದ್ದಾರೆ. ರಾಜಕೀಯ ಕಥೆಯನ್ನು ಹೊಂದಿರುವ ಕಾರಣ ಚಿತ್ರ ನಿರೀಕ್ಷೆ ಮೂಡಿಸಿದೆ. ಚಿತ್ರದಲ್ಲಿ ಅನುಪಮ್ ಖೇರ್, ಮಿಲಿಂದ್ ಸೋಮನ್. ಶ್ರೇಯಸ್ ತಲ್ಪಡೆ ಮತ್ತು ದಿವಂಗತ ಸತೀಶ್ ಕೌಶಿಕ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಮಗನಿಗೆ ಕ್ರೈಸ್ತ ಧರ್ಮವನ್ನು ಪರಿಚಯಿಸಿದ್ದು ಕರೀನಾ.. ಹಾಗಾಗಿ ಆ ಪ್ರಶ್ನೆಗಳನ್ನ ಕೇಳ್ತಾನೆ ಎಂದ ಸೈಫ್ ಅಲಿ ಖಾನ್

click me!