ಸಂಖ್ಯಾ ಶಾಸ್ತ್ರದ ನಂಬಿ ಈ ವಯಸ್ಸಿಗೆ ಹೆಸರು ಬದಲಾಯಿಸಿಕೊಂಡ ಚಿರಂಜೀವಿ?

Published : Jul 06, 2022, 12:37 PM IST
ಸಂಖ್ಯಾ ಶಾಸ್ತ್ರದ ನಂಬಿ ಈ ವಯಸ್ಸಿಗೆ ಹೆಸರು ಬದಲಾಯಿಸಿಕೊಂಡ ಚಿರಂಜೀವಿ?

ಸಾರಾಂಶ

ಹೆಸರು ಬದಲಾಯಿಸಿಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ ಮೆಗಾ ಸ್ಟಾರ್. ಇದೆಲ್ಲಾ ವರ್ಕ್‌ ಆಗುತ್ತಾ ಎಂದ ನೆಟ್ಟಿಗರು... 

ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಅಭಿನಯಿಸಿರುವ ಗಾಡ್‌ಫಾದರ್ ಸಿನಿಮಾದ ಫಸ್ಟ್‌ ಲುಕ್‌ ಟೀಸರ್‌ ಬಿಡುಗಡೆ ಮಾಡಲಾಗಿತ್ತು. ಸ್ಟೈಲಿಷ್ ಆಗಿ ಕಾಣಿಸಿಕೊಂಡಿರುವ ಚಿರಂಜೀವಿ ಲುಕ್‌ ನೋಡಿ ನೆಟ್ಟಿಗರು ಮಿಶ್ರ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಆದರೆ ಎಲ್ಲಾದಕ್ಕಿಂತ ಹೆಚ್ಚಾಗಿ ಜನರ ಗಮನ ಸೆಳೆದಿರುವುದು ಚಿರಂಜೀವಿ ಹೆಸರು ಬದಲಾಯಿಸಿರುವುದು. 

ಹೌದು! Chiranjeevi ಎಂದು ಇಷ್ಟು ದಿನ ಹೆಸರು ಬಳಸಲಾಗಿತ್ತು ಆದರೀಗ  Chiranjeeevi ಎಂದು ಮಾಡಿಕೊಂಡಿದ್ದಾರೆ. ಎರಡು e ಇದ್ದ ಜಾಗದಲ್ಲಿ ಮೂರು e ಮಾಡಿಕೊಂಡಿದ್ದಾರೆ. ಸಣ್ಣ ಬದಲಾವಣೆ ಆಗಿದ್ದರೂ ಅದರ ಹಿಂದಿರುವ ಕಾರಣ ಹುಡುಕಲು ಅಭಿಮಾನಿಗಳು ಶುರು ಮಾಡಿದ್ದಾರೆ. ಆಚಾರ್ಯ ಸಿನಿಮಾದ ಮೇಲೆ ಚಿರಂಜೀವಿ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಇಟ್ಟುಕೊಂಡಿದ್ದರು ಸಿನಿಮಾ ಹಿಟ್ ಆಗದಿದ್ದರೂ ತಮ್ಮ ಪಾತ್ರಕ್ಕೆ ಪ್ರಶಂಸೆ ಸಿಕ್ಕಿ ಮತ್ತಷ್ಟು ಆಫರ್‌ಗಳು ಬರುತ್ತದೆ ಎಂದುಕೊಂಡಿದ್ದರು ಆದರೆ ಎಲ್ಲಾ ಉಲ್ಟಾ ಹೊಡೆಯಿತ್ತು.

ಆಚಾರ್ಯ ಸಿನಿಮಾ ಸೂತ ಸಮಯದಲ್ಲಿ ಚಿರಂಜೀವಿ ಖಿನ್ನತೆಗೆ ಜಾರಿದ್ದರು ಎನ್ನಲಾಗಿದೆ. ಮುಂದೆ ಒಪ್ಪಿಕೊಳ್ಳುವ ಸಿನಿಮಾಗಳು ಹಿಟ್ ಆಗ ಬೇಕು ಜನರಿಗೆ ಇಷ್ಟ ಆಗಬೇಕು ಎಂದು ಬದಲಾವಣೆ ಮಾಡಿಕೊಳ್ಳಲು ಮುಂದಾಗಿದ್ದರು. ಈ ಸಮಯದಲ್ಲಿ ಸಂಖ್ಯಾ ಶಾಸ್ತ್ರ ನಂಬಲು ಶುರು ಮಾಡಿದ್ದಾರೆ ಎನ್ನಲಾಗಿದೆ, ಹೀಗಾಗಿ ಒಂದು ಅಕ್ಷರ ಹೆಚ್ಚಿಗೆ ಸೇರಿಸಿಕೊಂಡಿರು ಬಹುದು. 

ಅಸಲಿ ಕಥೆ ಏನು?

ಚಿರಂಜೀವಿ ಹೆಸರಿನ ಹಿಂದಿರುವ ಕಥೆ ಹುಡುಕುತ್ತಿರುವ ನೆಟ್ಟಿಗರಿಗೆ ಆಪ್ತ ಮೂಲಗಳಿಂದ ಸ್ಪಷ್ಟನೆ ಸಿಕ್ಕಿದೆ. ಗಾಡ್‌ಫಾದರ್‌ ಸಿನಿಮಾದ ಫಸ್ಟ್‌ ಲುಕ್ ಟೀಸರ್‌ನಲ್ಲಿ ಹೆಸರು ತಪ್ಪಾಗಿದೆ ಇದೆಲ್ಲಾ ತಾಂತ್ರಿಕ ಸಮಸ್ಯೆ ಅಷ್ಟೆ ಜನರು ಅದನ್ನು ತಪ್ಪಾಗಿ ತಿಳಿದುಕೊಂಡಿದ್ದಾರೆ. ಮುಂದಿನ ವಿಡಿಯೋದಲ್ಲಿ ಇದೆಲ್ಲಾ ಸರಿ ಮಾಡಲಾಗುತ್ತದೆ ಎಂದಿದ್ದಾರೆ. 

