
ಊ ಅಂಟಾವಾ ಮಾವ ಊಊ ಅಂಟಾವಾ.. ಹಾಡು ಕೇಳ್ತಿದ್ದಂತೆ ಸಮಂತಾ ರುತ್ ಪ್ರಭು (samantha ruth prabhu) ಬ್ಯೂಟಿ ಕಣ್ಮುಂದೆ ಬಂದು ಹೋಗುತ್ತೆ. ದಕ್ಷಿಣ ಭಾರತ (South India) ಹಾಗೂ ಬಾಲಿವುಡ್ (Bollywood) ನಲ್ಲಿ ಹೆಸರು ಮಾಡಿರುವ ನಟಿ ಸಮಂತಾ. ಇತ್ತೀಚಿನ ದಿನಗಳಲ್ಲಿ ಸಮಂತಾ ಸುದ್ದಿಯಲ್ಲಿದ್ದಾರೆ. ನಾಗಚೈತನ್ಯ (Naga Chaitanya) ಎರಡನೇ ಮದುವೆ, ಸಮಂತಾ ಅನಾರೋಗ್ಯ ಹಾಗೂ ಕಳೆದ ಒಂದು ವರ್ಷದಿಂದ ಸಿನಿಮಾದಿಂದ ದೂರವಿರುವ ಸಮಂತಾ ಆಗಾಗ ಟ್ರೋಲ್ ಕೂಡ ಆಗಿದ್ದಾರೆ. ಈಗ ಮೋಸ್ಟ್ ಪವರ್‌ಫುಲ್ ವುಮೆನ್ ಈವೆಂಟ್‌ನಲ್ಲಿ ಕಾಣಿಸಿಕೊಂಡಿದ್ದ ಸಮಂತಾ, ವೈಯಕ್ತಿಕ ಜೀವನ, ಟ್ರೋಲಿಂಗ್, ಒಂದು ವರ್ಷದ ನಟನೆಗೆ ಬ್ರೇಕ್, ಪ್ರೊಡಕ್ಷನ್ ಹೌಸ್ ಸೇರಿದಂತೆ ಅನೇಕ ವಿಷ್ಯಗಳ ಬಗ್ಗೆ ಮಾತನಾಡಿದ್ದಾರೆ.
ಪ್ರಿಯಾಂಕರನ್ನು ಹೊಗಳಿದ ಸಮಂತಾ : ಪ್ರಸಿದ್ಧ ನಟಿ ಸಮಂತಾಗೆ, ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ರೋಲ್ ಮಾಡೆಲ್. ಹುಡುಗಿಯರಿಗೆ ಪ್ರಿಯಾಂಕಾ ಉತ್ತಮ ಮಾದರಿ ಎಂದು ಸಮಂತಾ ಹೇಳಿದ್ದಾರೆ. ಪ್ರಿಯಾಂಕಾ ಕೆಲಸವನ್ನು ಸಮಂತಾ, ಮನಸ್ಪೂರ್ವಕವಾಗಿ ಹೊಗಳಿದ್ದಾರೆ.
ಮೇಘನಾ ರಾಜ್ ಮಗನ ಬಾಯಲ್ಲಿ ಕನ್ನಡ ಗೀತೆ ಕೇಳಿ ಖುಷಿಯಾದ ಫ್ಯಾನ್ಸ್
ಸೋಶಿಯಲ್ ಮೀಡಿಯಾ ಟ್ರೋಲ್ ಹೇಗೆ ಡೀಲ್ ಮಾಡ್ತಾರೆ ಸಮಂತ : ದೊಡ್ಡ ಸಂಖ್ಯೆ ಮೇಲೆ ನಾನು ಪ್ರಭಾವ ಬೀರುತ್ತಿದ್ದೇನೆ. ಜನರಿಗೆ ಪ್ರೀತಿ ನೀಡುವ ಪ್ರಯತ್ನವನ್ನು ನಾನು ಮಾಡ್ತಿದ್ದೇನೆ. ಆದ್ರೆ ನನ್ನ ಪೋಸ್ಟ್ ಗಳನ್ನು ಯಾಕೆ ದ್ವೇಷ ಮಾಡ್ತಾರೆ ಎಂಬುದು ನನಗೆ ತಿಳಿದಿಲ್ಲ. ಇದ್ರಿಂದ ನೋವಾಗೋದು ಸಹಜ. ಪ್ರತಿಯೊಬ್ಬ ವ್ಯಕ್ತಿ ಜವಾಬ್ದಾರಿಯುತನಾಗ್ಬೇಕು. ಪ್ರೀತಿ ಮತ್ತು ಸಹಾನುಭೂತಿಯನ್ನು ಹಂಚಬೇಕು ಎಂಬುದು ನನ್ನ ಆಸೆ ಎಂದು ಸಮಂತಾ ಹೇಳಿದ್ದಾರೆ.
ಒತ್ತಡ ಎದುರಿಸುವ ಟಿಪ್ಸ್ ಹೇಳಿದ್ದಾರೆ ಸಮಂತಾ : ಯಂಗ್ ಹುಡುಗಿಯರ ಫೆವರೆಟ್ ಸಮಂತಾ, ಒತ್ತಡ ನಿವಾರಣೆ ಟಿಪ್ಸ್ ಹೇಳಿದ್ದಾರೆ. ನೀವು ತಪ್ಪು ಮಾಡಿದ್ದರೆ ಅದನ್ನು ಒಪ್ಪಿಕೊಳ್ಳಿ. ನಾನು ಪರ್ಫೆಕ್ಟ್ ಅಲ್ಲ. ಅದಕ್ಕೆ ಹೆಚ್ಚು ಆಲೋಚಿಸಬೇಕಾಗಿಲ್ಲ ಎಂದು ಸಮಂತಾ ಹೇಳಿದ್ದಾರೆ.
