
ಬಾಲಿವುಡ್ ನಟ ಅಜಯ್ ದೇವಗನ್ (Ajay Devgan) ಮತ್ತು ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ನಡುವೆ ನಡೆದ ರಾಷ್ಟ್ರೀಯ ಭಾಷೆ ಚರ್ಚೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಸುದೀಪ್ ಪರ ದಕ್ಷಿಣ ಭಾರತ ನಟ,ನಟಿಯರು ಮಾತ್ರವಲ್ಲದೆ ಬಿ-ಟೌನ್ ಬೋಲ್ಡ್ ಹುಡುಗಿ ಕಂಗನಾ ಕೂಡ ಪರ ನಿಂತರ. Hindi imposition ಚರ್ಚೆ ಜೋರ್ ಇರುವಾಗಲೇ ಮೆಗಾ ಸ್ಟಾರ್ ಚಿರಂಜೀವಿ ವಿಡಿಯೋ ವೈರಲ್ ಆಗುತ್ತಿದೆ. ಪ್ರಶಸ್ತಿ ಪಡೆಯಲು ಕರೆಸಿ ಅವಮಾನ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಹೌದು! 1989ರಲ್ಲಿ ಚಿರಂಜೀವಿ (Chiranjeevi) ಅಭಿನಯದ ರುದ್ರವೇಣಿ ಸಿನಿಮಾಗೆ ನರ್ಗೀಸ್ ದತ್ ಅವಾರ್ಡ್ (Nargis Dutt Award) ಸಿಕ್ಕಿತ್ತು. ಅದನ್ನು ಪಡೆಯಲು ಚಿರಂಜೀವಿ ದೆಹಲಿಗೆ ತೆರಳಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ಟೀ ಪಾರ್ಟಿ ಆಯೋಜಿಸಲಾಗಿತ್ತು ಈ ವೇಳೆ ನಡೆದ ಘಟನೆಯನ್ನು ಚಿರಂಜೀವಿ ಹಂಚಿಕೊಂಡಿದ್ದಾರೆ.
'ನರ್ಗೀಸ್ ಅವಾರ್ಡ್ ಪಡೆಯುವ ಕಾರ್ಯಕ್ರಮದಲ್ಲಿ ನನಗೆ ಅವಮಾನ ಆಯ್ತು ತುಂಬಾ ಬೇಸರ ಆಯ್ತು. ಅಲ್ಲಿನ ಟೀ ಹಾಲಿನಲ್ಲಿ ಗೋಡೆಗಳ ಮೇಲೆ ಬರೀ ಬಾಲಿವುಡ್ ಸಿನಿಮಾ ಪೋಸ್ಟರ್ ಹಾಕಿದ್ದಾರೆ. ಪೃಥ್ವಿರಾಜ್ ಕಪೂರ್,ರಾಜ್ ಕಪೂರ್ (Raj kapoor), ದಿಲೀಪ್ ಕುಮಾರ್, ದೇವ್ ಆನಂದ್, ಅಮಿತಾಭ್ ಬಚ್ಚನ್ (Amithab Bachchan), ರಾಜೇಶ್ ಕನ್ನಾ, ದರ್ಮೇಂದ್ರ ಹೀಗೆ ಪ್ರತಿಯೊಬ್ಬರ ಚಿತ್ರ ಮತ್ತು ಅವರ ಬಗ್ಗೆ ಸಂಪೂರ್ಣ ಮಾಹಿತಿ ಹಾಕಲಾಗಿತ್ತು. ಇದಾದ ನಂತರ ಸೌತ್ ಸಿನಿಮಾಗಳ ಫೋಟೋ ಮಾತ್ರ ಹಾಕಲಾಗಿತ್ತು. ಎಂಜಿಆರ್ ಮತ್ತು ಜಯಲಲಿತಾ (Jayalalitha) ಡ್ಯಾನ್ಸ್ ಮಾಡುತ್ತಿರುವ ಫೋಟೋ ಹಾಕಲಾಗಿತ್ತು ಅಷ್ಟೆ. ಪ್ರೇಮ್ ನಜೀರ್ ಅವರು ಅತಿ ಸಿನಿಮಾಗಳನ್ನು ಮಾಡಿರುವ ಭಾರತೀಯ ನಟ ಅವರ ಫೋಟೋ. ಇದೆಲ್ಲಾ ಬಿಡಿ ನಮ್ಮ ಹೆಮ್ಮೆಯ ಕರ್ನಾಟಕದ ರಾಜಕಂಠೀರವ ರಾಜ್‌ಕುಮಾರ್ (Dr Rajkumar) ಮತ್ತು ವಿಷ್ಣುವರ್ಧನ್ (Vishnuvardhan) ಬಗ್ಗೆ ಏನೂ ಮಾತನಾಡಲಿಲ್ಲ. ತೆಲುಗು ಚಿತ್ರರಂಗ ನಟ ರಾಮಾ ರಾವ್, ನಾಗೇಶ್ವರ್ ರಾವ್ ಅವರೆಲ್ಲಾ ನಮಗೆ ದೇವರಿದ್ದಂತೆ ಅವರ ಫೋಟೋನೂ ಹಾಕಿರಲಿಲ್ಲ' ಎಂದು ನಟ ಚಿರಂಜೀವಿ ಬೇಸರ ವ್ಯಕ್ತ ಪಡಿಸಿ ಮಾತನಾಡಿದ್ದಾರೆ.
