
ಬಾಲಿವುಡ್‌ನಲ್ಲಿ(Bollywood) ಮದುವೆ ಆಗಿ ಸಂಸಾರ ನಡೆಸುತ್ತಿರೋ ಜೋಡಿಗಳಿಂತ ಹೆಚ್ಚು ಸುದ್ದಿಯಲ್ಲಿರೋದು, ಮದುವೆಗೆ ಗುಡ್ ಬೈ ಹೇಳಿ ಬೇರೊಬ್ಬ ಪಾರ್ಟನರ್ ಜೊತೆಗೆ ಜಿಂಗಲಾಲಾ ಮಾಡ್ತಿರೋ ಜೋಡಿಗಳು. ಅರ್ಬಾಸ್ ಜೊತೆಗಿನ ರಿಲೇಶನ್‌ಶಿಪ್‌ಗೆ ಗುಡ್ ಬೈ ಹೇಳಿ ಅರ್ಜುನ್ ಕಪೂರ್ ಲಲ್ಲೆಗರೀತಿರೋ ಮಲೈಕಾ ಅರೋರಾ, ಮೆಹ್ರ ಜೆಸ್ಸಿಯ ಸಂಬಂಧ ಬಿಟ್ಟು ಗಾಬ್ರಿಲ್ಲಾ ಜೊತೆ ಸರಸವಾಡ್ತಿರೋ ಅರ್ಜುನ್ ರಾಮ್‌ಪಾಲ್ ಸೇರಿ ನಾಲ್ಕು ಬಾಲಿವುಡ್ ಸೆಲೆಬ್ರಿಟಿಗಳ ಬಿಂದಾಸ್ ಲೈಫ್ ಸ್ಟೋರಿ ಇಲ್ಲಿದೆ.
1. ಅರ್ಜುನ್ ಕಪೂರ್ - ಮಲೈಕಾ (Malaik Arora- Arjun Kapoor)
ಈ ಜೋಡಿ ಹೆಸರು ಹೇಳಿದ ಕೂಡಲೇ 'ಪ್ರೇಮ ಕುರುಡು' ಅನ್ನೋ ಡೈಲಾಗೊಂದು ಅಯಾಚಿತವಾಗಿ ಹರಿದು ಬರುತ್ತೆ. ಅದಕ್ಕೆ ಕಾರಣ ಮಲೈಕಾ ವಯಸ್ಸು. ಹದಿನೆಂಟರ ಹರೆಯದ ಮಗನಿರುವ ಈ ಮಧ್ಯ ವಯಸ್ಸಿನ ಸೆಕ್ಸಿ ಲೇಡಿ ಇದೀಗ ಮೂವತ್ತಾರರ ಯುವಕನ ಜೊತೆಗೆ ಲವ್ವಿ ಡವ್ವಿಯಲ್ಲಿ ತೊಡಗಿದ್ದಾಳೆ. ಇದೆಲ್ಲ ಶುರುವಾಗಿ ಬಹಳ ಕಾಲವಾಗಿದೆ. ಇದೀಗ ಇವರಿಬ್ಬರೂ ಬ್ರೇಕ್‌ಅಪ್ ಮಾಡಿಕೊಂಡಿದ್ದಾರೆ ಅನ್ನೋ ಸುದ್ದಿಯೂ ಹರಿದಾಡ್ತಿದೆ. ಆದರೆ ಗಾಸಿಪ್ ಮಾಡುವವರ ಎದುರೇ ಈ ಜೋಡಿ ಪಾಪರಾಜಿಗಳ ಕ್ಯಾಮರಗೆ ತಬ್ಬಿಕೊಂಡು ಪೋಸ್ ಕೊಡ್ತಿದ್ದಾರೆ. ಇಷ್ಟು ವರ್ಷಗಳ ಗ್ಯಾಪ್ ಇಟ್ಕೊಂಡೂ ಈ ಜೋಡಿ ಈ ಪಾಟಿ ಖುಷಿಯಾಗಿರೋದು ಬಾಲಿವುಡ್ ಮಂದಿಯ ತಲೆ ಕೆಡಿಸಿದಂತಿದೆ.
