
ಬಾಲ ಕಲಾವಿದನಾಗಿ ತೆಲುಗು ಚಿತ್ರರಂಗಕ್ಕೆ (Tollywood) ಪಾದಾರ್ಪಣೆ ಮಾಡಿದ ನಟ ಮಂಚು ಮನೋಜ್ (Manchu Manoj) ಇದೀಗ ಮದುವೆ ವಿಚಾರದಿಂದ ಸುದ್ದಿಯಲ್ಲಿದ್ದಾರೆ. ಸಹೋದರ ಮಂಚು ವಿಷ್ಣು (Manchu Vishnu) MAA ಚುನಾವಣೆಯಲ್ಲಿ ಸುದ್ದಿಯಾಗುತ್ತಿದ್ದಾರೆ. ಸಹೋದರಿ ಲಕ್ಷ್ಮಿ ಮಂಚು (Lakshmi Manchu) ಯುಟ್ಯೂಬ್ ಚಾನೆಲ್ ಮೂಲಕ ಸುದ್ದಿಯಲ್ಲಿದ್ದಾರೆ. ಹೀಗೆ ದಿನಕ್ಕೊಂದು ಹಾಟ್ ನ್ಯೂಸ್ ನೀಡುವ ಮೂಲಕ ಇಡೀ ಮಂಚು ಫ್ಯಾಮಿಲಿ ಸುದ್ದಿಯಲ್ಲಿದೆ.
ಸುಮಾರು 25 ಸಿನಿಮಾಗಳಲ್ಲಿ ನಟಿಸಿ, ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಮಂಚು ಮನೋಜ್ 2015 ಮೇ ತಿಂಗಳಲ್ಲಿ ಗರ್ಲ್‌ಫ್ರೆಂಡ್ (Girlfriend) ಪ್ರಣತಿ ರೆಡ್ಡಿ ಜೊತೆ ವೈವಾಹಿಕ ಜೀವನಕ್ಕೆ (marriage) ಕಾಲಿಟ್ಟರು. 2019ರ ಅಕ್ಟೋಬರ್‌ನಲ್ಲಿ ಇಬ್ಬರು ವಿಚ್ಛೇದನ (Divorce) ಪಡೆದು, ದೂರವಾದರು. ಎರಡು ವರ್ಷಗಳಿಂದ ಸಿಂಗಲ್ ಆಗಿರುವ ಮನೋಜ್ ಎರಡನೇ ಮದುವೆಯಾಗುತ್ತಿದ್ದಾರೆ ಎಂದು ತೆಲುಗಿನ ಖಾಸಗಿ ಮಾಧ್ಯಮವೊಂದು ವರದಿ ಮಾಡಿತ್ತು. ಮನೋಜ್ ವಿದೇಶಿ ಹುಡುಗಿಯನ್ನು ಪ್ರೀತಿಸುತ್ತಿದ್ದಾರೆ. (Relationship) ಇಬ್ಬರು ಮದುವೆ ಆಗುವ ಪ್ಲಾನ್ ಮಾಡುತ್ತಿದ್ದಾರೆ, ಆದರೆ ತಂದೆ ಈ ಪ್ರೀತಿಗೆ ವಿರುದ್ಧವಾಗಿದ್ದಾರೆ, ತಮ್ಮ ಕುಟುಂಬ (Family) ಮತ್ತು ಜಾತಿಯಲ್ಲಿರುವ (Cast) ಹುಡುಗಿಯನ್ನೇ ಮದುವೆ ಆಗುವಂತೆ ಒತ್ತಾಯ ಮಾಡುತ್ತಿದ್ದಾರೆ, ಎಂದು ವರದಿ ಮಾಡಿದ್ದರು. ಈ ವರದಿ ದೊಡ್ಡ ಮಟ್ಟದಲ್ಲಿ ಪ್ರಚಾರವಾಗಿ ಮನೋಜ್ ತನಕವೂ ತಲುಪಿತ್ತು. ಸೋಷಿಯಲ್ ಮೀಡಿಯಾ ಮೂಲಕವೇ ಮನೋಜ್ ಉತ್ತರ ನೀಡಿದ್ದಾರೆ.
'ದಯವಿಟ್ಟು ನನ್ನನ್ನು ಮದುವೆಗೆ ಆಹ್ವಾನಿಸಿ. ಮದುವೆ ಎಲ್ಲಿ ನಡೆಯುತ್ತಿದೆ ಯಾರದು ಹುಡಗ? ಅದೂ ಫಾರಿನ್ ಹುಡುಗಿ ಕ್ಯೂಟ್ ಬಿಳಿ ಹುಡುಗಿ? ನಿಮಗೆ ಹೇಗೆ ಬೇಕು ಹಾಗೆ ಬರೆಯುತ್ತೀರಿ ಅಲ್ವಾ?' ಎಂದು ಮನೋಜ್ ಟ್ಟೀಟ್ ಮಾಡಿದ್ದಾರೆ.
