ಮಂಗಳೂರು ಕಮಿಷನರ್ ಹಾಡಿಗೆ ಪೊಲೀಸರ ಜೊತೆ ನಟ ಶಿವಣ್ಣ ಮಸ್ತ್ ಡ್ಯಾನ್ಸ್

Published : May 02, 2022, 04:53 PM IST
ಮಂಗಳೂರು ಕಮಿಷನರ್ ಹಾಡಿಗೆ ಪೊಲೀಸರ ಜೊತೆ ನಟ ಶಿವಣ್ಣ ಮಸ್ತ್ ಡ್ಯಾನ್ಸ್

ಸಾರಾಂಶ

ಮಂಗಳೂರು ಪೊಲೀಸರ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್(shivarajkumar) ಟಗರು(Tagaru) ಹಾಡಿಗೆ ಪೊಲೀಸರ ಜೊತೆ ಕುಣಿದು ಕುಪ್ಪಳಿಸಿದ್ದಾರೆ. ಮಂಗಳೂರು ಕಮಿಷನರ್ ಶಶಿಕುಮಾರ್ ಹಾಡಿದ ಟಗರು ಹಾಡಿಗೆ ಶಿವಣ್ಣ ಸಖತ್ ಆಗಿ ಸ್ಟೆಪ್ ಹಾಕಿ ಪೊಲೀಸರ ಜೊತೆ ಕಾಲ ಕಳೆದಿದ್ದಾರೆ.  

ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್,

ಮಂಗಳೂರು ಪೊಲೀಸರ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್(shivarajkumar) ಟಗರು(Tagaru) ಹಾಡಿಗೆ ಪೊಲೀಸರ ಜೊತೆ ಕುಣಿದು ಕುಪ್ಪಳಿಸಿದ್ದಾರೆ. ಮಂಗಳೂರು ಕಮಿಷನರ್ ಶಶಿಕುಮಾರ್ ಹಾಡಿದ ಟಗರು ಹಾಡಿಗೆ ಶಿವಣ್ಣ ಸಖತ್ ಆಗಿ ಸ್ಟೆಪ್ ಹಾಕಿ ಪೊಲೀಸರ ಜೊತೆ ಕಾಲ ಕಳೆದಿದ್ದಾರೆ.

ಮಂಗಳೂರಿನ ಖಾಸಗಿ ಬ್ಯಾಂಕ್ ಸಭಾಂಗಣದಲ್ಲಿ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಪತ್ನಿ ಗೀತಾ ಜೊತೆ ಶಿವರಾಜ್ ಕುಮಾರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಮಂಗಳೂರು ಕಮಿಷನರ್ ಶಶಿಕುಮಾರ್ ಹಾಗೂ ಸಿಬ್ಬಂದಿ ವರ್ಗ ಭಾಗಿಯಾಗಿದ್ದರು. ಪುನೀತ್ ರಾಜ್‍ಕುಮಾರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಮಂಗಳೂರು ಪೊಲೀಸರ ಪ್ರಶ್ನೆಗಳಿಗೆ ಶಿವರಾಜ್ ಕುಮಾರ್ ಉತ್ತರಿಸಿದರು‌. ಬಳಿಕ ಪುನೀತ್ ಗಾಗಿ ಹಾಡು ಹಾಡಿದ ನಟ ಶಿವರಾಜ್ ಕುಮಾರ್ ನಂತರ ವೇದಿಕೆಯಲ್ಲೇ ಟಗರು ಹಾಡಿಗೆ ಪೊಲೀಸರ ಜೊತೆ ಸ್ಟೆಪ್ ಹಾಕಿದ್ರು. ಕಮಿಷನರ್ ಶಶಿಕುಮಾರ್ ಹಾಡಿಗೆ ಪೊಲೀಸರ ಜೊತೆ ಕುಣಿದು ಕುಪ್ಪಳಿಸಿದ ನಟ ಶಿವರಾಜ್ ಕುಮಾರ್ ಜೊತೆ ಸೆಲ್ಫಿ ಕ್ಲಿಕ್ಕಿಸಿ ಮಂಗಳೂರು ಪೊಲೀಸರು ಸಂಭ್ರಮಿಸಿದರು.‌ ಕಿಕ್ಕಿರಿದು ಸೇರಿದ್ದ ಸಭಾಂಗಣದಲ್ಲಿ ಮಂಗಳೂರು ಪೊಲೀಸರ ಜೊತೆ ಕೆಲ ಕಾಲ ಕಳೆದ ಶಿವಣ್ಣ ದಂಪತಿಗೆ ಮಂಗಳೂರು ಪೊಲೀಸ್ ಇಲಾಖೆ ವತಿಯಿಂದ ಗೌರವ ಸಲ್ಲಿಸಲಾಯಿತು. ‌ದೇವಸ್ಥಾನ ಭೇಟಿ ಹಿನ್ನೆಲೆ ‌ ಶಿವರಾಜ್ ಕುಮಾರ್ ಮಂಗಳೂರಿಗೆ ಆಗಮಿಸಿದ್ದರು.

