ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ' ವೀಕ್ಷಿಸಿದ ರಾಣಾದಗ್ಗುಬಾಟಿ; ತೆಲುಗು ಸ್ಟಾರ್ ನೀಡಿದ ಮೊದಲ ವಿಮರ್ಶೆ ಹೀಗಿದೆ

Published : May 01, 2022, 04:07 PM IST
ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ' ವೀಕ್ಷಿಸಿದ ರಾಣಾದಗ್ಗುಬಾಟಿ; ತೆಲುಗು ಸ್ಟಾರ್ ನೀಡಿದ ಮೊದಲ ವಿಮರ್ಶೆ ಹೀಗಿದೆ

ಸಾರಾಂಶ

777 ಚಾರ್ಲಿ ಚಿತ್ರಕ್ಕೆ ರಾಣಾದಗ್ಗುಬಾಟಿ(Rana Daggubati ) ಸಾಥ್ ನೀಡಿದ್ದಾರೆ. ಬಾಲಿವುಡ್ ಸ್ಟಾರ್ ಈಗಾಗಲೇ ಸಿನಿಮಾ ವೀಕ್ಷಿಸಿದ್ದು ಚಿತ್ರದ ಮೊದಲ ವಿಮರ್ಶೆ ನೀಡಿದ್ದಾರೆ. ಹೌದು, ರಾಣಾ ದಗ್ಗುಬಾಟಿ ಈಗಾಗಲೇ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾ ನೋಡು ರಾಣಾ ದಗ್ಗುಬಾಟಿ ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಸ್ಯಾಂಡಲ್ ವುಡ್ ಸಿಂಪಲ್ ಸ್ಟಾರ್ ರಕ್ಷಿತ್​ ಶೆಟ್ಟಿಯನ್ನು(Rakshit Shetty) ಮತ್ತೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದರು. ಅವನೇ ಶ್ರೀಮನ್ನಾರಾಯಣ ಸಿನಿಮಾ ಬಳಿಕ ರಕ್ಷಿತ್ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಹಾಗಾಗಿ ಅಭಿಮಾನಿಗಳು ಕಾರತರರಾಗಿದ್ದಾರೆ. ರಕ್ಷಿತ್ ನಟನೆಯ ‘777 ಚಾರ್ಲಿ’ ಸಿನಿಮಾ (777 Charlie) ಬಿಡುಗಡೆಗೆ ಸಿದ್ಧವಾಗಿದ್ದು ದೊಡ್ಡಮಟ್ಟದಲ್ಲಿ ನಿರೀಕ್ಷೆ ಮೂಡಿಸಿದೆ. ಈಗಾಗಲೇ ಟೀಸರ್ ಮತ್ತು ಪೋಸ್ಟರ್ ಮೂಲಕ ಸದ್ದು ಮಾಡುತ್ತಿರುವ ಚಾರ್ಲಿ ಇತ್ತೀಚಿಗಷ್ಟೆ ಬಿಡುಗಡೆ ದಿನಾಂಕ ಬಹಿರಂಗ ಪಡಿಸಿತ್ತು. ಅಂದಹಾಗೆ ಬಹುನಿರೀಕ್ಷೆಯ ಸಿನಿಮಾ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಕನ್ನಡದ ಚಾರ್ಲಿ ರಿಲೀಸ್ ಆಗುತ್ತಿದೆ.

ವಿಶೇಷ ಎಂದರೆ ಈ ಸಿನಿಮಾಗೆ ತೆಲುಗು ಸ್ಟಾರ್ ರಾಣಾದಗ್ಗುಬಾಟಿ(Rana Daggubati ) ಸಾಥ್ ನೀಡಿದ್ದಾರೆ. ಬಾಲಿವುಡ್ ಸ್ಟಾರ್ ಈಗಾಗಲೇ ಸಿನಿಮಾ ವೀಕ್ಷಿಸಿದ್ದು ಚಿತ್ರದ ಮೊದಲ ವಿಮರ್ಶೆ ನೀಡಿದ್ದಾರೆ. ಹೌದು, ರಾಣಾ ದಗ್ಗುಬಾಟಿ ಈಗಾಗಲೇ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾ ನೋಡು ರಾಣಾ ದಗ್ಗುಬಾಟಿ ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. '777 ಚಾರ್ಲಿ ಸಿನಿಮಾ ವೀಕ್ಷಿಸುವ ಅವಕಾಶ ಸಿಕ್ಕಿತ್ತು. ಅದ್ಭತವಾದ ಟ್ರೀಟ್ ಆಗಿದೆ. ಸಂಪೂರ್ಣ ರಿಫ್ರೆಶಿಂಗ್ ಸಿನಿಮಾ' ಎಂದಿದ್ದಾರೆ.

