ಯೂಟ್ಯೂಬ್ ಸಂದರ್ಶನದಿಂದ ಗರಂ ಆದ ಹಾಸ್ಯ ನಟ ವಡಿವೇಲು. ಮಾನನಷ್ಟ ಮೊಕದ್ದಮೆ ಹಾಕುವಂತದ್ದು ಏನ್ ಆಗಿದೆ?
ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯ ನಟ ವಡಿವೇಲು ಸುಮಾರು 80ರ ದಶಕದಿಂದ ಸಿನಿ ಪ್ರೇಮಿಗಳನ್ನು ಮನೋರಂಜಿಸುತ್ತಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಸಿನಿಮಾಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿಬಿಟ್ಟಿದ್ದರು ಆದರೆ ಟ್ರೋಲ್ ಮತ್ತು ಮೀಮ್ಸ್‌ಗಳ ಮೂಲಕ ಆಗಾಗ ಜನರ ಮುಂದೆ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈಗ ವಡಿವೇಲು ಮತ್ತೊಂದು ವಿವಾದದ ಮೂಲಕ ಸುದ್ದಿಯಲ್ಲಿ ಇದ್ದಾರೆ.
ಜನವರಿ 16 ಮತ್ತು ಫೆಬ್ರವರಿ 11ರಂದು ಯೂಟ್ಯೂಬ್ ಚಾನೆಲ್‌ವೊಂದಕ್ಕೆ ಹಾಸ್ಯನಟ ಕೆ ಆರ್ ಸಿಂಗಮುತ್ತು ಸಂದರ್ಶನ ನೀಡಿದ್ದರು. ಸುಮಾರು ವರ್ಷಗಳ ಕಾಲ ವಡಿವೇಲು ಮತ್ತು ಸಿಂಗಮುತ್ತು ಕೆಲಸ ಮಾಡಿದ್ದಾರೆ ಅಲ್ಲದೆ ಆತ್ಮೀಯ ಸ್ನೇಹಿತರು ಕೂಡ ಹೌದು. ಹೀಗೆ ಇರುವಾಗ ವಡಿವೇಲು ವಿರುದ್ಧ ವೈಯಕ್ತಿಕ ಹಾಗೂ ವೃತ್ತಿಪರ ಜೀವನದ ಬಗ್ಗೆ ಸಾಕಷ್ಟು ಸುಳ್ಳು ಮತ್ತು ಅವಹೇಳನಕಾರಿಯಾಗಿ ಸಿಂಗಮುತ್ತು ಮಾತನಾಡಿದ್ದಾರೆ ಅನ್ನೋ ಆರೋಪವಿದೆ.
ಮದ್ರಾಸ್ ಹೈ ಕೋರ್ಟ್ ನ್ಯಾಯಧೀಶ ನ್ಯಾಯಮೂರ್ತಿ ಆರ್‌ಎಂಟಿ ಟಿಕಾ ರಾಮನ್ ಅವರು ಅಂಗೀಕರಿಸಿದ್ದಾರೆ. ತಮ್ಮ ಮೇಲಿರುವ ಆರೋಪಗಳ ಬಗ್ಗೆ ಮಾರ್ಚ್ 19ರಂದು ವಡಿವೇಲು ಸಿಂಗಮುತ್ತು ಮಾತ್ರವಲ್ಲದೆ ಯೂಟ್ಯೂಬ್ ಚಾನೆಲ್ ವಿರುದ್ಧ ಕೂಡ ನೋಟಿಸ್ ನೀಡಿದ್ದಾರೆ. ಕ್ಷಮೆಯಾಚಿಸುವಂತೆ ಹಾಗೂ ಹೇಳಿಕೆ ಹಿಂಪಡೆಯುವಂತೆ ಒತ್ತಾಯ ನೀಡಿದ್ದಾರೆ. ತಮಗೆ ವಾಕ್ ಸ್ವಾತಂತ್ರ್ಯದ ಹಕ್ಕು ಇದೆ ಎಂದು ಸಿಂಗಮುತ್ತು ಪ್ರತಿಪಾದಿಸಿದ್ದರು. ಯಾಕೆ ಇಷ್ಟು ಚೆನ್ನಾಗಿರುವ ಸ್ನೇಹಿತರು ಜಗಳ ಮಾಡಿಕೊಂಡರು ಎಂದು ಎಲ್ಲರೂ ಯೋಚನೆ ಮಾಡುತ್ತಿದ್ದರೆ.
ಡಾನ್ ಜಯರಾಜ್ ಪುತ್ರನ ಹುಟ್ಟುಹಬ್ಬ; ರೊಮ್ಯಾಂಟಿಕ್ ಡೇಟ್ ನೈಟ್ ಆದ್ಮೇಲೆ ಗುಡ್ ನ್ಯೂಸ್ ಕೊಡಿ ಎಂದ ನೆಟ್ಟಿಗರು
'ಕಳೆದ 25 ವರ್ಷಗಳಿಂದ ನಾನು ಸಿಂಗಮುತ್ತು ಜೊತೆ ಸಿನಿಮಾಗಳಲ್ಲಿ ನಟಿಸಿದ್ದೇನೆ. ನಮ್ಮಿಬ್ಬರ ಕಾಂಬಿನೇಷನ್ ಹಿಟ್ ಆಗಿತ್ತು. ಆದರೆ 2015ರಲ್ಲಿ ನಮ್ಮಿಬ್ಬರ ನಡುವೆ ಬಿನ್ನಾಭಿಪ್ರಾಯ ಶುರುವಾಗಿತ್ತು ಅಲ್ಲಿಂದ ಸಿಂಗಮುತ್ತು ನನ್ನ ವಿರುದ್ಧ ಆರೋಪ ಮಾಡಲು ಶುರು ಮಾಡಿದ್ದರು ಎಂದು ಈ ಹಿಂದೆ ವಡಿವೇಲು ಹೇಳಿದ್ದರು.