Pushpa Movie: ಚಿತ್ರತಂಡಕ್ಕೆ ಭರ್ಜರಿ ಗಿಫ್ಟ್‌ ನೀಡಿದ ಐಕಾನ್ ಸ್ಟಾರ್ ಅಲ್ಲು ಅರ್ಜುನ್

By Suvarna News  |  First Published Dec 10, 2021, 3:25 PM IST

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ 'ಪುಷ್ಪ' ಚಿತ್ರದ ಟ್ರೇಲರ್‌ಗೆ ಈಗಾಗಲೇ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದ್ದು, ಇದರಿಂದ ಖುಷಿಯಾಗಿರೋ ಅಲ್ಲು ಅರ್ಜುನ್‌ ಚಿತ್ರತಂಡಕ್ಕೆ ಭರ್ಜರಿ ಉಡುಗೊರೆಯನ್ನು ನೀಡಿದ್ದಾರೆ.


ಸುಕುಮಾರ್ (Sukumar) ನಿರ್ದೇಶನದ ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಹಾಗೂ ನ್ಯಾಷನಲ್ ಕ್ರಶ್‌ ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ' ಭಾರಿ ನಿರೀಕ್ಷೆಯೊಂದಿಗೆ ಮುಂದಿನ ವಾರ (ಡಿ.17) ತೆರೆಗೆ ಬರಲಿದೆ. ಈಗಾಗಲೇ ಟ್ರೇಲರ್‌ಗೆ (Trailer) ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದ್ದು, ಇದರಿಂದ ಖುಷಿಯಾಗಿರೋ ಚಿತ್ರದ ನಾಯಕ ನಟ ಅಲ್ಲು ಅರ್ಜುನ್‌ ಚಿತ್ರದ ಕೋರ್‌ ಟೀಂನಲ್ಲಿದ್ದ 40 ಜನರಿಗೆ ತಲಾ ಒಂದು ತೊಲೆ ಚಿನ್ನದ ನಾಣ್ಯವನ್ನು ನೀಡಿದ್ದಾರೆ. ಇದೇ ವೇಳೆ ಚಿತ್ರದ ಪ್ರೊಡಕ್ಷನ್‌ ತಂಡದಲ್ಲಿ ಕೆಲಸ ಮಾಡಿದವರಿಗೆ ಒಟ್ಟು 10 ಲಕ್ಷ ರೂಪಾಯಿಗಳನ್ನು ನೀಡಿ ಚಿತ್ರದ ಶೂಟಿಂಗ್‌ಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. 

ಈಗಾಗಲೇ 'ಪುಷ್ಪ' ಚಿತ್ರ ಸಖತ್ ಕ್ರೇಜ್ ಕ್ರಿಯೇಟ್ ಮಾಡಿದ್ದು, 'ಬಾಹುಬಲಿ' (Bahubali), 'ಕೆಜಿಎಫ್' (KGF) ಹಾದಿಯಲ್ಲಿ ಸಾಗಿರುವ ಚಿತ್ರ 2 ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೈತ್ರಿ ಮೂವೀ ಮೇಕರ್ಸ್ ಸಂಸ್ಥೆ (Mythri Movie Makers) ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದು, ಅಲ್ಲು ಅರ್ಜುನ್ ರಕ್ತ ಚಂದನ ಕಳ್ಳಸಾಗಾಣಿಕೆ ಮಾಡುವ ಲಾರಿ ಚಾಲಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಅಲ್ಲು ಅರ್ಜುನ್‌ಗೆ ಜೊತೆಯಾಗಿ ನಟಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಶ್ರೀವಲ್ಲಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅವರು ಈ ಹಿಂದೆ ಯಾವತ್ತೂ ಈ ರೀತಿ ಪಾತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ರಶ್ಮಿಕಾ ಹೇಗೆ ಪಾತ್ರವನ್ನು ನಿಭಾಯಿಸಿಕೊಂಡು ಹೋಗಿದ್ದಾರೆ ಎಂದು ಅವರು ಅಭಿಮಾನಿಗಳು ಕುತೂಹಲ ಇಟ್ಟುಕೊಂಡಿದ್ದಾರೆ. 

Tap to resize

Latest Videos

undefined

Pushpa Movie ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಚಿತ್ರದ ಟ್ರೇಲರ್ ರಿಲೀಸ್

