ತಂದೆ ಶವದ ಜೊತೆ ಮಾಡಲ್ ಜಯ್ನೆ ಫೋಟೋ ಶೂಟ್: ಹಿಗ್ಗಾಮುಗ್ಗಾ ಟೀಕೆ ಮಾಡಿದ ನೆಟ್ಟಿಗರು

By Suvarna NewsFirst Published Oct 28, 2021, 10:50 AM IST
Highlights

ಅಂತ್ಯ ಸಂಸ್ಕಾರ ಮಾಡುವ ಮುನ್ನ ತಂದೆ ಶವದ ಮುಂದೆ ಫೋಟೋಶೂಟ್ ಮಾಡಿಸಿದ 20 ವರ್ಷದ ಮಾಡೆಲ್ ವಿರುದ್ಧ social mediaದಲ್ಲಿ ಆಕ್ರೋಶ.... 
 

ಮಾಡೆಲ್ ಕಮ್ Influencer ಜಯ್ನೆ ರಿವೇರಾ (Jayne Rivera) ತಂದೆ ಶವದ ಜೊತೆ ಇರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಬೆಂಕಿ ಹೆಚ್ಚಿಸುತ್ತಿದ್ದಾರೆ.

 ತಂದೆ ತೀರಿಕೊಂಡ ವಿಚಾರವನ್ನೂ ಶವದ (Dead body) ಜೊತೆ ಫೋಟೋಶೂಟ್ ಮಾಡುವ ಮೂಲಕ ರಿವೀಲ್ ಮಾಡಿದ್ದಾರೆ. ನೆಟ್ಟಿಗರು ಈ ಫೋಟೋಗೆ ರಿಪೋರ್ಟ್ ಮಾಡಿದ ಕಾರಣ ಹಾಗೂ  ಇನ್‌ಸ್ಟಾಗ್ರಾಂ ರೂಲ್ಸ್ (Instagram Rules) ಬ್ರೇಕ್ ಮಾಡಿದ ಕಾರಣ ಜಯ್ನೆ ಖಾತೆ ಡಿಲೀಟ್ ಮಾಡಲಾಗಿದೆ. 

#RIP : 'ಪಾಪಾ ಪಾಂಡು' ಬಾಸ್ ಬಾಲ್ ರಾಜ್ ಇನ್ನಿಲ್ಲ

20 ವರ್ಷದ ಮಾಡೆಲ್ ಜಯ್ನೆನ ಬ್ಲಾಕ್ ಸಿಂಗಲ್ ಪೀಸ್ ಡ್ರೆಸ್ (Black Dress) ಧರಿಸಿ ತಂದೆಯ ಶವದ ಪೆಟ್ಟಿಗೆಯ ಮುಂದೆ ಕುಳಿತು ಪೋಸ್ ನೀಡಿದ್ದಾಳೆ. ಫೋಟೋಗಳನ್ನು ಹಂಚಿಕೊಂಡು ತಂದೆಗೆ ವಿದಾಯ ಹೇಳಿದ್ದಾರೆ. 'ಚಿಟ್ಟೆ (Butterfly) ದೂರ ಹಾರಿದೆ. ನೀವು ನನ್ನ ಬೆಸ್ಟ್‌ ಫ್ರೆಂಡ್. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ (RIP). ಚೆನ್ನಾಗಿ ಬದುಕಿದ್ರಿ,' ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by @pakka_komedy_bro

 #Dadless ಎಂದು ಹ್ಯಾಟ್‌ಗ್ಯಾಟಿ ನೀಡಿರುವ ಜಯ್ನೆ ಎಲ್ಲಾ ಫೋಟೋಗಳಲ್ಲೂ  ನಗು ನಗುತಾ ಫೋಸ್ ಕೊಟ್ಟಿರುವುದೇ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. 

ಫ್ಯಾಷನ್ (Fashion), ಟ್ರಾವಲ್ (Travel), ಸ್ವಿಮ್‌ಸೂಟ್ (Swimsuit) ಕುರಿತಂತೆ ಸಾಕಷ್ಟು ವಿಚಾರಗಳ ಬಗ್ಗೆ ಫೋಸ್ಟ್ ಮಾಡಿದ ಜಯ್ನೆ 3 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುತ್ತಾರೆ. 'ತಂದೆ ಬಗ್ಗೆ ಗೌರವ ಇಲ್ಲವೇ?  ಹೆಣದ ಮುಂದೆ ಫೋಸ್ ಕೊಟ್ಟಿದ್ದೀರಿ',' ಸ್ವಲ್ಪವೂ ಸೂಕ್ಷ್ಮತೆ ಮತ್ತು ಜವಾಬ್ದಾರಿ ಇಲ್ಲದ ಹುಡುಗಿ', 'ಇದು ಕೆಟ್ಟ ನಡವಳಿಕೆ' ಎಂದು ಕಾಮೆಂಟ್ ಮಾಡಿದ್ದಾರೆ.

