Ajith Kumar: ನನ್ನ ತಲ ಅಂತ ಕರೀಬೇಡಿ, AK ಅನ್ನಿ ಸಾಕು ಎಂದ ಸೌತ್ ನಟ

Published : Dec 01, 2021, 11:02 PM ISTUpdated : Dec 01, 2021, 11:33 PM IST
Ajith Kumar: ನನ್ನ ತಲ ಅಂತ ಕರೀಬೇಡಿ, AK ಅನ್ನಿ ಸಾಕು ಎಂದ ಸೌತ್ ನಟ

ಸಾರಾಂಶ

ಕಾಲಿವುಡ್(Kollywood) ನಟ ಅಜಿತ್ ಕುಮಾರ್(Ajith Kumar) ಸ್ವಲ್ಪ ಹೆಚ್ಚೇ ಖಾಸಗಿ ವ್ಯಕ್ತಿ. ಸಿನಿಮಾ ಇಂಡಸ್ಟ್ರಿಯಲ್ಲಿದ್ದರೂ ನಟ ಉಳಿದೆಲ್ಲ ಸಾಮಾನ್ಯರಂತೆಯೇ ಪರಿಗಣಿಸಲ್ಪಡಲು ಇಷ್ಟಪಡುತ್ತಾರೆ. ಈಗ ನಟ ಅಭಿಮಾನಿಗಳಿಗೆ ಹೊಸದೊಂದು ಸೂಚನೆ ಕೊಟ್ಟಿದ್ದಾರೆ.

ಕಾಲಿವುಡ್‌ನ(Kollywood) ಖ್ಯಾತ ನಟಿ ಅಜಿತ್ ಕುಮಾರ್(Ajith kumar) ಅಭಿಮಾನಿಗಳಿಗೆ ತಮ್ಮನ್ನು ಅಜಿತ್, ಅಜಿತ್ ಕುಮಾರ್ ಅಥವಾ ಎಕೆ ಎಂದು ಕರೆಯಬೇಕೆಂದು ಸೂಚನೆ ಕೊಟ್ಟಿದ್ದಾರೆ. ಅದೇ ರೀತಿ ತಮ್ಮನ್ನು ತಲ ಎಂದು ಕರೆಯಬೇಡಿ ಎಂದು ಅಭಿಮಾನಿಗಳಿಗೆ ಹೇಳಿದ್ದಾರೆ. ಕಾಲಿವುಡ್‌ನಲ್ಲಿ ತಲೈವಾ, ದಳಪತಿ, ತಲ ಇಂಥಹ ಕೆಲವು ಟೈಟಲ್‌ಗಳನ್ನು ಅಭಿಮಾನಿಗಳು ತಮ್ಮ ನೆಚ್ಚಿನ ನಟರಿಗಾಗಿ ಕೊಟ್ಟಿದ್ದಾರೆ. ತಲೈವಾ ರಜನೀಕಾಂತ್, ದಳಪತಿ ವಿಜಯ್, ತಲ ಅಜಿತ್ ಇವೆಲ್ಲರೂ ಅಲ್ಲಿ ಕಾಮನ್. ಆದರೆ ನನ್ನ ಹೆಸರಿನ ಮುಂದೆ ಇನ್ಮುಂದೆ ತಲ ಬೇಡ ಜಸ್ಟ್ ಅಜಿತ್ ಸಾಕು ಎಂದಿದ್ದಾರೆ ಸ್ಟಾರ್ ನಟ.

