
ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ (Akshay Kumar) ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೈತುಂಬಾ ಸಿನಿಮಾಗಳನ್ನುಇಟ್ಟುಕೊಂಡಿರುವ ಅಕ್ಷಯ್ ಕುಮಾರ್ ರಾಜಕೀಯಕ್ಕೆ (Political) ಎಂಟ್ರಿ ಕೊಡುತ್ತಾರಾ ಎನ್ನುವ ಮಾತು ಕೇಳಿಬರುತ್ತಿದೆ. ಅಕ್ಷಯ್ ಕುಮಾರ್ ರಾಜಕೀಯ ಎಂಟ್ರಿ ಬಗ್ಗೆ ಸುದ್ದಿ ಕೇಳಿಬರುತ್ತಿವುದು ಇದೇ ಮೊದಲಲ್ಲ. ಈ ಹಿಂದೆಯೂ ಅನೇಕ ಬಾರಿ ಸುದ್ದಿ ವೈರಲ್ ಆಗಿತ್ತು. ಇದೀಗ ಅಕ್ಷಯ್ ಕುಮಾರ್ ರಾಜಕೀಯ ಎಂಟ್ರಿ ಬಗ್ಗೆ ಮಾತನಾಡಿದ್ದಾರೆ. ಭವಿಷ್ಯದಲ್ಲಿ ತನಗೆ ರಾಜಕೀಯ ನಾಯಕನಾಗುವ ಆಸಕ್ತಿ ಇಲ್ಲ ಎಂದು ಅಕ್ಷಯ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಲಂಡನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಜಕೀಯ ಸೇರುವ ಒಲವಿನ ಬಗ್ಗೆ ಕೇಳಿದ ಪ್ರಶ್ನೆಗೆ ಅಕ್ಷಯ್ ಈ ಹೇಳಿಕೆ ನೀಡಿದ್ದಾರೆ.
ಹಿಂದೂಜಾಸ್ ಮತ್ತು ಬಾಲಿವುಡ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅಕ್ಷಯ್ ಮುಖ್ಯ ಅತಿಥಿಯಾಗಿದ್ದರು. ಲಂಡನ್‌ನ ಪಾಲ್ ಮಾಲ್‌ನಲ್ಲಿರುವ ಇನ್‌ಸ್ಟಿಟ್ಯೂಟ್ ಆಫ್ ಡೈರೆಕ್ಟರ್ಸ್‌ನಲ್ಲಿ ನಡೆದ ಈವೆಂಟ್‌ನಲ್ಲಿ ಅಕ್ಷಯ್ ಕುಮಾರ್ ಹಾಜರಿದ್ದರು. ಅಲ್ಲಿ ಅಕ್ಷಯ್‌ಗೆ ಅವರ ರಾಜಕೀಯ ಯೋಜನೆಗಳ ಬಗ್ಗೆ ಕೇಳಿದಾಗ ಅವರು ಸದ್ಯ ಸಿನಿಮಾಗಳನ್ನು ಮಾಡುತ್ತಿರುವುದು ತುಂಬಾ ಸಂತೋಷವಾಗಿದೆ ಎಂದು ಹೇಳಿದರು.
'ನಾನು ಸಿನಿಮಾಗಳನ್ನು ಮಾಡುವುದರಲ್ಲಿ ತುಂಬಾ ಸಂತೋಷವಾಗಿದ್ದೇನೆ. ಒಬ್ಬ ನಟನಾಗಿ ನಾನು ಸಾಮಾಜಿಕ ಸಮಸ್ಯೆಗಳನ್ನು ತೆಗೆದುಕೊಳ್ಳಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇನೆ. ನಾನು 150 ಚಿತ್ರಗಳನ್ನು ನಿರ್ಮಿಸಿದ್ದೇನೆ, ನನ್ನ ಹೃದಯಕ್ಕೆ ಹತ್ತಿರವಾದದ್ದು ರಕ್ಷಾ ಬಂಧನ. ನಾನು ಕಮರ್ಶಿಯಲ್ ಚಿತ್ರಗಳನ್ನು ನಿರ್ಮಿಸುತ್ತೇನೆ, ಕೆಲವೊಮ್ಮೆ ಸಾಮಾಜಿಕ ಸಮಸ್ಯೆಗಳ ಸಿನಿಮಾಗಳನ್ನು ಮಾಡುತ್ತೇನೆ. ನಾನು ವರ್ಷಕ್ಕೆ ಮೂರು-ನಾಲ್ಕು ಚಿತ್ರಗಳನ್ನು ನಿರ್ಮಿಸುತ್ತೇನೆ' ಎಂದು ಅಕ್ಷಯ್ ಹೇಳಿದರು.
