Katrina-Vicky Love Life: ಜೊತೆಗೆ ನಟಿಸದೆಯೂ ಜೊತೆಗೂಡಿದ ಜೋಡಿ!

Suvarna News   | others
Published : Dec 09, 2021, 05:03 PM ISTUpdated : Oct 24, 2023, 12:39 PM IST
Katrina-Vicky Love Life: ಜೊತೆಗೆ ನಟಿಸದೆಯೂ ಜೊತೆಗೂಡಿದ ಜೋಡಿ!

ಸಾರಾಂಶ

ಬಾಲಿವುಡ್‌ ನಲ್ಲಿ ಒಂದು ಸ್ಟಾರ್ ಮದುವೆ ಅಂದ್ರೆ.. ಅದು‌ ಯಾವ ಯಶ್‌ ರಾಜ್‌ ಸಿನಿಮಾಗೂ ಕಡಿಮೆ ಇರಲ್ಲ. ಆದ್ರೆ ದೊಡ್ಡ ಮಟ್ಟದ ಸಿದ್ಧತೇನೇ ನಡೆದ್ರೂ.. ಯಾವುದೇ ವಿಚಾರಗಳನ್ನು ಬಿಟ್ಟು ಕೊಡದೆ ನಡೇತಿರೋ ಮದುವೆ ಕತ್ರಿನಾ ಕೈಫ್ ದು. ಆದರೂ ಅವರಿಬ್ಬರು ಅಡಗಿಸಿಟ್ಟ ಪ್ರೇಮ ಸುದ್ದಿಯಾಗಿದ್ದು ಹೇಗೆ? ಇಲ್ಲಿದೆ ಒಂದು ವಿಶ್ಲೇಷಣೆ

ಕತ್ರೀನಾ ಮತ್ತು ವಿಕ್ಕಿ ಕೌಶಲ್ ಇವರಿಬ್ರದ್ದೂ ಮುದ್ದಾದ ಜೋಡಿ.. ಆದರೆ ಇಬ್ರೂ ಜೊತೆಯಾಗಿ ನಟಿಸಿದ್ದೇ ಇಲ್ಲ.. ನಟಿಸದೇನೇ ಪ್ರೀತಿ ಮಾಡಿದ್ದಾರೆ..  ಹಾಗಾಗಿ ಇಂದು ಸಾಕಾರಗೊಳ್ತಾ ಇರೋ ಇವರ ಪ್ರೀತೀಲೀ.. ನಟನೇನೆ ಇಲ್ಲ ಅನ್ಬಹುದು. ಸಲ್ಮಾನ್‌ ಖಾನ್‌ ಗಾಡ್‌ ಫಾದರ್‌ ಆಗಿರಬಹುದು… ಆದರೆ ಕತ್ರೀನಾಳ ಮೊದಲ ಹಿಟ್‌ ಸಿನಿಮಾದಿಂದಲೇ ತಾನು ಕತ್ರೀನಾಳ ಫ್ಯಾನ್‌ ಆಗಿದ್ದೆ ಅಂತಾನೆ ವಿಕ್ಕಿ ಕೌಶಲ್..‌ ಅಂದಹಾಗೆ ಇವರಿಬ್ರ ಲವ್‌ ಸ್ಟೋರಿ ಶುರುವಾದ ರೀತಿಯೇ ವಿಭಿನ್ನ.. ಮೊದಲ ಭೇಟಿ ಕೂಡ ಒಂದು ಪಬ್ಲಿಕ್‌ ವೇದಿಕೆಯಲ್ಲಿ ಆಗಿತ್ತು.. ಅದು ಕೂಡ ತನಗೆ ವಿಕ್ಕಿ ಕೌಶಲ್‌ ಜೊತೆಗೆ ನಟಿಸುವ ಆಸೆ ಇದೆ ಎಂದು ೮ ಕತ್ರಿನಾ ಹೇಳ್ಕೊಂಡ ನಂತರ..  ವಿಶೇಷ ಏನು ಅಂದ್ರೆ ಕತ್ರಿನಾ ಮತ್ತು ವಿಕ್ಕಿ ಕೌಶಲ್‌ ಜೊತೆಯಾಗಿ ನಟಿಸಿಯೇ ಇಲ್ಲ.. ಆದರೆ ಅವರಿಬ್ರೂ ಪರದೆ ಮೇಲೆ  ಜೋಡಿಯಾಗಬೇಕು ಅಂತ ಬಯಸಿದ್ದು ಎಲ್ರಿಗೂ ಗೊತ್ತಾಗಿತ್ತು.. ಅವರಿಗೊಂದು ವೇದಿಕೆ ಮಾಡಿಕೊಟ್ಟಿದ್ದು ಫಿಲ್ಮ್‌ ಕಂಪಾನಿಯನ್‌ ಎನ್ನುವ ಯೂಟ್ಯೂಬ್‌ ಜಾಲತಾಣ.