ಹೇಗಿದೆ ಸಮಂತಾ ಆರ್ಥಿಕ ಸ್ಥಿತಿ ? : ಕಾರ್ಯಕ್ರಮದಲ್ಲಿ ಸಮಂತಾ ತಮ್ಮ ಆರ್ಥಿಕ ಸ್ಥಿತಿಗತಿ ಬಗ್ಗೆಯೂ ಹೇಳಿದ್ದಾರೆ. ಆರಂಭದಲ್ಲಿ ಸಮಂತಾಗೆ ಹಣದ ವಿಚಾರಗಳು ಸರಿಯಾಗಿ ಅರ್ಥ ಆಗ್ತಿರಲಿಲ್ಲವಂತೆ. ಒಂದು ಹಂತಕ್ಕೆ ಏರ್ತಿದ್ದಂತೆ ಮೆಂಟರ್ ನೇಮಕ ಮಾಡ್ಕೊಂಡ ಸಮಂತಾ, ಹಿಂದೆ ತಾನು ಏನೆಲ್ಲ ತಪ್ಪು ಮಾಡಿದ್ದೇನೆ ಎಂಬುದನ್ನು ತಿಳಿದುಕೊಂಡ್ರು. ಹಣವನ್ನು ಹೇಗೆ ಬಳಸಿಕೊಳ್ಬೇಕು ಎನ್ನುವುದನ್ನು ಮೆಂಟರ್ ಸಹಾಯದಿಂದ ಅರಿತು, ಈಗ ಅನೇಕ ವ್ಯವಹಾರದಲ್ಲಿ ಹೂಡಿಕೆ ಮಾಡಿದ್ದಾರೆ.
ಅನುಪಮಾಗೆ ಮುತ್ತಿಟ್ಟ ಕೃಷಿ ತಾಪಂಡ, ನನ್ನ ಲೋಕ ನೀನೆಂದ ನಿರೂಪಕಿ
ಒಂದು ವರ್ಷ ಬ್ರೆಕ್ ತೆಗೆದುಕೊಂಡ ಸಮಂತಾ : ನಾಗಚೈತನ್ಯರಿಂದ ವಿಚ್ಛೇದನ ಪಡೆದ ಮೇಲೆ ಸಮಂತಾ ಬ್ರೇಕ್ ತೆಗೆದುಕೊಂಡ ವಿಷ್ಯ ಸಾಕಷ್ಟು ಚರ್ಚೆಯಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಮಂತಾ, ಅನಾರೋಗ್ಯದ ಕಾರಣಕ್ಕೆ ಒಂದು ವರ್ಷ ವಿಶ್ರಾಂತಿಯಲ್ಲಿದ್ದೆ. ಈ ಸಮಯದಲ್ಲಿ ಸಾಕಷ್ಟು ಬದಲಾವಣೆ ನನ್ನಲ್ಲಿ ಆಗಿದೆ. ನನ್ನ ಮೇಲೆ ನಾನೇ ಹೇರಿಕೊಂಡಿದ್ದ ಎಲ್ಲ ನಿರ್ಬಂಧವನ್ನು ಮುರಿದಿದ್ದೇನೆ. ಒಂದು ವರ್ಷದ ನಂತ್ರ ಕೆಲಸಕ್ಕೆ ಬಂದಿದ್ದು, ಹೊಸ ಆರಂಭದಂತೆ ಅನ್ನಿಸ್ತಿದೆ. ನಟನೆಯಲ್ಲಿ ತೋರಿಸ್ತಿರೋ ಆಸಕ್ತಿಯನ್ನು ಹೊಸ ಉದ್ಯಮದಲ್ಲೂ ತೋರಿಸ್ತಿದ್ದೇನೆ. ನಾನೀಗ ಸಂಪೂರ್ಣ ಬದಲಾಗಿದ್ದೇನೆ. ಒಂದು ವರ್ಷದ ವಿರಾಮ ನನಗೆ ಬಹಳ ಮುಖ್ಯವಾಗಿತ್ತು ಎಂದು ಸಮಂತಾ ಹೇಳಿದ್ದಾರೆ. ಸಮಂತಾ ನಟನೆ ಜೊತೆ ನಿರ್ಮಾಣದ ಹೊಣೆ ಹೊತ್ತಿರುವ ಅವರು, ಶೀಘ್ರವೇ ಹೊಸ ಪಾಜೆಕ್ಟ್ ಗಳು ನಿಮ್ಮ ಮುಂದೆ ಬರಲಿವೆ ಎಂದಿದ್ದಾರೆ. ಸದ್ಯ ಸಮಂತಾ ಸಿಟಾಡೆಲ್: ಹನಿ ಬನ್ನಿ ಚಿತ್ರದಲ್ಲಿ ನಟಿಸಿದ್ದಾರೆ. ವರುಣ್ ಧವನ್ ಜೊತೆ ಸಮಂತಾ ಕೆಲಸ ಮಾಡಿದ್ದಾರೆ. ಈ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.