2. ಅರ್ಜುನ್ ರಾಮ್‌ಪಾಲ್ ಮತ್ತು ಗೇಬ್ರಿಲ್ಲಾ (Arjun Rampal)
ಮೆಹ್ರಾ ಜೆಸಿಯಾ ಎಂಬ ಹುಡುಗಿ ಜೊತೆಗೆ ೨೧ ವರ್ಷಗಳ ಕಾಲ ಸಂಸಾರ ನಡೆಸಿಕೊಂಡಿದ್ದವರು ಅರ್ಜುನ್ ರಾಮ್‌ಪಾಲ್. ಜೆಸಿಯಾ ರಾಮ್‌ಪಾಲ್‌ಗಿಂತ ಹಿರಿಯೆ. ಇದೀಗ ರಾಮ್ ಪಾಲ್ ಗರ್ಲ್ ಫ್ರೆಂಡ್ ಆಗಿರುವ ಗೇಬ್ರಿಲ್ಲಾ ರಾಮ್‌ಪಾಲ್‌ಗಿಂತ ಹದಿನಾರು ವರ್ಷಗಳಷ್ಟು ಚಿಕ್ಕವಳು. ಕಳೆದ ಕೆಲವು ವರ್ಷಗಳಿಂದ ರಿಲೇಶನ್‌ಶಿಪ್‌ನಲ್ಲಿರುವ ಅರ್ಜುನ್, ಗೇಬ್ರಿಲ್ಲಾಗೆ ಒಂದು ಗಂಡು ಮಗು ಇದೆ. ಆದರೂ ಮದುವೆ ಅಂದ್ರೆ ಈ ಜೋಡಿಗೆ ಅಂಥಾ ಇಷ್ಟವೇನೂ ಇದ್ದ ಹಾಗಿಲ್ಲ. ತಮ್ಮಿಬ್ಬರ ಪ್ರೇಮಕ್ಕೆ, ಸಂಬಂಧಕ್ಕೆ ಮದುವೆ ಚೌಕಟ್ಟೆಲ್ಲ ಬೇಡ, ನಾವು ಹಾಗೇ ಖುಷಿಯಾಗಿ ಬದುಕೋಣ ಅನ್ನೋ ಇಚ್ಛೆ ಈ ಇಬ್ಬರದು. ಸೋಷಿಯಲ್ ಮೀಡಿಯಾದಲ್ಲಿ ಈ ಜೋಡಿಯ ಫೋಟೋ, ವೀಡಿಯೋಗಳು ಹರಿದಾಡ್ತಾನೇ ಇರುತ್ತವೆ. ಇವರ ಮಗ ಒಂದೂವರೆ ಎರಡು ವರ್ಷದ ಅರಿಕ್ ನೆಟಿಜನ್ಸ್ ಕಣ್ಮಣಿ ಆಗಿದ್ದಾನೆ.
Bollywood Entry: ಸಲ್ಮಾನ್ ಫ್ಯಾಮಿಲಿಯ ಮತ್ತೊಂದು ಕುಡಿ ಚಿತ್ರರಂಗಕ್ಕೆ, ಮುಂದಿನ ತಿಂಗಳು ಲಾಂಚ್!