ಅಷ್ಟು ಕಟ್ಟುನಿಟ್ಟಾದ್ರೂ ಫೊಟೊ ಲೀಕ್‌ ಆಯ್ತ?

ಕತ್ರಿನಾ ಜೊತೆಗೆ ಮನಸು ಬಿಚ್ಚಿ ಮಾತನಾಡಿದ ವಿಕ್ಕಿ ಕೌಶಲ್‌ ತಾನು ನಟನಾ ವಿದ್ಯಾರ್ಥಿಯಾಗಿದ್ದಾಗ ಆಕೆಯ ಹಾಡಿಗೆ ಕುಣಿದಿದ್ದಾಗಿ ಹೇಳಿಕೊಂಡ್ರು..  ಅದು ನಮಸ್ತೆ ಲಂಡನ್‌ ಚಿತ್ರದ ಹಾಡು.. ನಿಜ ಹೇಳಬೇಕೆಂದರೆ ಕ್ರತಿನಾ ಕೈಫ್‌ ಹೆಸರು ಮಾಡಿಕೊಂಡಿದ್ದೇ ಆ ಚಿತ್ರದ  ಬಳಿಕ. ಬಹುಶಃ ನಮಸ್ತೆ ಲಂಡನ್‌ ಹಾಡಿಗೆ ಕುಣಿದ ಹುಡುಗ.. ಅದೇ ಹಾಡಿನ ನಾಯಕಿಯ ಕೈ ಹಿಡಿತಾನೆ ಅಂತ ಬಹುಶಃ ಆಗ ಸ್ವತಃ ವಿಕ್ಕಿ ಕೌಶಲ್‌ ಕೂಡ ಅಂದುಕೊಂಡಿರಲಿಕ್ಕಿಲ್ಲ.

ಎರಡು ವರ್ಷಗಳ ಹಿಂದಿನ ಪ್ರೇಮ!

ಕತ್ರಿನಾ ಮತ್ತು ವಿಕ್ಕಿ ಕೌಶಲ್‌ ನಡುವೆ ಏನೋ ಇದೆ ಎನ್ನುವ ಗುಮಾನಿ ಬಂದು ಇಂದಿಗೆ ಎರಡು ವರ್ಷ ಆಗ್ತಾ ಬಂತು..  ಸರಿಯಾಗಿ 2019ರ ಜನವರಿ 11ರಂದು ಮೊದಲ ಬಾರಿ ಅವರಿಬ್ಬರ ಬಗ್ಗೆ ಒಂದು ಗಾಸಿಪ್‌ ಹರಡಿತ್ತು. ಅದು ಉರಿ ಸಿನಿಮಾ ಬಿಡುಗಡೆಯಾದ ದಿನ.

ಹಾಗೆ ನೋಡಿದ್ರೆ .. ಉರಿ ಚಿತ್ರದ ಬಳಿಕ ಒಂದು ಉರಿ ಹತ್ಕೊಳೋಕೆ ಕಾರಣನೇ ಕತ್ರೀನಾ ಹೆಸರಾಗಿತ್ತು! ಹಾಗಂತ ಅಲ್ಲಿ ಕತ್ರಿನಾ ಇರಲೇ ಇಲ್ಲ. ಆದರೆ ವಿಕ್ಕಿ ಕೌಶಲ್‌ ಈ ಹಿಂದೆ ಪ್ರೇಮಿಸಿದ್ದ ಹರ್ಲಿನ್‌ ಸೇಥಿ ಇದ್ದಳು..  ಆದಿನ ಆಕೆ ಮತ್ತು ವಿಕ್ಕಿ ಕೌಶಲ್‌ ನಡುವಿನ ಸಂಬಂಧ ದೂರಾಗಿತ್ತು. ಆ ಬ್ರೇಕಪ್‌ ಆಗೋದಿಕ್ಕೆ ಕತ್ರೀನಾನೇ ಕಾರಣ ಎನ್ನುವುದು ಕೂಡ ಸುದ್ದಿಯಾಗಿತ್ತು. ಹಾಗಾಗಿ ಅದನ್ನೇ ಕತ್ರೀನಾ ಕೌಶಲ್‌ ಪ್ರೇಮದ ಬಗ್ಗೆ ಸಿಕ್ಕ ಮೊದಲ ಸೂಚನೆ ಅನ್ನಬಹುದು.

