ಇದೀಗ ಕಂಗನಾ ಚಿತ್ರರಂಗದಲ್ಲಿ ವೇತನ ಸಮಾನತೆ ಬಗ್ಗೆ ಪ್ರತಿಕ್ರಿಯೆ ನೀಡಿ ನಾನ್ಯಾವತ್ತು ಕಡಿಮೆ ವೇತನ ಪಡೆದಿಲ್ಲ(underpaid) ಎಂದು ಹೇಳಿದ್ದಾರೆ. ನನ್ನ ಜರ್ನಿಯಲ್ಲಿ ಸಹಾಯ ಮಾಡಿದ ಎಲ್ಲಾ ಪುರುಷರಿಗೂ ಧನ್ಯವಾದಗಳು ಎಂದು ಕಂಗನಾ ಹೇಳಿದರು.
ಬಾಲಿವುಡ್ ಖ್ಯಾತ ನಟಿ ಕಂಗನಾ ರಣಾವತ್(Kangana Ranaut) ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸಿನಿಮಾಗಿಂತ ಹೆಚ್ಚಾಗಿ ಕಂಗನಾ ಬೇರೆ ಬೇರೆ ವಿಚಾರಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ದೇಶದ ಯಾವುದೇ ಸಮಸ್ಯೆಗಳ ಬಗ್ಗೆ ಅಥವಾ ಚರ್ಚೆಯಲ್ಲಿರುವ ವಿಚಾರಗಳ ಬಗ್ಗೆ ಕಂಗನಾ ತನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿರುತ್ತಾರೆ. ಕೆಲವೊಮ್ಮೆ ಕಂಗನಾ ಹೇಳಿಕೆ ವಿವಾದಕ್ಕೆ ದಾರಿಮಾಡಿಕೊಟ್ಟಿದ್ದು ಇದೆ.
ಇದೀಗ ಕಂಗನಾ ಚಿತ್ರರಂಗದಲ್ಲಿ ವೇತನ ಸಮಾನತೆ ಬಗ್ಗೆ ಪ್ರತಿಕ್ರಿಯೆ ನೀಡಿ ನಾನ್ಯಾವತ್ತು ಕಡಿಮೆ ವೇತನ ಪಡೆದಿಲ್ಲ(underpaid) ಎಂದು ಹೇಳಿದ್ದಾರೆ. ಅಂದಹಾಗೆ ವೇತನ ಅಸಮಾನತೆ ಬಗ್ಗೆ ಸದಾ ಚರ್ಚೆಯಾಗುತ್ತಲೇ ಇರುತ್ತೆ. ಸ್ಟಾರ್ ನಟರಿಗೆ ಹೆಚ್ಚು ಸಂಭಾವನೆ ನೀಡುತ್ತಾರೆ ಆದರೆ ನಟಿಯರ ಸಂಭಾವನೆ ತೀರ ಕಡಿಮೆ ಎನ್ನುವ ಅಸಮಾಧಾನದ ಆಗಾಗ ಕೇಳಿಬರುತ್ತಲೇ ಇರುತ್ತದೆ. ಈ ಬಗ್ಗೆ ಮಾತನಾಡಿದ ಕಂಗನಾ ನಾನು ಯಾವತ್ತು ಕಡಿಮೆ ಸಂಭಾವನೆ ಪಡೆದಿಲ್ಲ. ನನ್ನ ಜರ್ನಿಯಲ್ಲಿ ಸಹಾಯ ಮಾಡಿದ ಎಲ್ಲಾ ಪುರುಷರಿಗೂ ಧನ್ಯವಾದಗಳು ಎಂದು ಹೇಳಿದರು.
ಅಲ್ಲದೇ ತನ್ನ ವೃತ್ತಿ ಜೀವನದ lower points ಎಂದು ಮಾತನಾಡಿ, ಪುರುಷ ಪ್ರಧಾನ ಸಿನಿಮಾಗಳನ್ನು, ಖಾನ್‌ಗಳ ಸಿನಿಮಾಗಳನ್ನು, ಕುಮಾರ್‌ಗಳ ಸಿನಿಮಾಗಳನ್ನು ರಿಜೆಕ್ಟ್ ಮಾಡಿರುವುದು ಎಂದು ಹೇಳಿದ್ದಾರೆ.