ಗುಟ್ಕಾ ತಿಂದರೂ ಇಷ್ಟೊಂದು ಫಿಟ್; ಅಕ್ಷಯ್ ಕುಮಾರ್ ಕಾಲೆಳೆದ ನೆಟ್ಟಿಗರು
ಅಂದಹಾಗೆ ಅಕ್ಷಯ್ ತಮ್ಮ ರಾಜಕೀಯ ವೃತ್ತಿಜೀವನದ ಬಗ್ಗೆ ಪ್ರಶ್ನೆ ಎದುರಿಸುತ್ತಿರುವುದು ಇದೇ ಮೊದಲಲ್ಲ. ಈ ಮೊದಲು ಅಂದರೆ 2019 ರಲ್ಲಿ, ಅಕ್ಷಯ್ ಕುಮಾರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ ರಾಜಕೀಯಕ್ಕೆ ಎಂದಿಗೂ ಸೇರುವುದಿಲ್ಲ ಎಂದು ಹೇಳಿದರು. ಯಾವಾಗಲೂ ಸಂತೋಷವಾಗಿರಲು ಬಯಸುತ್ತೇನೆ ಮತ್ತು ತಮ್ಮ ಚಲನಚಿತ್ರಗಳ ಮೂಲಕ ದೇಶಕ್ಕೆ ಕೊಡುಗೆ ನೀಡಲು ಬಯಸುತ್ತೇನೆ ಎಂದು ಹೇಳಿದ್ದರು. ಇದೀಗ ಮತ್ತೆ ರಾಜಕೀಯದಿಂದ ದೂರ ಇರುವುದಾಗಿ ಹೇಳಿದ್ದಾರೆ.
ರಾಮಸೇತು ಥಿಯೇಟರ್‌ಗಳಲ್ಲೇ ರಿಲೀಸ್ ಆಗಲಿದೆ : ಒಟಿಟಿ ವದಂತಿ ನಿರಾಕರಿಸಿದ ನಿರ್ಮಾಪಕ
ಅಕ್ಷಯ್ ಸದ್ಯ ದೇಶದ ಅತ್ಯಂತ ಬ್ಯುಸಿ ನಟರಲ್ಲಿ ಒಬ್ಬರು. ಅಕ್ಷಯ್ ಈಗಾಗಲೇ ವರ್ಷದ ಮೂರನೇ ಚಿತ್ರ ರಕ್ಷಾ ಬಂಧನಕ್ಕೆ ಸಜ್ಜಾಗಿದ್ದಾರೆ. ಈ ಚಿತ್ರವನ್ನು ಆನಂದ್ ಎಲ್ ರೈ ನಿರ್ದೇಶಿಸಿದ್ದಾರೆ. ಈ ವರ್ಷದಲ್ಲಿ ಅಕ್ಷಯ್ ಕುಮಾರ್ 3ನೇ ಸಿನಿಮಾ ರಿಲೀಸ್ ಗೆ ರೆಡಿಯಗಿದ್ದರೂ ಬಾಕ್ಸ್ ಆಫೀಸ್‌ನಲ್ಲಿ ಅಕ್ಷಯ್ ಓಟ ನಿರೀಕ್ಷೆಗೆ ತಕ್ಕಂತೆ ಇಲ್ಲ. ಇದು ತುಂಬಾ ನಿರಾಸೆ ಮೂಡಿಸಿದೆ. ಇನ್ನು ಅಕ್ಷಯ್ ಬಳಿ ರಾಮ್ ಸೇತು, ಓ ಮೈ ಗಾಡ್ 2, ಸೆಲ್ಫಿ, ಸೂರರೈ ಪೊಟ್ರಿ ಹಿಂದಿ ರಿಮೇಕ್ ನಲ್ಲಿ ನಟಿಸುತ್ತಿದ್ದಾರೆ. ಕೊನೆಯದಾಗಿ ಅಕ್ಷಯ್ ಕುಮಾರ್ ಸಾಮ್ರಾಟ್ ಪೃಥ್ವಿರಾಜ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷೆಯ ಗಳೆಕೆ ಮಾಡುವಲ್ಲಿ ವಿಫಲವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.