ಮನೋಜ್ ವಿಚ್ಛೇದನ ವಿಚಾರ ಹಂಚಿಕೊಂದಾಗ:
'ನಿಮ್ಮಲ್ಲರ ಜೊತೆ ನಾನು ನನ್ನ ವೈಯಕ್ತಿಕ ಜೀವನ (Personal Life) ಮತ್ತು ವೃತ್ತಿ ಜೀವನದಲ್ಲಿ (Professional Life) ಆಗುತ್ತಿರುವ ಬದಲಾವಣೆ ಬಗ್ಗೆ ಹಂಚಿಕೊಳ್ಳಬೇಕಿದೆ. ತುಂಬಾ ನೋವಿನಿಂದ ಹೇಳಿಕೊಳ್ಳಬೇಕಿದೆ, ನನ್ನ ಡಿವೋರ್ಸ್ ವಿಚಾರ ಇತ್ಯರ್ತವಾಗಿದೆ. ನಾವು ಏನು ಬ್ಯೂಟಿಫುಲ್ ಮತ್ತು ಅದ್ಭುತ ಸಂಬಂಧ ಎಂದು ಹೇಳುತ್ತಿದ್ದವೂ ಅದು ಇಂದು ಅಂತ್ಯವಾಗಿದೆ. ನಮ್ಮ ನಡುವೆ ಕೆಲವು ವಿಚಾರಗಳಲ್ಲಿ ವ್ಯತ್ಯಾಸವಿತ್ತು, ಇಬ್ಬರೂ ನೋವು (pain) ಅನುಭವಿಸಿದ್ದೀವಿ. ಹಲವು ಬಾರಿ ಮಾತುಕತೆ ಚರ್ಚೆ ನಡೆಸಿ ನಾವು ನಮ್ಮ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು, ಬೇರೆ ಆಗಲು ನಿರ್ಧರಿಸಿದ್ದೀವಿ. ನಾವಿಬ್ಬರು ಬೇರೆ ಬೇರೆ ವ್ಯಕ್ತಿತ್ವವಿರುವ ವ್ಯಕ್ತಿಗಳು, ಒಬ್ಬರನ್ನೊಬ್ಬರು ಕೇರ್ (Care) ಮಾಡುತ್ತೀವಿ ಹಾಗೆ ಗೌರವಿಸುತ್ತೀವಿ. ದಯವಿಟ್ಟು ನೀವು ನಮ್ಮ ಪ್ರೈವಸಿ ಗೌರವಿಸಬೇಕು, ನಮ್ಮ ನಿರ್ಧಾರದ ಬಗ್ಗೆ ಮತ್ತೆ ತಪ್ಪು ಮಾತುಗಳು ಬೇಡ. ನನ್ನ ಮನಸ್ಸಿನಲ್ಲಿ ನೋವಿದ್ದ ಕಾರಣ ನಟಿಸಲು ಆಗುತ್ತಿರಲಿಲ್ಲ. ನನ್ನ ಕುಟುಂಬ ನನ್ನ ಪರವಾಗಿ ನಿಲ್ಲದಿದ್ದರೆ ನಾವು ಈ ಪರಿಸ್ಥಿತಿ ಹೇಗೆ ಎದುರಿಸುತ್ತಿದ್ದೆ ಗೊತ್ತಿಲ್ಲ. ಈಗ ನನಗೆ ಒಂದೇ ಗೊತ್ತಿರುವುದು- ನಟನೆ (Acting). ನಾನು ಸಾಯುವವರೆಗೂ ನಟಿಸುತ್ತಿರುವೆ' ಎಂದು ಬರೆದುಕೊಂಡಿದ್ದರು.
ಮಂಚು ಮನೋಜ್ ಸೋಷಿಯಲ್ ಮೀಡಿಯಾದಲ್ಲಿ ಡಿವೋರ್ಸ್ ಖಚಿತ ಪಡಿಸಿದ ನಂತರ ಸಂಸದೆ, ನಟಿ ಸುಮಲತಾ (Sumalatha Ambareesh) ಕಾಮೆಂಟ್ ಮಾಡಿ ದೈರ್ಯ ತುಂಬಿದ್ದಾರೆ. 'ನಿನ್ನ ನೋವನ್ನು ಹಂಚಿಕೊಂಡು ಒಳ್ಳೆಯದು ಮಾಡಿದ್ಯಾ, ಈಗ ಅದನ್ನು ಓವರ್‌ಕಮ್ ಮಾಡಿ ಮತ್ತೆ ಶೈನ್ ಆಗಬೇಕು. Hugs to you, ನಿನಗೆ ಒಳ್ಳೆಯದಾಗಲಿ' ಎಂದು ಕಾಮೆಂಟ್ ಮಾಡಿದ್ದರು.
ಮಂಚು ಮನೋಜ್ ಮದುವೆ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿ ತಮ್ಮ ಮುಂದಿನ ಸಿನಿಮಾ ಪ್ರಾಜೆಕ್ಟ್‌ಗಳ ಬಗ್ಗೆ ರಿವೀಲ್ ಮಾಡುವುದಾಗಿ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.