Mira Rajput Trolled ಕಾಲಿನಿಂದಾಗಿ ಟ್ರೋಲ್ ಆದ್ರು ಸಂದರಿ ಮೀರಾ

Published : Dec 09, 2021, 05:23 PM ISTUpdated : Dec 09, 2021, 08:03 PM IST
Mira Rajput Trolled ಕಾಲಿನಿಂದಾಗಿ ಟ್ರೋಲ್ ಆದ್ರು ಸಂದರಿ ಮೀರಾ

ಸಾರಾಂಶ

Mira Rajput ಕಾಲಿನಿಂದಾಗಿ ಟ್ರೋಲ್ ಮೀರಾ ರಜಪೂತ್, ಅಷ್ಟಕ್ಕೂ ಟ್ರೋಲಿಗರ ಗಮನ ಸೆಳೆದಿದ್ದೇನು ? ಸುಂದರಿ ಮೀರಾಗೆ ಏನಾಯ್ತು ?

ಶಾಹಿದ್ ಕಪೂರ್(Shahid Kapoor) ಅವರ ಪತ್ನಿ ಮೀರಾ ರಜಪೂತ್ ಕಪೂರ್(Mira Rajput Kapoor) ಸಿನಿಮಾ ಬ್ಯಾಗ್ರೌಂಡ್‌ನಿಂದ ಬಂದವರಲ್ಲ. ಆದರೆ ಅವರು ತಮ್ಮ ಸೂಪರ್ ಸ್ಟಾರ್ ಪತಿಯಂತೆ ಜನಪ್ರಿಯರಾಗಿದ್ದಾರೆ. ಮೀರಾ ಅವರನ್ನು ನಾವು ಇನ್ನೂ ಸಿನಿಮಾಗಳಲ್ಲಿ ನೋಡಿಲ್ಲವಾದರೂ, ಸ್ಟಾರ್ ನಟನ ಪತ್ನಿ ಸಾಮಾಜಿಕ ಮಾಧ್ಯಮದ ಪ್ರಭಾವಿ. ಸಾಮಾಜಿಕ ಮಾಧ್ಯಮದಲ್ಲಿ ಮೀರಾ ಅವರ ಪೋಸ್ಟ್‌ಗಳು ಆರೋಗ್ಯ, ಫಿಟ್‌ನೆಸ್, ಜೀವನಶೈಲಿ, ಸೌಂದರ್ಯ ಮತ್ತು, ಕಾಲಕಾಲಕ್ಕೆ ಅವರು ಪೋಸ್ಟ್ ಮಾಡುವ ಅವರ ಸುಂದರವಾದ ಫೋಟೋಗಳಿಂದ ವೈರಲ್ ಆಗಿದ್ದಾರೆ. ಮೀರಾ ಅವರ ಇತ್ತೀಚಿನ ಇನ್‌ಸ್ಟಾಗ್ರಾಮ್(Instagram) ಅಪ್‌ಲೋಡ್ ಕೆಟ್ಟದಾಗಿ ಟ್ರೋಲಿಂಗ್‌ಗೆ ಕಾರಣವಾಗಿದೆ.

ಮೀರಾ ಏನು ಪೋಸ್ಟ್ ಮಾಡಿದ್ದಾರೆ?

