ನರೇಶ್ ಜೊತೆ ಮದುವೆ ವಿವಾದ ಬೆನ್ನಲ್ಲೇ ದೊಡ್ಡ ಸಿನಿಮಾಗಳಿಂದ ಪವಿತ್ರಾ ಲೋಕೇಶ್ ಔಟ್?

Published : Jul 05, 2022, 10:50 AM IST
ನರೇಶ್ ಜೊತೆ ಮದುವೆ ವಿವಾದ ಬೆನ್ನಲ್ಲೇ ದೊಡ್ಡ ಸಿನಿಮಾಗಳಿಂದ ಪವಿತ್ರಾ ಲೋಕೇಶ್ ಔಟ್?

ಸಾರಾಂಶ

ನರೇಶ್ ಜೊತೆಗಿನ ಮದುವೆ ವಿವಾದದ ಬಳಿಕ ಪವಿತ್ರಾ ಲೋಕೇಶ್ ಅವರಿಗೆ ಸಿನಿಮಾಗಳ ಆಫರ್ ಬರುತ್ತಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ವಿವಾದದ ಬೆನ್ನಲ್ಲೇ ಅನೇಕ ಸಿನಿಮಾಗಳ ಆಫಸ್ ಕಳೆದುಕೊಂಡಿದ್ದಾರಂತೆ. ಈಗಾಗಲೇ ಪವಿತ್ರಾ ಲೋಕೋಶ್ ಸಹಿ ಮಾಡಿದ್ದ ಸಿನಿಮಾಗಳಿಂದನೂ ಸಹ ಅವರನ್ನು ದೂರ ಇಟ್ಟು ಬೇರೆ ನಟಿಯರನ್ನು ಆಯ್ಕೆ ಮಾಡಲಾಗುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ. 

ನಟಿ ಪವಿತ್ರಾ ಲೋಕೇಶ್ (Pavitra Lokesh)ಕಳೆದ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ತೆಲುಗು ನಟ ನರೇಶ್ ಬಾಬು (Naresh Babu) ಜೊತೆ ಪವಿತ್ರಾ ಲೋಕೇಶ್ ಮದುವೆ ಪ್ರಕರಣ ದೊಡ್ಡ ವಿವಾದವನ್ನೇ ಸೃಷ್ಟಿಸಿದೆ. ನರೇಶ್ ಪತ್ನಿ ರಮ್ಯಾ ರಘುಪತಿ (Ramya Ragupathi), ಪವಿತ್ರಾ ಲೋಕೇಶ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ರಮ್ಯಾ, ನರೇಶ್ ಮತ್ತು ಪವಿತ್ರಾ ಲೋಕೇಶ್ ನಡುವಿನ ಕಿತ್ತಾಟ ಚಪ್ಪಲಿಯಲ್ಲಿ ಹೊಡೆಯ ಮಟ್ಟಕ್ಕೆ ಹೋಗಿತ್ತು. ಹೌದು, ನರೇಶ್, ಪವಿತ್ರಾ ಲೋಕೇಶ್ ಜೊತೆ ಮೈಸೂರಿನ ಹೋಟೆಲ್ ನಲ್ಲಿ ತಂಗಿದ್ದ ಮಾಹಿತಿ ತಿಳಿದು ರಮ್ಯಾ ಅಲ್ಲಿಗೆ ಎಂಟ್ರಿ ಕೊಟ್ಟಿದ್ದರು. ಬೆಳ್ಳಂಬೆಳಗ್ಗೆ ಇಬ್ಬರು ತಂಗಿದ್ದ ಹೋಟೇಲ್ ರೂಂ ಬಾಗಿಲು ಬಡಿದು ರಂಪಾಟ ಮಾಡಿದ್ದರು.

ರಮ್ಯಾ ಹೋಟೆಲ್ ಬಳಿ ಬರುತ್ತಿದ್ದಂತೆ ನರೇಶ್, ಪವಿತ್ರಾ ಜೊತೆ ಪೊಲೀಸ್ ರಕ್ಷಣೆಯಲ್ಲಿ ಹೊರನಡೆದಿದ್ದರು. ನರೇಶ್ ಮತ್ತು ಪವಿತ್ರಾ ಲಕೋಶ್  ಹೋಟೆಲ್ ನಿಂದ ಹೊರಬರುತ್ತಿದ್ದಂತೆ ರಮ್ಯಾ ಚಪ್ಪಲಿಯಲ್ಲಿ ಹೊಡೆಯಲು ಮುಂದಾಗಿದ್ದರು. ಪೊಲೀಸರು ತಡೆದು ನರೇಶ್ ಮತ್ತು ಪವಿತ್ರಾ ಅವರನ್ನುಅಲ್ಲಿಂದ ಹೊರಡಲು ಅವಕಾಶ ಮಾಡಿಕೊಟ್ಟರು. ನರೇಶ್ ಶಿಳ್ಳೆ ಹೊಡೆಯುತ್ತಾ, ಜೋರಾಗಿ ನಗುತ್ತಾ ಅಲ್ಲಿಂದ ಹೊರಟು ಹೋದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. 

