ಖ್ಯಾತ ಡ್ಯಾನ್ಸರ್ ಸರೋಜ್‌ ಖಾನ್‌ ಅಸಭ್ಯವಾಗಿ ವರ್ತಿಸಲು ಇದ್ದಿದ್ದ ಒಂದು ಕಾರಣವನ್ನು ರಿವೀಲ್ ಮಾಡಿದ ಟೆರೆನ್ಸ್‌!

Published : Nov 09, 2024, 11:28 AM IST
ಖ್ಯಾತ ಡ್ಯಾನ್ಸರ್ ಸರೋಜ್‌ ಖಾನ್‌ ಅಸಭ್ಯವಾಗಿ ವರ್ತಿಸಲು ಇದ್ದಿದ್ದ ಒಂದು ಕಾರಣವನ್ನು ರಿವೀಲ್ ಮಾಡಿದ ಟೆರೆನ್ಸ್‌!

ಸಾರಾಂಶ

ಸರೋಜ್ ಖಾನ್ ವರ್ತನೆ ಬಗ್ಗೆ ಅನುಮಾನ ಪಡುತ್ತಿದ್ದ ವ್ಯಕ್ತಿಗಳಿಗೆ ನೇರ ಉತ್ತರ ಕೊಟ್ಟ ಟೆರೆನ್ಸ್ ಲೂಯಿಸ್.

ಹಿಂದಿ ಸಿನಿಮಾಗಳ ಹಾಡು ಸೂಪರ್ ಹಿಟ್ ಆಗಲು ಗಾಯಕರು ಎಷ್ಟು ಮುಖ್ಯನೋ ಡ್ಯಾನ್ಸ್‌ ಕೋರಿಯೋಗ್ರಾಫರ್‌ಗಳು ಅಷ್ಟೇ ಮುಖ್ಯ. ಕೆಲವೊಂದು ಚಿತ್ರಗಳನ್ನು ಸಿಗ್ನೇಚರ್ ಸ್ಟೆಪ್‌ ಮೂಲಕ ಗುರುತಿಸಲಾಗುತ್ತದೆ. ಈ ವಿಚಾರದಲ್ಲಿ ಮಹತ್ವ ಪಾತ್ರ ವಹಿಸಿದ್ದು ಖ್ಯಾತ ಕೋರಿಯೋಗ್ರಾಫರ್ ಸರೋಜ್ ಖಾನ್. 2020 ಜುಲೈ ತಿಂಗಳಿನಲ್ಲಿ ಸರೋಜ್ ಕೊನೆ ಉಸಿರೆಳೆಯುತ್ತಾರೆ. 71 ವರ್ಷದ ಸೋರಜ್‌ ಖಾನ್‌ ಕೊನೆ ಕ್ಷಣದವರೆಗೂ ಡ್ಯಾನ್ಸ್ ಮಾಡುತ್ತಿದ್ದರು ಆದರೆ ಹಲವರಿಗೆ ಇವರ ವರ್ತನೇ ಬಗ್ಗೆ ಬೇಸರವಿತ್ತು. ಸದಾ ಕೋಪ ಮಾಡಿಕೊಳ್ಳುತ್ತಾರೆ, ಜಗಳ ಮಾಡುತ್ತಾರೆ, ಸರಿಯಾಗಿ ಡ್ಯಾನ್ಸ್‌ ಮಾಡಿಲ್ಲ ಅಂದ್ರೆ ಬೈಯುತ್ತಾರೆ ಎಂದು ಪಾಯಿಂಟ್ ಮಾಡಿ ಹೇಳುತ್ತಾರೆ. ಇದಕ್ಕೆ ಕಾರಣವನ್ನು  ಟೆರೆನ್ಸ್ ಲೂಯಿಸ್ ಸ್ಪಷ್ಟವಾಗಿ ಬಿಡಿಸಿದ್ದಾರೆ.

ಭಾರತಿ ಸಿಂಗ್ ಮತ್ತು ಹರ್ಷ ಲಿಂಬಾಚಿಯಾ ಸಂದರ್ಶನದಲ್ಲಿ ಟೆರೆನ್ಸ್ ಲೂಯಿಸ್ ಭಾಗಿಯಾಗಿದ್ದರು. ಈ ವೇಳೆ ಯಾಕೆ ಮಹಿಳಾ ಕೋರಿಯೋಗ್ರಾಫರ್‌ಗಳು ಸದಾ ಕೋಪದಲ್ಲಿ ಇರುತ್ತಿದ್ದರು ಯಾಕೆ ಮತ್ತೊಬ್ಬ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದರು ಎಂದು ರಿವೀಲ್ ಮಾಡಿದ್ದಾರೆ. 