ಮೀರಾ ರಜಪೂತ್ ತಮ್ಮ ಫ್ಯಾಶನ್ ಸೆನ್ಸ್‌ನಿಂದ ಅಭಿಮಾನಿಗಳನ್ನು ಮೆಚ್ಚಿಸಲು ಎಂದಿಗೂ ವಿಫಲರಾಗುವುದಿಲ್ಲ. ಗಂಟೆಗಳ ಹಿಂದೆ, ಅವರು ಲ್ಯಾವೆಂಡರ್ ಜಂಪ್‌ಸೂಟ್ ಧರಿಸಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಮೀರಾ ತನ್ನ ಉಡುಪಿನ ಏಕತಾನತೆಯನ್ನು ಹಳದಿ ಸ್ಲಿಂಗ್ ಬ್ಯಾಗ್‌ನೊಂದಿಗೆ ಮ್ಯಾಚ್ ಮಾಡಿದ್ದರು. ಕ್ಲಿಕ್‌ನಲ್ಲಿ ಮಗ ಝೈನ್ ತನ್ನ ಹಿಂದೆ ಅಡಗಿಕೊಂಡಿದ್ದು, ಮೀರಾ ಫೋಟೋಗೆ, ನಾಚಿಕೆಯಿಂದ ಫೋಟೋ ಬಾಂಬರ್ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಆದರೆ ಫೋಟೋದಲ್ಲಿ ಆಕೆಯ ಪಾದಗಳು ಹೇಗೆ ಕಾಣಿಸಿಕೊಂಡಿವೆ ಎಂಬುದನ್ನು ನೆಟ್ಟಿಗರು ತಕ್ಷಣ ಗಮನಿಸಿದ್ದಾರೆ. ಇದು ಬಹುಶಃ ಸೂರ್ಯನ ಬಿಸಿಲು ನೆರಳಿನ ಪ್ರಭಾವದಿಂದಾಗಿರಬಹುದು.

ಕಾಲಿನ ಬಣ್ಣಕ್ಕಾಗಿ ಟ್ರೋಲ್:

ನಿಮ್ಮ ಪಾದಕ್ಕೂ ಮೇಕಪ್ ಮಾಡಿ ಮ್ಯಾಮ್ ಪ್ಲೀಸ್ ಎಂದು ಒಬ್ಬರು ಕಮೆಂಟಿಸಿದರೆ, ಇನ್ನೊಬ್ಬರು ಮುಖ ಇಷ್ಟೊಂದು ಹೊಳೆಯುತ್ತಿದೆ, ಕಾಲಿಗೂ ಮೇಕಪ್ ಮಾಡಬಹುದಿತ್ತು ಎಂದಿದ್ದಾರೆ. ಮತ್ತೊಬ್ಬರು ನಿಮ್ಮ ಕಾಲಿಗೇನಾಯ್ತು ಎಂದರೆ, ಇನ್ನೊಬ್ಬರು ನಿಮ್ಮ ಕಾಲು ಕಪ್ಪಗೆ ಕಾಣುತ್ತಿದೆ ಎಂದಿದ್ದಾರೆ.

ಅರೇಂಜ್ಡ್ ಮ್ಯಾರೇಜ್‌ಗಳನ್ನು ನಂಬುವ ಎಲ್ಲರಿಗೂ, ಶಾಹಿದ್ ಮತ್ತು ಮೀರಾ ಅದಕ್ಕೆ ಮನ್ನಣೆ ನೀಡಬೇಕು! ಇವರಿಬ್ಬರು ಜುಲೈ 7, 2015 ರಂದು ತಮ್ಮ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ಅರೇಂಜ್ಡ್ ಮ್ಯಾರೇಜ್ ಸೆಟಪ್‌ನಲ್ಲಿ ವಿವಾಹವಾದರು. ಇವರಿಬ್ಬರು ಮಿಶಾ ಮತ್ತು ಜೈನ್ ಕಪೂರ್ ಎಂಬ ಇಬ್ಬರು ಮಕ್ಕಳ ಪೋಷಕರು. ಪತಿಯಂತೆಯೇ ಫೇಮಸ್ ಈ ನಟಿ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಪ್ರೀತಿಸಿದ ಹುಡುಗಿ ಮೋಸ ಮಾಡಿದ್ರೆ ತಿರುಗಿ ನೋಡದ ಹುಡುಗರು; ದ್ರೋಹ ಮಾಡಿದೋಳ ಹಿಂದೆ ಹೋದ Bigg Boss ಸ್ಪರ್ಧಿ
ರಾಮ್ ಚರಣ್ ಮೇಲೆ ದೇಶದಾಚೆಗಿನ ಪ್ರೀತಿ.. ಮೆಗಾ ಪವರ್ ಸ್ಟಾರ್‌ಗಾಗಿ ಭಾರತಕ್ಕೆ ಬಂದ ಆ ವಿದೇಶಿ ಫ್ಯಾನ್ಸ್!