Saptami Gowda: ಕುದುರೆ ಏರಿ ಸವಾರಿ ಹೊರಟ ಸಪ್ತಮಿ ಗೌಡ

By Roopa Hegde  |  First Published Aug 23, 2024, 3:13 PM IST

ಸ್ಯಾಂಡಲ್ವುಡ್ ನ ಯುವರಾಣಿ ಸಪ್ತಮಿ ಗೌಡ ಕುದುರೆ ಪಳಗಿಸೋದನ್ನು ಕಲಿತಿದ್ದಾರೆ.  ಕಾಂತಾರಾ ಬೆಡಗಿ, ಬಿಂದಾಸ್ ಆಗಿ ಕುದುರೆ ಸವಾರಿ ಮಾಡ್ತಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಖುಷಿಯಾಗಿದ್ದಾರೆ. 


ಕಾಂತಾರ (Kantara) ಬೆಡಗಿ ಸಪ್ತಮಿ ಗೌಡ (Saptami Gowda) ಕುದುರೆ ಸವಾರಿ ಕಲಿತಾಗಿದೆ. ಕುದುರೆ ಸವಾರಿ (horse riding) ಮಾಡಿದ ಸುಂದರ ವಿಡಿಯೋವನ್ನು ಸಪ್ತಮಿ ಗೌಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹರ್ ಹರ್ ಮಹಾದೇವಿ ಎಂದು ಶೀರ್ಷಿಕೆ ಹಾಕಿರುವ ಸಪ್ತಮಿ ಗೌಡ, ಕ್ಯಾರೆಟ್, ಹಾರ್ಸ್ ರೇಸಿಂಗ್ ಇಮೋಜಿ ಹಾಗೂ ದೃಷ್ಟಿ ಬೀಳದ ಕಣ್ಣಿನ ಇಮೋಜಿಯನ್ನು ಹಾಕಿದ್ದಾರೆ.

ಸಪ್ತಮಿ ಗೌಡ, ಕುದುರೆ ಸವಾರಿ ನೋಡಿದ ಅಭಿಮಾನಿಗಳು ಖುಷಿಯಾಗಿದ್ದಾರೆ.  ಬಹುತೇಕ ಅಭಿಮಾನಿಗಳು ಹಾರ್ಟ್ ಇಮೋಜಿ ಪೋಸ್ಟ್ ಮಾಡಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಸಪ್ತಮಿ, ಕುದುರೆ ಓಡಿಸ್ತಿದ್ದಾರಾ ಇಲ್ಲ ಕುದುರೆ ಸಪ್ತಮಿಯವರನ್ನು ಓಡಿಸ್ತಾ ಇದ್ಯಾ ಎಂದು ಅಭಿಮಾನಿಯೊಬ್ಬರು ಪ್ರಶ್ನೆ ಕೇಳಿದ್ದಾರೆ. ಹಾಗೆ ಸಪ್ತಮಿ ಗೌಡ ಕುದುರೆ ಓಡಿಸೋದನ್ನು ನೋಡಿ, ಕಲಿತು ಬಿಟ್ರಾ ಎಂದು ಅಭಿಮಾನಿಗಳು ಕೇಳಿದ್ದಾರೆ.

Tap to resize

Latest Videos

Kolkata rape and murder case: ಕೊಲ್ಕತ್ತಾ ಪ್ರಕರಣದ ನಂತ್ರ 6 ವರ್ಷದ ಮಗಳನ್ನು ನೆನೆದು ಒಂದು ಗಂಟೆ ಕಣ್ಣೀರಿಟ್ಟ ನಟ

ಸಪ್ತಮಿ ಗೌಡ ವರ್ಷದ ಹಿಂದೆ ಕುದುರೆ ಸವಾರಿ ಕಲಿಯೋಕೆ ಶುರು ಮಾಡಿದ್ದರು. ಅವರು ಈ ಹಿಂದೆ ಕುದುರೆ ಜೊತೆಗಿರುವ ಫೋಟೋ ಹಂಚಿಕೊಂಡಿದ್ದರು. ಬೆಂಗಳೂರಿನ ಜೆಪಿ ನಗರದಲ್ಲಿರುವ ಜಿಪ್ಪಿ ಇಕ್ವೇಸ್ಟ್ರೇನ್ ಸೆಂಟರ್ ನಲ್ಲಿ ಸಪ್ತಮಿ ಗೌಡ ಕುದುರೆ ಸವಾರಿ ಕಲಿಯಲು ಶುರು ಮಾಡಿದ್ದಾರೆ ಎನ್ನುವ ಸುದ್ದಿ ಇತ್ತು. ಈಗ ಸಪ್ತಮಿ ಕುದುರೆ ಪಳಗಿಸೋದನ್ನು ಸಂಪೂರ್ಣ ಕಲಿತಿದ್ದಾರೆ. ಕುದುರೆ ರೈಡ್ ಎಂಜಾಯ್ ಮಾಡ್ತಿದ್ದಾರೆ. 