ಶಿಳ್ಳೆ ಹೊಡೆಯುತ್ತಾ ಪವಿತ್ರಾ ಜೊತೆ ಹೋಟೆಲ್ ರೂಂನಿಂದ ನರೇಶ್ ಎಸ್ಕೇಪ್

ಇಬ್ಬರು ಬೆಸ್ಟ್ ಫ್ರೆಂಡ್ಸ್ ಎನ್ನುತ್ತಿದ್ದರು. ಆದರೆ ಒಟ್ಟಿಗೆ ಹೋಟೆಲ್ ರೂಂನಲ್ಲಿ ತಂಗಿದ್ದಾರೆ. ಇದಕ್ಕೆ ಏನು ಹೇಳಬೇಕು ಎಂದು ನರೇಶ್ ಪತ್ನಿ ರಮ್ಯಾ ಕಿಡಿ ಕಾರಿದ್ದರು. ಈ ಎಲ್ಲಾ ಪ್ರಕರಣಗಳ ಬಳಿಕ ಇದೀಗ ಪವಿತ್ರಾ ಲೋಕೇಶ್ ಬಗ್ಗೆ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ನರೇಶ್ ಜೊತೆಗಿನ ಮದುವೆ ವಿವಾದದ ಬಳಿಕ ಪವಿತ್ರಾ ಲೋಕೇಶ್ ಅವರಿಗೆ ಸಿನಿಮಾಗಳ ಆಫರ್ ಬರುತ್ತಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ವಿವಾದದ ಬೆನ್ನಲ್ಲೇ ಅನೇಕ ಸಿನಿಮಾಗಳ ಆಫಸ್ ಕಳೆದುಕೊಂಡಿದ್ದಾರಂತೆ. ಈಗಾಗಲೇ ಪವಿತ್ರಾ ಲೋಕೋಶ್ ಸಹಿ ಮಾಡಿದ್ದ ಸಿನಿಮಾಗಳಿಂದನೂ ಸಹ ಅವರನ್ನು ದೂರ ಇಟ್ಟು ಬೇರೆ ನಟಿಯರನ್ನು ಆಯ್ಕೆ ಮಾಡಲಾಗುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ. ವಿವಾದಗಳ ಬಳಿಕ ನಟಿಮಣಿಯರಿಗೆ ಸಿನಿಮಾ ಆಫರ್ ಕಡಿಮೆಯಾಗುವುದು ಸಹಜ. ಇದೀಗ ಪವಿತ್ರಾ ಲೋಕೇಶ್‌ಗೂ ಅದೇ ಪರಿಸ್ಥಿತಿ ಎದುರಾಗಿದ್ದು ಸಿನಿಮಾ ಮೇಲೆ ಪರಿಣಾಮ ಬೀರಿದೆ. 

ಪವಿತ್ರಾ-ನರೇಶ್ ತಂಗಿದ್ದ ರೂಂ ಮುಂದೆ ರಮ್ಯಾ ಗಲಾಟೆ; ಚಪ್ಪಲಿ ಎತ್ತಿ ಆಕ್ರೋಶ

ಸದ್ಯ ಟಾಲಿವುಡ್‌ನಲ್ಲಿ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ತೆಲುಗಿನ ಎರಡು ದೊಡ್ಡ ಸಿನಿಮಾಗಳಿಂದ ಪವಿತ್ರಾ ಲೋಕೇಶ್ ಅವರನ್ನು  ಹೊರಗಿಡಲಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಆದರೆ ಯಾವ ಸಿನಿಮಾ ಎನ್ನುವುದನ್ನು ರಿವೀಲ್ ಮಾಡಿಲ್ಲ. ಅಂದಹಾಗೆ ಪವಿತ್ರಾ ಲೋಕೇಶ್ ತೆಲುಗಿನಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಇರುವ ಪೋಷಕ ನಟಿ. 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಪವಿತ್ರಾ ಲೋಕೇಶ್ ಕನ್ನಡಕ್ಕಿಂತ ಹೆಚ್ಚಾಗಿ ತೆಲುಗಿನಲ್ಲಿ ಫೇಮಸ್. ಆದರೀಗ ವಿವಾದದ ಬಳಿಕ ಪವಿತ್ರಾ ಲೋಕೇಶ್ ಸಿನಿಮಾಗಳ ಮೇಲೆ ಪರಿಣಾಮ ಬೀರುತ್ತಿದೆ ಎನ್ನಲಾಗಿದೆ.   

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Katrina Kaif: ತಾಯಿಯಾದ ಬಳಿಕ ಮೊದಲ ಹೋಳಿ: ಪತಿ ವಿಕ್ಕಿ ಜೊತೆ ಬಣ್ಣದೋಕುಳಿ ಆಡಿದ ಕತ್ರಿನಾ ಕೈಫ್
Thalapathy Vijay ಎಂದೆಂದೂ ನನ್ನವನೇ ಎಂದಾಕೆ ನಟಿ ತ್ರಿಷಾ ಅಲ್ವೇ ಅಲ್ಲಾ! ಏನಿದು ವೈರಲ್​ ಪೋಸ್ಟ್​ ಗಲಾಟೆ?