'ನಮ್ಮ ಹೆಮ್ಮೆಯ ಶಿವಾಜಿ ಗಣೇಶನ್ ಅವರ ಫೋಟೋ ಕೂಡ ಇರಲಿಲ್ಲ. ಭಾರತೀಯ ಸಿನಿಮಾ ಅಂದ್ರೆ ಬರೀ ಹಿಂದಿ ಸಿನಿಮಾ ಅನ್ನೋ ರೀತಿ ಬಿಂಬಿಸುತ್ತಾರೆ. ಬೇರೆ ಭಾಷೆ ಸಿನಿಮಾಗಳು ಅವರಿಗೆ ಲೆಕ್ಕವೇ ಇಲ್ಲ. ನಮ್ಮ ಸಾಧನೆ ಬಗ್ಗೆ ಒಂದು ಮಾತು ಕೂಡ ಹೇಳಲಿಲ್ಲ. ತುಂಬಾ ಬೇಸರದಿಂದ ನಾನು ಚೆನ್ನೈಗೆ ಬಂದು ಇದರ ಬಗ್ಗೆ ಮಾತನಾಡಿದೆ. ಕೆಲವೊಂದು ಪತ್ರಿಕೆ ಅದ್ಭುತವಾಗಿ ಬರೆದರು ಆದರೆ ಯಾವ ರೀತಿ ಪ್ರತಿಕ್ರಿಯೆನೂ ಸಿಗಲಿಲ್ಲ. ಆಗ ನಿರ್ಧಾರ ಮಾಡಿದೆ ನಾನು ಮಾಡುವ ಕೆಲಸ ನಮ್ಮೆ ಚಿತ್ರರಂಗ ಹೆಮ್ಮೆ ಪಡಬೇಕು ಎದೆ ತಟ್ಟಿ ಹೇಳಬೇಕು ಇವರು ನಮ್ಮವರು ಎಂದು. ನಮ್ಮ ಚಿತ್ರರಂಗ ಸಾಭೀತು ಮಾಡಿದೆ. ತೆಲಗು ಸಿನಿಮಾ ಅಂದ್ರೆ ರೀಜನಲ್ ಸಿನಿಮಾ (Regional language) ಅಲ್ಲ ಭಾರತೀಯ ಸಿನಿಮಾ ಅನ್ನುವ ರೀತಿ ಕೆಲಸ ಮಾಡಿದ್ದೀವಿ. ನಮ್ಮ ಭಾಷೆ ಬಗ್ಗೆ ಜನರಿಗೆ ಹೆಮ್ಮೆ ಇದೆ ಸಿನಿಮಾ ಅಂದ್ರೆ ತೆಲುಗು ಸಿನಿಮಾ ನೋಡಲು ಶುರು ಮಾಡಿದ್ದಾರೆ. ಈ ತಾರತಮ್ಯದಿಂದ ನಾವು ಆಗಲೇ ದೂರ ಬಂದಿದ್ದೀವಿ. ಬಾಹುಬಲಿ (Bahubali), ಬಾಹುಬಲಿ 2 ಮತ್ತು ಆರ್‌ಆರ್‌ಆರ್ (RRR) ಸಿನಿಮಾಗಳಿಂದ ನಾವು ಮುಂದೆ ಬಂದಿದ್ದೀವಿ. ಇಷ್ಟು ಅದ್ಭುತ ಸಿನಿಮಾಗಳನ್ನು ನೀಡಿದ ನಿರ್ದೇಶಕ ರಾಜಮೌಳಿ (Rajamouli) ಅವರಿಗೆ ನನ್ನ ಸಲಾಂ. ಅವರಂತೆ ಈ ಭೂಮಿ ಮೇಲೆ ಯಾರೂ ಇಲ್ಲ' ಎಂದು ಚಿರಂಜೀವಿ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.