 ಹಿಗ್ಗಾಮುಗ್ಗಾ ಟ್ರೋಲ್ (Trolls) ಆಗುತ್ತಿರುವ ಕಾರಣ ಜಯ್ನೆ ಫೋಟೋ ಡಿಲೀಟ್ ಮಾಡಿ ಕ್ಷಮೆ ಕೇಳಿದ್ದಾರೆ. ಆದರೆ ಜಯ್ನೆ ಪರ ಕೆಲವು ಕಾಮೆಂಟ್ ಮಾಡಿದ 'ಬೇರೆ ಅವರು ಹೇಗೆ ಸಂತಾಪ ಸೂಚಿಸುತ್ತಾರೆ ಅಂತ ಗೊತ್ತಿಲ್ಲ. ಆದರೆ ಯಾಕೆ ನೀವೆಲ್ಲರೂ ಆಕೆಯನ್ನು ವಿರೋಧಿಸುತ್ತಿದ್ದೀರಿ. ತಮ್ಮ ಸ್ವಂತ ತಂದೆ ಶವನ ಮುಂದೆ ಪೋಸ್ ಕೊಟ್ಟರೆ ಏನು ತಪ್ಪು?' ಎಂದೂ ಹೇಳಿದ್ದಾರೆ. 

RIP: ಚಿಂತಕ, ನಟ GK Govinda Rao ಇನ್ನಿಲ್ಲ, ಹುಬ್ಬಳ್ಳಿಯಲ್ಲೇ ಸರಳ ಅಂತ್ಯಕ್ರಿಯೆ

ಫೋಟೋ ಅಪ್ಲೋಡ್ ಮಾಡಿದ್ದಕ್ಕೆ ಕ್ಷಮೆ ಕೇಳಬೇಕು, ಕೇಳಬಾರದು ಎಂದು ನಡೆಯುತ್ತಿದ್ದ ಚರ್ಚೆ ನಡುವೆ ಜಯ್ನೆ ಖಾತೆಯನ್ನು ಇನ್‌ಸ್ಟಾಗ್ರಾಂ ಡಿಲೀಟ್ ಮಾಡಿದೆ. ಟಿಕ್‌ಟಾಕ್‌ (Tiktok) ಬ್ಯಾನ್ ಆದಾಗ ಜಯ್ನೆ ಬೇಸರ ವ್ಯಕ್ತ ಪಡಿಸಿದ್ದರು. ಈಗ ಇನ್‌ಸ್ಟಾಗ್ರಾಂನಲ್ಲೂ ಇರದ ಕಾರಣ ಜಯ್ನೆ ಟ್ಟಿಟರ್ (Twitter) ಮೂಲಕ ಫಾಲೋವರ್ಸ್ ಜೊತೆ ಸಂಪರ್ಕದಲ್ಲಿದ್ದಾರೆ. ಇನ್‌ಸ್ಟಾಗ್ರಾಂ ಅವರನ್ನು ಸಂಪರ್ಕಿಸಿದ್ದು, ಶೀಘ್ರದಲ್ಲೇ ಮತ್ತೆ ಬರುವೆ. ಇಲ್ಲ ಹೊಸ ಖಾತೆ ತೆರೆಯುವೆ ಎಂದು ಬರೆದುಕೊಂಡಿದ್ದಾರೆ. 

ಸೋಷಿಯಲ್ ಮೀಡಿಯಾ ಇನ್‌ಫ್ಲೂಯನ್ಸರ್ ಆದರೆ ಲೈಕ್ (Likes) ಮತ್ತು ಕಾಮೆಂಟ್ (Comment) ಹೆಚ್ಚಿಸಿಕೊಳ್ಳಲು ಜನರು ಏನು ಬೇಕಿದ್ದರೂ ಮಾಡುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿ.

 

 
 
 
 
 
 
 
 
 
 
 
 
 
 
 

A post shared by Def Noodles (@defnoodles)

click me!