ಈ ಚಿತ್ರದಲ್ಲಿ ಅಲ್ಲು ಅರ್ಜುನ್‌ರ ಗೆಟಪ್ ಬಾಡಿ ಲಾಂಗ್ವೇಜ್ ನೋಡಿದರೆ ನೈಜ ಲಾರಿ ಡ್ರೈವರ್‌ನಂತೆ ಕಂಡುಬರುತ್ತಿದ್ದು, ಪ್ರತಿಯೊಂದು ಪಾತ್ರದ ಲುಕ್ ಕೂಡ ವಿಭಿನ್ನವಾಗಿ  ಮೂಡಿ ಬಂದಿದೆ. ಕನ್ನಡ ಡಾಲಿ ಧನಂಜಯ್ (Dolly Dhananjay) 'ಜಾಲಿ' ಹೆಸರಿನ ಪಾತ್ರ ನಿರ್ವಹಿಸಿದ್ದಾರೆ. ಇನ್ನೂ ಮಂಗಲಮ್ ಶ್ರೀನು ಹೆಸರಿನ ಪಾತ್ರದಲ್ಲಿ ನಟ ಸುನೀಲ್ (Sunil) ಕಾಣಿಸಿಕೊಳ್ಳುತ್ತಿದ್ದಾರೆ. ದಾಕ್ಷಾಯಿಣಿ ಪಾತ್ರದಲ್ಲಿ ಅನಸೂಯ ಭಾರಧ್ವಾಜ್ (Anasuya Bharadwaj) ಅಭಿನಯಿಸುತ್ತಿದ್ದು, ಮಲಯಾಳಂ ನಟ ಫಾಹದ್ ಫಾಸಿಲ್ (Fahadh Faasil) ಮುಖ್ಯ ಖಳ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಜೊತೆಗೆ ಟಾಲಿವುಡ್ ವಿಲನ್ ಜಗಪತಿ ಬಾಬು (Jagapati Babu), ಪ್ರಕಾಶ್ ರಾಜ್ (Prakash Raj), ವೆನ್ನೆಲ್ಲಾ ಕಿಶೋರ್ ಸೇರಿದಂತೆ ಚಿತ್ರದಲ್ಲಿ ದೊಡ್ಡ ತಾರಾಬಳಗವಿದ್ದು, ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ (Devi Sri Prasad) ಸಂಗೀತ ನಿರ್ದೇಶನವಿದೆ. ಚಿತ್ರದ ಹಾಡುಗಳು ಈಗಾಗಲೇ ಎಲ್ಲಾ 5 ಭಾಷೆಯಲ್ಲಿ ಮಿಲಿಯನ್ ಗಟ್ಟಲೆ ವೀವ್ಸ್ ಪಡೆದು ಮುನ್ನುಗ್ಗುತ್ತಿದೆ. ಮಿರೊಸ್ಲಾವ್ ಬ್ರೊಜೆಕ್‌ರ ಕ್ಯಾಮರಾ ಕೈಚಳಕ, ಕಾರ್ತಿಕ ಶ್ರೀನಿವಾಸ್ ಅವರ ಎಡಿಟಿಂಗ್‌ನಲ್ಲಿ ಚಿತ್ರದ ದೃಶ್ಯ ಅದ್ಭುತವಾಗಿ ಮೂಡಿ ಬಂದಿದೆ. ವಿಶೇಷವಾಗಿ ತೆಲುಗಿನ ಖ್ಯಾತ ನಟಿ ಸಮಂತಾ (Samantha) ಈ ಚಿತ್ರದ ಐಟಂ ಸಾಂಗ್‌ನಲ್ಲಿ ಅಭಿನಯಿಸಿದ್ದು ಇದು ಚಿತ್ರದ ಸ್ಪೆಷಲ್‌ ಅಟ್ರ್ಯಾಕ್ಷನ್‌ ಆಗಿದೆ. 

Pushpa Movie ಟ್ರೇಲರ್ ದಿನಾಂಕದ ಜೊತೆಗೆ ವಿಡಿಯೋ ತುಣುಕನ್ನು ಹಂಚಿಕೊಂಡ ಅಲ್ಲು ಅರ್ಜುನ್

ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ ಅದ್ಧೂರಿ ಸೆಟ್‌ನಲ್ಲಿ ಹಾಡಿನ ಚಿತ್ರೀಕರಣ ನಡೆದಿದೆ. ಈ ಬಗ್ಗೆ ಚಿತ್ರತಂಡ ಟ್ವೀಟರ್‌ನಲ್ಲಿ, 'ಈ ವರ್ಷದ ರಾಕಿಂಗ್ ಹಾಡಿಗೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ಸಮಂತಾ ಪ್ರಭು ದೈತ್ಯಾಕಾರದ ಸೆಟ್‌ನಲ್ಲಿ ಹೆಜ್ಜೆ ಹಾಕಿರುವುದನ್ನು ಚಿತ್ರೀಕರಿಸಲಾಗಿದೆ. ಶೀಘ್ರದಲ್ಲಿಯೇ ಈ ವರ್ಷದ ರಾಕಿಂಗ್ ಹಾಡನ್ನು ನೋಡಲು ಸಿದ್ಧರಾಗಿ' ಎಂದು ಕ್ಯಾಪ್ಷನ್ ಬರೆದು ಪೋಸ್ಟರ್‌ವೊಂದನ್ನು ಹಂಚಿಕೊಂಡಿದ್ದರು. ಈ ಪೆಪ್ಪಿ ಹಾಡಿಗೆ ಗಣೇಶ್ ಆಚಾರ್ಯ (Ganesh Acharya) ಮತ್ತು ದೇವಿ ಶ್ರೀ ಪ್ರಸಾದ್‌  ನೃತ್ಯ ಸಂಯೋಜಿಸಿದ್ದಾರೆ. 'ಪುಷ್ಪ' ಡಿಸೆಂಬರ್ 17 ರಂದು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ತೆರೆಗೆ ಬರಲಿದೆ.

click me!