
ಬಹುಭಾಷಾ ನಟಿ ಸಮಂತಾ ರುಥ್ ಪ್ರಭು(Samantha Ruth Prabhu) ಅವರ ವೈಯಕ್ತಿಯ ಜೀವನ ಭಾರೀ ಸುದ್ದಿಯಾಗಿದೆ. ಅವರ ವಿಚ್ಚೇದನೆಯಿಂದ ತೊಡಗಿ, ಪ್ರೆಗ್ನೆನ್ಸಿ ರೂಮರ್ಸ್, ಬಾಲಿವುಡ್(Bollywood) ಎಂಟ್ರಿ, ನಾಗ ಚೈತನ್ಯ(Naga chaitanya) ಅವರ ಜೊತೆಗೆ ಮನಸ್ತಾಪ, ಸ್ಟೈಲಿಸ್ಟ್ ಜೊತೆ ಸಂಬಂಧ ಹೀಗೆ ನಟಿಯ ಸುತ್ತಮುತ್ತ ಬಹಳಷ್ಟು ವಿಚಾರಗಳು ಚರ್ಚೆಯಾಗುತ್ತಿವೆ. ಇದೆಲ್ಲ ಬೆಳವಣಿಗೆಗಳ ಮಧ್ಯೆ ಸಮಂತಾ ಅವರ ಸೆಕ್ಸ್(Sex) ಕುರಿತ ಅಭಿಪ್ರಾಯ ಈಗ ಎಲ್ಲೆಡೆ ವೈರಲ್(Viral) ಆಗಿದೆ. ಅಷ್ಟಕ್ಕೂ ನಟಿ ಸೆಕ್ಸ್ ಬಗ್ಗೆ ಹೇಳಿದ್ದೇನು ? ಅದು ಅಷ್ಟಾಗಿ ಚರ್ಚೆಯಾಗಿದ್ದೇಕೆ ? ಅಭಿಮಾನಿಗಳ ರಿಯಾಕ್ಷನ್ಸ್ ಹೇಗಿತ್ತು ?
ನಟಿ ಸಮಂತಾ ಅವರು ಹಾಲಿವುಡ್‌ಗೂ ಎಂಟ್ರಿ ಕೊಡೋಕೆ ಸಿದ್ಧರಾಗಿದ್ದಾರೆ. ಫ್ಯಾಮಿಲಿ ಮ್ಯಾನ್ 2 ವೆಬ್ಸ ಸಿರೀಸ್ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ನಟಿ ಈಗ ಹಾಲಿವುಡ್‌ನಲ್ಲೂ(Hollywood) ಮಿಂಚೋದಕ್ಕೆ ರೆಡಿಯಾಗಿದ್ದಾರೆ. ಇತ್ತೀಚೆಗಷ್ಟೇ ಪತಿ ನಾಗಚೈತನ್ಯ ಅವರಿಂದ ವಿಚ್ಚೇದನೆ ಪಡೆದ ನಟಿ ಅದರ ನಂತರ ಸ್ನೇಹಿತರೊಂದಿಗೆ ಚಾರ್ ಧಮ್ ಯಾತ್ರ ಹಾಗೂ ದುಬೈ(Dubai) ಟ್ರಿಪ್ ಎಂಜಾಯ್ ಮಾಡಿದ್ದರು. ಲೈಫ್‌ನಲ್ಲಿ ಸಮಂತಾ ಮೂವ್ ಆನ್ ಆಗಿದ್ದು ಅತ್ತ ನಾಗ ಚೈತನ್ಯ ಅವರೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಈಗ ನಟಿಯ ಹಳೆಯ ಸಂದರ್ಶನದ ತುಣುಕೊಂದು ಸೋಷಿಯಲ್ ಮಿಡಿಯಾದಲ್ಲಿ(Social Media) ವೈರಲ್ ಆಗಿದೆ. ಇದರಲ್ಲಿ ಸಮಂತಾ ಅವರು ಸೆಕ್ಸ್ ಕುರಿತು ಹೇಳಿದ ಮಾತುಗಳೂ ವೈರಲ್ ಆಗಿವೆ.
2017ರ ಸಂದರ್ಶನ ವಿಡಿಯೋ ವೈರಲ್ ಆಗಿದ್ದು ಇದರಲ್ಲಿ ಸಮಂತಾರಲ್ಲಿ ಆಹಾರವೋ ಸೆಕ್ಸ್ ಮುಖ್ಯವೋ ಎಂಬ ಪ್ರಶ್ನೆಯನ್ನು ಕೇಳಲಾಗಿದೆ. ಇದಕ್ಕೆ ಉತ್ತರಿಸಿದ ನಟಿ ಒಂದಿನ ಆಹಾರ ಇಲ್ಲಾಂದ್ರೂ ಓಕೆ, ಆದರೆ ಸೆಕ್ಸ್ ಬೇಕೇ ಬೇಕು ಎಂದು ಉತ್ತರ ಕೊಟ್ಟಿದ್ದಾರೆ ನಟಿ. ಒಂದಿನ ಊಟ ಇಲ್ಲವೆಂದರೂ ನಿಲ್ಲಬಹುದು, ಸೆಕ್ಸ್ ಇಲ್ಲದೆ ಇರಲಾರೆ ಎಂದಿದ್ದಾರೆ ಸೌತ್ ನಟಿ. ಈ ವಿಡಿಯೋ ತುಣುಕು ಈಗ ವೈರಲ್ ಆಗಿದ್ದು ಅಭಿಮಾನಿಗಳು ಬೇರೆ ಬೇರೆ ರೀತಿಯಲ್ಲಿ ಪ್ರಯಿಕ್ರಿಯಿಸುತ್ತಿದ್ದಾರೆ.