ಗರ್ಲ್‌ ಫ್ರೆಂಡ್‌ ಮದುವೆಗೆ ಮಾಜಿ ಪ್ರಿಯಕರ ಬರ್ತಾನ?

ಆ ಬಳಿಕ ಕತ್ರಿನಾ ಬಗ್ಗೆ ಕೇಳಿದಾಗೆಲ್ಲ ಆಕೆಯ ಬಗ್ಗೆ ಕ್ರಶ್‌ ಇದೆ ಎಂದು ವಿಕ್ಕಿ ಕೌಶಲ್‌ ಹೇಳ್ಕೊಂಡಿದ್ದ. ವಿಕ್ಕಿ ಸಹೋದರನ ವೆಬ್‌ ಶೋ ಪ್ರದರ್ಶನದಲ್ಲಿ ಕತ್ರಿನಾ ಕಾಣಿಸಿಕೊಂಡಾಗ ಅವರಿಬ್ಬರ ನಡುವೆ ಆತ್ಮೀಯತೆ ಇದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿತ್ತು. ಲಾಕ್ಡನ್‌ ಸಮಯದಲ್ಲಿಯೂ ಅವರಿಬ್ಬರೂ ಜೊತೆಗಿದ್ದರು ಎನ್ನುವ ಮಾತು ಕೂಡ ಕೇಳಿ ಬಂತು. ಅದಕ್ಕೆ ತಕ್ಕಂತೆ ಅವರಿಬ್ಬರಿಗೂ ಒಂದೇ ಸಮಯದಲ್ಲಿ ಕೊರೊನಾ ಬೇರೆ ಬಂತು! ಏಪ್ರಿಲ್‌ 5ರಂದು ವಿಕ್ಕಿಗೆ ಕೊರೊನಾ ಬಂದು 16ರಂದು ನೆಗೆಟಿವ್‌ ರಿಪೋರ್ಟ್‌ ಬಂದಿತ್ತು.  ಅದೇ ತಿಂಗಳು 6ರಂದು ಕ್ರತಿನಾಗೂ ಕೊರೊನಾ ಬಂದು 17ರಂದು ನೆಗೆಟಿವ್‌ ಆಗಿತ್ತು. ಅಲ್ಲಿಗೆ ಇಬ್ಬರ ನಡುವೆ ಆತ್ಮೀಯ ಸಂಬಂಧ ಇದೆ ಎನ್ನುವುದು ನಿಜ ಎಂದು ಮಾತನಾಡಿಕೊಳ್ಳುವಂತಾಗಿತ್ತು.

ಕತ್ರಿನಾ ಮದುವೆ ನಡೆಯುವ ಸ್ಟಾರ್‌ ಹೋಟೆಲ್‌ ಹೇಗಿದೆ?

ಕದ್ದುಮುಚ್ಚಿ ಲವಿ ಡವಿ!
ಈ ನಡುವೆ ಕತ್ರಿನಾ ಸಾಮಾಜಿಕ ಜಾಲತಾಣದಲ್ಲಿ ತಂಗಿ ಜೊತೆಗೆ ಪೋಸ್ಟ್‌ ಮಾಡಿದ್ದ ಒಂದು ಫೊಟೋ ವೈರಲ್‌ ಆಗಿತ್ತು. ಅದಕ್ಕೆ ಕಾರಣ ಅದರಲ್ಲಿ ಕಂಡು ಬಂದ ನೆರಳೊಂದು ವಿಕಿಯದ್ದು ಎಂದು ನೆಟ್ಟಿಗರು ಪತ್ತೆ ಮಾಡಿದ್ರು. ಆ ಕೂಡಲೇ  ಕತ್ರೀನಾ ಫೊಟೊ  ಡಿಲಿಟ್‌ ಮಾಡಿದ್ದು ಕಂಡಾಗ ಅದು ಸತ್ಯ ಎಂದು ಎಲ್ಲರಿಗೂ ಅರಿವಾಗಿತ್ತು. ಆದರೆ ಕತ್ರೀನಾ ಈ ಬಗ್ಗೆ ಯಾವತ್ತೂ ಮಾಧ್ಯಮಗಳ ಮುಂದೆ ಮಾತನಾಡಲು ತಯಾರಿರಲಿಲ್ಲ. ಯಾಕೆಂದರೆ ಅದಾಗಲೇ ಮದುವೆಯ ಬಗ್ಗೆ ಸಾಕಷ್ಟು ಸುದ್ದಿಗಳು ಬಂದು ಹೋಗಿದ್ದವು. ಸಲ್ಮಾನ್‌ ಮಾತ್ರವಲ್ಲ, ರಣಬೀರ್‌ ಕಪೂರ್‌ ಜೊತೆಗೂ ಪ್ರೇಮವಿದೆ ಎನ್ನುವ ಗುಲ್ಲು ಹಬ್ಬಿತ್ತು.. ಅದಕ್ಕೆ ಪರದೆಯ ಮೇಲಿನ ರೊಮ್ಯಾಂಕ್‌ ದೃಶ್ಯಗಳು ಮಾತ್ರ ಕಾರಣವಾಗಿರಲಿಲ್ಲ.