ಸ್ನೇಹಕ್ಕಾಗಿ ಸಿನಿಮಾ ಒಪ್ಪಿಕೊಂಡು ಮೋಸ ಆಗಿದೆ, ದೊಡ್ಡ ಪಾಠ ಕಲಿತಿದ್ದೀನಿ: ಸುಧಾರಾಣಿ

'ಹಲವು ಪ್ರಶ್ನೆ ಮಾಡಿದ್ದಾರೆ ಯಾಕೆ ಸರೋಜ್ ಖಾನ್ ಸದಾ ನಿಂದಿಸುತ್ತಿದ್ದರು ಮತ್ತು ಅಸಭ್ಯವಾಗಿ ವರ್ತಿಸುತ್ತಿದ್ದರು ಎಂದು. ಆದರೆ ಅವರು ಅರ್ಥ ಮಾಡಿಕೊಳ್ಳಬೇಕಾದದ್ದು ಏನೆಂದರೆ ಈ ಇಂಡಸ್ಟ್ರಿಯಲ್ಲಿ ಮಹಿಳೆಯರು ಕೆಲಸ ಮಾಡುವುದು ತುಂಬಾನೇ ಕಷ್ಟ ಇದು ಪುರುಷ ಪ್ರಧಾನ ಪ್ರಪಂಚ. ಇಲ್ಲಿ ರಫ್ ಮತ್ತು ಸ್ಟ್ರಾಂಗ್ ಆಗಿ ಇರಬೇಕು. ಇಲ್ಲಿ ಹೇಗೆ ಇದ್ದರೂ ಮಹಿಳೆಯರು ಬೆಳೆಯುವುದಕ್ಕೆ ಬಿಡುವುದಿಲ್ಲ ಅವರ ಪ್ರತಿಭೆಯನ್ನು ಕೊಲ್ಲುತ್ತಾರೆ. ಇಲ್ಲಿ ಮಹಿಳೆಯರು ಪುರುಷರಷ್ಟು ಬಲಶಾಲಿ ಆದರೆ ಮಾತ್ರ ಇಂಡಸ್ಟ್ರಿಯಲ್ಲಿ ಉಳಿಯುವುದಕ್ಕೆ ಸಾಧ್ಯ' ಎಂದು  ಟೆರೆನ್ಸ್ ಲೂಯಿಸ್ ಮಾತನಾಡಿದ್ದಾರೆ.

'ನನಗೆ ಗೊತ್ತಿಲ್ಲ ಯಾರೆಲ್ಲ ಗಮನಿಸಿದ್ದಾರೆ ಎಂದು...ಮಹಿಳಾ ಕೋರಿಯೋಗ್ರಾಫರ್‌ಗೆ ಹೊಲಿಸಿದರೆ ಪುರುಷ ಕೋರಿಯೋಗ್ರಾಫರ್‌ಗಳು ನಿಜಕ್ಕೂ ತುಂಬಾ ತಾಳ್ಮೆಯಿಂದ ಇರುತ್ತಾರೆ. ಪುರುಷರಿಗಿಂತ ಮಹಿಳೆಯರು ಹೆಚ್ಚು ಅಬ್ಯೂಸಿವ್ ಆಗಿರುತ್ತಾರೆ. ಏಕೆಂದರೆ ಪ್ರತಿ ಹಂತದಲ್ಲೂ ಮಹಿಳೆಯರು ಪ್ರತಿಯೊಂದು ಸಲವೂ ತಮ್ಮ ಸಾಮರ್ಥ್ಯವನ್ನು ಸಾಭೀತು ಮಾಡಬೇಕು ಇಲ್ಲವಾದರೆ ಅವರು ಎದುರಿಸುವ ಮಾತುಗಳು ನಿಜಕ್ಕೂ ಬೇಸರ ತರುತ್ತದೆ.' ಎಂದು  ಟೆರೆನ್ಸ್ ಲೂಯಿಸ್ ಹೇಳಿದ್ದಾರೆ.

ಆಸ್ಟ್ರೇಲಿಯ ಯೂನಿವರ್ಸಿಟಿಯಲ್ಲಿ ಸ್ಕಾಲರ್ಶಿಪ್‌ ಬಿಟ್ಟು ಸಿನಿಮಾ ಕಡೆ ಮುಖ ಮಾಡಿದ ರೋಶನಿ ಪ್ರಕಾಶ್!

'ಈ ಇಂಡಸ್ಟ್ರಿಯಲ್ಲಿ ನಾವು ಉಳಿಯುವುದಕ್ಕೆ ಹೆಚ್ಚು ಕಷ್ಟ ಪಡುವ ಅಗತ್ಯವಿಲ್ಲ ಆದರೆ ಮಹಿಳೆಯರು ನಿಜಕ್ಕೂ ಕಷ್ಟ ಪಡಬೇಕು. ನಿಜಕ್ಕೂ ಬೇಸರದ ವಿಚಾರ ಏನೆಂದರೆ ಅವರಲ್ಲಿ ಇರುವ ಹೆಣ್ಣು ತನವನ್ನು ಈ ಪ್ರಪಂಚ ಕೊಲೆ ಮಾಡಿರುತ್ತದೆ ಬದುಕಲು ಅವರು ಪುರುಷರ ಸಮಕ್ಕೆ ನಿಲ್ಲಬೇಕು. ಹೀಗಾಗಿ ಅವರ ವರ್ತನೇ, ನಡುವಳಿಕೆ ಮತ್ತು ಮಾತನಾಡುವ ಶೈಲಿ ಪುರುಷರಂತೆ ಇರುತ್ತದೆ' ಎಂದಿದ್ದಾರೆ  ಟೆರೆನ್ಸ್ ಲೂಯಿಸ್. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?