ನನ್ನನ್ನು ಕೆಟ್ಟದಾಗಿ ಮುಟ್ಟುತ್ತಿದ್ದ, ಬಟ್ಟೆ ಬಿಚ್ಚುತ್ತಿದ್ದ; ಬಾಲ್ಯದ ಭಯಾನಕ ಅನುಭವ ಹೇಳಿದ ಕಂಗನಾ
ಫ್ರಿ ಪ್ರೆಸ್ ಜರ್ನಲ್ ಆಂಗ್ಲ ಮಾಧ್ಯಮದ ಜೊತೆ ಮಾತನಾಡಿದ ಕಂಗನಾ, ನಾನು ಕಡಿಮೆ ಸಂಭಾವನೆ ಪಡೆದಿಲ್ಲ. ನನ್ನ ಜರ್ನಿಯಲ್ಲಿ ಅನೇಕ ಪುರುಷರು ಸಹಾಯ ಮಾಡಿದ್ದಾರೆ. ನಾನು ಕೆಲವು ಸಮಯ ಯೋಚಿಸಿದೆ ನಾನ್ಯಾಕೆ ಪುರುಷರಷ್ಟೆ ಸಮಾನ ಸಂಭಾವನೆ ಪಡೆಯಬಾರದು ಎಂದು. ನಾನು ಇಂದು ಸಂತೋಷದಿಂದ ಹೇಳುತ್ತೇನೆ. ನಾನು ಕಡಿಮೆ ಸಂಭಾವನೆ ಪಡೆದಿಲ್ಲ ಎಂದು. ಅಂತ ಕಂಗನಾ ಹೇಳಿದ್ದಾರೆ. ಇದೇ ಸಮಯದಲ್ಲಿ ಕಂಗನಾ ಹಿರಿಯ ನಟಿಯರಾದ ರೇಖಾ ಮತ್ತು ಹೇಮ ಮಾಲಿನಿ ಅವರ ಬಗ್ಗೆಯೂ ಹೇಳಿದ್ದಾರೆ.
ನಾನು ಅನೇಕ ಪುರುಷ ಪ್ರಧಾನ ಸಿನಿಮಾಗಳನ್ನಿ ರಿಜೆಕ್ಟ್ ಮಾಡಿದ್ದೀನಿ. ಖಾನ್ ಪ್ರಧಾನ ಸಿನಿಮಾಗಲು, ಕುಮಾರ್ ಪ್ರಧಾನ ಸಿನಿಮಾಗಳನ್ನು ಮತ್ತು ಎಲ್ಲಾ ರೀತಿಯ ದೊಡ್ಡ ಹೀರೋಗಳ ಸಿನಿಮಾಗಳನ್ನು ನಾನು ತಿರಸ್ಕರಿಸಿದ್ದೀನಿ. ನಾನು ಯಾವಗಲೂ ದೃಷ್ಟಿಕೋನವನ್ನು ಹೊಂದಿದ್ದೇನೆ ಆದರೆ ಏಕಾಂಗಿಯಾಗಿ ಕಾರ್ಯಗತಗೊಳಿಸಲು ಸಾಧ್ಯವಿಲ್ಲ. ಯಶಸ್ವಿ ಮಹಿಳೆಯರಿಗೆ ಅನೇಕ ಪುರುಷರು ಸಹಾಯ ಮಾಡುತ್ತಾರೆ ಎಂದು ಹೇಳಿದ್ದಾರೆ.
ಮಹಿಳೆಯರು ತಮ್ಮನ್ನು ಮೀರಿಸುವುದನ್ನು ನೋಡಿದಾಗ ಪುರುಷರು ಮನನೊಂದುಕೊಳ್ಳುತ್ತಾರೆ: ಕಂಗನಾ
ಕಂಗನಾ ನಟನೆ ಜೊತೆಗೆ ನಿರ್ದೇಶನದ ಕಡೆಯೂ ಮುಖಮಾಡಿದ್ದಾರೆ. ಟಿಕು ವೆಡ್ಸ್ ಶೇರು ಸಿನಿಮಾಗೆ ಕಂಗನಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ ಖ್ಯಾತ ನಟ ನವಾಜುದ್ದೀನ್ ಸಿದ್ದಕಿ ಅವನೀತ್ ಕೌರ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಮಣಿಕರ್ಣಿಕ ರಿಟರ್ನ್ ಸಿನಿಮಾಗೂ ಕಂಗನಾ ಬಂಡವಾಳ ಹೂಡಿದ್ದಾರೆ.