3. ಫರ್ಹಾನ್ ಅಖ್ತರ್ ಮತ್ತು ಶಿಬಾನಿ ಡಂಡೇಕರ್ (Farhan Akthar)
ಅಧೂನಾ ಎಂಬ ೫೪ ವರ್ಷದ ಬ್ರಿಟೀಷ್ ಹೇರ್‌ಸ್ಟೈಲಿಸ್ಟ್ ಫರ್ಹಾನ್ ಅಖ್ತರ್ ಅವರ ಪತ್ನಿ. ನಾಲ್ಕು ವರ್ಷಗಳ ಕೆಳಗೆ ತಮ್ಮ ೧೭ ವರ್ಷಗಳ ರಿಲೇಶನ್‌ಶಿಪ್‌ಗೆ ಈ ಜೋಡಿ ಗುಡ್‌ಬೈ ಹೇಳಿದರು. ೪೭ ವರ್ಷದ ಫರ್ಹಾನ್ ಇದೀಗ ಶಿಬಾನಿ ಡಂಡೇಕರ್ ಎಂಬ ಹಾಡುಗಾರ್ತಿ ಕಮ್ ನಟಿ ಕಂ ಆಂಕರ್ ಕಂ ಮಾಡೆಲ್ ಶಿಬಾನಿ ಡಂಡೇಕರ್ ಜೊತೆಗೆ ಡೇಟಿಂಗ್ ಮಾಡ್ತಿದ್ದಾರೆ. ೨೦೧೮ರಿಂದೀಚೆಗೆ ಈ ಜೋಡಿ ಜೊತೆಗೇ ಬದುಕುತ್ತಾ ಕಷ್ಟ ಸುಖ ಹಂಚಿಕೊಳ್ಳುತ್ತಿದೆ. ಫರ್ಹಾನ್ ಜೊತೆಗಿನ ಶಿಬಾನಿ ಸಂಬಂಧಕ್ಕೆ ಎರಡೂ ಫ್ಯಾಮಿಲಿಗಳ ಗ್ರೀನ್ ಸಿಗ್ನಲ್ ಸಿಕ್ಕಿದಂತಿದೆ. ಎರಡೂ ಫ್ಯಾಮಿಲಿಗಳ ಫಂಕ್ಷನ್‌ಗಳಲ್ಲಿ ಇಬ್ಬರೂ ಮನೆಯವರಂತೆ ಓಡಾಡಿಕೊಂಡಿರೋದು ಗುಟ್ಟಾಗೇನೂ ಉಳಿದುಕೊಂಡಿಲ್ಲ.
Kangana in Love: ಪ್ರೀತಿಯಲ್ಲಿ ಮೋಸ ಹೋದ ಹಿಂಟ್ ನೀಡಿದ ಕಂಗನಾ?
4. ಅರ್ಬಾಸ್ ಖಾನ್ ಹಾಗೂ ಜಾರ್ಜಿಯಾ ಆಂಡ್ರಿಯಾನಿ (Arbaz Khan)
ಸಲ್ಮಾನ್ ಖಾನ್ ಸಹೋದರ ಅರ್ಬಾಸ್ ಖಾನ್ ಭಲೇ ಶ್ರೀಮಂತ. ಈಗ ಜಾರ್ಜಿಯಾ ಆಂಡ್ರಿಯಾನಿ ಎಂಬ ಕಿರಿಯ ವಯಸ್ಸಿನ ಚೆಲುವೆಯ ಜೊತೆಗೆ ಲೋಕ ಸುತ್ತುತ್ತಾ ಇದ್ದಾರೆ. ಕಳೆದ ಲಾಕ್‌ಡೌನ್ ಸಮಯ ಈ ಇಬ್ಬರ ಸಂಬಂಧ ಮತ್ತಷ್ಟು ಬಿಗಿಯಾಯ್ತು. ಇಬ್ಬರೂ ಜೊತೆಯಾಗಿ ಬದುಕು ಶುರು ಮಾಡಿದರು. ಯಾವ ಪಾಪರಾಜಿಗಳಿಗೂ ಕೇರ್ ಮಾಡದೇ ಬಿಂದಾಸ್ ಆಗಿ ಓಡಾಡಿಕೊಂಡಿರುವ ಈ ಜೋಡಿಗೆ ಮದುವೆ ಬಗ್ಗೆ ಚಿಂತೆ ಇದ್ದ ಹಾಗಿಲ್ಲ. ಮದುವೆ ಯಾವಾಗ ಅಂತ ಕೇಳಿದ್ರೆ, ಅಂಥದ್ದೇನಾದ್ರೂ ಇದ್ರೆ ಜಗತ್ತಿಗೆ ತಿಳಿಸಿಯೇ ಆಗ್ತೀವಿ, ಕದ್ದುಮುಚ್ಚಿ ಮದ್ವೆ ಆಗೋ ದರ್ದು ನಮಗಿಲ್ಲ ಅಂತ ಹಸಿಮೆಣಸಿನ ಕಾಯಿಯಂತೆ ಜಾರ್ಜಿಯಾ ರಿಪ್ಲೈ ಮಾಡಿದ್ರಂತೆ.
Prithviraj in Hindi series: ಭಾರತದ ಬಿಸ್ಕತ್ ಕಿಂಗ್ ಕಥೆಯಲ್ಲಿ ಮಾಲಿವುಡ್ ನಟ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.