ಈಗಾಗಲೇ ಕತ್ರಿನಾ ಮದುವೆ ಬಗ್ಗೆ ಸಲ್ಮಾನ್‌ ಖಾನ್‌, ರಣಬೀರ್‌ ಕಪೂರ್‌ ಹೀಗೆ ಇಬ್ಬಿಬ್ಬರ ಜೊತೆಗೆ ಗಾಸಿಪ್‌ ಜೋರಾಗಿಯೇ ಹರಡಿವೆ..  ಅದೇ ಕಾರಣದಿಂದಲೇ ನಿಜವಾಗಿಯೂ ಮದುವೆ ಮಂಟಪಕ್ಕೆ ಕಾಲಿಡುವಾಗ ಯಾವ ಮಾಧ್ಯಮಗಳೂ ಮಧ್ಯೆ ಇರಬಾರ್ದು ಅಂದ್ಕೊಂಡಿದ್ದಾಳೆ ಕತ್ರೀನಾ.

 ಒಟ್ಟಿನಲ್ಲಿ ಕತ್ರಿನಾ ಕೈಫ್‌ ಮದುವೆ ಇಂದು ಅದ್ಧೂರಿಯಾಗಿ ನೆರವೇರಲಿದೆ.. ದೀಪಾವಳಿಯಲ್ಲಿ ನಿಶ್ಚಿತಾರ್ಥ ನಡೆದಿತ್ತು ಎಂದು ಸುದ್ದಿಆಗಿತ್ತು.. ಮದುವೆ ವಿದೇಶದಲ್ಲೇ ಆಗಬೇಕು ಎನ್ನುವುದು ಅವರ ಬಯಕೆಯಾಗಿತ್ತು.. ಆದರೆ ಕೊರೊನಾ ಕಾರಣ ಅಂಥ ಅವಕಾಶಗಳು ದೊರಕಿಲ್ಲ. ಇದೀಗ ವಿವಾಹದ ಬಳಿಕ ಹನಿಮೂನ್‌ ಸುತ್ತಾಟಕ್ಕೂ ಬ್ರೇಕ್‌ ನೀಡಲಾಗುವುದಂತೆ.. ಅದಕ್ಕೆ ಕಾರಣ ಇಬ್ಬರಿಗೂ ಚಿತ್ರೀಕರಣದಲ್ಲಿ ಭಾಗಿಯಾಗಬೇಕಿದೆ.. ಕತ್ರಿನಾ ಕೈಫ್ ವಿಜಯ್‌ ಸೇತುಪತಿ ಜೊತೆಗೆ ನಟಿಸಿದ್ರೆ.. ವಿಕ್ಕಿ ಕೌಶಲ್ ದಿನೇಶ್‌ ವಿಜನ್ಸ್‌  ಚಿತ್ರತಂಡದೊಂದಿಗೆ ಸೇರಿಕೊಳ್ಳಲಿದ್ದಾರೆ. ಅಂದಹಾಗೆ ಸಿನಿಮಾದಲ್ಲಿ ಒಂದಷ್ಟು ಮದುವೆಯ ದೃಶ್ಯಗಳಲ್ಲಿ ಸಂಭ್ರಮಿಸಿರುವ ಕತ್ರೀನಾ.. ಇದೀಗ ತನ್ನ ಮದುವೆಯಲ್ಲಿಯೂ ಸೂರ್ಯವಂಶಿ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಲಿರುವುದು ಖಚಿತವಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?