ತಮಿಳು ಸ್ಟಾರ್ ಅಜಿತ್ ಕುಮಾರ್ ತಮ್ಮ ಹೆಸರಿನಿಂದ ತಕ ಎಂಬ ಪೂರ್ವಪ್ರತ್ಯಯವನ್ನು ಕೈಬಿಡುವಂತೆ ಅಭಿಮಾನಿಗಳನ್ನು ಕೇಳಿಕೊಂಡಿದ್ದಾರೆ. ಅವರು ಅಜಿತ್, ಅಜಿತ್ ಕುಮಾರ್ ಮತ್ತು ಎಕೆ ಎಂದು ತಮ್ಮನ್ನು ಕರೆದರೆ ಸಾಕು ಎಂದಿದ್ದಾರೆ. ದಕ್ಷಿಣದ ನಟರನ್ನು ಈ ರೀತಿಯಾಗಿ ಉಲ್ಲೇಖಿಸುವುದು ಸಾಮಾನ್ಯವಾಗಿದೆ. ಅವರ ಹೆಸರಿನೊಂದಿಗೆ ನಟನ ಸ್ಟಾರ್‌ಡಮ್‌ನ ವಿವರಣೆ ಇರುವಂತಹ ಸ್ಪೆಷಲ್ ಹೆಸರು ಕೊಡುತ್ತಾರೆ ಅಭಿಮಾನಿಗಳು. 2001 ರ ಚಲನಚಿತ್ರ ಧೀನಾದಲ್ಲಿ ಅಜಿತ್‌ನ ಪಾತ್ರವನ್ನು ತಲ ಧೀನಧಯಾಲನ್ ಎಂದು ಕರೆಯಲಾಯಿತು . ಆ ನಂತರ ತಲ ಅಜಿತ್ ಎಂದು ಅಭಿಮಾನಿಗಳು ಕರೆಯಲಾರಂಭಿಸಿದ್ದಾರೆ. ಅಂದಿನಿಂದ, ಅಭಿಮಾನಿಗಳು ಅವರನ್ನು ತಲ ಅಜಿತ್ ಎಂದು ಕರೆಯುತ್ತಾರೆ.

ಮಾಸ್ಕ್ ಧರಿಸಿ ಆಟೋದಲ್ಲಿ ಓಡಾಡುತ್ತಿರುವ ನಟ ತಲಾ ಅಜಿತ್ ಫೋಟೋ ವೈರಲ್!

ಹೇಗಾದರೂ ಸರಿ, ಈಗ ಮಾತ್ರ ಅವರನ್ನು ಅಜಿತ್ ಎಂದು ಮಾತ್ರ ಕರೆಯಬೇಕೆಂದು ಹೇಳಿದ್ದಾರೆ. ನಟನ ಪರವಾಗಿ ಅವರ ಮ್ಯಾನೇಜರ್ ಸುರೇಶ್ ಚಂದ್ರ ಅವರು ಹೇಳಿಕೆಯೊಂದನ್ನು ಪೋಸ್ಟ್ ಮಾಡಿದ್ದಾರೆ. ಗೌರವಾನ್ವಿತ ಮಾಧ್ಯಮದ ಸದಸ್ಯರಿಗೆ, ಸಾರ್ವಜನಿಕರಿಗೆ ಮತ್ತು ನಿಜವಾದ ಅಭಿಮಾನಿಗಳಿಗೆ. ನಾನು ಇನ್ನು ಮುಂದೆ ತಲಾ ಎಂದು ಅಲ್ಲ, ಅಜಿತ್, ಅಜಿತ್ ಕುಮಾರ್ ಅಥವಾ ಕೇವಲ ಎಕೆ ಎಂದು ಉಲ್ಲೇಖಿಸಲ್ಪಡಲು ಬಯಸುತ್ತೇನೆ. ಅಥವಾ ನನ್ನ ಹೆಸರಿನ ಮುಂದೆ ಇನ್ನಾವುದೇ ಪೂರ್ವಪ್ರತ್ಯಯ ಬೇಡ. ನಿಮ್ಮೆಲ್ಲರಿಗೂ ಉತ್ತಮ ಆರೋಗ್ಯ, ಸಂತೋಷ, ಯಶಸ್ಸು, ಮನಸ್ಸಿನ ಶಾಂತಿ ಮತ್ತು ಸಂತೃಪ್ತಿಯಿಂದ ತುಂಬಿದ ಸುಂದರ ಜೀವನವನ್ನು ನಾನು ಬಯಸುತ್ತೇನೆ. ಅಜಿತ್ ಎಂದು ಬರೆಯಲಾಗಿದೆ.

ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಯ ಮತದಾನ ಸಂದರ್ಭ ಉನ್ನತ ನಾಯಕರು ಮತ್ತು ಸಿನಿ ಗಣ್ಯರು ಮಂಗಳವಾರ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದರು. ಎಐಎಡಿಎಂಕೆ ಅವರ ಕೆ ಪಳನಿಸ್ವಾಮಿ, ಒ ಪನ್ನೀರ್ಸೆಲ್ವಂ, ಡಿಎಂಕೆ ಮುಖ್ಯಸ್ಥ ಎಂ ಕೆ ಸ್ಟಾಲಿನ್ ಮತ್ತು ರಜನಿಕಾಂತ್, ಅಜಿತ್‌ಕುಮಾರ್, ವಿಜಯ್, ಮತ್ತು ಕಮಲ್ ಹಾಸನ್ ಮುಂತಾದ ಗಣ್ಯರು ಮತ ಚಲಾಯಿಸಿದ್ದರು. ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಕಾಣಿಸಿಕೊಂಡಿರುವ ವೈರಲ್ ವೀಡಿಯೊದ ಮೂಲಕ ಟ್ವಿಟರ್‌ನಲ್ಲಿ ಅಜಿತ್ ನೇಚರ್ ಸುದ್ದಿಯಾಗಿತ್ತು. ಚೆನ್ನೈನ ಮತದಾನ ಕೇಂದ್ರವೊಂದರಲ್ಲಿ ತನ್ನ ಹೆಂಡತಿಯೊಂದಿಗೆ ಆಗಮಿಸಿದ ನಟನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸದ ಅಭಿಮಾನಿಯೊಬ್ಬರು ಕ್ಲಿಪ್ ಅನ್ನು ತೋರಿಸಿದ್ದರು. ಅದರಲ್ಲಿ ನಟ ಅಜಿತ್ ಅಭಿಮಾನಿಯ ಕೈಯಿಂದ ಮೊಬೈಲ್ ಕಿತ್ತು ತೆಗೆದಿದ್ದರು.

ನಟ ಅಭಿಮಾನಿಯ ಫೋನ್ ಅನ್ನು ಕಸಿದುಕೊಂಡು ಸಾಮಾಜಿಕ ಅಂತರದ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕ್ಲಾಸ್ ತೆಗೆದುಕೊಂಡು ಮತ್ತೆ ಮೊಬೈಲ್ ಫೋನ್ ಮರಳಿಸಿದ್ದಾರೆ. ಈ ರೀತಿ ಅಜಿತ್ ವರ್ತಿಸುವುದು ತುಂಬಾ ಸಾಮಾನ್ಯ. ಸಾರ್ವಜನಿಕವಾಗಿ ತಾವು ಕಾಣಿಸಿಕೊಂಡಾಗ ಜನ ತಮ್ಮನ್ನು ವಿಶೇಷವಾಗಿ ಆದರಿಸುವುದನ್ನು ಅಜಿತ್ ಅವರು ಇಷ್ಟಪಡುವುದಿಲ್ಲ. ಬದಲಾಗಿ ಸಾದಾ ಸೀದಾ ಸಿಂಪಲ್ ಆಗಿರಲು ಬಯಸುತ್ತಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮುಸ್ಲಿಂ ಆಗಿ ಮತಾಂತರವಾದ್ರಾ ಬಾಲಿವುಡ್‌ನ ಪ್ರಖ್ಯಾತ ನಟಿಯ ಸಹೋದರಿ? ಬುರ್ಖಾ, ಹಿಜಾಬ್‌ ಧರಿಸಿ ಮಸೀದಿ ಪ್ರವೇಶ!
'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!