ಡಿವೋರ್ಸ್ ಆದ್ಮೇಲೆ ದ್ವಿಲಿಂಗಿ ಆಗ್ತಿದ್ದಾರೆ ಸಮಂತಾ ರುತ್ ಪ್ರಭು!
ಸೆಕ್ಸ್ ಕುರಿತು ನಟಿಯರು ಬೋಲ್ಡ್ ಹೇಳಿಕೆ ಕೊಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಮಲೈಕಾ ಅರೋರಾ ಅವರು ಸೆಕ್ಸ್ ಆಹಾರಕ್ಕಿಂತಲೂ ಮುಖ್ಯ ಎಂದು ಹೇಳಿದ್ದರು. ಹಾಗೆಯೇ ಸೈಫ್ ಅಲಿ ಖಾನ್ ಹಾಗೂ ಅಮೃತಾ ಸಿಂಗ್ ವಿಚ್ಚೇದನೆ ವಿಚಾರಕ್ಕೆ ಬಂದಾಗಲೂ ನಟನ ಸೆಕ್ಸ್ ಕುರಿತ ಅಭಿಪ್ರಾಯ ಬೋಲ್ಡ್ ಆಗಿತ್ತು.
ಹಾಲಿವುಡ್‌ಗೆ ಎಂಟ್ರಿ ಕೊಟ್ಟ ಸಮಂತಾ:
2021 ರಲ್ಲಿ ತನ್ನ ಪತಿ ನಾಗ ಚೈತನ್ಯದಿಂದ(Naga chaitanya) ಬೇರ್ಪಟ್ಟ ನಂತರ ಸಮಂತಾ ವೈಯಕ್ತಿಕ ಹಿನ್ನಡೆಯನ್ನು ಹೊಂದಿದ್ದರು. ಆದರೆ ವೃತ್ತಿಪರವಾಗಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅವರು ದಕ್ಷಿಣದಲ್ಲಿ ಕೆಲವು ದೊಡ್ಡ ಚಿತ್ರಗಳಿಗೆ ಸಹಿ ಹಾಕುತ್ತಿದ್ದಾರೆ. ಈಗ, ನಟಿ ಮೊದಲ ವಿದೇಶಿ ಚಿತ್ರ, ಅರೇಂಜ್ಮೆಂಟ್ಸ್ ಆಫ್ ಲವ್‌ಗೆ ಸಹಿ ಹಾಕಿದ್ದಾರೆ. ಟ್ವಿಟರ್‌ನಲ್ಲಿ ಸಮಂತಾ ಈ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿದ್ದಾರೆ. ಒಂದು ಸಂಪೂರ್ಣ ಹೊಸ ಜಗತ್ತು.
ಅರೇಂಜ್‌ಮೆಂಟ್ಸ್ ಆಫ್ ಲವ್ ಭಾಗವಾಗಲು ರೋಮಾಂಚನಗೊಂಡಿದ್ದೇನೆ. ನನ್ನನ್ನು #ಅನು ಎಂದು ಆಯ್ಕೆ ಮಾಡಿದ್ದಕ್ಕಾಗಿ ಧನ್ಯವಾದಗಳು ಸರ್ . ಈ ರೋಮಾಂಚಕಾರಿ ಪ್ರಯಾಣವನ್ನು ಪ್ರಾರಂಭಿಸಲು ಇನ್ನಷ್ಟು ಕಾಯಲು ಸಾಧ್ಯವಿಲ್ಲ.. ಧನ್ಯವಾದಗಳು ಎಂದು ಬರೆದಿದ್ದರು.
ನಟಿ ನವೆಂಬರ್ 26, ಶುಕ್ರವಾರದಂದು ತನ್ನ ಮಾಜಿ ಮಾವ ನಾಗಾರ್ಜುನ ಅವರ ಸ್ಟುಡಿಯೋಗೆ ಭೇಟಿ ನೀಡಿದಾಗ ನಟಿ ಅಕ್ಕಿನೇನಿ ಕುಟುಂಬದೊಂದಿಗಿನ ತನ್ನ ಸಂಬಂಧವನ್ನು ಸಂಪೂರ್ಣವಾಗಿ ಕಡಿದುಕೊಂಡಿಲ್ಲ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.