ಸಪ್ತಮಿ ಗೌಡ ಕ್ರೀಡಾಪಟು. ಈ ಹಿಂದೆ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಪ್ತಮಿ ಮಿಂಚಿದ್ದರು. ಕಾಲೇಜು ದಿನಗಳಲ್ಲಿ ರಾಷ್ಟ್ರೀಯ ಮಟ್ಟದ ಆಟಗಾರ್ತಿಯಾಗಿದ್ದ ಸಪ್ತಮಿ ಗೌಡ ಅವರಿಗೆ ಕುದುರೆ ಸವಾರಿ ಕಲಿಯೋದು ಕಷ್ಟವಲ್ಲ ಎಂದು ಆಗ್ಲೇ ಅಭಿಮಾನಿಗಳು ಹೇಳಿದ್ದರು. ಅದು ಸಂಪೂರ್ಣ ಸತ್ಯವಾಗಿದೆ. ಸಪ್ತಮಿ ಗೌಡ, ರಾಣಿಯಂತೆ ಬಿಂದಾಸ್ ಆಗಿ ಕುದುರೆ ರೈಡ್ ಮಾಡ್ತಿದ್ದಾರೆ. 

ಸಪ್ತಮಿ ಗೌಡ ಕುದುರೆ ರೈಡ್ ಗೂ ಅವರ ಮುಂದಿನ ಚಿತ್ರಕ್ಕೂ ಸಂಬಂಧವಿದೆ ಎಂಬ ಚರ್ಚೆ ಅನೇಕ ದಿನಗಳಿಂದ ನಡೆಯುತ್ತಿತ್ತು. ಶೂಟಿಂಗ್ ಮಧ್ಯೆ ಸಪ್ತಮಿ ಕುದುರೆ ಏರ್ತಾರೆ ಅಂದ್ರೆ ಅದಕ್ಕೊಂದು ಕಾರಣ ಇರಬೇಕು. ಅದು ಕಾಂತಾರಾ ಅಧ್ಯಾಯ 1 ಎಂದು ಕೆಲವರು ನಂಬಿದ್ದರು. ಆದ್ರೆ ಸಪ್ತಮಿ ಗೌಡ ಈ ಗೊಂದಲಕ್ಕೆ ತೆರೆ ಎಳೆದಿದ್ದರು. ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸಪ್ತಮಿ, ನಾನು ಕುದುರೆ ಸವಾರಿ ಕಲಿಯುತ್ತಿದ್ದೇನೆ. ನನಗೆ ತೆಲುಗು ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ ಎಂದು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು. 

ಸ್ಯಾಂಡಲ್ವುಡ್ ಜೊತೆ ಟಾಲಿವುಡ್ ನಲ್ಲಿ ಸಪ್ತಮಿ ಗೌಡ ಅವಕಾಶ ಗಿಟ್ಟಿಸಿಕೊಂಡಿದ್ದಾರೆ ಸಪ್ತಮಿ ಗೌಡ.  ಕಾಂತಾರಾ ಅಧ್ಯಾಯ 1ರ ಜೊತೆ ತೆಲಗು ಆಕ್ಷನ್, ಎಂಟರ್ಟೈನ್ ಚಿತ್ರ ತಮ್ಮುಡುವಿನಲ್ಲಿ ಸಪ್ತಮಿ ನಟಿಸಿದ್ದಾರೆ. ಈ ಚಿತ್ರಕ್ಕಾಗಿ ಅವರು ಕುದುರೆ ಸವಾರಿ ಕಲಿತಿದ್ದಾರೆ. ನಿತಿನ್ ನಾಯಕ ನಟನಾಗಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಸಪ್ತಮಿ ಜೊತೆ ಲಯಾ ಇದ್ದಾರೆ. ತಮ್ಮುಡು ಚಿತ್ರ ಡಿಸೆಂಬರ್ 25ಕ್ಕೆ ತೆರೆಗೆ ಬರುವ ಸಾಧ್ಯತೆ ಇದೆ. ಈಗಾಗಲೇ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ.

ಕೃಷ್ಣಂ ಪ್ರಣಯ ಸಖಿ ಸಿನಿಮಾ ನೋಡಿ, ಶರಣ್ಯ ಶೆಟ್ಟಿ ಅಂದಕ್ಕೆ ಫಿದಾ ಆದ ಸಿನಿ ರಸಿಕರು

ಕಾಂತಾರಾ ಚಿತ್ರದಲ್ಲಿ ಮಿಂಚಿರುವ ಸಪ್ತಮಿಗೆ ಒಂದಾದ್ಮೇಲೆ ಒಂದು ಆಫರ್ ಬರ್ತಿದೆ. ಪಾಪ್ ಕಾರ್ನ್ ಮಂಕಿಯಲ್ಲಿ ನಟಿಸಿದ್ದ ಸಪ್ತಮಿಗೆ ಬ್ರೇಕ್ ನೀಡಿದ್ದು ಕಾಂತಾರಾ. ಸಪ್ತಮಿ ಗೌಡ, ಬಾಲಿವುಡ್ ನ ಡಾಕ್ಯುಮೆಂಟರಿ ಸಿನಿಮಾ ದಿ ವ್ಯಾಕ್ಸಿನ್ ವಾರ್ ಸಿನಿಮಾದಲ್ಲಿ ನಟಿಸಿದ್ದಾರೆ.  ಯುವ ಸಿನಿಮಾದಲ್ಲಿ ನಟಿಸಿ ಸೈ ಎನ್ನಿಸಿಕೊಂಡಿರುವ ಸಪ್ತಮಿ ಸ್ಯಾಂಡಲ್ವುಡ್ ನ ಬಹುಬೇಡಿಕೆ ನಟಿಯರಲ್ಲಿ ಒಬ್ಬರು. 

click me!