
ಬಿಡುಗಡೆಯ ಮುಂಚೆಯೇ, ಮನೋಜ್ ಬಾಜಪೇಯಿ ಅವರ ಅಮೆಜಾನ್ ಪ್ರೈಮ್ ವಿಡಿಯೋ ವೆಬ್‌ಸಿರೀಸ್ ದಿ ಫ್ಯಾಮಿಲಿ ಮ್ಯಾನ್ ಸೀಸನ್ 2ಗೆ ಸಂಕಷ್ಟ ಎದುರಾಗಿದೆ . ತಮಿಳುನಾಡು ಸರ್ಕಾರದ ಪ್ರಕಾರ, ರಾಜ್ ಮತ್ತು ಡಿಕೆ ಅವರ ಸಿರೀಸ್ ಈಳಂ ತಮಿಳರನ್ನು ಅತ್ಯಂತ ಆಕ್ಷೇಪಾರ್ಹ ರೀತಿಯಲ್ಲಿ ಚಿತ್ರಿಸುತ್ತದೆ ಎನ್ನಲಾಗಿದೆ.
ತಮಿಳುನಾಡು ಸರ್ಕಾರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಪತ್ರ ಬರೆದಿದ್ದು, ದಿ ಫ್ಯಾಮಿಲಿ ಮ್ಯಾನ್ ಸೀಸನ್ 2 ರಾಜ್ಯದಲ್ಲಿ ಮತ್ತು ದೇಶಾದ್ಯಂತ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗುವುದನ್ನು ನಿಲ್ಲಿಸಬೇಕು ಎಂದು ಕೇಳಲಾಗಿದೆ.
ಟ್ಯಾಲೆಂಟೆಡ್ ಸಮಂತಾ ಬಾಲಿವುಡ್ ಸಿನಿಮಾ ಯಾಕೆ ಮಾಡಲ್ಲ..? ಸ್ಟ್ರಾಂಗ್ ರೀಸನ್ ಹೇಳಿದ ನಟಿ
ಹಿಂದಿಯಲ್ಲಿರುವ ದಿ ಫ್ಯಾಮಿಲಿ ಮ್ಯಾನ್ 2 ಸಿರೀಸ್ ಖಂಡನೀಯ. ಇದರಲ್ಲಿರುವ ಸೂಕ್ತವಲ್ಲದ ಮತ್ತು ದುರುದ್ದೇಶಪೂರಿತ ವಿಷಯಗಳ ಬಗ್ಗೆ ನಿಮ್ಮ ಗಮನಕ್ಕೆ ತರಲು ನಾನು ಬಯಸುತ್ತೇನೆ. ಇದು ಈಳಂ ತಮಿಳರನ್ನು ಹೆಚ್ಚು ಆಕ್ಷೇಪಾರ್ಹ ರೀತಿಯಲ್ಲಿ ಚಿತ್ರಿಸುತ್ತದೆ. ಸೋಷಿಯಲ್ ಮೀಡಿಯಾ ನೆಟ್‌ವರ್ಕ್‌ನಲ್ಲಿ ಬಿಡುಗಡೆಯಾದ ಮೇಲೆ ಹೇಳಿದ ಸಿರೀಸ್ ಟ್ರೈಲರ್ ಶ್ರೀಲಂಕಾದ ಈಳಂ ತಮಿಳರ ಐತಿಹಾಸಿಕ ಹೋರಾಟವನ್ನು ಅಪಖ್ಯಾತಿಗೊಳಿಸುವ ಮತ್ತು ವಿರೂಪಗೊಳಿಸುವ ಗುರಿಯನ್ನು ಹೊಂದಿದೆ ತಮಿಳುನಾಡು ಸರ್ಕಾರದ ಪತ್ರದಲ್ಲಿ ಹೇಳಲಾಗಿದೆ.
ಈ ವಿಷಯವನ್ನು ಅರಿತುಕೊಳ್ಳಲು ಪ್ರಸಾರ ಸಚಿವಾಲಯವನ್ನು ಒತ್ತಾಯಿಸಲಾಗಿದೆ. ಸನ್ನಿವೇಶಗಳಲ್ಲಿ, ದಿ ಫ್ಯಾಮಿಲಿ ಮ್ಯಾನ್ 2 ಬಿಡುಗಡೆಯನ್ನು ಒಟಿಟಿಯಲ್ಲಿ ನಿಲ್ಲಿಸಲು ಅಥವಾ ನಿಷೇಧಿಸಲು ತಕ್ಷಣದ ಕ್ರಮ ತೆಗೆದುಕೊಳ್ಳುವಂತೆ ನಾನು ವಿನಂತಿಸುತ್ತೇನೆ, ಅಮೆಜಾನ್ ಪ್ರೈಮ್ ತಮಿಳಿನಲ್ಲಿ ಮಾತ್ರವಲ್ಲ ದೇಶಾದ್ಯಂತ ಇದರ ರಿಲೀಸ್ ನಿಷೇಧಿಸಬೇಕು ಎನ್ನಲಾಗಿದೆ. ರಾಜ್ ಮತ್ತು ಡಿಕೆ ರಚಿಸಿದ ದಿ ಫ್ಯಾಮಿಲಿ ಮ್ಯಾನ್ 2 ಜೂನ್ 4 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಥಮ ಬಾರಿಗೆ ಪ್ರದರ್ಶನಗೊಳ್ಳಲಿದೆ.
ಇದರಲ್ಲಿ ಮೊದಲ ಬಾರಿ ಸಮಂತಾ ಅಕ್ಕಿನೇನಿ ನಟಿಸುತ್ತಿದ್ದಾರೆ. ವೆಬ್ ಸಿರೀಸ್‌ನಲ್ಲಿ ಮೊದಲ ಬಾರಿ ಕಾಣಿಸಿಕೊಂಡಿದ್ದಲ್ಲದೆ, ಇದು ಹಿಂದಿಯಲ್ಲಿ ನಟಿಯ ಚೊಚ್ಚಲ ಸಿರೀಸ್ ಕೂಡಾ ಹೌದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.