ಅಂದಹಾಗೆ ರಾಣಾದಗ್ಗುಬಾಟಿ ತೆಲುಗು ವಿತರಣೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಬಗ್ಗೆ ಸ್ವತಃ ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ತಮ್ಮ ತಂಡದ ಜೊತೆ ರಾಣಾ ಕೈಜೋಡಿಸಿರುವುದು ಸಂತೋಷದ ವಿಚಾರವಾಗಿದೆ ಎಂದು ರಕ್ಷಿತ್ ಹೇಳಿದ್ದಾರೆ. 'ಈ ಪಯಣದಲ್ಲಿ ಮುಂದುವರೆಯುತ್ತಿರುವಾಗ ಸ್ಪಷ್ಟ ಉದ್ದೇಶವು ನಮ್ಮನ್ನು ಒಂದುಗೂಡಿಸುತ್ತದೆ. ರಾಣಾದಗ್ಗುಬಾಟಿ ನಮ್ಮ ಜೊತೆ ಕೈಜೋಡಿಸಿದ್ದಾರೆ. ತುಂಬಾ ಸಂತೋಷಾಗುತ್ತದೆ. ಸುರೇಶ್ ಪ್ರೊಡಕ್ಷನ್ ಮತ್ತು ರಾಣಾ ದಗ್ಗುಬಾಟಿ ತೆಲುಗಿನಲ್ಲಿ ಸಿನಿಮಾ ವಿಚರಣೆ ಮಾಡುತ್ತಿದ್ದಾರೆ. ನಾವು ಅಸಾಧಾರಣ ಪ್ರಯಣಕ್ಕೆ ಹೊರಟಿದ್ದೀವಿ' ಎಂದು ಹೇಳಿದ್ದಾರೆೆ.


Rakshit Shetty; ಭಾರಿ ಮೊತ್ತಕ್ಕೆ 777 charlie OTT ರೈಟ್ಸ್ ಸೇಲ್

 

ಇತ್ತೀಚಿಗಷ್ಟೆ 777 ಚಾರ್ಲಿ ಒಟಿಟಿಗೆ ಸೇಲ್ ಆಗಿದ್ದ ಬಗ್ಗೆ ಸಿನಿಮಾತಂಡ ಬಹಿರಂಗ ಪಡಿಸಿತ್ತು. ವೂಟ್ ಸೆಲೆಕ್ಟ್ ನಲ್ಲಿ 777 ಚಾರ್ಲಿ ಸ್ಟ್ರೀಮಿಂಗ್ ಆಗಲಿದೆ ಎಂದು ಹೇಳಿದ್ದರು. ಸ್ಯಾಟಲೈಟ್ ರೈಟ್ಸ್ ಕೂಡ ಸೇಲ್ ಆಗಿದೆ ಎಂದು ಹೇಳಿದ್ದರು. ಅಂದಹಾಗೆ ಬಹುನಿರೀಕ್ಷೆಯ ಸಿನಿಮಾ ಜೂನ್ 10ರಂದು ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಕಳೆದ ವರ್ಷ ತೆರೆಗೆ ಬರಬೇಕಿತ್ತು. ಆದರೆ ಕೊರೊನಾ ಕಾರಣದಿಂದ ವಿಳಂಬವಾಗಿತ್ತು. ಇದೀಗ ಜೂನ್ 10ರಂದು ಬಿಡುಗಡೆಯಾಗುತ್ತಿದೆ.

Rakshit Shetty: 'ಹಾಡದಿರಿ ಮಂಗಳವ, ಕಥೆ ಇನ್ನು ಮುಗಿದಿಲ್ಲ' ಎಂದು ರಕ್ಷಿತ್​ ಶೆಟ್ಟಿ ಹೇಳಿದ್ಯಾಕೆ?

ನಾಯಿ ಮತ್ತು ಮನುಷ್ಯನ ನಡುವಿನ ಭಾವನಾತ್ಮಕ ಸಂಬಂಧದ ಬಗ್ಗೆ ಇರುವ 777 ಚಾರ್ಲಿ ಕಿರಣ್ ರಾಜ್ ಸಾರಥ್ಯದಲ್ಲಿ ಮೂಡಿಬಂದಿದೆ. ರಕ್ಷಿತ್ ಶೆಟ್ಟಿ ಜೊತೆ ಸಂಗೀತ ಶೃಂಗೇರಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಉಳಿದಂತೆ ದಾನೀಶ್ ಸೇಠ್, ರಾಜ್ ಬಿ ಶೆಟ್ಟಿ, ಬಾಬಿ ಸಿಂಹ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಜೂನ್ 10ರಂದು 777 ಚಾರ್ಲಿಯನ್ನು ಕಣ್ತುಂಬಿ ಕೊಳ್ಳಲು ರಕ್ಷಿತ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!
Alia Bhatt New Home Photos: ಆಲಿಯಾ ಭಟ್‌, ರಣಬೀರ್‌ ಕಪೂರ್‌ 350 ಕೋಟಿ ರೂ ಮನೆಯನ್ನು ಪದಗಳಲ್ಲಿ ವರ್ಣಿಸೋಕಾಗಲ್ಲ