ವೆಬ್ ಸೀರಿಸ್ ಲೋಕಕ್ಕೆ ಎಂಟ್ರಿ ಕೊಟ್ಟ ಶಿವಣ್ಣನಿಗೆ ಮಗಳು ನಿವೇದಿತಾ ಸಾಥ್

ಅಣ್ಣ-ತಂಗಿ ಕಥೆಗೆ ತಂಗಿ ಹುಡುಕ್ತಿದೀನಿ ಅಂದ ಶಿವಣ್ಣ

ಅಣ್ಣತಂಗಿ ಪಾತ್ರದಲ್ಲಿ ಸಾಯಿಪ್ರಕಾಶ್ ಅವರ ಇನ್ನೊಂದು ಕಥೆ ಮಾಡಿದ್ದಾರೆ. ಅದರಲ್ಲಿ ಮೂರು ಕಥೆ ಇದ್ದು, ಅದಕ್ಕೆ ಒಂದೊಳ್ಳೆ ತಂಗಿ ಹುಡುಕ್ತಾ ಇದೀನಿ ಎಂದು ನಟ ಡಾ.ಶಿವರಾಜ್ ಕುಮಾರ್ ಹೇಳಿದ್ದಾರೆ.

ಮಂಗಳೂರಿನಲ್ಲಿ ನಡೆದ ಪೊಲೀಸರ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಪೊಲೀಸರ ಪ್ರಶ್ನೆಗೆ ನಟ ಶಿವಣ್ಣ ಉತ್ತರಿಸಿದರು. ‌'ಅಪ್ಪು ಇಲ್ಲ ಅಂತ ಅಂದುಕೊಳ್ಳೋದು ಬೇಡ, ಅವನು ನಮ್ಮ ಜೊತೆ ಇದ್ದಾನೆ. ಅವನನ್ನ ಈ ರೂಪದಲ್ಲಿ ನೆನಪಿಸಿಕೊಳ್ಳೋದು ಬೇಡ, ಅವನನ್ನು ಸೆಲೆಬ್ರೆಟ್ ಮಾಡೋಣ' ಎಂದರು.

ನನ್ನ ತಮ್ಮ ಅಂತಲ್ಲ ಯಾರದೇ ಆದ್ರೂ ಫೋಟೋ ಕಿತ್ತಾಕಬಾರದು: ತಿರುಪತಿ ಘಟನೆಗೆ ಶಿವಣ್ಣ ರಿಯಾಕ್ಷನ್!

'ಮಂಗಳೂರು ನನಗೆ ತುಂಬಾ ಇಷ್ಟದ ಊರು, ಅಪ್ಪಾಜಿಗಿಂತ ಹೆಚ್ಚು ಸಿನಿಮಾ ಇಲ್ಲಿ ಮಾಡಿದ್ದೇನೆ.‌ ಅಭಿಮಾನಿಗಳಾಗಿ ಪೊಲೀಸರನ್ನ ನೋಡೋದ್ರಲ್ಲಿ ಒಂದು ಮಜಾ ಇದೆ. ನನ್ನ ಹೆಚ್ಚಿನ ಸಿನಿಮಾದಲ್ಲಿ ಪೊಲೀಸ್ ಪಾತ್ರ ಮಾಡಿದ್ದೇನೆ. ಮುಂದೆ ಮಂಗಳೂರಿನಲ್ಲಿ ಅಪ್ಪು ಸೆಲೆಬ್ರೆಷನ್ ಮಾಡುವ, ಅದು ಅವನಿಗೆ ಗೌರವ. ತುಳು‌ ಬೇರೆ ಅಲ್ಲ, ಕನ್ನಡ ಬೇರೆ ಅಲ್ಲ, ಎಲ್ಲರೂ ಒಟ್ಟಿಗೆ ಇರೋಣ. ಮುಂದೆ ಪೊಲೀಸ್ ಪಾತ್ರದಲ್ಲಿ ಟಗರು 2 ಸಿನಿಮಾ ಬರಬಹುದು. ರೌಡಿಸಂ ಅನ್ನೋದು ಸಿನಿಮಾದ ಪಾರ್ಟ್, ಅವರಿದ್ರೆ ನಿಮಗೆ ಕೆಲಸ. ಇವತ್ತಿನ ಕಾರ್ಯಕ್ರಮ ಖುಷಿ ಕೊಟ್ಟಿದೆ, ಮಂಗಳೂರು ಪೊಲೀಸರ ಗತ್ತು ನೋಡಿದೆ' ಎಂದರು.

'ಮಂಗಳೂರು ಕಮಿಷನರ್ ಶಶಿಕುಮಾರ್ ಧ್ವನಿ ತುಂಬಾ ಚೆನ್ನಾಗಿದೆ. ಮುಂದೆ ಭೈರಾಗಿ ಚಿತ್ರ ರಿಲೀಸ್ ಆಗುತ್ತೆ, ವೇದ ಅದರ ನೆಕ್ಸ್ಟ್ ಇದೆ. ಯೋಗರಾಜ್ ಭಟ್ ಜೊತೆ ನಾನು ಮತ್ತು ಪ್ರಭುದೇವ ಅವರು ನಟಿಸುತ್ತಿರುವ ಸಿನಿಮಾವಿದೆ' ಎಂದು ಶಿವಣ್ಣ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?