ಒಂದೇ ಕಡೇ ಸಲ್ಲು-ಕಮಲ್-ಚಿರಂಜೀವಿ: ಮೆಗಾ ಸ್ಟಾರ್ ಮನೆಯಲ್ಲಿ ಸ್ಟಾರ್‌ಗಳ ಗೆಟ್ ಟು ಗೆದರ್

ಚಿರಂಜೀವಿ 'ಗಾಡ್ ಫಾದರ್' ಚಿತ್ರೀಕರಣ ಮುಗಿಸಿದ ಸಲ್ಮಾನ್ ಖಾನ್:

ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್(Salman Khan) ಮೊದಲ ಬಾರಿಗೆ ತೆಲುಗು ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ನಟನೆಯ ಬಹುನಿರೀಕ್ಷೆಯ ಗಾಡ್ ಫಾದರ್(Godfather) ಸಿನಿಮಾದಲ್ಲಿ ನಟಿಸುವ ಮೂಲಕ ದಕ್ಷಿಣದ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಗಾಡ್ ಫಾದರ್ ಚಿತ್ರೀಕರಣ ಸೆಟ್ ಗೆ ಎಂಟ್ರಿ ಕೊಟ್ಟಿದ್ದ ಸಲ್ಮಾನ್ ಖಾನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ದಕ್ಷಿಣ ಭಾರತೀಯ ಸಿನಿಮಾರಂಗಕ್ಕೆ ಸಲ್ಮಾನ್ ಖಾನ್ ಎಂಟ್ರಿ ಅಭಿಮಾನಿಗಳಲ್ಲಿ ಸಂಭ್ರಮ ಮತ್ತಷ್ಟು ಹೆಚ್ಚಿಸಿತ್ತು. ಸಲ್ಮಾನ್ ಎಂಟ್ರಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಸಲ್ಮಾನ್ ಎಂಟ್ರಿ ಕೊಟ್ಟಿದ್ದಾರೆ ಎಂದು ಸುದ್ದಿ ವೈರಲ್ ಆದ ಬೆನ್ನಲ್ಲೇ ಚಿತ್ರೀಕರಣ ಮುಗಿಸಿ ವಾಪಾಸ್ ಆಗಿದ್ದಾರೆ.

ಈ ಬಗ್ಗೆ ನಿರ್ದೇಶಕ ಮೋಹನ್ ರಾಜ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 'ಸಲ್ಮಾನ್ ಭಾಯ್ ಜೊತೆಗಿನ ಅದ್ಭುತ ಹಂತದ ಚಿತ್ರೀಕರಣ ಮುಕ್ತಾಯಗೊಳಿಸಿದ್ದೇವೆ. ಈ ಅದ್ಭುತವಾದ ವೇಳಪಟ್ಟಿಯನ್ನು ಸ್ಮರಣೀಯವಾಗಿಸಿದ್ದಕ್ಕೆ ಧನ್ಯವಾದಗಳು ಭಾಯ್. ನಮ್ಮ ಆಧಾರ ಸ್ತಂಬ ಚಿರಂಜೀವಿ ಅವರಿಗೂ ಧನ್ಯವಾದಗಳು. ಇಡೀ ತಂಡಕ್ಕೆ' ಎಂದು ಹೇಳಿದ್ದಾರೆ.

ಹಿಂದಿ ಚಿತ್ರರಂಗದಿಂದ ಡಾ.ರಾಜ್‌ಕುಮಾರ್, ವಿಷ್ಣುವರ್ಧನ್‌ಗೆ ಅವಮಾನ; ಸತ್ಯ ತೆರೆದಿಟ್ಟ ನಟ ಚಿರಂಜೀವಿ

ಅಂದಹಾಗೆ ಸಿನಿಮಾದ ಚಿತ್ರೀಕರಣ ಮುಗಿಸಿದ ಬಗ್ಗೆ ಬಹಿರಂಗ ಪಡಿಸಿರುವ ನಿರ್ದೇಶಕ ಮೋಹನ್ ಚಿತ್ರದಲ್ಲಿ ಸಲ್ಮಾನ್ ಖಾನ್ ಯಾವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವ ಬಗ್ಗೆ ಬಹಿರಂಗ ಪಡಿಸಿಲ್ಲ. ಸದ್ಯಕ್ಕೆ ಸಲ್ಮಾನ್ ಪಾತ್ರದ ಬಗ್ಗೆ ರಹಸ್ಯ ಕಾಪಾಡಲಾಗಿದೆ. ಮೊದಲ ಬಾರಿಗೆ ಸಲ್ಮಾನ್ ಖಾನ್ ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಅದರಲ್ಲೂ ಮೆಗಾಸ್ಟಾರ್ ಚಿರಂಜೀವಿ ಜೊತೆ ತೆರೆಹಂಚಿಕೊಂಡಿರುವುದನ್ನು ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜ್ ಜೊತೆ ರೊಮ್ಯಾಂಟಿಕ್ ಹನಿಮೂನ್ ಟ್ರಿಪ್ ಪ್ಲಾನ್ ಮಾಡಿದ ಸಮಂತಾ.. ಎಲ್ಲಿಗೆ ಹೋಗ್ತಿದ್ದಾರೆ?
ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?